Site icon Vistara News

Garbine Muguruza: ಟೆನಿಸ್​ಗೆ ವಿದಾಯ ಹೇಳಿದ ಮಾಜಿ ವಿಶ್ವ ನಂ.1 ಆಟಗಾರ್ತಿ ಮುಗುರುಜಾ

Garbine Muguruza

ಮ್ಯಾಡ್ರಿಡ್: ಸ್ಪೇನಿನ ಖ್ಯಾತ ಟೆನಿಸ್​ ಆಟಗಾರ್ತಿ, ಎರಡು ಬಾರಿಯ ಗ್ರ್ಯಾನ್‌ಸ್ಲ್ಯಾಮ್ ಚಾಂಪಿಯನ್, ಮಾಜಿ ವಿಶ್ವ ನಂ.1 ಆಟಗಾರ್ತಿ ಗಾರ್ಬಿನ್‌ ಮುಗುರುಜಾ(Garbine Muguruza) ಅವರು ಟೆನಿಸ್​ಗೆ ವಿದಾಯ(Garbine Muguruza retirement) ಹೇಳಿದ್ದಾರೆ. ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಮೆರಿಕದ ವಿಲಿಯಮ್ಸ್ ಸಹೋದರಿಯರನ್ನು ಸೋಲಿಸಿದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದು.

30 ವರ್ಷದ ಗಾರ್ಬಿನ್‌ ಮುಗುರುಜಾ, ಸುದ್ದಿಗೋಷ್ಠಿ ನಡೆಸಿ ತಮ್ಮ ವಿದಾಯವನ್ನು ಪ್ರಕಟಿಸಿದರು. ‘ಇದು ನಿವೃತ್ತಿ ಹೊಂದುವ ಸಮಯ ಮತ್ತು ನನ್ನ ಜೀವನದಲ್ಲಿ ಹೊಸ ಅಧ್ಯಾಯ ತೆರೆಯುವ ಸಮಯ ಎಂದು ಭಾವಿಸುವೆ’ ಎಂದು ಹೇಳುವ ಮೂಲಕ ತನ್ನ ನಿವೃತ್ತಿಯನ್ನು ಪ್ರಕಟಿಸಿದರು.

2016ರ ಫ್ರೆಂಚ್ ಓಪನ್ ಫೈನಲ್‌ ನಲ್ಲಿ ಸೆರೆನಾ ವಿಲಿಯಮ್ಸ್(Serena Williams) ಮತ್ತು 2017ರ ವಿಂಬಲ್ಡನ್ ಫೈನಲ್‌ನಲ್ಲಿ ವೀನಸ್ ವಿಲಿಯಮ್ಸ್(Venus Williams) ಅವರನ್ನು ಮುಗುರುಜಾ ಸೋಲಿಸಿ ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿದ್ದರು. ತಮ್ಮ ವೃತ್ತಿಜೀವನದಲ್ಲಿ ಒಟ್ಟು 10 ಪ್ರಮುಖ ಪ್ರಶಸ್ತಿ ಗೆದ್ದಿದ್ದಾರೆ. 2015ರ ವಿಂಬಲ್ಡನ್ ಮತ್ತು 2020ರ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಕೊನೆಯ ಬಾರಿಗೆ ಅವರು ಗೆಲುವು ಸಾಧಿಸಿದ್ದು, 2021 ರ ಎಟಿಪಿ ಟೂರ್ನಿಯಾಗಿತ್ತು. ಕಳೆದೊಂದು ವರ್ಷದಿಂದ ಅವರು ಯಾವುದೇ ಟೆನಿಸ್​ ಟೂರ್ನಿ ಆಡಿರಲಿಲ್ಲ. ಇದೀಗ ತಮ್ಮ ನೆಚ್ಚಿನ ಟೆನಿಸ್​ ಆಟಕ್ಕೆ ವಿದಾಯ ಹೇಳಿದ್ದಾರೆ.

2 ವರ್ಷಗಳ ಹಿಂದೆ ಸೆರೆನಾ ವಿಲಿಯಮ್ಸ್‌ ವಿದಾಯ


ಟೆನಿಸ್ ಲೋಕದ ತಾರೆ ಸೆರೆನಾ ವಿಲಿಯಮ್ಸ್‌ ಅವರು 2022ರಲ್ಲಿ ಯುಎಸ್‌ ಓಪನ್‌ ಪಂದ್ಯಾವಳಿಯಲ್ಲಿ ಆಡುವ ಮೂಲಕ ಟೆನಿಸ್​ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ವನಿತಾ ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯದ ಅಜ್ಲಾ ಟೊಮ್‌ಜಾನೋವಿಕ್‌ ಎದುರು ಸೋಲು ಅನುಭವಿಸುವ ಮೂಲಕ ಭಾವುಕ ವಿದಾಯದ ಆಟವನ್ನು ಆಡಿದ್ದರು. 23 ಸಿಂಗಲ್ಸ್‌ ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದ ಸಾಧನೆ ಇವರದ್ದಾಗಿದೆ.

Exit mobile version