WPL 2024 : ಲೇಡಿ ಎಬಿಡಿ; ಭಯಂಕರ ಕ್ಯಾಚ್ ಹಿಡಿದ ಆರ್​ಸಿಬಿ ಆಟಗಾರ್ತಿ - Vistara News

ಕ್ರೀಡೆ

WPL 2024 : ಲೇಡಿ ಎಬಿಡಿ; ಭಯಂಕರ ಕ್ಯಾಚ್ ಹಿಡಿದ ಆರ್​ಸಿಬಿ ಆಟಗಾರ್ತಿ

Georgia Wareham : ಜಾರ್ಜಿಯಾ ವೇರ್ಹ್ಯಾಮ್​ ಅವರ ಕ್ಯಾಚ್​​ 2018ರಲ್ಲಿ ಎಬಿಡಿ ವಿಲಿಯರ್ಸ್​ ಹಿಡಿದ ಕ್ಯಾಚ್​​ ಅನ್ನು ಸ್ಮರಿಸುವಂತೆ ಮಾಡಿತು.

VISTARANEWS.COM


on

Georgia Wareham
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ಪ್ರೀಮಿಯರ್ ಲೀಗ್​​ನ (WPL 2024) ತನ್ನ ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 25 ರನ್​ಗಳ ಸೋಲಿಗೆ ಒಳಗಾಗಿದೆ. ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದಿತ್ತು. ಆದಾಗ್ಯೂ ಈ ಪಂದ್ಯ ಅಭಿಮಾನಿಗಳ ಸ್ಮರಣೆಯಲ್ಲಿ ಉಳಿದುಕೊಳ್ಳುವುದಕ್ಕೆ ಒಂದು ಕಾರಣವಿದೆ. ಅದುವೇ ಜಾರ್ಜಿಯಾ ವೇರ್ಹ್ಯಾಮ್ ಅವರ ಬೌಂಡರಿ ಲೈನ್ ಬಳಿಕ ಅತ್ಯುತ್ತಮ ಕ್ಯಾಚ್​. ಇದು ಆರ್​ಸಿಬಿ ಪುರುಷರ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್​ ಅವರ ಕ್ಯಾಚ್​ ಅನ್ನು ನೆನಪಿಸುವಂತೆ ಮಾಡಿತು.

ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ ಜಾರ್ಜಿಯಾ ವೇರ್ಹ್ಯಾಮ್ ಗಮನ ಸೆಳೆದಿದ್ದಾರೆ. 11ನೇ ಓವರ್​ನ 3ನೇ ಎಸೆತದಲ್ಲಿ ಶಫಾಲಿ ವರ್ಮಾ ಆಕ್ರಮಣಕಾರಿ ಆಟವಾಡಿ ಡಿ ಕ್ಲೆರ್ಕ್ ಅವರ ಚೆಂಡನ್ನು ಮಿಡ್​ ವಿಕೆಟ್​ ಕಡೆಗೆ ಹಾರಿಸಿದರು. ಚೆಂಡು ಬೌಂಡರಿ ಗೆರೆಯಾಚೆ ಬಿದ್ದು ಸಿಕ್ಸರ್ ಆಗಬೇಕಾಗಿತ್ತು. ಆದರೆ, ಮೈದಾನದಲ್ಲಿ ಜಾರ್ಜಿಯಾ ವೇರ್ಹ್ಯಾಮ್ ಫೀಲ್ಡಿಂಗ್​ ಅದ್ಭುತ ತೋರಿದರು. ಅವರ ಪ್ರಯತ್ನವು ಖಂಡಿತವಾಗಿಯೂ ಶೆಫಾಲಿ ವರ್ಮಾ ಅವರಿಗೆ ನೋವು ತಂದಿರುತ್ತದೆ.

ಎಬಿ ಡಿವಿಲಿಯರ್ಸ್ ಅವರ ಕ್ಯಾಚ್ ಸ್ಮರಣೆ


ಜಾರ್ಜಿಯಾ ವೇರ್ಹ್ಯಾಮ್ ಬೌಂಡರಿ ಲೈನ್ ಮೇಲೆ ಹಾರಿ ಚೆಂಡು ಹಿಡಿದ ವೇಳೆ ಅದೇ ಸ್ಟೇಡಿಯಮ್​ನಲ್ಲಿ ಎಬಿ ಡಿವಿಲಿಯರ್ಸ್ ಅವರ ವಿಶೇಷ ಕ್ಯಾಚ್ ಅಭಿಮಾನಿಗಳ ಸ್ಮರಣೆಗೆ ಬಂತು. ಬೆಂಗಳೂರು ತಂಡದ ಮಾಜಿ ಬ್ಯಾಟರ್​​ ಐಪಿಎಲ್ 2018 ರಲ್ಲಿ ಅದೇ ರೀತಿ ಹಾರಿ ಅದ್ಭುತ ಕ್ಯಾಚ್ ಪಡೆದಿದ್ದರು.

ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಲೆಕ್ಸ್ ಹೇಲ್ಸ್ ಆರ್​ಸಿಬಿ ಬೌಲರ್​ ಮೊಯಿನ್ ಅಲಿ ಎಸೆತಕ್ಕೆ ಜೋರಾಗಿ ಹೊಡೆದಿದ್ದರು. ಚೆಂಡು ಸಿಕ್ಸರ್ ಗೆ ಹೋಗುತ್ತದೆ ಎಂಬುದು ಖಚಿತವಾಗಿತ್ತು. ಆದರೆ ಎಬಿಡಿ ವಿಲಿಯರ್ಸ್​ ಅದನ್ನು ಕ್ಯಾಚ್ ಆಗಿ ಪರಿವರ್ತಿಸಿದ್ದರು.

