Site icon Vistara News

ವಿಸ್ತಾರ TOP 10 NEWS : ಕಾಂಗ್ರೆಸ್​ನ ಕಿವಿ ಮೇಲೆ ಹೂವು ಪ್ರತಿಭಟನೆಯಿಂದ ಹಿಡಿದು ಶಿವರಾತ್ರಿ ಸಂಭ್ರಮದವರೆಗಿನ ಪ್ರಮುಖ ಸುದ್ದಿಗಳಿವು

From flower on the ear of Congress protest to Shivratri celebrations, the main news are

From flower on the ear of Congress protest to Shivratri celebrations, the main news are

1. ಬೀದಿಗೂ ಬಂತು ಕಿವಿ ಮೇಲೆ ಹೂವು ಅಭಿಯಾನ; ಬಿಜೆಪಿ ಪೋಸ್ಟರ್‌ಗಳ ಮೇಲೆ ಕಾಂಗ್ರೆಸ್‌ ವ್ಯಂಗ್ಯದ ಚಿತ್ರ
ಶುಕ್ರವಾರ (ಫೆ. ೧೭) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ ಮಂಡನೆ ಮಾಡುವಾಗ ಶಾಸಕರು ಕಿವಿ ಮೇಲೆ ಹೂವಿಟ್ಟುಕೊಂಡು ನಡೆಸಿದ ವಿಡಂಬನಾತ್ಮಕ ಪ್ರತಿಭಟನೆಯಿಂದ (Flower politics) ಉತ್ತೇಜಿತವಾಗಿರುವ ಕಾಂಗ್ರೆಸ್‌ ಈಗ ಇದನ್ನು ಬೀದಿ ಅಭಿಯಾನವಾಗಿ ಪರಿವರ್ತಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ

2. ಬಿಜೆಪಿ ವರಿಷ್ಠರ ಮ್ಯಾರಥಾನ್‌ ಮತಬೇಟೆಗೆ ಸಜ್ಜಾದ ಬಿಜೆಪಿ; ಫೆ.20ಕ್ಕೆ ನಡ್ಡಾ, 23ಕ್ಕೆ ಅಮಿತ್‌ ಶಾ ಭೇಟಿ, ಅಖಾಡಕ್ಕಿಳಿದ ವಿಜಯೇಂದ್ರ
ಕರ್ನಾಟಕ ವಿಧಾನಸಭಾ ಚುನಾವಣೆಯನ್ನು (Karnataka Election 2023) ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ವರಿಷ್ಠರು ರಾಜ್ಯಕ್ಕೆ ಆಗಾಗ ಭೇಟಿ ಕೊಡುತ್ತಲೇ ಇದ್ದಾರೆ. ಈ ಫೆಬ್ರವರಿಯಲ್ಲಿಯೂ ಮ್ಯಾರಥಾನ್‌ ಭೇಟಿಯನ್ನು ನಿಗದಿ ಮಾಡಿಕೊಂಡಿದ್ದು, ಈ ಮೂಲಕ ಮತಬೇಟೆಗೆ ತಯಾರಿ ನಡೆಸಿದೆ. ಇದರ ಭಾಗವಾಗಿ ಭಾನುವಾರ (ಫೆ. ೧೯) ಕರಾವಳಿ ಭಾಗವಾದ ಉಡುಪಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಭೇಟಿ ಕೊಡಲಿದ್ದರೆ, ಇದೇ ಫೆಬ್ರವರಿ ೨೩ರಂದು ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಖ್ಯಾತಿಯ ಅಮಿತ್​ ಶಾ (Amit Shah) ಬಳ್ಳಾರಿಯ ಸಂಡೂರಿಗೆ ಭೇಟಿ ನೀಡಲಿದ್ದಾರೆ. ಇನ್ನು ಮಂಡ್ಯದಲ್ಲಿ ಫೆಬ್ರವರಿ ೨೦ರಂದು ಬಿಜೆಪಿ ಯುವ ಮೋರ್ಚಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅಖಾಡಕ್ಕೆ ಇಳಿದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

