Site icon Vistara News

WPL 2024 : ಲೇಡಿ ಎಬಿಡಿ; ಭಯಂಕರ ಕ್ಯಾಚ್ ಹಿಡಿದ ಆರ್​ಸಿಬಿ ಆಟಗಾರ್ತಿ

Georgia Wareham

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ಪ್ರೀಮಿಯರ್ ಲೀಗ್​​ನ (WPL 2024) ತನ್ನ ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 25 ರನ್​ಗಳ ಸೋಲಿಗೆ ಒಳಗಾಗಿದೆ. ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದಿತ್ತು. ಆದಾಗ್ಯೂ ಈ ಪಂದ್ಯ ಅಭಿಮಾನಿಗಳ ಸ್ಮರಣೆಯಲ್ಲಿ ಉಳಿದುಕೊಳ್ಳುವುದಕ್ಕೆ ಒಂದು ಕಾರಣವಿದೆ. ಅದುವೇ ಜಾರ್ಜಿಯಾ ವೇರ್ಹ್ಯಾಮ್ ಅವರ ಬೌಂಡರಿ ಲೈನ್ ಬಳಿಕ ಅತ್ಯುತ್ತಮ ಕ್ಯಾಚ್​. ಇದು ಆರ್​ಸಿಬಿ ಪುರುಷರ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್​ ಅವರ ಕ್ಯಾಚ್​ ಅನ್ನು ನೆನಪಿಸುವಂತೆ ಮಾಡಿತು.

ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಜಾರ್ಜಿಯಾ ವೇರ್ಹ್ಯಾಮ್ ಗಮನ ಸೆಳೆದಿದ್ದಾರೆ. 11ನೇ ಓವರ್​ನ 3ನೇ ಎಸೆತದಲ್ಲಿ ಶಫಾಲಿ ವರ್ಮಾ ಆಕ್ರಮಣಕಾರಿ ಆಟವಾಡಿ ಡಿ ಕ್ಲೆರ್ಕ್ ಅವರ ಚೆಂಡನ್ನು ಮಿಡ್​ ವಿಕೆಟ್​ ಕಡೆಗೆ ಹಾರಿಸಿದರು. ಚೆಂಡು ಬೌಂಡರಿ ಗೆರೆಯಾಚೆ ಬಿದ್ದು ಸಿಕ್ಸರ್ ಆಗಬೇಕಾಗಿತ್ತು. ಆದರೆ, ಮೈದಾನದಲ್ಲಿ ಜಾರ್ಜಿಯಾ ವೇರ್ಹ್ಯಾಮ್ ಫೀಲ್ಡಿಂಗ್​ ಅದ್ಭುತ ತೋರಿದರು. ಅವರ ಪ್ರಯತ್ನವು ಖಂಡಿತವಾಗಿಯೂ ಶೆಫಾಲಿ ವರ್ಮಾ ಅವರಿಗೆ ನೋವು ತಂದಿರುತ್ತದೆ.

ಎಬಿ ಡಿವಿಲಿಯರ್ಸ್ ಅವರ ಕ್ಯಾಚ್ ಸ್ಮರಣೆ


ಜಾರ್ಜಿಯಾ ವೇರ್ಹ್ಯಾಮ್ ಬೌಂಡರಿ ಲೈನ್ ಮೇಲೆ ಹಾರಿ ಚೆಂಡು ಹಿಡಿದ ವೇಳೆ ಅದೇ ಸ್ಟೇಡಿಯಮ್​ನಲ್ಲಿ ಎಬಿ ಡಿವಿಲಿಯರ್ಸ್ ಅವರ ವಿಶೇಷ ಕ್ಯಾಚ್ ಅಭಿಮಾನಿಗಳ ಸ್ಮರಣೆಗೆ ಬಂತು. ಬೆಂಗಳೂರು ತಂಡದ ಮಾಜಿ ಬ್ಯಾಟರ್​​ ಐಪಿಎಲ್ 2018 ರಲ್ಲಿ ಅದೇ ರೀತಿ ಹಾರಿ ಅದ್ಭುತ ಕ್ಯಾಚ್ ಪಡೆದಿದ್ದರು.

ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಲೆಕ್ಸ್ ಹೇಲ್ಸ್ ಆರ್​ಸಿಬಿ ಬೌಲರ್​ ಮೊಯಿನ್ ಅಲಿ ಎಸೆತಕ್ಕೆ ಜೋರಾಗಿ ಹೊಡೆದಿದ್ದರು. ಚೆಂಡು ಸಿಕ್ಸರ್ ಗೆ ಹೋಗುತ್ತದೆ ಎಂಬುದು ಖಚಿತವಾಗಿತ್ತು. ಆದರೆ ಎಬಿಡಿ ವಿಲಿಯರ್ಸ್​ ಅದನ್ನು ಕ್ಯಾಚ್ ಆಗಿ ಪರಿವರ್ತಿಸಿದ್ದರು.

ಇದನ್ನೂ ಓದಿ : Virat kohli : ಕೊಹ್ಲಿ, ರೋಹಿತ್​​ ಕೂಡ ರಣಜಿ ಟ್ರೋಫಿ ಆಡಲಿ; ಮಾಜಿ ಕ್ರಿಕೆಟಿಗನ ಒತ್ತಾಯ

ಆರ್​ಸಿಬಿ ಅಭಿಮಾನಿಗಳಿಗೆ ಬೇಸರ

ಕಳೆದ ವರ್ಷದ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ 2024ರ ಡಬ್ಲ್ಯುಪಿಎಲ್ (WPL 2024) ಟೂರ್ನಿಯಲ್ಲಿ ಅದ್ಭುತವಾಗಿ ಮುನ್ನಡೆಯುತ್ತಿದೆ. ಗುರುವಾರ ನಡೆದ ಟೂರ್ನಿಯ ಏಳನೇ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 25 ರನ್​ಗಳ ಗೆಲವು ಪಡೆದಿದೆ. ಇದರೊಂದಿಗೆ ಮೆಗ್ ಲ್ಯಾನಿಂಗ್ ನೇತೃತ್ವದ ತಂಡವು ಸತತ ಮೂರನೇ ಗೆಲುವನ್ನು ಸಾಧಿಸಿದೆ ಮತ್ತು ಪಾಯಿಂಟ್ಸ್ ಟೇಬಲ್​​ನಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಏತನ್ಮಧ್ಯೆ, ರಾಯಲ್ಸ್ ತಮ್ಮ ಬೌಲಿಂಗ್ ಮತ್ತು ಮಧ್ಯಮ ಕ್ರಮಾಂಕದ ಕಳಪೆ ಪ್ರದರ್ಶನದ ನಂತರ ಒಂದು ಸ್ಥಾನ ಕುಸಿದು ಎರಡನೇ ಸ್ಥಾನಕ್ಕೆ ಇಳಿದಿದೆ.

Exit mobile version