Site icon Vistara News

IPL 2023 Schedule : ಮಾರ್ಚ್​ 31ರಂದು ಐಪಿಎಲ್​ ಆರಂಭ, ಚೆನ್ನೈ- ಗುಜರಾತ್​ ನಡುವೆ ಮೊದಲ ಹಣಾಹಣಿ

IPL 2023 Schedule

IPL 2023 Schedule

ಮುಂಬಯಿ: ಐಪಿಎಲ್​ 16ನೇ ಆವತ್ತಿಯ (IPL 2023 Schedule) ದಿನಾಂಕ ಪ್ರಕಟಗೊಂಡಿದ್ದು, ಮಾರ್ಚ್​ 31ರಂದು ಮೊದಲ ಪಂದ್ಯ ನಡೆಯಲಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಕಳೆದ ಬಾರಿಯ ಚಾಂಪಿಯನ್​ ಗುಜರಾತ್​ ಜಯಂಟ್ಸ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ಆಯೋಜನೆಗೊಂಡಿದೆ. ಟೂರ್ನಿಯ ಆನ್​ಲೈನ್​ ಸ್ಟ್ರೀಮಿಂಗ್​ ಹಕ್ಕು ಪಡೆದಿರುವ ಜಿಯೋ ಸಿನಿಮಾ ಈ ಮಾಹಿತಿಯನ್ನು ಪ್ರಕಟಿಸಿದ್ದು, ಚೆನ್ನೈ ಸೂಪರ್​ ಕಿಂಗ್ಸ್ ತಂಡವೂ ಟ್ವೀಟ್ ಮಾಡಿದೆ.

ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಮೊದಲ ಹಣಾಹಣಿ ಆಯೋಜನೆಗೊಂಡಿದ್ದು, ಈ ಬಾರಿ ಸಂಜೆ 7.30ರಿಂದ ಪಂದ್ಯಗಳು ನಡೆಯಲಿವೆ. ಟೂರ್ನಮೆಂಟ್ ಅನ್ನು ದೇಶದ ಒಟ್ಟು 12 ತಾಣಗಳಲ್ಲಿ ಆಡಿಸಲಾಗುತ್ತದೆ. ಅಹಮದಾಬಾದ್​, ಲಖನೌ, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕೊತಾ, ಜೈಪುರ, ಮುಂಬಯಿ, ಗುವಾಹಟಿ ಹಾಗೂ ಧರ್ಮಶಾಲಾದಲ್ಲಿ ಪಂದ್ಯಗಳು ನಡೆಯಲಿದೆ.

ಒಟ್ಟು 70 ಪಂದ್ಯಗಳು ನಡೆಯಲಿದ್ದು, ಅದರಲ್ಲಿ 18 ಡಬಲ್​ ಹೆಡರ್​​ ಪಂದ್ಯಗಳಿವೆ. ಪ್ರತಿಯೊಂದು ತಂಡಗಳು ಹೋಮ್​ ಮತ್ತು ಅವೇ ಮಾದರಿಯಲ್ಲಿ ತಲಾ ಏಳರಂತೆ ಒಟ್ಟು 14 ಪಂದ್ಯಗಳಲ್ಲಿ ಪಾಲ್ಗೊಳ್ಳಲಿವೆ. ಮೇ 21ಕ್ಕೆ ಲೀಗ್​ ಹಂತದ ಪಂದ್ಯಗಳು ಪೂರ್ಣಗೊಳ್ಳಲಿವೆ. ಮೇ 28ಕ್ಕೆ ಫೈನಲ್​ ಹಣಾಹಣಿ ನಡೆಯಲಿದೆ.

ಇದನ್ನೂ ಓದಿ : IPL 2023: ಐಪಿಎಲ್​ ಆರಂಭಕ್ಕೂ ಮುನ್ನ ಧೋನಿ ಬಳಗಕ್ಕೆ ಹಿನ್ನಡೆ; ಟೂರ್ನಿಯಿಂದ ಹೊರಬಿದ್ದ ಕಿವೀಸ್​ ವೇಗಿ!

ಎ ಗುಂಪಿನಲ್ಲಿ ಮುಂಬಯಿ ಇಂಡಿಯನ್ಸ್​, ರಾಜಸ್ಥಾನ್​ ರಾಯಲ್ಸ್​, ಕೋಲ್ಕೊತಾ ನೈಟ್​ ರೈಡರ್ಸ್​, ಡೆಲ್ಲಿ ಕ್ಯಾಪಿಟಲ್ಸ್​, ಮತ್ತು ಲಖನೌ ಸೂಪರ್​ ಜಯಂಟ್ಸ್​ ​ ತಂಡಗಳಿವೆ. ಗುಂಪು ಬಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​, ಪಂಜಾಬ್​ ಕಿಂಗ್ಸ್, ಸನ್​ರೈಸರ್ಸ್​ ಹೈದರಾಬಾದ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಗುಜರಾತ್​ ಜಯಂಟ್ಸ್ ತಂಡಗಳಿವೆ.

ಮೊದಲ ಐದು ಐಪಿಎಲ್​ ಪಂದ್ಯಗಳು

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ – ಮಾರ್ಚ್ 31.
ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡ್ಸ್ – ಏಪ್ರಿಲ್ 1.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್ – ಏಪ್ರಿಲ್ 1.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ – 2ನೇ ಏಪ್ರಿಲ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ – ಏಪ್ರಿಲ್ 2

Exit mobile version