ಇದನ್ನೂ ಓದಿ : Virat kohli : ಕೊಹ್ಲಿ, ರೋಹಿತ್​​ ಕೂಡ ರಣಜಿ ಟ್ರೋಫಿ ಆಡಲಿ; ಮಾಜಿ ಕ್ರಿಕೆಟಿಗನ ಒತ್ತಾಯ

ಆರ್​ಸಿಬಿ ಅಭಿಮಾನಿಗಳಿಗೆ ಬೇಸರ

ಕಳೆದ ವರ್ಷದ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ 2024ರ ಡಬ್ಲ್ಯುಪಿಎಲ್ (WPL 2024) ಟೂರ್ನಿಯಲ್ಲಿ ಅದ್ಭುತವಾಗಿ ಮುನ್ನಡೆಯುತ್ತಿದೆ. ಗುರುವಾರ ನಡೆದ ಟೂರ್ನಿಯ ಏಳನೇ ಪಂದ್ಯದಲ್ಲಿ ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 25 ರನ್​ಗಳ ಗೆಲವು ಪಡೆದಿದೆ. ಇದರೊಂದಿಗೆ ಮೆಗ್ ಲ್ಯಾನಿಂಗ್ ನೇತೃತ್ವದ ತಂಡವು ಸತತ ಮೂರನೇ ಗೆಲುವನ್ನು ಸಾಧಿಸಿದೆ ಮತ್ತು ಪಾಯಿಂಟ್ಸ್ ಟೇಬಲ್​​ನಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಏತನ್ಮಧ್ಯೆ, ರಾಯಲ್ಸ್ ತಮ್ಮ ಬೌಲಿಂಗ್ ಮತ್ತು ಮಧ್ಯಮ ಕ್ರಮಾಂಕದ ಕಳಪೆ ಪ್ರದರ್ಶನದ ನಂತರ ಒಂದು ಸ್ಥಾನ ಕುಸಿದು ಎರಡನೇ ಸ್ಥಾನಕ್ಕೆ ಇಳಿದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

SRH vs RR: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್’; ಫೈನಲ್​ನಲ್ಲಿ ಕೆಕೆಆರ್ ವಿರುದ್ಧ ಕಣಕ್ಕೆ​

SRH vs RR: ಬೌಲರ್‌ಗಳ ದಾಳಿಯ ನಡುವೆಯೂ ಹೆನ್ರಿಚ್​ ಕ್ಲಾಸೆನ್​ ಅರ್ಧಶತಕ ಬಾರಿಸಿ ಆಧರಿಸಿ ನಿಂತ ಪರಿಣಾಮ ತಂಡ 150ರ ಗಡಿ ದಾಟಿ ಉತ್ತಮ ರನ್​ ಕಲೆಹಾಕಿತು. ಒಂದೆಡೆ ವಿಕೆಟ್‌ಗಳು ಬಡಬಡನೆ ಉರುಳುತ್ತಿದ್ದರೂ ಕ್ಲಾಸೆನ್​ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಇದು ಫಲ ಕೊಟ್ಟಿತು.

VISTARANEWS.COM


on

SRH vs RR
Koo

ಚೆನ್ನೈ: ಶುಕ್ರವಾರ ನಡೆದ ಐಪಿಎಲ್​ನ​ ಕ್ವಾಲಿಫೈಯರ್-2​ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​(Sunrisers Hyderabad) ತಂಡ ರಾಜಸ್ಥಾನ್​ ರಾಯಲ್ಸ್(SRH vs RR)​ ವಿರುದ್ಧ 36 ರನ್​ಗಳ ಭರ್ಜರಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದೆ. ಮೇ 26ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಈ ಪಂದ್ಯ ಕೂಡ ಚಿದಂಬರಂ ಸ್ಟೇಡಿಯಂನಲ್ಲೇ ನಡೆಯಲಿದೆ.​

ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಸನ್​ರೈಸರ್ಸ್​ ಹೈದರಾಬಾದ್​ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 175 ರನ್​ ಬಾರಿಸಿತು. ಜವಾಬಿತ್ತ ರಾಜಸ್ಥಾನ್​ ಉತ್ತಮ ಆರಂಭ ಪಡೆದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್​ ನಷ್ಟಕ್ಕೆ 139 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ರಾಜಸ್ಥಾನ್​ ತಂಡದ ಸೋಲು ಕಂಡು ಪುಟ್ಟ ಅಭಿಮಾನಿಯೊಬ್ಬಳು ಕಣ್ಣೀರು ಸುರಿಸಿದ ದೃಶ್ಯ ಕೂಡ ಕಂಡು ಬಂತು. ಅತ್ತ ಹೈದರಾಬಾದ್​ ತಂಡದ ಮಾಲಕಿ ಕಾವ್ಯಾ ಮಾರನ್​ ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ವಿಕೆಟ್​ ಬಿದ್ದಾಗಲೆಲ್ಲಾ ಕುಣಿದು ಕುಪ್ಪಳಿಸುತ್ತಾ, ತನ್ನ ತಂದೆಯನ್ನು ತಬ್ಬಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದರು.

ಚೇಸಿಂಗ್​ ವೇಳೆ ರಾಜಸ್ಥಾನ್(Rajasthan Royals)​ ತಂಡಕ್ಕೆ ಆಸರೆಯಾದದ್ದು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್​ ಮಾತ್ರ. ತಂಡ 24 ರನ್​ ಗಳಿಸಿದ್ದ ವೇಳೆ ಟಾಮ್ ಕೊಹ್ಲರ್-ಕ್ಯಾಡ್ಮೋರ್(10) ರೂಪದಲ್ಲಿ ಮೊದಲ ವಿಕೆಟ್​ ಕಳೆದುಕೊಂಡಿತು. ದ್ವಿತೀಯ ವಿಕೆಟ್​ಗೆ ಜತೆಯಾದ ನಾಯಕ ಸಂಜು ಸ್ಯಾ,ಮ್ಸನ್​ ಮತ್ತು ಯಶಸ್ವಿ ಜೈಸ್ವಾಲ್​ ಕೆಲ ಕಾಲ ಜವಾಬ್ದಾರಿಯುತ ಬ್ಯಾಟಿಂಗ್​ ಮೂಲಕ ತಂಡಕ್ಕೆ ನೆರವಾದರು. ಆದರೆ ಈ ಜತೆಯಾಟ ಹೆಚ್ಚು ಹೊತ್ತು ಸಾಗಲಿಲ್ಲ. ಸ್ಯಾಮ್ಸನ್​ 10 ರನ್​ ಗಳಿಸಿದ್ದ ವೇಳೆ ವಿಕೆಟ್​ ಕಳೆದುಕೊಂಡರು. ಆ ಬಳಿಕ ಬಂದ ರಿಯಾನ್​ ಪರಾಗ್​(6), ಆರ್​ ಅಶ್ವಿನ್​(0), ಶಿಮ್ರಾನ್ ಹೆಟ್​ಮೇರ್​(4) ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಪರೇಡ್​ ನಡೆಸಿದರು. ಯಾರೂ ಕೂಡ ತಂಡಕ್ಕೆ ಆಸರೆಯಾಗುವಲ್ಲಿ ಯಶಸ್ಸು ಕಾಣಲಿಲ್ಲ. ಜೈಸ್ವಾಲ್​ 3 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ 42 ರನ್​ ಗಳಿಸಿದರು.

