ಕ್ರಿಕೆಟ್
IPL 2023 : ಎಲ್ಲ ಐಪಿಎಲ್ ಟೀಮ್ಗಿಂತ ಅಧಿಕ ಆದಾಯ ಗಳಿಸಿದ ಗುಜರಾತ್ ಟೈಟನ್ಸ್, ಹೇಗೆ ಸಾಧ್ಯ?
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಇದುವರೆಗೆ ಏಳು ಪಂದ್ಯಗಳನ್ನು ಆಡಿದ್ದು, ಫೈನಲ್ ತಲುಪಿದರೆ 9 ಪಂದ್ಯವನ್ನು ಆಡಲು ಸಾಧ್ಯ.
ಅಹಮದಾಬಾದ್: 2022ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದುಕೊಂಡಿತ್ತು. ಹಾರ್ದಿಕ್ ಪಾಂಡ್ಯ ಸಾರಥ್ಯದ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದೀಗ (IPL 2023) ಮತ್ತೆ ಗುಜರಾತ್ ತಂಡ ಪ್ಲೇಆಫ್ ಹಂತದಲ್ಲಿದೆ. ಚೆನ್ನೈ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ಹೊರತಾಗಿಯೂ ಎರಡನೇ ಕ್ವಾಲಿಫೈಯರ್ನಲ್ಲಿ ಆಡುವ ಅವಕಾಶ ಪಡೆದುಕೊಂಡಿದೆ. ಮೇ 26ರಂದು ನಡೆಯುವ ಪಂದ್ಯದಲ್ಲಿ ಮುಂಬಯಿ ತಂಡವನ್ನು ಸೋಲಸಿದರೆ ಭಾನುವಾರ ಆಯೋಜನೆಗೊಂಡಿರುವ ಎರಡನೇ ಬಾರಿ ಫೈನಲ್ಗೆ ಪ್ರವೇಶ ಮಾಡಿದಂತಾಗುತ್ತದೆ. ಈ ಮೂಲಕ ಸತತವಾಗಿ ಎರಡನೇ ಬಾರಿ ಯಶಸ್ಸು ಕಂಡಿರುವ ತಂಡ ಎನಿಸಿಕೊಳ್ಳಲಿದೆ.
ಮೊದಲ ಎರಡು ಋತುಗಳಲ್ಲಿ ಈ ತಂಡದ ಅದ್ಭುತ ಪ್ರದರ್ಶನದ ಕಾರಣಕ್ಕೆ ಗುಜರಾತ್ ಬಳಗಕ್ಕೆ ಭಾರತದಾದ್ಯಂತ ಬೃಹತ್ ಅಭಿಮಾನಿಗಳ ಬಳಗ ಸೃಷ್ಟಿಯಾಗಿದೆ. ಹೀಗಾಗಿ ಈ ತಂಡ ಹೋದಲ್ಲೆಲ್ಲ ದೊಡ್ಡ ಪ್ರಮಾಣದ ಪ್ರೇಕ್ಷಕರು ಇರುತ್ತಾರೆ. ಇನ್ನೂ ವಿಶೇಷ ಏನೆಂದರೆ ಈ ತಂಡದ ತವರು ಮೈದಾನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್. ಇದು ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಮೈದಾನವೂ ಹೌದು.
ಐಪಿಎಲ್ ಟೂರ್ನಿ ಮೂರು ವರ್ಷಗಳ ಬಳಿಕ ಹೋಮ್ ಮತ್ತು ಅವೇ ಮಾದರಿಯಲ್ಲಿ ನಡೆಯುತ್ತಿದೆ. ಅಂತೆಯೇ ಗುಜರಾತ್ ತಮ್ಮ ತವರು ನೆಲದಲ್ಲಿ ಏಳು ಪಂದ್ಯಗಳನ್ನು ಆಡಿದೆ. ಈ ಪಂದ್ಯಗಳ ವೇಳೆ ಮೈದಾನ ಸಂಪೂರ್ಣವಾಗಿ ಭರ್ತಿಯಾಗಿತ್ತು. ಗುಜರಾತ್ ಫ್ರಾಂಚೈಸಿಗೆ ಟಿಕೆಟ್ ರೂಪದಲ್ಲಿ ದೊಡ್ಡ ಮಟ್ಟ ಲಾಭ ದೊರಕಿದೆ ಎಂಬುದಾಗಿ ಮನಿ ಕಂಟ್ರೋಲ್ ವರದಿ ಮಾಡಿದೆ.
