Site icon Vistara News

ರೋಹಿತ್‌ ರನ್‌ ಹೊಡೆಯುತ್ತಾರೆ: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ʼಹಿಟ್‌ ಮ್ಯಾನ್‌ʼಮೇಲೆ ʼದಾದಾʼ ವಿಶ್ವಾಸ

2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್‌ ಶರ್ಮಾ ಅವರಿಗೆ 35ನೇ ಜನುಮ ದಿನಕ್ಕೆ ಮಾಜಿ ಆಟಗಾರರು ಸೇರಿದಂತೆ ದೇಶಾದ್ಯಂತ ಅಪಾರ ಅಭಿಮಾನಿಗಳು ಸ್ಟಾರ್‌ ಆಟಗಾರನಿಗೆ ಶುಭಹಾರೈಸಿದ್ದಾರೆ.

ಈ ನಡುವೆ, ಭಾರತ ಕಂಡ ಅತ್ಯುತ್ತಮ ಕ್ರಿಕೆಟ್‌ ಕ್ಯಾಪ್ಟನ್‌ಗಳಲ್ಲೊಬ್ಬರಾದ ಸೌರವ್‌ ಗಂಗೂಲಿ ಮಾತು ಪ್ರಮುಖವಾಗಿದೆ. ರೋಹಿತ್‌ ಅತ್ಯುತ್ತಮ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ರೀತಿ ವಿರಾಟ ಕೋಹ್ಲಿ ಸಹ ದೇಶದ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಸೇರಿಕೊಳ್ಳುವವರು. ಆದರೆ ಅದೇಕೊ ಕೆಲ ದಿನಗಳಿಂದ ಇಬ್ಬರ ಫಾರ್ಮ್‌ ಡಲ್‌ ಆಗಿದೆ. ವಿರಾಟ್‌ ಕೊಹ್ಲಿ ಕಳೆದ 9 ಮ್ಯಾಚ್‌ನಲ್ಲಿ 16 ಸರಾಸರಿಯಲ್ಲಿ ಕೇವಲ 128 ರನ್‌ ಗಳಿಸಿದ್ದಾರೆ. ಒಂದು ಶತಕ ಬಾರಿಸಿ ನೂರು ಇನ್ನಿಂಗ್ಸ್‌ ದಾಟಿದೆ. ಇನ್ನು ರೋಹಿತ್‌ ಬಗ್ಗೆ ಹೇಳುವುದಾದರೆ, ಲಖನೌ ಸೂಪರ್‌ ಜೈಂಟ್ಸ್‌ (LSG) ವಿರುದ್ಧ 39 ರನ್‌ ಗಳಿಸಿದ್ದಾರಾದರೂ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ವಿರುದ್ಧ ಶೂನ್ಯಕ್ಕೆ ಔಟಾದರು. ಅವರ ಇತ್ತೀಚಿನ ಮ್ಯಾಚ್‌ಗಳಲ್ಲಿ ರೋಹಿತ್‌ ರನ್‌ ಗಳಿಕೆ 41, 10, 3, 26, 28, 6. ಅರ್ಧ ಶತಕ ಗಳಿಸಲು ಹೆಣಗಾಡುತ್ತಿದ್ದಾರೆ. ರೋಹಿತ್‌ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡ ಇಲ್ಲಿವರೆಗೆ ಐದು ಐಪಿಎಲ್‌ ಕಿರೀಟ ಗೆದ್ದಿದೆ. ಆದರೆ IPL 2022ರಲ್ಲಿ ಸತತ 8 ಮ್ಯಾಚ್‌ಗಳನ್ನು ಸೋತಿದೆ. ತಮ್ಮ ಹಾಗೂ ತಂಡದ ಕಳಪೆ ಪ್ರದರ್ಶನಕ್ಕೆ ರೋಹಿತ್‌ ಇತ್ತೀಚೆಗೆ ಕ್ಷಮೆಯನ್ನೂ ಕೇಳಿದ್ದರು.