ಅಂತಿಮ ಹಂತದಲ್ಲಿ ಧೃವ್​ ಜುರೇಲ್​ ಅರ್ಧಶತಕ ಬಾರಿಸುವ ಮೂಲಕ ಶಕ್ತಿ ಮೀರಿದ ಬ್ಯಾಟಿಂಗ್​ ಹೋರಾಟ ನಡೆಸಿದರು. ಇದೇ ವೇಳೆ ನಟರಾಜ್​ ಓವರ್​ನಲ್ಲಿ ಗಂಟಲಿಗೆ ಚೆಂಡು ತಾಗಿಸಿಕೊಂಡು ಸಣ್ಣ ಮಟ್ಟಿನ ಗಾಯಕ್ಕೆ ತುತ್ತಾದರು. ಆದರೆ ಅವರ ಆಟಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗುತ್ತಿದ್ದರೆ ರಾಜಸ್ಥಾನ್​ಗೆ ಗೆಲುವು ಒಲಿಯುವ ಸಾಧ್ಯತೆ ಇತ್ತು. ವೆಸ್ಟ್​ ಇಂಡೀಸ್​ ತಂಡದ ನಾಯಕ ರೋವ್ಮನ್ ಪೊವೆಲ್‌(6) ಕೂಡ ವಿಫಲರಾದರು. ಹೈದರಾಬಾದ್​ ಪರ ಶಾಬಾಜ್​ ಅಹ್ಮದ್​ 4 ಓವರ್​ಗೆ ಕೇವಲ 23 ರನ್​ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್​ ಕಡೆವಿದರು. ಪಾರ್ಟ್​ ಟೈಮ್​ ಬೌಲರ್​ ಅಭಿಷೇಕ್​ ಶರ್ಮ ಈ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ 24 ರನ್​ಗೆ 2 ವಿಕೆಟ್​ ಕಿತ್ತರು. ಅಜೇಯರಾಗಿ ಉಳಿದ ಜುರೇಲ್ 35 ಎಸೆತಗಳಿಂದ 56 ರನ್​ ಬಾರಿಸಿದರು. ಇದರದ್ದೇ ತಂಡದ ಪರ ಅತ್ಯಧಿಕ ಗಳಿಕೆ.

ಮೊದಲು ಬ್ಯಾಟಿಂಗ್​ ನಡೆಸಿದ ಹೈದರಾಬಾದ್​ ತಂಡ ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅನುಭವಿಸಿ​​ದಂತೆ ಈ ಪಂದ್ಯದಲ್ಲಿಯೂ ಆರಂಭಿಕ ಆಘಾತ ಎದುರಿಸಿತು. ಎಡಗೈ ಬ್ಯಾಟರ್​ ಟ್ರೆಂಟ್​ ಬೌಲ್ಟ್​ ಅವರ ಮೊದಲ ಓವರ್​ನಲ್ಲಿಯೇ ಬಡಬಡನೆ ತಲಾ ಒಂದು ಸಿಕ್ಸರ್ ಮತ್ತು ​ಬೌಂಡರಿ ಬಾರಿಸಿದರೂ ಈ ಬಿರುಸನ್ನು ಕಾಯ್ದುಕೊಳ್ಳಲು ಅವರಿಂದಾಗಲಿಲ್ಲ. ಇದೇ ಓವರ್​ನ ಅಂತಿಮ ಎಸೆತದಲ್ಲಿ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು.

ಇದನ್ನೂ ಓದಿ IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

ದ್ವಿತೀಯ ವಿಕೆಟ್​ಕೆ ಆಡಲಿಳಿದ ರಾಹುಲ್​ ತ್ರಿಪಾಠಿ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟು 15 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 37 ರನ್​ ಬಾರಿಸಿ ವಿಕೆಟ್​ ಕಳೆದುಕೊಂಡರು. ಹಲವು ಪಂದ್ಯಗಳ ಬಳಿಕ ಈ ಪಂದ್ಯದಲ್ಲಿ ಆಡಿದ ಐಡೆನ್​ ಮಾರ್ಕ್ರಮ್​ ಕೇವಲ 1 ರನ್​ಗೆ ಔಟಾಗಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಒಂದೇ ಓವರ್​ನಲ್ಲಿ ಬೌಲ್ಟ್​​ 2 ಪ್ರಮುಖ ವಿಕೆಟ್​ ಬೇಟೆಯಾಡಿದರು. ಅಲ್ಲಿಗೆ ಆರಂಭಿಕ ಮೂರು ವಿಕೆಟ್​ ಕೂಡ ಬೌಲ್ಟ್​​ ಪಾಲಾಯಿತು.