ನರೇಂದ್ರ ಮೋದಿ ಸ್ಟೇಡಿಯಂ 1,32,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ. ಕ್ವಾಲಿಫೈಯರ್ 2 ಮತ್ತು ಫೈನಲ್ ಎರಡೂ ನರೇಂದ್ರ ಮೋದಿಯಲ್ಲಿ ನಡೆಯುವುದರಿಂದ ಟೈಟನ್ಸ್ ತಂಡಕ್ಕೆ ತವರು ಮೈದಾನದಲ್ಲಿ ಇನ್ನೂ ಎರಡು ಪಂದ್ಯಗಳನ್ನು ಆಡಲು ಅವಕಾಶವಿದೆ. ಹೀಗಾಗಿ ಆದಾಯದ ಪ್ರಮಾಣ ಹೆಚ್ಚಬಹುದು. ಜಿಟಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ) ಅರವಿಂದರ್ ಸಿಂಗ್ ಇತ್ತೀಚೆಗೆ ಟಿಕೆಟ್ ಮಾರಾಟದ ಮೂಲಕ ಗಳಿಸಿದ ಆದಾಯದ ಬಗ್ಗೆ ಮಾತನಾಡಿದರು.
“ಸುಮಾರು 40 ಪ್ರತಿಶತದಷ್ಟು ಆದಾಯ ಟಿಕೆಟ್ ಮಾರಾಟದಿಂದ ಬಂದಿದೆ ಎಂದು ಹೇಳಿದ್ದಾರೆ ಅವರು. ಗುಜರಾತ್ ಫ್ರಾಂಚೈಸಿಯು ಫ್ರೆಂಚ್ ಖಾಸಗಿ ಇಕ್ವಿಟಿ ಸಂಸ್ಥೆಯಾದ ಸಿವಿಸಿ ಕ್ಯಾಪಿಟಲ್ ಒಡೆತನದಲ್ಲಿದೆ. ಐಪಿಎಲ್ ಫ್ರಾಂಚೈಸಿಗಳ ಆದಾಯದಲ್ಲಿ ಟಿಕೆಟ್ ಸಂಗ್ರಹ, ವ್ಯಾಪಾರ, ಆಹಾರ ಮತ್ತು ಪಾನೀಯಗಳ ಮಾರಾಟವೂ ಸೇರಿವೆ. ಗುಜರಾತ್ ತಂಡ ಆದಾಯದ ಶೇಕಡಾ 20 ರಷ್ಟಿದೆ ಎಂದು ಸಿಇಒ ಹೇಳಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂ 2022ರಲ್ಲಿ ಐಪಿಎಲ್ ಪಂದ್ಯಕ್ಕೆ ಪದಾರ್ಪಣೆ ಮಾಡಲಾಗಿತ್ತು. ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಗಳನ್ನು ಈ ತಾಣದಲ್ಲಿ ನಡೆಸಲಾಯಿತು. ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ 2022 ರ ಫೈನಲ್ ಪಂದ್ಯವು 101,566 ಪ್ರೇಕ್ಷಕರೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿತ್ತು.