ಇದೀಗ ಸೌರವ್‌ ಗಂಗೂಲಿ ನೀಡಿರುವ ಸಂದರ್ಷನದಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ರೋಹಿತ್‌ ಹಾಗೂ ವಿರಾಟ್‌ ಅತ್ಯುತ್ತಮ ಆಟಗಾರರು. ಅವರು ಪುನಃ ಫಾರ್ಮ್‌ಗೆ ಬರುತ್ತಾರೆ ಎನ್ನುವ ನಂಬಿಕೆ ನನಗಿದೆ. ಇಬ್ಬರೂ ಸದ್ಯದಲ್ಲೆ ರನ್‌ ಗಳಿಸಲು ಆರಂಭಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಟ್‌ ಮ್ಯಾನ್‌ ರೋಹಿತ್‌ ಆಟವನ್ನು ಕಾಣಲು ತವಕಿಸುತ್ತಿರುವ ಫ್ಯಾನ್‌ಗಳು ಸಹ ಅಂತಹ ಸಮಯ ಆದಷ್ಟೂ ಬೇಗನೆ ಬರಲಿ ಎಂದು ಆಶಿಸುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಅಮಿತ್‌ ಮಿಶ್ರಾ ಈ ಕುರಿತು ಟ್ವೀಟ್‌ ಮಾಡಿ ಬೆಂಬಲ ಸೂಚಿಸಿದ್ದಾರೆ.

ಇಂದು ಇಬ್ಬರು ಆಟಗಾರರ ಪ್ರದರ್ಶನ ಉತ್ತಮವಾಗಿಲ್ಲದೇ ಇರಬಹುದು. ಆದರೆ ವಿರಾಟ ಮತ್ತು ರೋಹಿತ್‌ ಎಷ್ಟು ಶ್ರಮವಹಿಸಿ ಅಭ್ಯಾಸ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದ್ಧರಿಂದಲೇ ಅವರಿಬ್ಬರೂ ಈಗಲೂ ಉತ್ತಮ ಆಟಗಾರರು. ಇಂದು ಚಾಂಪಿಯನ್ನರಿಗೆ ಬೇಕಾಗಿರುವುದು ನಮ್ಮೆಲ್ಲರ ಬೆಂಬಲ, ಅದನ್ನು ನೀಡೋಣ ಎಂದಿದ್ದಾರೆ.

ರೋ ʼಹಿಟ್‌ʼ ಶರ್ಮಾ ಪರಿಚಯ

ಹುಟ್ಟುಹಬ್ಬದ ಸಂದರ್ಭದಲ್ಲಿ ರೋಹಿತ್‌ ಕಿರುಪರಿಚಯ ಇಲ್ಲಿದೆ. ರೋಹಿತ್ ಗುರುನಾಥ್ ಶರ್ಮಾ ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟಿಗ ಇವರು ಪ್ರಸ್ತುತ ಭಾರತೀಯ ರಾಷ್ಟ್ರೀಯ ತಂಡದ ನಾಯಕರಾಗಿದ್ದಾರೆ. ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಸಾಂದರ್ಭಿಕ ಬಲಗೈ ಆಫ್ ಬ್ರೇಕ್ ಬೌಲರ್ ಅವರು ಕ್ರಿಕೆಟ್‌ನಲ್ಲಿ ಅತ್ಯಂತ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು.