3. ಮನೆ ಸೇರಿ 9 ಎಕರೆ ಜಮೀನನ್ನು ವೃದ್ಧೆಗೆ ಹಿಂದಿರುಗಿಸಲು ಎಸಿ ಕೋರ್ಟ್‌ ಆದೇಶ
ಮನೆ ಸೇರಿ 9 ಎಕರೆ ಜಮೀನನ್ನು ಕಿತ್ತುಕೊಂಡು ವೃದ್ಧೆಯನ್ನು ಮನೆಯಿಂದ ಹೊರಗೆ ಹಾಕಿದ್ದ ಪ್ರಕರಣದಲ್ಲಿ ಕೊನೆಗೂ ವೃದ್ಧೆಗೆ ನ್ಯಾಯ ಸಿಕ್ಕಿದೆ. ಪ್ರಕರಣದ ಬಗ್ಗೆ “ವಿಸ್ತಾರ ನ್ಯೂಸ್‌” ಮೂರು ದಿನಗಳ ಹಿಂದೆ ಸುದ್ದಿಯನ್ನು ಪ್ರಸಾರ ಮಾಡಿತ್ತು. ಇದರ ಪರಿಣಾಮ (vistara Impact) ಇದೀಗ ಮನೆ ಹಾಗೂ ಜಮೀನನ್ನು ವೃದ್ಧೆಗೆ ನೀಡಬೇಕು ಎಂದು ಎಸಿ ಕೋರ್ಟ್ ಆದೇಶ ಹೊರಡಿಸಿದ್ದು, ಆದೇಶ ಪ್ರತಿಯನ್ನು ಎಸಿ ಸಂತೋಷ್ ಕುಮಾರ್ ಅವರು ವೃದ್ಧೆಗೆ ಹಸ್ತಾಂತರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

4. ‘ಗಂಡಸರೇ ಆಗಿದ್ದರೆ ಕದ್ದ ಚಿಹ್ನೆಯೊಂದಿಗೆ ನಮ್ಮೆದುರು ಬನ್ನಿ’, ಶಿಂಧೆ ಬಣಕ್ಕೆ ಉದ್ಧವ್‌ ಸವಾಲು
ಮಹಾರಾಷ್ಟ್ರದಲ್ಲಿ ಬಾಳಾಸಾಹೇಬ್‌ ಠಾಕ್ರೆ ಸ್ಥಾಪಿಸಿದ ಶಿವಸೇನೆ ಪಕ್ಷದ ಹೆಸರು ಹಾಗೂ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಚುನಾವಣೆ ಆಯೋಗವು ಏಕನಾಥ್‌ ಶಿಂಧೆ ಬಣಕ್ಕೆ ನೀಡಿ, ಅವರ ಬಣವೇ ನಿಜವಾದ ಶಿವಸೇನೆ ಎಂಬುದಾಗಿ ಘೋಷಿಸಿರುವುದಕ್ಕೆ ಉದ್ಧವ್‌ ಠಾಕ್ರೆ (Uddhav Thackeray) ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನೀವು ಗಂಡಸರೇ ಆಗಿದ್ದರೆ, ಕದ್ದ ಬಿಲ್ಲು ಮತ್ತು ಬಾಣದೊಂದಿಗೆ ನಮ್ಮೆದುರು ಬನ್ನಿ” ಎಂದು ಶಿಂಧೆ ಬಣಕ್ಕೆ ಸವಾಲು ಹಾಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

5. ಕಾಂಗ್ರೆಸ್‌ ಇದ್ದಾಗ ವಕ್ಫ್‌ ಬೋರ್ಡ್‌ಗೆ ನೀಡಿದ್ದ 123 ಆಸ್ತಿ ಹಿಂಪಡೆಯಲು ಕೇಂದ್ರ ನಿರ್ಧಾರ
೨೦೧೪ರ ಲೋಕಸಭೆ ಚುನಾವಣೆಗೂ ಮುನ್ನವೇ ಯುಪಿಎ ಸರ್ಕಾರವು ದೆಹಲಿ ವಕ್ಫ್‌ ಬೋರ್ಡ್‌ಗೆ (Waqf Board Property) ನೀಡಿದ್ದ ೧೨೩ ಆಸ್ತಿಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಲು ತೀರ್ಮಾನಿಸಿದೆ. ಮಸೀದಿ, ದರ್ಗಾ, ಸ್ಮಶಾನ ಜಾಗ ಸೇರಿ ನೂರಾರು ಆಸ್ತಿಗಳನ್ನು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು ಹಿಂಪಡೆಯಲು ನಿರ್ಧರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ

6.ದಕ್ಷಿಣ ಆಫ್ರಿಕಾದಿಂದ 10 ತಾಸು ಪ್ರಯಾಣ ಮಾಡಿ ಭಾರತ ತಲುಪಿದ 12 ಚೀತಾಗಳು
ದಕ್ಷಿಣ ಆಫ್ರಿಕಾದಿಂದ ಹೊರಟಿದ್ದ 12 ಚೀತಾಗಳು ಮಧ್ಯಪ್ರದೇಶ ತಲುಪಿವೆ. ಎರಡನೇ ಬ್ಯಾಚ್​​ನಲ್ಲಿ, ಐಎಎಫ್​ ಸಿ-17 ಏರ್​ಕ್ರಾಫ್ಟ್​​ನಲ್ಲಿ ಬಂದು ಗ್ವಾಲಿಯರ್​​ನ ಏರ್​ಪೋರ್ಸ್​ ಸ್ಟೇಶನ್​​ನಲ್ಲಿ ಲ್ಯಾಂಡ್ ಆದ 12 ಚೀತಾಗಳನ್ನು ಕುನೋ ನ್ಯಾಶನಲ್​ ಪಾರ್ಕ್​​ಗೆ ಕರೆದೊಯ್ಯಲಾಗಿದೆ. ಈ ಚೀತಾಗಳು ದಕ್ಷಿಣ ಆಫ್ರಿಕಾದಿಂದ ಜೊಹಾನ್ಸ್​ಬರ್ಗ್​​ನಿಂದ 10 ತಾಸು ಪ್ರಯಾಣ ಮಾಡಿ, ಮಧ್ಯಪ್ರದೇಶಕ್ಕೆ ಬಂದಿಳಿದಿವೆ. ಈ 12 ಚೀತಾಗಳಲ್ಲಿ ಐದು ಹೆಣ್ಣು ಮತ್ತು ಏಳು ಗಂಡು ಚೀತಾಗಳು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

7. ರಾಜ್ಯಾದ್ಯಂತ ಶಿವ ಭಜನೆ; ದೇಗುಲಗಳಲ್ಲಿ ಭಕ್ತರ ಪ್ರದಕ್ಷಿಣೆ
ನಾಡಿನೆಲ್ಲೆಡೆ ಮಹಾಶಿವರಾತ್ರಿ ಪ್ರಯುಕ್ತ (Maha Shivaratri 2023) ವಿಶೇಷ ಪೂಜೆ ಕೈಂಕರ್ಯಗಳನ್ನು ನಡೆಸಲಾಯಿತು. ನಾನಾ ಹೆಸರುಗಳಿಂದ ಕರೆಯಲ್ಪಡುವ ಅಭಿಷೇಕ ಪ್ರಿಯ ಶಿವನಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಲಾಯಿತು. ರಾಜಧಾನಿ ಬೆಂಗಳೂರಿನಲ್ಲಿರುವ ಶಿವನ ದೇವಸ್ಥಾನಗಳಲ್ಲಿ ಭಕ್ತರ ದಂಡು ಹರಿದು ಬಂದಿತ್ತು. ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಹೂವಿನಿಂದ ಬೃಹತ್ ಶಿವಲಿಂಗವನ್ನು ನಿರ್ಮಾಣ ಮಾಡಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ

8. ಭಾರತ ತಂಡ 262 ರನ್​ಗಳಿಗೆ ಆಲ್​ಔಟ್​, ಅರ್ಧ ಶತಕ ಬಾರಿಸಿ ಮಾನ ಕಾಪಾಡಿದ ಅಕ್ಷರ್​ ಪಟೇಲ್​
ಅಕ್ಷರ್​ ಪಟೇಲ್ (74) ಬಾರಿಸಿದ ಅಮೋಘ ಅರ್ಧ ಶತಕದ ನೆರವು ಪಡೆದ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಟೆಸ್ಟ್​ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 262 ರನ್​ಗೆ ಆಲ್​ಔಟ್​ ಆಯಿತು.. ಆದಾಗ್ಯೂ ಒಂದು ರನ್ ಹಿನ್ನಡೆ ಅನುಭವಿಸಿದೆ. ವಿರಾಟ್​ ಕೊಹ್ಲಿ 44 ರನ್​ ಬಾರಿಸಿ ತಂಡಕ್ಕೆ ಸ್ವಲ್ಪ ಮಟ್ಟಿಗೆ ನೆರವಾದರೆ, ಆರ್​ ಅಶ್ವಿನ್​ (37) ಅಕ್ಷರ್​ ಪಟೇಲ್​ ಜತೆ 114 ರನ್​ಗಳ ಜತೆಯಾಟ ನೀಡಿ, ಆರಂಭಿಕ ಕುಸಿತದಿಂದ ಪಾರು ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ
ವಿವಾದಾತ್ಮಕ ತೀರ್ಪಿಗೆ ಕೊಹ್ಲಿ ಔಟ್