ಇದನ್ನೂ ಓದಿ : IPL 2023: ಗುಜರಾತ್-ಮುಂಬೈ ನಡುವೆ ಕ್ವಾಲಿಫೈಯರ್ ಪಂದ್ಯ; ಯಾರಿಗೆ ಒಲಿಯಲಿದೆ ಫೈನಲ್ ಲಕ್
ಮೆಟ್ರೋ ಸೇವೆ ಹೆಚ್ಚಿಸುವುದು ಸೇರಿದಂತೆ ಕ್ರೀಡಾಂಗಣಗಳಿಗೆ ಹೆಚ್ಚಿನ ಅಭಿಮಾನಿಗಳನ್ನು ಕರೆತರಲು ನಾವು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕ್ರೀಡಾಂಗಣದಲ್ಲಿ 34 ಪಾರ್ಕಿಂಗ್ ಪ್ರದೇಶಗಳಿವೆ. ಆದ್ದರಿಂದ ನಾವು ಕ್ರೀಡಾಂಗಣದಿಂದ ಪಾರ್ಕಿಂಗ್ ಸ್ಥಳಕ್ಕೆ 100 ಶಟಲ್ ವಾಹನಗಳನ್ನು ಓಡಿಸಿದ್ದೇವೆ. ಆತಿಥ್ಯದ ಪ್ರದೇಶಗಳಿಗೂ ನಾವು ಗಾಲ್ಫ್ ಗಾಡಿಗಳನ್ನು ಓಡಿಸುತ್ತಿದ್ದೆವು” ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಜಿಟಿ ಮತ್ತು ಸಿಎಸ್ಕೆ ನಡುವಿನ ಮೊದಲ ಕ್ವಾಲಿಫೈಯರ್ 1 ಪಂದ್ಯವು ಡಿಜಿಟಲ್ ವೇದಿಕೆ ಮೂಲಕ 2.5 ಕೋಟಿ ವೀಕ್ಷಕರನ್ನು ಕಂಡಿದೆ. ಇದು ಏಪ್ರಿಲ್ 17 ರಂದು ಸಿಎಸ್ಕೆ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ಸಮಯದಲ್ಲಿ ಗಳಿಸಿದ 2.4 ಕೋಟಿ ವೀಕ್ಷಕರ ದಾಖಲೆಯನ್ನು ಮುರಿದಿದೆ. ಈ ಮೂಲಕವೂ ಫ್ರಾಂಚೈಸಿಯ ಆದಾಯ ದುಪ್ಪಟ್ಟಾಗಿದೆ.
ಕ್ರಿಕೆಟ್
WTC Final 2023 : ವಿಕೆಟ್ ಕೀಪರ್ ಕೆಎಸ್ ಭರತ್ ಹಿಡಿದ ರೋಮಾಂಚಕಾರಿ ಕ್ಯಾಚ್ ಹೀಗಿತ್ತು
ಇಶಾನ್ ಕಿಶನ್ ಅವರನ್ನು ಕೈಬಿಟ್ಟು ಫೈನಲ್ ಪಂದ್ಯದಲ್ಲಿ ವಿಕೆಟ್ಕೀಪಿಂಗ್ ಜವಾಬ್ದಾರಿಯನ್ನು ಕೆ. ಎಸ್ ಭರತ್ಗೆ ನೀಡಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
ಲಂಡನ್: ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಮೊದಲ ದಿನದ ಟಿ ವಿರಾಮದ ವೇಳೆಗೆ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ ನಿಧಾನವಾಗಿ ಮೇಲುಗೈ ಸಾಧಿಸಿದೆ.
Shardul Thakur gets the breakthrough!
— BCCI (@BCCI) June 7, 2023
A sharp catch by KS Bharat as David Warner departs for 43 runs.
Live – https://t.co/0nYl21oYkY… #WTC23 pic.twitter.com/jIJDwxM6Zh
ಲಂಚ್ ಬ್ರೇಕ್ಗಿಂತ ಮೊದಲು ಆಸ್ಟ್ರೇಲಿಯಾ 73 ರನ್ ಗಳಿಸಿತ್ತು. ಈ ವೇಳೆ ಇಬ್ಬರೂ ಆರಂಭಿಕರನ್ನು ಆಸ್ಟ್ರೇಲಿಯಾ ತಂಡ ಕಳೆದುಕೊಂಡಿತು. ವಾರ್ನರ್ 8 ಬೌಂಡರಿಗಳನ್ನು ಬಾರಿಸುವ ಮೂಲಕ ಉತ್ತಮವಾಗಿ ಆಡಿದರು ಆದರೆ ಭೋಜನ ವಿರಾಮಕ್ಕೆ ಕೆಲವೇ ನಿಮಿಷಗಳ ಮೊದಲು ಶಾರ್ದೂಲ್ ಠಾಕೂರ್ಗೆ ವಿಕೆಟ್ ಒಪ್ಪಿಸಿ 7 ರನ್ಗಳಿಂದ ಅರ್ಧ ಶತಕವನ್ನು ಕಳೆದುಕೊಂಡರು. ಈ ವಿಕೆಟ್ ಕಬಳಿಸಲು ವಿಕೆಟ್ಕೀಪರ್ ಕೆ. ಎಸ್ ಭರತ್ ನೆರವಾದರು. ಅವರು ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ವಾರ್ನರ್ ವಿಕೆಟ್ ಉರುಳಿಸಿದರು.