ಆಪದ್ಬಾಂಧವ ಕ್ಲಾಸೆನ್​


ಬೌಲರ್‌ಗಳ ದಾಳಿಯ ನಡುವೆಯೂ ಹೆನ್ರಿಚ್​ ಕ್ಲಾಸೆನ್​ ಅರ್ಧಶತಕ ಬಾರಿಸಿ ಆಧರಿಸಿ ನಿಂತ ಪರಿಣಾಮ ತಂಡ 150ರ ಗಡಿ ದಾಟಿ ಉತ್ತಮ ರನ್​ ಕಲೆಹಾಕಿತು. ಒಂದೆಡೆ ವಿಕೆಟ್‌ಗಳು ಬಡಬಡನೆ ಉರುಳುತ್ತಿದ್ದರೂ ಕ್ಲಾಸೆನ್​ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಇದು ಫಲ ಕೊಟ್ಟಿತು. ಕ್ಲಾಸೆನ್​ ಹೊರತುಪಡಿಸಿದರೆ ಟ್ರಾವಿಸ್​ ಹೆಡ್​ ಪ್ರದರ್ಶನ ಗಮನಾರ್ಹ ಮಟ್ಟದಲ್ಲಿತ್ತು. ಹೆಡ್​ 34 ರನ್​ ಬಾರಿಸಿದರು. ಹೆಡ್​ ಮತ್ತು ಕ್ಲಾಸೆನ್​ ಸೇರಿಕೊಂಡು 4 ವಿಕೆಟ್​ಗೆ 42 ರನ್​ಗಳ ಜತೆಯಾಟ ನಡೆಸಿದರು. 18 ಓವರ್​ ತನಕ ಬ್ಯಾಟಿಂಗ್​ ನಡೆಸಿದ ಕ್ಲಾಸೆನ್​ 34 ಎಸೆತಗಳಿಂದ ಭರ್ತಿ 50 ರನ್​ ಗಳಿಸಿ ಸಂದೀಪ್​ ಶರ್ಮಾ ಅವರ ಸ್ಲೋ ಯಾರ್ಕರ್​ ಎಸೆತದ ಮರ್ಮವನ್ನು ಅರಿಯುವಲ್ಲಿ ವಿಫಲವಾಗಿ ಕ್ಲೀನ್​ ಬೌಲ್ಡ್​ ಆದರು. ಅವರ ಅರ್ಧಶತಕದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 4 ಸಿಕ್ಸರ್ ಸಿಡಿಯಿತು.

ರಾಜಸ್ಥಾನ್​ ಪರ ಚಹಲ್​ ವಿಕೆಟ್​ ಕೀಳದಿದ್ದರೂ ಕೂಡ ಪ್ರಮುಖ ಮೂರು ಆಟಗಾರರ ಕ್ಯಾಚ್​ ಹಿಡಿದು ಮಿಂಚಿದರು. ಅವೇಶ್​ ಖಾನ್​ ಅವರು ಅಪಾಯಕಾರಿ ಅಬ್ದುಲ್​ ಸಮದ್​(0) ಮತ್ತು ನಿತೇಶ್​ ರೆಡ್ಡಿ(5) ಅವರನ್ನು ಸತತ ಎಸೆತಗಳಿಂದ ಔಟ್ ಮಾಡಿದ್ದು ಹೈದರಾಬಾದ್​ನ ದೊಡ್ಡ ಮೊತ್ತಕ್ಕೆ ಹಿನ್ನಡೆಯಾಯಿತು. ಅಂತಿ​ಮ ಹಂತದಲ್ಲಿ ಶಹಬಾಜ್ ಅಹಮದ್ 18 ರನ್​ ಬಾರಿಸಿದರು. ರಾಜಸ್ಥಾನ್​ ಪರ ಬೌಲ್ಟ್​ ಮತ್ತು ಅವೇಶ್​ ಖಾನ್​ ತಲಾ 3 ವಿಕೆಟ್​ ಕಿತ್ತರೆ, ಸಂದೀಪ್​ ಶರ್ಮ 2 ವಿಕೆಟ್​ ಪಡೆದರು.

Continue Reading

ಕ್ರೀಡೆ

T20 World Cup 2024: ಕೊನೆಗೂ ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ

T20 World Cup 2024: ಭಾರತದ ಮಾಜಿ ಮುಖ್ಯ ಕೋಚ್, 2011ರಲ್ಲಿ ಏಕದಿನ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್(Gary Kirsten) ಮಾರ್ಗದರ್ಶನದಲ್ಲಿ ಪಾಕಿಸ್ತಾನ ಈ ಬಾರಿ ಟಿ20 ವಿಶ್ವಕಪ್​ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್​ 9ರಂದು ನಡೆಯಲಿದೆ.

VISTARANEWS.COM


on

T20 World Cup 2024
Koo

ಕರಾಚಿ: ಇದೇ ಜೂನ್​ 1ರಿಂದ ಆರಂಭಗೊಳ್ಳಲಿರುವ ಪುರುಷರ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಪಾಲ್ಗೊಳ್ಳುವ 20 ದೇಶಗಳ ಪೈಕಿ 19 ದೇಶಗಳು ತನ್ನ ತಂಡವನ್ನು ಹಲವು ದಿನಗಳ ಹಿಂದೆಯೇ ಪ್ರಕಟಿಸಿತ್ತು. ಆದರೆ, ಪಾಕಿಸ್ತಾನ ಮಾತ್ರ ತಂಡ ಪ್ರಕಟಕ್ಕೆ ಮೀನ-ಮೇಷ ಎಣಿಸುತ್ತಿತ್ತು. ಇದೀಗ ಕೊನೆಗೂ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ(Pakistan squad). ಶುಕ್ರವಾರ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ(Mohsin Naqvi) ಸುದ್ದಿಗೋಷ್ಠಿ ನಡೆಸಿ ತಂಡವನ್ನು ಪ್ರಕಟಿಸಿದ್ದಾರೆ.