9. ‘ವಯಸ್ಸಾಗಿದೆ, ಶ್ರೀಮಂತ, ಹಠವಾದಿ’, ಜಾರ್ಜ್‌ ಸೊರೊಸ್‌ಗೆ ಜೈಶಂಕರ್‌ ತಿರುಗೇಟು
ಉದ್ಯಮಿ ಗೌತಮ್‌ ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗತಿಕ ಹೂಡಿಕೆದಾರ, ಉದ್ಯಮಿ ಜಾರ್ಜ್‌ ಸೊರೊಸ್‌ (George Soros Row) ನೀಡಿದ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ತಿರುಗೇಟು ನೀಡಿದ್ದಾರೆ. ಸಿಡ್ನಿ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಆಸ್ಟ್ರೇಲಿಯಾದ ಸಿಡ್ನಿಗೆ ತೆರಳಿರುವ ಅವರು, ಕಾನ್ಫರೆನ್ಸ್‌ ಮಧ್ಯೆಯೇ ಜಾರ್ಜ್‌ ಸೊರೊಸ್‌ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ

10. ಅಮಿತಾಭ್‌ ಬೆಲ್ ಬಾಟಮ್‌ ಪ್ಯಾಂಟ್‌ನಲ್ಲಿ ಹರಿದಾಡಿತ್ತಂತೆ ಇಲಿ!
ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ (Amitabh Bachchan) ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಾರಿ ಆಕಳಿಸುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ. ಬೆಳಗ್ಗೆ 3 ಗಂಟೆಗೆ ಕೆಲಸ ಮುಗಿಸಿದಾಗ ನಿಮ್ಮ ಪರಿಸ್ಥಿತಿ ಹೀಗಾಗುತ್ತದೆ ಎಂದು ಕ್ಯಾಪ್ಷನ್‌ ಮೂಲಕ ಹೇಳಿಕೊಂಡಿದ್ದಾರೆ. 43 ವರ್ಷಗಳ ಹಿಂದೆ ತೆರೆಕಂಡ ‘ದೋ ಔರ್ ದೋ ಪಾಂಚ್’ ತೆರೆಕಂಡ ಸಿನಿಮಾ ನೋಡುವ ವೇಳೆ ಅಮಿತಾಭ್‌ ಪ್ಯಾಂಟ್‌ನಲ್ಲಿ ಇಲಿ ಹರಿದಾಡಿರುವ ತಮಾಷೆಯ ಸಂಗತಿಯನ್ನೂ ಹೇಳಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ

ಮತ್ತಷ್ಟು ಪ್ರಮುಖ ಸುದ್ದಿಗಳಿವು

1. ವಾರದ ವ್ಯಕ್ತಿ ಚಿತ್ರ: ಹಿಸ್ಟರಿ ರಿಪೀಟ್ಸ್​; ಭಾರತೀಯ ಕ್ರಿಕೆಟ್​ ಕ್ಷೇತ್ರದಲ್ಲಿ ಮತ್ತೆ ವಿಲನ್ ಎನಿಸಿಕೊಂಡ ಚೇತನ್​ ಶರ್ಮಾ
2. ಕಾಂಗ್ರೆಸ್‌ ನಾಯಕರ ಕಿವಿಗೆ ಹೂವಿಟ್ಟು ಕಳುಹಿಸಿದ್ದು ಯಾರು? ಇದರ ಹಿಂದಿನ ಕಾಣದ ಕೈ ಯಾವುದು?
3. ಖಲಿಸ್ತಾನಿ ಪರ ಘೋಷಣೆ ಕೂಗದಿದ್ದರೆ ಶಿವರಾತ್ರಿ ಆಚರಣೆ ಧ್ವಂಸ; ಆಸ್ಟ್ರೇಲಿಯಾದ ದೇಗುಲಕ್ಕೆ ಬೆದರಿಕೆ
4. ಆರ್​ಸಿಬಿ ತಂಡಕ್ಕೆ ಸ್ಮೃತಿ ಮಂಧಾನಾ ನಾಯಕಿ
5. ಪ್ರೀತಿ ನಿರಾಕರಿಸಿದ್ದಕ್ಕೆ ಕನಕಪುರದಲ್ಲಿ ಬಾಲಕಿ ಮೇಲೆ ಆ್ಯಸಿಡ್ ದಾಳಿ, ಸಂತ್ರಸ್ತೆ ದೃಷ್ಟಿಗೆ ಕುತ್ತು

Exit mobile version