ಇದನ್ನೂ ಓದಿ : WTC Final 2023: ಭಾರತ, ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ
ಪಂದ್ಯಕ್ಕೆ ಪೂರ್ವದಲ್ಲಿ ಕೀಪಿಂಗ್ ಜವಾಬ್ದಾರಿ ಯಾರಿಗೆ ನೀಡಬೇಕು ಎಂಬ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಇಶಾನ್ ಕಿಶನ್ ಅವರನ್ನು ಹಿಂದಿಕ್ಕಿದ ಭರತ್ ಅವಕಾಶ ಗಿಟ್ಟಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಭರತ್ 5 ಪಂದ್ಯಗಳನ್ನು ಆಡಿದ್ದಾರೆ. ಅವರು ಖಾತೆಯಲ್ಲಿ 100ಕ್ಕೂ ಹೆಚ್ಚು ರನ್ಗಳಿವೆ. ಇದೀಗ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲೂ ಛಾಪು ಮೂಡಿಸಲಿದ್ದಾರೆ.
ಶಮಿಗೆ ಸಿಗದ ಅವಕಾಶ, ನೆಟ್ಟಿಗರ ಆಕ್ರೊಶ
ಆಸ್ಟ್ರೇಲಿಯಾ ವಿರುದ್ಧ ಆರಂಭಗೊಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆರ್. ಅಶ್ವಿನ್ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇದೇ ವಿಚಾರವಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ತಂಡ ಮಾಡಿದ ದೊಡ್ಡ ತಪ್ಪು ಇದಾಗಿದೆ ಎಂದು ಹೇಳಿದ್ದಾರೆ. ಆದರೆ ತಂಡದ ನಾಯಕ ರೋಹಿತ್ ಶರ್ಮ ಅವರು ಅಶ್ವಿನ್ ಅವರನ್ನು ಕೈಬಿಟ್ಟ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ವೇಳೆ ಪ್ರಕಟಗೊಂಡ ಭಾರತ ತಂಡದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿರುವ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟು ಅಚ್ಚರಿ ಮೂಡಿಸಿತು. ಇದೇ ವೇಳೆ ನೆಟ್ಟಿಗರು ಟೀಮ್ ಮ್ಯಾನೆಜ್ಮೆಂಟ್ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಅಶ್ವಿನ್ ಬದಲು ಮಧ್ಯಮ ವೇಗಿ ಹಾಗೂ ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್ ಅವರನ್ನು ಟೀಮ್ ಇಂಡಿಯಾ ಹೆಚ್ಚುವರಿ ವೇಗಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ಇದೇ ವಿಚಾರವಾಗಿ ಮಾತನಾಡಿದ ರೋಹಿತ್ ಅವರು “ಇಲ್ಲಿನ ಪರಿಸ್ಥಿತಿಗಳು ಬೌಲಿಂಗ್‌ಗೆ ಉತ್ತಮವಾಗಿದೆ. ಹೀಗಾಗಿ ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ಮೋಡ ಕವಿದ ವಾತಾವರಣವೂ ಇದೆ. ಈ ಪಿಚ್‌ನಲ್ಲಿ ಸ್ಪಿನ್ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ನಾವು 4 ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ನ ಆಯ್ಕೆ ಮಾಡಿಕೊಂಡಿದ್ದೇವೆ. ಜಡೇಜಾ ಅವರನ್ನು ಏಕೈಕ ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅಶ್ವಿನ್ ಅವರನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿದೆ. ಆದರೂ ತಂಡದ ಹಿತದೃಷ್ಟಿಯಿಂದ ಅವರನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು” ಎಂದರು.
