Site icon Vistara News

IPL 2023: ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಟಾಸ್​ ಗೆದ್ದ ಗುಜರಾತ್​; ಚೆನ್ನೈಗೆ ಬ್ಯಾಟಿಂಗ್​ ಆಹ್ವಾನ

MA Chidambaram Stadium, Chennai

#image_title

ಚೆನ್ನೈ: 16ನೇ ಆವೃತ್ತಿಯ ಐಪಿಎಲ್​ನ ಮೊದಲ ಕ್ವಾಲಿಫೈಯರ್‌ ಕದನದಲ್ಲಿ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ತಂಡ ಮಾಜಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡಗಳ ಈ ಪಂದ್ಯವನ್ನು ಸ್ನೇಹಿತರ ಸವಾಲ್​ ಎಂದೇ ಕರೆಯಾಗಿದೆ. ಏಕೆಂದರೆ ಇತ್ತಂಡಗಳ ನಾಯಕರಾಗಿರುವ ಮಹೇಂದ್ರ ಸಿಂಗ್​ ಧೋನಿ ಮತ್ತು ಹಾರ್ದಿಕ್​ ಪಾಂಡ್ಯ ಉತ್ತಮ ಸ್ನೇಹಿತರು. ಜತೆಗೆ ಪಾಂಡ್ಯ ಅವರು ಧೋನಿ ಗರಡಿಯಲ್ಲಿ ಬೆಳೆದ ಕ್ರಿಕೆಟಿಗನಾಗಿದ್ದಾರೆ. ಈ ಆವೃತ್ತಿಯ ಉದ್ಘಾಟನ ಪಂದ್ಯದಲ್ಲಿ ಗುಜರಾತ್​ ತಂಡ ಚೆನ್ನೈ ತಂಡವನ್ನು ಮಣಿಸಿತ್ತು. ಇದೀಗ ಚೆನ್ನೈ ಈ ಸೋಲಿಗೆ ಸೇಡು ತೀರಿಸಿ ಫೈನಲ್​ಗೆ ಲಗ್ಗೆ ಇಟ್ಟೀತೆ ಎಂಬುದು ಈ ಪಂದ್ಯದ ಕೌತುಕ.

ಪಿಚ್ ಹೇಗಿದೆ?

ಎಂ.ಎ.ಚಿದಂಬರಂ ಸ್ಟೇಡಿಯಂನ ಪಿಚ್​ ಪಂದ್ಯ ಸಾಗಿದಂತೆ ನಿಧಾನವಾಗುತ್ತಾ ಹೋಗುತ್ತದೆ. ಬ್ಯಾಟಿಂಗ್​ಗೆ ಹೆಚ್ಚು ನೆರವು ನೀಡುವುದಿಲ್ಲ. ಆರಂಭದಲ್ಲಿ ಬ್ಯಾಟರ್​​ಗಳಿಗೆ ಹೆಚ್ಚು ರನ್​ ಗಳಿಸಲು ನೆರವಾಗುತ್ತದೆ.

ಎಂ.ಎ.ಚಿದಂಬರಂ ಸ್ಟೇಡಿಯಂ ಐಪಿಎಲ್ ದಾಖಲೆಗಳು

ಈ ಪಿಚ್​​ನಲ್ಲಿ ಸ್ಪಿನ್ನರ್​ಗಳು ಉತ್ತಮ ದಾಖಲೆ ಹೊಂದಿದ್ದಾರೆ. ಸ್ಪಿನ್​ ಬೌಲರ್​​ಗಳು 27.2 ಸರಾಸರಿ ಮತ್ತು 7 ಎಕಾನಮಿಯೊಂದಿಗೆ ಇಲ್ಲಿ ಬೌಲಿಂಗ್ ಮಾಡಿದ್ದಾರೆ. ವೇಗಿಗಳು 8.0 ಎಕಾನಮಿಯೊಂದಿಗೆ 29.2 ಸರಾಸರಿಯಂತೆ ಬೌಲಿಂಗ್ ಮಾಡಿದ್ದಾರೆ. ಈ ಕ್ರೀಡಾಂಗಣದಲ್ಲಿ ಆಡಿದ 74 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಗಳು 46 ಪಂದ್ಯಗಳನ್ನು ಗೆದ್ದರೆ, ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು 28 ಪಂದ್ಯಗಳನ್ನು ಗೆದ್ದಿವೆ. ಸಿಎಸ್​ಕೆ ತಂಡ ಆಡಿರುವ 61 ಪಂದ್ಯಗಳಲ್ಲಿ 45ರಲ್ಲಿ ಜಯ ಸಾಧಿಸಿದೆ.

ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಬ್ರಾಂಶು ಸೇನಾಪತಿ, ಮೊಯೀನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್, ಮಥೀಶಾ ಪತಿರಾನಾ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಾನಾ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಖ್ ರಶೀದ್, ನಿಶಾಂತ್ ಸಿಂಧು.

ಇದನ್ನೂ ಓದಿ IPL 2023: ಮುಂದಿನ ಆವೃತ್ತಿಯಲ್ಲಿ ಈ ಆಟಗಾರರಿಗೆ ಆರ್​ಸಿಬಿಯಲ್ಲಿ ಬಾಗಿಲು ಬಂದ್; ಪಟ್ಟಿ ಹೇಗಿದೆ?​

ಗುಜರಾತ್ ಟೈಟನ್ಸ್ (ಜಿಟಿ) : ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೇವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ದಸುನ್ ಶನಕಾ, ಒಡಿಯನ್ ಸ್ಮಿತ್, ಕೆಎಸ್ ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ.

Exit mobile version