“ಇದು ಯುವ ಮತ್ತು ಅನುಭವಿ ಆಟಗಾರರ ಮಿಶ್ರಣವನ್ನು ಹೊಂದಿರುವ ಅತ್ಯಂತ ಪ್ರತಿಭಾವಂತ ಮತ್ತು ಸಮತೋಲಿತ ತಂಡವಾಗಿದೆ” ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬಾಬರ್​ ಅಜಂ ತಂಡದ ನಾಯಕನಾಗಿದ್ದಾರೆ. ಅಬ್ರಾರ್ ಅಹ್ಮದ್, ಅಜಮ್ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಸೈಮ್ ಅಯೂಬ್ ಮತ್ತು ಉಸ್ಮಾನ್ ಖಾನ್ ಅವರು ಟಿ20 ವಿಶ್ವಕಪ್​ನಲ್ಲಿ ಚೊಚ್ಚಲ ಅವಕಾಶ ಪಡೆದ ಆಟಗಾರರು. ಆದರೆ ಹಿರಿಯ ಆಟಗಾರ ಹಸನ್ ಅಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಐಸಿಸಿ ನಿಯಮದ ಪ್ರಕಾರ ಮೇ 1 ತಂಡದ ಆಯ್ಕೆಗೆ ಅಂತಿಮ ದಿನವಾಗಿತ್ತು. ಈ ವೇಳೆ ಪಾಕ್​ ತನ್ನ ತಂಡವನ್ನು ಪ್ರಕಟಿಸಿರಲಿಲ್ಲ. ಮೇ 24 ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅಂತಿಮ ದಿನವಾಗಿತ್ತು. ಇದೇ ದಿನ ತನ್ನ ತಂಡವನ್ನು ಪ್ರಟಿಸಿದೆ. ಪ್ರಮುಖ ಟಿ20 ಆಟಗಾರರಾದ ಮೊಹಮ್ಮದ್‌ ರಿಜ್ವಾನ್‌, ಆಜಂ ಖಾನ್‌, ಇರ್ಫಾನ್‌ ಖಾನ್‌ ನಿಯಾಜಿ ಮತ್ತು ಹ್ಯಾರಿಸ್‌ ರೌಫ್ ಅವರು ಫಿಟ್‌ನೆಸ್‌ ಹೊಂದಿಲ್ಲದ ಕಾರಣ ಪಾಕ್​ ಈ ತಂತ್ರವನ್ನು ಬಳಸಿತ್ತು.

ಭಾರತದ ಮಾಜಿ ಮುಖ್ಯ ಕೋಚ್, 2011ರಲ್ಲಿ ಏಕದಿನ ವಿಶ್ವಕಪ್​ ಗೆಲ್ಲಿಸಿಕೊಟ್ಟ ಗ್ಯಾರಿ ಕರ್ಸ್ಟನ್(Gary Kirsten) ಮಾರ್ಗದರ್ಶನದಲ್ಲಿ ಪಾಕಿಸ್ತಾನ ಈ ಬಾರಿ ಟಿ20 ವಿಶ್ವಕಪ್​ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್​ 9ರಂದು ನಡೆಯಲಿದೆ. ಪಾಕಿಸ್ತಾನ ತನ್ನ ಮೊದಲ ಲೀಗ್​ ಪಂದ್ಯದಲ್ಲಿ ಅಮೆರಿಕ ವಿರುದ್ಧ ಜೂನ್​ 6ರಂದು ಆಡಲಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಟೂರ್ನಿಗೆ ಕಾಮೆಂಟರಿ ಬಳಗ ಘೋಷಿಸಿದ ಐಸಿಸಿ; ದಿನೇಶ್​ ಕಾರ್ತಿಕ್​ಗೂ ಸ್ಥಾನ

ಇಂಡೋ-ಪಾಕ್​ ನಡುವಣ ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಅಣಿಯಾಗಲಿದೆ. ಈ ಪಂದ್ಯಕ್ಕಾಗಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ ಪಂದ್ಯವನ್ನು ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ನಡೆಸಲಾಗುತ್ತಿದೆ.

ಪಾಕಿಸ್ತಾನ ತಂಡ


ಬಾಬರ್ ಅಜಂ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾಹ್ಮಾನ್ ಅಫ್ರಿದಿ, ಉಸ್ಮಾನ್ ಖಾನ್.

Continue Reading

ಕ್ರಿಕೆಟ್

Yuzvendra Chahal: ಸಿಕ್ಸರ್​ ಹೊಡೆಸಿಕೊಂಡು ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಲ್​

Yuzvendra Chahal: ಐಪಿಎಲ್​ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್​ ಹೊಡಿಸಿಕೊಂಡ ಬೌಲರ್​ಗಳ ಪಟ್ಟಿಯಲ್ಲಿ ಚಹಲ್​ಗೆ(30)ಗೆ ಜಂಟಿ 2ನೇ ಸ್ಥಾನ. ಮತೋರ್ವ ಆಟಗಾರ ವನಿಂದು ಹಸರಂಗ(30). ಮೊಹಮ್ಮದ್​ ಸಿರಾಜ್​(31) ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

VISTARANEWS.COM


on

Yuzvendra Chahal
Koo

ಚೆನ್ನೈ: ಟೀಮ್​ ಇಂಡಿಯಾದ ಅನುಭವಿ ಸ್ಪಿನ್ನರ್​ ಯಜುವೇಂದ್ರ ಚಹಲ್(Yuzvendra Chahal)​ ಅವರು ಐಪಿಎಲ್​(IPL 2024)ನಲ್ಲಿ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಐಪಿಎಲ್​ನಲ್ಲಿ ಅತ್ಯಧಿಕ ಸಿಕ್ಸರ್​ ಹೊಡೆಸಿಕೊಂಡ ಮೊದಲ ಬೌಲರ್​ ಎನಿಸಿಕೊಂಡಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್​​ ವಿರುದ್ಧದ ಕ್ವಾಲಿಫೈಯರ್​-2 ಪಂದ್ಯದಲ್ಲಿ 4 ಓವರ್​ ಎಸೆತ ಚಹಲ್​ 34 ರನ್​ ಬಿಟ್ಟುಕೊಟ್ಟು ವಿಕೆಟ್​ ಲೆಸ್​ ಎನಿಸಿಕೊಂಡರು. ಹೈದರಾಬಾದ್​ ಬ್ಯಾಟರ್​ಗಳಿಂದ ಸಿಕ್ಸರ್​ ಚಚ್ಚಿಸಿಕೊಂಡ ಚಹಲ್​(224 ಸಿಕ್ಸರ್​) ಐಪಿಎಲ್​ನಲ್ಲಿ ಅತ್ಯಧಿಕ ಸಿಕ್ಸರ್​ ಚಚ್ಚಿಸಿಕೊಂಡ ಬೌಲರ್​ ಎನ್ನುವ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಪಿಯೂಷ್ ಚಾವ್ಲಾ(222) ಹೆಸರಿನಲ್ಲಿತ್ತು.