ಕ್ರಿಕೆಟ್
WTC Final 2023: ಆಡುವ ಬಳಗದಿಂದ ಅಶ್ವಿನ್ ಕೈ ಬಿಡಲು ಕಾರಣ ಇದಂತೆ
ಅಶ್ವಿನ್ ಬದಲು ಮಧ್ಯಮ ವೇಗಿ ಹಾಗೂ ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್ಗೆ ಆಡುವ ಬಳಗದಲ್ಲಿ ಅವಕಾಶ ನೀಡಿದ್ದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.
ಲಂಡನ್: ಆಸ್ಟ್ರೇಲಿಯಾ ವಿರುದ್ಧ ಆರಂಭಗೊಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆರ್. ಅಶ್ವಿನ್ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇದೇ ವಿಚಾರವಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ತಂಡ ಮಾಡಿದ ದೊಡ್ಡ ತಪ್ಪು ಇದಾಗಿದೆ ಎಂದು ಹೇಳಿದ್ದಾರೆ. ಆದರೆ ತಂಡದ ನಾಯಕ ರೋಹಿತ್ ಶರ್ಮ ಅವರು ಅಶ್ವಿನ್ ಅವರನ್ನು ಕೈಬಿಟ್ಟ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ವೇಳೆ ಪ್ರಕಟಗೊಂಡ ಭಾರತ ತಂಡದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿರುವ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟು ಅಚ್ಚರಿ ಮೂಡಿಸಿತು. ಇದೇ ವೇಳೆ ನೆಟ್ಟಿಗರು ಟೀಮ್ ಮ್ಯಾನೆಜ್ಮೆಂಟ್ ವಿರುದ್ಧ ಟ್ವಿಟರ್ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಅಶ್ವಿನ್ ಬದಲು ಮಧ್ಯಮ ವೇಗಿ ಹಾಗೂ ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್ ಅವರನ್ನು ಟೀಮ್ ಇಂಡಿಯಾ ಹೆಚ್ಚುವರಿ ವೇಗಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ಇದೇ ವಿಚಾರವಾಗಿ ಮಾತನಾಡಿದ ರೋಹಿತ್ ಅವರು “ಇಲ್ಲಿನ ಪರಿಸ್ಥಿತಿಗಳು ಬೌಲಿಂಗ್‌ಗೆ ಉತ್ತಮವಾಗಿದೆ. ಹೀಗಾಗಿ ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ಮೋಡ ಕವಿದ ವಾತಾವರಣವೂ ಇದೆ. ಈ ಪಿಚ್‌ನಲ್ಲಿ ಸ್ಪಿನ್ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ನಾವು 4 ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ನ ಆಯ್ಕೆ ಮಾಡಿಕೊಂಡಿದ್ದೇವೆ. ಜಡೇಜಾ ಅವರನ್ನು ಏಕೈಕ ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅಶ್ವಿನ್ ಅವರನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿದೆ. ಆದರೂ ತಂಡದ ಹಿತದೃಷ್ಟಿಯಿಂದ ಅವರನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು” ಎಂದರು.
ಇದನ್ನೂ ಓದಿ WTC Final 2023: ಭಾರತ, ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ
If India loses, Rohit Sharma will be Blamed for not picking Ashwin.
— Xavier Uncle (@xavierunclelite) June 7, 2023
If India wins, Kohli will be Blamed for picking Ashwin in WTC Final 2021 & not winning any ICC Trophies.
ಸದ್ಯ ಬ್ಯಾಟಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾ ತಂಡ ಮೂರು ವಿಕೆಟ್ ಕಳೆದುಕೊಂಡು 85 ರನ್ ಗಳಿಸಿದೆ. ಉತ್ತಮ ರನ್ ಕಲೆ ಹಾಕುತ್ತಿದ್ದ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡುವ ಮೂಲಕ ಶಾರ್ದೂಲ್ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.
