ಕೋಲ್ಕೊತಾ: ಐಪಿಎಲ್ 16ನೇ ಆವೃತ್ತಿಯ 39ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಟೈಟನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೇಯ ಕೋಲ್ಕೊತಾ ತಂಡ ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತದ ಸವಾಲೊಡ್ಡಿ ಗೆಲುವಿನ ಪ್ರಯತ್ನ ಮಾಡಬೇಕಾಗಿದೆ.
ಈಡನ್ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯುತ್ತಿದ್ದ, ಪಿಚ್ ಬ್ಯಾಟಿಂಗ್ಗೆ ನೆರವಾಗಲಿರುವ ಕಾರಣ ದೊಡ್ಡ ಮೊತ್ತದ ಪಂದ್ಯ ನಡೆಯುವ ಸಾಧ್ಯತೆಗಳಿವೆ. ಈ ಪಂದ್ಯವು ಆಘ್ಘನ್ ಸ್ಪಿನ್ನರ್ ರಶೀದ್ ಖಾನ್ ಅವರಿಗೆ 100ನೇ ಪಂದ್ಯವಾಗಿದೆ. ಹೀಗಾಗಿ ಪಂದ್ಯಕ್ಕೆ ಮೊದಲು ಸ್ಮರಣಿಕೆಯನ್ನು ನೀಡಲಾಯಿತು. ಇದೇ ವೇಳೆ 35ನೇ ಜನುಮದಿನ ಆಚರಿಸುತ್ತಿರುವ ಆ್ಯಂಡ್ರೆ ರಸೆಲ್ಗೂ ಜನುಮ ದಿನದ ಶುಭಾಶಯ ಕೋರಲಾಯಿತು.
ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮಾತನಾಡಿ, ಬೆಳಗ್ಗೆ ವಾತಾವರಣ ತಿಳಿಯಾಗಿತ್ತು. ಹೀಗಾಗಿ ಮೊದಲು ಬ್ಯಾಟ್ ಮಾಡುವ ಯೋಚನೆ ಇತ್ತು. ಆದರೆ ಈಗ ಮಳೆಯ ಲಕ್ಷಣ ಇರುವ ಕಾರಣ ಫೀಲ್ಡಿಂಗ್ ಮಾಡಲು ಮುಂದಾಗಿದ್ದೇವೆ. ನಾವೀಗ ಐಪಿಎಲ್ ಅಂಕಪಟ್ಟಿಯಲ್ಲಿ ಉತ್ತಮ ಸ್ಥಿತಿಯಲ್ಲಿ ಇದ್ದೇವೆ. ಇನ್ನೂ ಏಳು ಪಂದ್ಯಗಳು ಬಾಕಿ ಉಳಿದಿದ್ದು, ಉತ್ತಮ ಕ್ರಿಕೆಟ್ ಆಡಿ ಪ್ಲೇಆಫ್ಗೆ ಅರ್ಹತೆ ಪಡೆಯಬೇಕಾಗಿದೆ. ನಾವು ಸೋಲುಗಳಿಂದ ಪಾಠ ಕಲಿತಿದ್ದು ಸ್ಥಿರವಾದ ಪ್ರದರ್ಶನ ನೀಡಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : IPL 2023: ಪಂಜಾಬ್ ವಿರುದ್ಧ ಲಕ್ನೋ ಗೆದ್ದ ಬಳಿಕ ಐಪಿಎಲ್ ಅಂಕಪಟ್ಟಿ ಹೀಗಿದೆ
ಆತಿಥೇಯ ತಂಡದ ನಾಯಕ ನಿತೀಶ್ ರಾಣಾ ಮಾತನಾಡಿ, ನಾವು ಮೊದಲು ಬ್ಯಾಟ್ ಮಾಡುವ ಉದ್ದೇಶ ಹೊಂದಿದ್ದೆವು. ಮಳೆಯಿಂದ ಅಡಚಣೆಯಾಗದರೆ ಅದರ ಲಾಭ ಪಡೆಯುವ ಉದ್ದೇಶವಿತ್ತು. ತಂಡದಲ್ಲಿ ಕೆಲವೊಂದು ನಿವಾರ್ಯ ಬದಲಾವಣೆಗಳಿವೆ. ಜೇಸನ್ ರಾಯ್ ಬೆನ್ನುನೋವಿನಿಂದ ಬಳಲುತ್ತಿರುವ ಕಾರಣ ಅವರ ಬದಲಿಗೆ ಗುರ್ಬಾಜ್ಗೆ ಅವಕಾಶ ನೀಡಲಾಗಿದೆ. ಉಮೇಶ್ ಯಾದವ್ ಬದಲಿಗೆ ಹರ್ಷಿತ್ ರಾಣಾಗೆ ಅವಕಾಶ ನೀಡಿದ್ದೇವೆ ಎಂದು ಹೇಳಿದ್ದಾರೆ.
ತಂಡಗಳು
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (), ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್.
ಕೋಲ್ಕತಾ ನೈಟ್ ರೈಡರ್ಸ್: ಎನ್ ಜಗದೀಶನ್, ರಹಮಾನುಲ್ಲಾ ಗುರ್ಬಾಜ್ , ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೈಸ್, ಶಾರ್ದೂಲ್ ಠಾಕೂರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.