ಐಪಿಎಲ್​ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್​ ಹೊಡಿಸಿಕೊಂಡ ಬೌಲರ್​ಗಳ ಪಟ್ಟಿಯಲ್ಲಿ ಚಹಲ್​ಗೆ(30)ಗೆ ಜಂಟಿ 2ನೇ ಸ್ಥಾನ. ಮತೋರ್ವ ಆಟಗಾರ ವನಿಂದು ಹಸರಂಗ(30). ಮೊಹಮ್ಮದ್​ ಸಿರಾಜ್​(31) ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹೈದರಾಬಾದ್​​ ವಿರುದ್ಧ ವಿಕೆಟ್​ ಕೀಳಲಿದ್ದರೂ ಕೂಡ ಚಹಲ್​ 3 ಅಮೋಘ ಕ್ಯಾಚ್​ ಹಿಡಿದು ಮಿಂಚಿದರು.

ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್​ ಹೊಡೆಸಿಕೊಂಡ ಬೌಲರ್​


ಮೊಹಮ್ಮದ್​ ಸಿರಾಜ್​ 31 (2022ರಲ್ಲಿ
)

ಯಜುವೇಂದ್ರ ಚಹಲ್​-30 (2024ರಲ್ಲಿ)

ವನಿಂದು ಹಸರಂಗ-30 (2022ರಲ್ಲಿ)

ಡ್ವೇನ್​ ಬ್ರಾವೊ-29 (2018ರಲ್ಲಿ)

ತುಷಾರ್​ ದೇಶ್​ಪಾಂಡೆ-28(2023ರಲ್ಲಿ)

ಐಪಿಎಲ್​ನಲ್ಲಿ ಅತ್ಯಧಿಕ ಸಿಕ್ಸರ್​ ಚಚ್ಚಿಸಿಕೊಂಡ ಬೌಲರ್​


ಯಜುವೇಂದ್ರ ಚಹಲ್​-224 ಸಿಕ್ಸರ್​

ಪಿಯೂಷ್ ಚಾವ್ಲಾ 222 ಸಿಕ್ಸರ್​

ರವೀಂದ್ರ ಜಡೇಜಾ-206 ಸಿಕ್ಸರ್​

ಆರ್​ ಅಶ್ವಿನ್​- 202 ಸಿಕ್ಸರ್​

ಚಹಲ್​ ಅವರು ಐಪಿಎಲ್​ನಲ್ಲಿ ಒಟ್ಟು 205 ವಿಕೆಟ್​ ಕಿತ್ತ ಸಾಧನೆ ಮಾಡಿ ಅತ್ಯಧಿಕ ವಿಕೆಟ್​ ಸರದಾರ ಎನಿಸಿಕೊಂಡಿದ್ದಾರೆ. ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಕೂಡ ಪಡೆದಿದ್ದಾರೆ. ಚಹಲ್​ ಪತ್ನಿ ಧನಶ್ರೀ ವರ್ಮಾ(Dhanashree Verma) ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಪತಿಗೆ ಶುಭ ಕೋರಿದ್ದರು.‘ಕಮ್​ ಆನ್ ಯುಜಿ​… ಹಿ ಈಸ್ ಬ್ಯಾಕ್ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

ಯಜುವೇಂದ್ರ ಚಹಲ್​ ಮತ್ತು ಧನಶ್ರೀ ವರ್ಮಾ ಮಧ್ಯೆ ಎಲ್ಲವೂ ಸರಿಯಿಲ್ಲ. ಶೀಘ್ರದಲ್ಲೇ ಈ ಜೋಡಿ ದೂರವಾಗಲಿದ್ದಾರೆ ಎಂದು ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಆದರೆ ಈ ಜೋಡಿ ಮಾತ್ರ ಈ ಮಾತಿಗೆ ಕ್ಯಾರೆ ಎನ್ನದೆ ನಮ್ಮ ಸಂಸಾರದ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎಂದು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಇಬ್ಬರೂ ಕೂಡ ಹಲವು ಬಾರಿ ವಿದೇಶ ಪ್ರವಾಸದಲ್ಲಿ ಜಾಲಿ ಮೂಡ್​ನಲ್ಲಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚೆಗೆ 150ನೇ ಐಪಿಎಲ್​ ಪಂದ್ಯವನ್ನಾಡಿದ ಚಹಲ್​ಗೆ ಪತ್ನಿ ಭಾವುಕ ವಿಡಿಯೊ ಸಂದೇಶದ ಮೂಲಕ ಹಾರೈಸಿದ್ದರು. “ಹೇ ಯುಜಿ, ನಿಮ್ಮ 150ನೇ ಐಪಿಎಲ್ ಪಂದ್ಯಕ್ಕೆ ಅಭಿನಂದನೆಗಳು. ನಿವು ಈ ಹಿಂದೆ ಆಡಿದ ತಂಡಕ್ಕೆ ಮತ್ತು ಈಗ ಆಡುತ್ತಿರುವ ರಾಜಸ್ಥಾನ್ ರಾಯಲ್ಸ್‌ಗೆ ನೀವು ಅಪಾರ ಕೊಡುಗೆ ನೀಡಿದ್ದೀರಿ. ನಿಮ್ಮ ಬಗ್ಗೆ ನನಗೆ ಯಾವತ್ತೂ ಹೆಮ್ಮೆ ಇದೆ. ನೀವು ನಿಮ್ಮ ಆಟವನ್ನು ಹೇಗೆ ಆಡುತ್ತೀರಿ ಮತ್ತು ಪ್ರತಿ ಬಾರಿ ನೀವು ಕಮ್​ಬ್ಯಾಕ್​ ಮಾಡುವ ರೀತಿ ನಿಜಕ್ಕೂ ಮೆಚ್ಚಲೇ ಬೇಕು. ಯಾವುದೇ ಪಂದ್ಯ ಒತ್ತಡದಲ್ಲಿದ್ದಾಗಲೆಲ್ಲಾ ವಿಕೆಟ್​ ತೆಗೆಯಬಲ್ಲ ಬೌಲರ್​ ನೀವಾಗಿದ್ದೀರಿ. ನಾನು ನಿಮ್ಮ ದೊಡ್ಡ ಚೀರ್‌ಲೀಡರ್ ಮತ್ತು ನಾನು ಯಾವಾಗಲೂ 100 ಪ್ರತಿಶತದಷ್ಟು ನಿಮ್ಮನ್ನು ಬೆಂಬಲಿಸುತ್ತೇನೆ. ನಿಮ್ಮ 150 ನೇ ಐಪಿಎಲ್ ಪಂದ್ಯವನ್ನು ಆನಂದಿಸಿ” ಎಂದು ಶುಭ ಹಾರೈಸಿದ್ದರು. ವಿಡಿಯೊವನ್ನು ರಾಜಸ್ಥಾನ್​ ರಾಯಲ್ಸ್(Rajasthan Royals)​ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿತ್ತು.