ಕ್ರಿಕೆಟ್
Honda Motors : ಎಸ್ಯುವಿ ಸೆಗ್ಮೆಂಟ್ಗೂ ಹೋಂಡಾ ಎಂಟ್ರಿ, ಸ್ಟೈಲಿಸ್ಟ್ ಕಾರು ಅನಾವರಣ
ಜುಲೈನಲ್ಲಿ ಹೋಂಡಾ ಎಲಿವೇಟ್ ಕಾರಿನ (Honda Elevate) ಬುಕಿಂಗ್ ಆರಂಭಗೊಳ್ಳಲಿದ್ದು ಹಬ್ಬದ ಋತುವಿನಲ್ಲಿ ವಿತರಣೆ ಆರಂಭಗೊಳ್ಳಲಿವೆ.
ನವ ದೆಹಲಿ: ಹೋಂಡಾ (Honda Motors) ತನ್ನ ಭಾರತ ಕೇಂದ್ರಿತ ಎಲಿವೇಟ್ ಎಸ್ಯುವಿ (Honda Elevate) ಕಾರನ್ನು ಜೂನ್ 6ರಂದು ಅನಾವರಣ ಮಾಡಿದೆ. ಇದೇ ವೇಳೆ 2030ರ ಒಳಗೆ ಭಾರತದಲ್ಲಿ ಐದು ಎಸ್ಯುವಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಯೋಜನೆಯ ಮೊದಲ ಕಾರು ಎಲಿವೇಟ್. ಇದರ ಬುಕಿಂಗ್ ಜುಲೈನಲ್ಲಿ ಪ್ರಾರಂಭವಾಗಲಿದ್ದು, ಹಬ್ಬದ ಋತುವಿಗೆ ಮುಂಚಿತವಾಗಿ ಬಿಡುಗಡೆಗೊಳ್ಳಲಿದೆ.
ಹೋಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ತಕುಯಾ ಸುಮುರಾ ಎಲಿವೇಟ್ ಕಾರನ್ನು ಅನಾವರಣಗೊಳಿಸಿ ಮಾತನಾಡಿ ನಾವು ಭಾರತಕ್ಕಾಗಿ ಅತ್ಯಂತ ಬಲಿಷ್ಠ ಉತ್ಪನ್ನ ಕಾರ್ಯತಂತ್ರ ರೂಪಿಸಿದ್ದೇವೆ. 2030ರ ವೇಳೆಗೆ ಐದು ಎಸ್ ಯುವಿಗಳನ್ನು ಹೊಂದಲು ಯೋಜಿಸಿದ್ದೇವೆ. ಎಲಿವೇಟ್ಗೆ ಭಾರತವು ಪ್ರಮುಖ ಮಾರುಕಟ್ಟೆಯಾಗಿದ್ದರೂ, ಭವಿಷ್ಯದಲ್ಲಿ ಮಾದರಿಗೆ ಭಾರತ ಪ್ರಮುಖ ರಫ್ತು ಕೇಂದ್ರವಾಗಲಿದೆ. ಹೋಂಡಾ ಕಾರ್ಸ್ ಇಂಡಿಯಾ ಮುಂದಿನ ಮೂರು ವರ್ಷಗಳಲ್ಲಿ ಎಲಿವೇಟ್್ನ ಎಲೆಕ್ಟ್ರಿಕ್ ಆವೃತ್ತಿಯನ್ನೂಐ ಮಾರುಕಟ್ಟೆಗೆ ತರಲು ಯೋಜಿಸಿದೆ ಎಂದು ಹೇಳಿದ್ದಾರೆ.
2023ರ ವರ್ಷಾರಂಭದಲ್ಲಿ ಹೋಂಡಾ ಕಾರ್ಸ್ ಭಾರತದಲ್ಲಿ ಪ್ರತಿ ವರ್ಷ ಒಂದು ಹೊಸ ಮಾದರಿ ಪರಿಚಯಿಸುವ ಯೋಜನೆಯನ್ನು ಹಂಚಿಕೊಂಡಿತ್ತು ಇದರಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳೂ ಸೇರಿವೆ. ದೇಶದಲ್ಲಿ ಹೋಂಡಾ ಬ್ರ್ಯಾಂಡ್ ಅನ್ನು ಬಲಪಡಿಸಲು ಪ್ರೀಮಿಯಂ ಮಾದರಿಗಳನ್ನು ಭಾರತಕ್ಕೆ ತರುವ ಪ್ರಯತ್ವನ್ನು ಮಾಡಲಾಗಿದೆ.
ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿ
ಭಾರತದಲ್ಲಿ ಎಸ್ಯುವಿ ಸೆಗ್ಮೆಂಟ್ ಪ್ರಬಲವಾಗುತ್ತಿರವು ಸಮದಲ್ಲಿ ಮಿಡ್ಸೈಜ್ ಎಸ್ಯುವಿ ವಿಭಾಗಕ್ಕೆ ಹೋಂಡಾ ಪ್ರವೇಶ ಮಾಡಿದೆ. ಒಟ್ಟು ಕಾರು ಮಾರುಕಟ್ಟೆಯ ಶೇಕಾಡ 40ರಷ್ಟು ಎಸ್ಯುವಿಗಳ ಪಾಲಿದೆ. ಹೀಗಾಗಿ ಹೋಂಡಾ ಎಲಿವೇಟ್ ಅನ್ನು ಮಧ್ಯಮ ಗಾತ್ರದ ಎಸ್ಯುವಿ ಮಾರುಕಟ್ಟೆಯಲ್ಲಿ ಸ್ಥಾಪಿಸಲು ಹೋಂಡಾ ಮುಂದಾಗಿದೆ. ಈ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳಿಗೆ ಪೈಪೋಟಿ ನೀಡಲಿದೆ.
ಹೋಂಡಾ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಸಿಟಿ ಮತ್ತು ಅಮೇಜ್ ಮೂಲಕ ತನ್ನ ಇರುವಿಕೆಯನ್ನು ಗಟ್ಟಿ ಮಾಡಿಕೊಂಡಿದೆ. ಇದೀಗ ಆ ಪಟ್ಟೆಗೆ ಎಲಿವೇಟ್ ಸೇರ್ಪಡೆಗೊಂಡಿದೆ. ಇದು ಇದು ವೇಗವಾಗಿ ಬೆಳೆಯುತ್ತಿರುವ ಎಸ್ಯುವಿ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುತ್ತದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ : Maruti Suzuki : ಮಾರುತಿಯ 5 ಡೋರ್ ಜಿಮ್ನಿ ಬಿಡುಗಡೆ, ಮಹೀಂದ್ರಾ ಥಾರ್ಗೆ ಪೈಪೋಟಿ ಖಚಿತ
ಸವಾಲುಗಳ ಹೊರತಾಗಿಯೂ, ಭಾರತೀಯ ಕಾರು ಮಾರುಕಟ್ಟೆ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ. ವಿಶ್ವದ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿ ಮುಂದುವರಿದೆ. ನಾವು ಸೆಡಾನ್ ವಿಭಾಗದಲ್ಲಿ ಜನಪ್ರಿಯತೆ ಹೊಂದಿದ್ದೇವೆ ಮತ್ತು ಅದನ್ನು ಎಸ್ಯುವಿ ವಿಭಾಗಕ್ಕೆ ಕೊಂಡೊಯ್ಯಲು ಆಶಿಸಿದ್ದೇವೆ . ಎಲಿವೇಟ್ ಪರಿಪೂರ್ಣ ನಗರ ಕೇಂದ್ರಿತ ಎಸ್ಯುವಿ ಎಂದು ತ್ಸುಮುರಾ ಹೇಳಿದರು.
ತಪುಕಾರಾ ಘಟಕದಲ್ಲಿ ನಿರ್ಮಾಣ
ಎಲಿವೇಟ್ ಮತ್ತು ಭವಿಷ್ಯದ ಉತ್ಪನ್ನಗಳಿಗೆ ಪೂರಕವಾಗಿ ಹೋಂಡಾ ಕಂಪನಿಯು ರಾಜಸ್ಥಾನದ ತಪುಕಾರದಲ್ಲಿರುವ ತನ್ನ ಘಟಕದಲ್ಲಿನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದೆ. ದೈನಂದಿನ ಉತ್ಪಾದನಾ ಸಾಮರ್ಥ್ಯವನ್ನು 2023ರ ಮೊದಲ ತ್ರೈಮಾಸಿಕದಲ್ಲಿ 540 ವಾಹನಗಳಿಂದ ದಿನಕ್ಕೆ 660 ವಾಹನಗಳಿಗೆ ವಿಸ್ತರಿಸಲಾಗಿದೆ.
