Site icon Vistara News

IPL 2023 : ಎಲ್ಲ ಐಪಿಎಲ್​ ಟೀಮ್​ಗಿಂತ ಅಧಿಕ ಆದಾಯ ಗಳಿಸಿದ ಗುಜರಾತ್​ ಟೈಟನ್ಸ್​, ಹೇಗೆ ಸಾಧ್ಯ?

gujarat titans

#image_title

ಅಹಮದಾಬಾದ್: 2022ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದುಕೊಂಡಿತ್ತು. ಹಾರ್ದಿಕ್​ ಪಾಂಡ್ಯ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದೀಗ (IPL 2023) ಮತ್ತೆ ಗುಜರಾತ್​ ತಂಡ ಪ್ಲೇಆಫ್​ ಹಂತದಲ್ಲಿದೆ. ಚೆನ್ನೈ ವಿರುದ್ಧದ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಸೋತ ಹೊರತಾಗಿಯೂ ಎರಡನೇ ಕ್ವಾಲಿಫೈಯರ್​ನಲ್ಲಿ ಆಡುವ ಅವಕಾಶ ಪಡೆದುಕೊಂಡಿದೆ. ಮೇ 26ರಂದು ನಡೆಯುವ ಪಂದ್ಯದಲ್ಲಿ ಮುಂಬಯಿ ತಂಡವನ್ನು ಸೋಲಸಿದರೆ ಭಾನುವಾರ ಆಯೋಜನೆಗೊಂಡಿರುವ ಎರಡನೇ ಬಾರಿ ಫೈನಲ್​ಗೆ ಪ್ರವೇಶ ಮಾಡಿದಂತಾಗುತ್ತದೆ. ಈ ಮೂಲಕ ಸತತವಾಗಿ ಎರಡನೇ ಬಾರಿ ಯಶಸ್ಸು ಕಂಡಿರುವ ತಂಡ ಎನಿಸಿಕೊಳ್ಳಲಿದೆ.

ಮೊದಲ ಎರಡು ಋತುಗಳಲ್ಲಿ ಈ ತಂಡದ ಅದ್ಭುತ ಪ್ರದರ್ಶನದ ಕಾರಣಕ್ಕೆ ಗುಜರಾತ್ ಬಳಗಕ್ಕೆ ಭಾರತದಾದ್ಯಂತ ಬೃಹತ್​ ಅಭಿಮಾನಿಗಳ ಬಳಗ ಸೃಷ್ಟಿಯಾಗಿದೆ. ಹೀಗಾಗಿ ಈ ತಂಡ ಹೋದಲ್ಲೆಲ್ಲ ದೊಡ್ಡ ಪ್ರಮಾಣದ ಪ್ರೇಕ್ಷಕರು ಇರುತ್ತಾರೆ. ಇನ್ನೂ ವಿಶೇಷ ಏನೆಂದರೆ ಈ ತಂಡದ ತವರು ಮೈದಾನ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​. ಇದು ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್​ ಮೈದಾನವೂ ಹೌದು.

ಐಪಿಎಲ್​ ಟೂರ್ನಿ ಮೂರು ವರ್ಷಗಳ ಬಳಿಕ ಹೋಮ್​ ಮತ್ತು ಅವೇ ಮಾದರಿಯಲ್ಲಿ ನಡೆಯುತ್ತಿದೆ. ಅಂತೆಯೇ ಗುಜರಾತ್ ತಮ್ಮ ತವರು ನೆಲದಲ್ಲಿ ಏಳು ಪಂದ್ಯಗಳನ್ನು ಆಡಿದೆ. ಈ ಪಂದ್ಯಗಳ ವೇಳೆ ಮೈದಾನ ಸಂಪೂರ್ಣವಾಗಿ ಭರ್ತಿಯಾಗಿತ್ತು. ಗುಜರಾತ್​ ಫ್ರಾಂಚೈಸಿಗೆ ಟಿಕೆಟ್​ ರೂಪದಲ್ಲಿ ದೊಡ್ಡ ಮಟ್ಟ ಲಾಭ ದೊರಕಿದೆ ಎಂಬುದಾಗಿ ಮನಿ ಕಂಟ್ರೋಲ್​ ವರದಿ ಮಾಡಿದೆ.

ನರೇಂದ್ರ ಮೋದಿ ಸ್ಟೇಡಿಯಂ 1,32,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ. ಕ್ವಾಲಿಫೈಯರ್ 2 ಮತ್ತು ಫೈನಲ್ ಎರಡೂ ನರೇಂದ್ರ ಮೋದಿಯಲ್ಲಿ ನಡೆಯುವುದರಿಂದ ಟೈಟನ್ಸ್ ತಂಡಕ್ಕೆ ತವರು ಮೈದಾನದಲ್ಲಿ ಇನ್ನೂ ಎರಡು ಪಂದ್ಯಗಳನ್ನು ಆಡಲು ಅವಕಾಶವಿದೆ. ಹೀಗಾಗಿ ಆದಾಯದ ಪ್ರಮಾಣ ಹೆಚ್ಚಬಹುದು. ಜಿಟಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ) ಅರವಿಂದರ್ ಸಿಂಗ್ ಇತ್ತೀಚೆಗೆ ಟಿಕೆಟ್​ ಮಾರಾಟದ ಮೂಲಕ ಗಳಿಸಿದ ಆದಾಯದ ಬಗ್ಗೆ ಮಾತನಾಡಿದರು.