Continue Reading

ಕ್ರಿಕೆಟ್

Sara Tendulkar: ಲಂಡನ್​ ಯೂನಿವರ್ಸಿಟಿಯಿಂದ ಪದವಿ ಪಡೆದ ಸಾರಾ ತೆಂಡೂಲ್ಕರ್​; ಮಗಳ ಸಾಧನೆ ಕೊಂಡಾಡಿದ ಸಚಿನ್​

Sara Tendulkar: ಸಚಿನ್ ತೆಂಡೂಲ್ಕರ್(Sachin Tendulkar) ಅವರ ಮಗಳು ಸಾರಾ ತೆಂಡೂಲ್ಕರ್(Sara Tendulkar) ಲಂಡನ್ ಯೂನಿವರ್ಸಿಟಿ(UCL, London) ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ(Sara Tendulkar completed post-graduation).

VISTARANEWS.COM


on

Sara Tendulkar
Koo

ಲಂಡನ್​: ಭಾರತದ ಕ್ರಿಕೆಟ್​ ತಂಡದ ಮಾಜಿ ಆಟಗಾರ, ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಮಗಳು ಸಾರಾ ತೆಂಡೂಲ್ಕರ್(Sara Tendulkar) ಲಂಡನ್ ಯೂನಿವರ್ಸಿಟಿ(UCL, London) ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ(Sara Tendulkar completed post-graduation). ಮಗಳು ಎಲ್ಲಾ ಕಠಿಣ ಪರಿಶ್ರಮವನ್ನು ಹಾಕಿ ದೊಡ್ಡ ಮೈಲಿಗಲ್ಲನ್ನು ಪೂರ್ಣಗೊಳಿಸಿದ್ದಕ್ಕಾಗಿ ಸಚಿನ್ ಭಾವುಕ ಸಂದೇಶದ ಮೂಲಕ ಶ್ಲಾಘಿಸಿದ್ದಾರೆ.

ಟ್ವಿಟರ್​ ಎಕ್ಸ್​ನಲ್ಲಿ ಮಗಳ ಸಾಧನೆ ಬಗ್ಗೆ ಬರೆದುಕೊಂಡಿರುವ ಸಚಿನ್​, “ಇದೊಂದು ಸುಂದರ ದಿನ. ನಮ್ಮ ಮಗಳು ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಯುಸಿಎಲ್‌ನ ಮೆಡಿಸಿನ್ ವಿಭಾಗದಿಂದ ಡಿಸ್ಟಿಂಕ್ಷನ್‌ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ದಿನ. ಪೋಷಕರಾಗಿ, ನೀನು ವರ್ಷಗಳಿಂದ ಮಾಡಿದ ಎಲ್ಲಾ ಕೆಲಸಗಳನ್ನು ನೋಡಿದ್ದಕ್ಕಾಗಿ ನಾವು ತುಂಬಾ ಹೆಮ್ಮೆಪಡುತ್ತೇವೆ. ಇಲ್ಲಿಗೆ ಬರುವುದು ಸುಲಭವಲ್ಲ” ಎಂದು ಬರೆದುಕೊಂಡಿದ್ದಾರೆ. ಸಾರಾ ಲಂಡನ್ ಯೂನಿವರ್ಸಿಟಿಯ ಘಟಿಕೋತ್ಸದಲ್ಲಿ ಪದವಿ ಸ್ವೀಕರಿಸಿದ ಫೋಟೊ, ವಿಡಿಯೊ ಮತ್ತು ತಾಯಿಯೊಂದಿಗೆ ಇರುವ ಫೋಟೊವನ್ನು ಸಚಿನ್​ ಹಂಚಿಕೊಂಡಿದ್ದಾರೆ.

ಸಾರಾ ಕೂಡ ತಾನು ಪದವಿ ಪಡೆದ ದಿನದ ತುಣುಕುಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್​ ಸೇರಿ ಸಚಿನ್​ ಅವರ ಆಪ್ತರು ಸಾರಾಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ Sara Tendulkar: ತಮ್ಮ ಹೆಸರಿನ ಪರೋಡಿ ಖಾತೆ ಮುಚ್ಚಲು ಎಕ್ಸ್‌ಗೆ ಸಾರಾ ತೆಂಡುಲ್ಕರ್ ಆಗ್ರಹ!

ಗಿಲ್​ ಜತೆ ಡೇಟಿಂಗ್​?


ಸಾರಾ ತೆಂಡೂಲ್ಕರ್(Sara Tendulkar) ಅವರು ಟೀಮ್​ ಇಂಡಿಯಾದ ಯುವ ಬ್ಯಾಟರ್​ ಶುಭಮನ್​ ಗಿಲ್(Shubman Gill) ಜತೆ​ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ಮುನ್ನಲೆಗೆ ಬರುತ್ತಲೇ ಇರುತ್ತದೆ. ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ವೇಳೆ ಗಿಲ್​ ಪಂದ್ಯ ವೀಕ್ಷಿಸಲೆಂದೇ ಸಾರಾ ಕೂಡ ಸ್ಟೇಡಿಯಂಗೆ ಬರುತ್ತಿದ್ದರು. ಅಲ್ಲದೆ ಗಿಲ್​ ಸಾಧನೆಗೆ ಗ್ಯಾಲರಿಯಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರಶಂಸಿಸಿದ್ದ ವಿಡಿಯೊ ಮತ್ತು ಫೋಟೊಗಳು ವೈರಲ್​ ಆಗಿತ್ತು. ಸಾರಾ ಮತ್ತು ಗಿಲ್​ ತಂಗಿ ಜತೆಯಾಗಿ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ ವಿಡಿಯೊ ಕೂಡ ವೈರಲ್(​Viral Video) ಆಗಿತ್ತು. ಆದರೂ, ಈ ಜೋಡಿ ಡೇಟಿಂಗ್​ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ತುಟಿ ಬಿಚ್ಚಿಲ್ಲ!

ಸಾರಾ ತೆಂಡೂಲ್ಕರ್ ಮತ್ತು ಗಿಲ್ ಡೇಟಿಂಗ್ ಸುದ್ದಿ ಕಳೆದ ಒಂದು ವರ್ಷದಿಂದ ಜಗತ್ತು ಸುತ್ತುತ್ತಿದೆ. ಆದಾಗ್ಯೂ, ಇಬ್ಬರೂ ವದಂತಿಯನ್ನು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲ. ಪಾಪರಾಜಿಗಳು ಇಬ್ಬರು ಸೆಲೆಬ್ರಿಟಿಗಳನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಪ್ರಶ್ನಿಸಿದ್ದಾರೆ. ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ, ಸಾರಾ ಅಲಿ ಖಾನ್, ಗಿಲ್ ನನ್ನೊಂದಿಗೆ ಡೇಟಿಂಗ್ ಮಾಡುತ್ತಿಲ್ಲ. ಅವರು ಬೇರೆ ಸಾರಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುವ ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದರು. ಕ್ರಿಕೆಟ್​ ಅಭಿಮಾನಿಗಳೇ ನೀವು ತಪ್ಪು ಹೇಳುತ್ತಿದ್ದೀರಿ. ಸಾರಾ ಕಾ ಸಾರಾ ದುನಿಯಾ ಗಲಾತ್ ಸಾರಾ ಕೆ ಪೀಚೆ ಪಡಾ ಹೈ (ಇಡೀ ಜಗತ್ತು ತಪ್ಪಾದ ಸಾರಾಳ ಹಿಂದೆ ಬಿದ್ದಿದೆ) ಎಂದು ಸಾರಾ ಅಲಿ ಖಾನ್ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಈ ಮೂಲಕ ಗಿಲ್ ಅವರ ಕ್ರಸ್​ ಸಾರಾ ತೆಂಡೂಲ್ಕರ್​ ಎನ್ನುವ ಸುಳಿವು ನೀಡಿದ್ದರು.

Continue Reading
Advertisement
Egg Benefits
ಆರೋಗ್ಯ15 mins ago

Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

karnataka Weather Forecast
ಮಳೆ15 mins ago

Karnataka Weather : ವಾರಾಂತ್ಯಕ್ಕೆ ಗುಡುಗು ಸಹಿತ ಭಾರಿ ಮಳೆ ; 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

World Thyroid Day
ಆರೋಗ್ಯ1 hour ago

World Thyroid Day: ಇಂದು ವಿಶ್ವ ಥೈರಾಯ್ಡ್‌ ದಿನ; ‘ಗಂಟಲ ಚಿಟ್ಟೆ’ಯ ಬಗ್ಗೆ ಈ ಸಂಗತಿ ನಿಮಗೆ ಗೊತ್ತೆ?

Dina bhavishya
ಭವಿಷ್ಯ2 hours ago

Dina Bhavishya : ಕುಟುಂಬದ ಆಪ್ತರಿಂದ ಈ ರಾಶಿಯವರಿಗೆ ಸಿಗಲಿದೆ ಗುಡ್‌ ನ್ಯೂಸ್‌

Narendra Modi
ದೇಶ7 hours ago

Narendra Modi: ನನ್ನನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ; ಮಮತಾ ಬ್ಯಾನರ್ಜಿಗೆ ಮೋದಿ ಚಾಟಿ

ಕರ್ನಾಟಕ7 hours ago

Driving Bus With Umbrella: ಛತ್ರಿ ಹಿಡಿದು ಬಸ್ ಚಾಲನೆ; ಮೋಜಿಗಾಗಿ ವಿಡಿಯೊ ಮಾಡಿದ ಡ್ರೈವರ್‌, ಕಂಡಕ್ಟರ್‌ ಸಸ್ಪೆಂಡ್‌!

Vistara editorial
ಬೆಂಗಳೂರು7 hours ago

ವಿಸ್ತಾರ ಸಂಪಾದಕೀಯ: ಕಸ ವಿಲೇವಾರಿಗೆ ಹೊಸ ಸಂಸ್ಥೆ, ಜಾರಿಕೊಳ್ಳುವ ನೆಪ ಆಗದಿರಲಿ

SRH vs RR
ಕ್ರೀಡೆ7 hours ago

SRH vs RR: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್’; ಫೈನಲ್​ನಲ್ಲಿ ಕೆಕೆಆರ್ ವಿರುದ್ಧ ಕಣಕ್ಕೆ​

Electric Shock
ಕ್ರೈಂ8 hours ago

Electric Shock: ಲಿಂಗಸುಗೂರಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

Prajwal Revanna Case
ಕರ್ನಾಟಕ8 hours ago

Prajwal Revanna Case: ರಾಜ್ಯಕ್ಕೆ ಬಂದು ಕಾನೂನು ಗೌರವಿಸಿ; ಪ್ರಜ್ವಲ್‌ಗೆ ವಿಸ್ತಾರ ನ್ಯೂಸ್‌ ಬಹಿರಂಗ ಪತ್ರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