ವೃತ್ತಿಜೀವನ
  1. ಟೆಸ್ಟ್ : ಕೋಲ್ಕತಾ , ನವೆಂಬರ್ 6-8 , 2013 ನಲ್ಲಿ ಭಾರತ V/S ವೆಸ್ಟ್ ಇಂಡೀಸ್ .
  2. ಏಕದಿನ : ಬೆಲ್ಫಾಸ್ಟ್ , 23 ಜೂನ್, 2007 ನಲ್ಲಿ ಭಾರತ V/Sಐರ್ಲೆಂಡ್.
  3. ಕೊನೆಯ ಏಕದಿನ : ಬೆಂಗಳೂರು , ನವೆಂಬರ್ 2 ಭಾರತದ V/S ಆಸ್ಟ್ರೇಲಿಯಾ , 2013.
  4. ಟ್ವೆಂಟಿ 20 : ಡರ್ಬನ್ , ಸೆಪ್ಟೆಂಬರ್ 19, 2007 ಇಂಗ್ಲೆಂಡ್ V/S ಭಾರತ.
  5. ಕೊನೆಯ ಟ್ವೆಂಟಿ 20 : ರಾಜ್ಕೋಟ್ , ಅಕ್ಟೋಬರ್ 10 , 2013 ಆಸ್ಟ್ರೇಲಿಯಾ V/S ಭಾರತ.
  6. ಪ್ರಥಮ ದರ್ಜೆ : ಡಾರ್ವಿನ್ ಜುಲೈ 11-14 , 2006 ನಲ್ಲಿ ನ್ಯೂಜಿಲ್ಯಾಂಡ್ ಎ V/S ಭಾರತ ಎ.
  7. ಕೊನೆಯ ಪ್ರಥಮ ದರ್ಜೆ: ವಾಂಡರರ್ಸ್ , ಡಿಸೆಂಬರ್ 18-21 , 2013 ದಕ್ಷಿಣ ಆಫ್ರಿಕಾ V/Sಭಾರತ.
  8. ಒಂದು ಪ್ರಥಮ ಪಟ್ಟಿ ಎ: ಗ್ವಾಲಿಯರ್ , ಫೆಬ್ರವರಿ 25 , 2006 ಕೇಂದ್ರ ವಲಯ V/S ಪಶ್ಚಿಮ ವಲಯ.
  9. ಕೊನೆಯ ಪಟ್ಟಿ ಎ : ಭಾರತ V/S ಆಸ್ಟ್ರೇಲಿಯಾ , ಬೆಂಗಳೂರು , ನವೆಂಬರ್ 2 , 2013 .
  10. ಟ್ವೆಂಟಿ 20 ಪ್ರಥಮ : ಮುಂಬಯಿ , ಏಪ್ರಿಲ್ 3 , 2007 ನಲ್ಲಿ ಬರೋಡಾ V/S ಮುಂಬಯಿ.
  11. ಕೊನೆಯ ಟ್ವೆಂಟಿ 20 : ರಾಜ್ಕೋಟ್ , ಅಕ್ಟೋಬರ್ 10 , 2013 ಆಸ್ಟ್ರೇಲಿಯಾ V/S ಭಾರತ.

ಹಿಟ್ ಮ್ಯಾನ್ ಈವರೆಗೆ ಅಂತರಾಷ್ಟ್ರೀಯ 44 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 46.60ರ ಸರಾಸರಿಯಲ್ಲಿ 3,076 ರನ್ ಸಿಡಿಸಿದ್ದಾರೆ. ಇದರಲ್ಲಿ 8 ಶತಕ ಮತ್ತು 14 ಅರ್ಧಶತಕ ಸೇರಿವೆ. 212 ರನ್ ರೋಹಿತ್ ಅವರ ಟೆಸ್ಟ್ ನಲ್ಲಿ ಬೆಸ್ಟ್ ಸ್ಕೋರ್ ಆಗಿದೆ. ರೋಹಿತ್​ ಸಾಧನೆಗೆ 2015ರಲ್ಲಿ ಅರ್ಜುನ ಪ್ರಶಸ್ತಿ, 2020ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗಳು ಲಭಿಸಿದೆ.

ಇದನ್ನೂ ಓದಿ | IPL 2022: ಕೆಕೆಆರ್ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಹಸರಂಗ: ಆರ್‌ಸಿಬಿ ಗೆಲುವು

ಸುರೇಶ್‌ ರೈನಾ ಶುಭಾಶಯ: ಮಾಸ್ಟರ್ ಆಫ್ ಕ್ರಿಕೆಟ್ @ImRo45 ಚಾಂಪಿಯನ್‌ಗೆ ನನ್ನ ಶುಭಾಶಯಗಳು. ನೀವು ನಮ್ಮೆಲ್ಲರನ್ನೂ ಹೆಮ್ಮೆಪಡುವಂತೆ ಮಾಡಿದ್ದೀರಿ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಿದ್ದೀರಿ! ದೇವರು ನಿಮಗೆ ಯಾವಾಗಲೂ ಒಳ್ಳೆಯದನ್ನು ನೀಡಲಿ ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.

Exit mobile version