“ಸುಮಾರು 40 ಪ್ರತಿಶತದಷ್ಟು ಆದಾಯ ಟಿಕೆಟ್​ ಮಾರಾಟದಿಂದ ಬಂದಿದೆ ಎಂದು ಹೇಳಿದ್ದಾರೆ ಅವರು. ಗುಜರಾತ್​ ಫ್ರಾಂಚೈಸಿಯು ಫ್ರೆಂಚ್ ಖಾಸಗಿ ಇಕ್ವಿಟಿ ಸಂಸ್ಥೆಯಾದ ಸಿವಿಸಿ ಕ್ಯಾಪಿಟಲ್ ಒಡೆತನದಲ್ಲಿದೆ. ಐಪಿಎಲ್ ಫ್ರಾಂಚೈಸಿಗಳ ಆದಾಯದಲ್ಲಿ ಟಿಕೆಟ್ ಸಂಗ್ರಹ, ವ್ಯಾಪಾರ, ಆಹಾರ ಮತ್ತು ಪಾನೀಯಗಳ ಮಾರಾಟವೂ ಸೇರಿವೆ. ಗುಜರಾತ್​ ತಂಡ ಆದಾಯದ ಶೇಕಡಾ 20 ರಷ್ಟಿದೆ ಎಂದು ಸಿಇಒ ಹೇಳಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂ 2022ರಲ್ಲಿ ಐಪಿಎಲ್​ ಪಂದ್ಯಕ್ಕೆ ಪದಾರ್ಪಣೆ ಮಾಡಲಾಗಿತ್ತು. ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಗಳನ್ನು ಈ ತಾಣದಲ್ಲಿ ನಡೆಸಲಾಯಿತು. ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ 2022 ರ ಫೈನಲ್ ಪಂದ್ಯವು 101,566 ಪ್ರೇಕ್ಷಕರೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿತ್ತು.

ಇದನ್ನೂ ಓದಿ : IPL 2023: ಗುಜರಾತ್​-ಮುಂಬೈ ನಡುವೆ ಕ್ವಾಲಿಫೈಯರ್ ಪಂದ್ಯ; ಯಾರಿಗೆ ಒಲಿಯಲಿದೆ ಫೈನಲ್​ ಲಕ್​

ಮೆಟ್ರೋ ಸೇವೆ ಹೆಚ್ಚಿಸುವುದು ಸೇರಿದಂತೆ ಕ್ರೀಡಾಂಗಣಗಳಿಗೆ ಹೆಚ್ಚಿನ ಅಭಿಮಾನಿಗಳನ್ನು ಕರೆತರಲು ನಾವು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕ್ರೀಡಾಂಗಣದಲ್ಲಿ 34 ಪಾರ್ಕಿಂಗ್ ಪ್ರದೇಶಗಳಿವೆ. ಆದ್ದರಿಂದ ನಾವು ಕ್ರೀಡಾಂಗಣದಿಂದ ಪಾರ್ಕಿಂಗ್ ಸ್ಥಳಕ್ಕೆ 100 ಶಟಲ್ ವಾಹನಗಳನ್ನು ಓಡಿಸಿದ್ದೇವೆ. ಆತಿಥ್ಯದ ಪ್ರದೇಶಗಳಿಗೂ ನಾವು ಗಾಲ್ಫ್ ಗಾಡಿಗಳನ್ನು ಓಡಿಸುತ್ತಿದ್ದೆವು” ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

ಜಿಟಿ ಮತ್ತು ಸಿಎಸ್ಕೆ ನಡುವಿನ ಮೊದಲ ಕ್ವಾಲಿಫೈಯರ್ 1 ಪಂದ್ಯವು ಡಿಜಿಟಲ್​ ವೇದಿಕೆ ಮೂಲಕ 2.5 ಕೋಟಿ ವೀಕ್ಷಕರನ್ನು ಕಂಡಿದೆ. ಇದು ಏಪ್ರಿಲ್ 17 ರಂದು ಸಿಎಸ್ಕೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ಸಮಯದಲ್ಲಿ ಗಳಿಸಿದ 2.4 ಕೋಟಿ ವೀಕ್ಷಕರ ದಾಖಲೆಯನ್ನು ಮುರಿದಿದೆ. ಈ ಮೂಲಕವೂ ಫ್ರಾಂಚೈಸಿಯ ಆದಾಯ ದುಪ್ಪಟ್ಟಾಗಿದೆ.

Exit mobile version