ಎಲಿವೇಟ್ ಬಿಡುಗಡೆಗೆ ಮುಂಚಿತವಾಗಿ ಹೋಂಡಾ ಡೀಲರ್ಶಿಪ್ ನೆಟ್ವರ್ಕ್ ಕೂಡ ನವೀಕರಿಸಲಾಗಿದೆ.
ಬ್ರ್ಯಾಂಡಿಂಗ್ ಮತ್ತು ರಿಟೇಲ್ ದೃಷ್ಟಿಕೋನದಿಂದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಶೋರೂಂಗಳ ಹೊಸ ಗ್ರಾಹಕ ಇಂಟರ್ಫೇಸ್ಗಾಗಿ (ಸಿಐ) 260 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಹೋಂಡಾ 238 ನಗರಗಳಲ್ಲಿ ಸುಮಾರು 326 ಮಳಿಗೆಗಳನ್ನು ಹೊಂದಿದೆ. ತನ್ನ ಒಟ್ಟಾರೆ ಮಾರಾಟದಲ್ಲಿ 3ನೇ ಶ್ರೇಣಿಯ ನಗರಗಳು ಸುಮಾರು 30 ಪ್ರತಿಶತದಷ್ಟು ಪಾಲನ್ನು ಹೊಂದಿವೆ ಎಂದು ಕಂಪನಿ ಹೇಳಿಕೊಂಡಿದೆ. ಹೋಂಡಾ ಎಲಿವೇಟ್ ಅನ್ನು ಮೊದಲು ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ನಂತರ ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.
ಕ್ರಿಕೆಟ್
WTC Final 2023: ಭಾರತ, ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ
ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟರಿಗೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನಾಡುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿದ್ದಾರೆ.
ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನಾಡುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದಾರೆ. ಕಳೆದ ಶುಕ್ರವಾರ ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಾಗಾ ಎಂಬಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟರಿಗೆ ಸಂತಾಪ ಸೂಚಿಸುವ ಸಲುವಾಗಿ ಉಭಯ ತಂಡಗಳ ಆಟಗಾರರು ಕಪ್ಪುಪಟ್ಟಿ ಧರಿಸಿದರು.
ಲಂಡನ್ನ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆಸ್ಟ್ರೇಲಿಯಾ ತಂಡ ಮೊದಲ ಅವಧಿಯ ಆಟದಲ್ಲಿ ಒಂದು ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿ ಆಟವಾಡುತ್ತಿದೆ. ಉಸ್ಮಾನ್ ಖವಾಜಾ ಅವರು ಖಾತೆ ತೆರೆಯವ ಮುನ್ನವೇ ಮೊಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.
The Indian Cricket Team will observe a moment of silence in memory of the victims of the Odisha train tragedy ahead of the start of play on Day 1 of the ICC World Test Championship final at The Oval.
— BCCI (@BCCI) June 7, 2023
The team mourns the deaths and offers its deepest condolences to the families… pic.twitter.com/mS04eWz2Ym
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ WTC Final 2023: ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಫೈನಲ್ ಲೈವ್ ಅಪ್ಡೇಟ್ಸ್
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲಾಬುಶೇನ್, ಸ್ಟೀವನ್ ಸ್ಮಿತ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್. ಟ್ರಾವಿಸ್ ಹೆಡ್
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ12 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಕರ್ನಾಟಕ24 hours ago
Fraud Case: ಬೆಳದಿಂಗಳ ಬಾಲೆಯ ಮೋಹಕ್ಕೆ ಬಿದ್ದರೇ ಸ್ವಾಮೀಜಿ? 35 ಲಕ್ಷ ರೂಪಾಯಿ ದೋಖಾ!
-
ಅಂಕಣ23 hours ago
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
-
ಉತ್ತರ ಕನ್ನಡ20 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ22 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು