Site icon Vistara News

Hardik Pandya: ಪ್ರೇಯಸಿಯ ದೋಖಾದ ಸುಳಿವು ಮೊದಲೇ ಇತ್ತಾ? ಬಹುತೇಕ ಆಸ್ತಿಯನ್ನು ಪೋಷಕರ ಹೆಸರಲ್ಲಿಟ್ಟ ಚಾಲಾಕಿ ಹಾರ್ದಿಕ್!

Hardik Pandya

Hardik Pandya: Hardik pandya is a smart man.. he knew about this divorce thing can happen with Natasha

ಮುಂಬಯಿ: ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಿದರೆ(Hardik Pandya and Natasa Stankovic divorce) ಪತ್ನಿಗೆ ಜೀವನಾಂಶವಾಗಿ ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನೀಡಬೇಕಾಗಬಹುದು ಎಂದು ಹೇಳಲಾಗಿದೆ. ಆದರೆ, ಚಾಲಾಕಿ ಪಾಂಡ್ಯ ಅವರ ಬುದ್ಧಿವಂತಿಕೆಯಿಂದ ಪತ್ನಿಗೆ ನಯಾ ಪೈಸೆಯೂ ಸಿಗುವುದು ಅನುಮಾನ ಎನ್ನುವಂತಿದೆ.

ಅಹಮದಾಬಾದ್ ಮಿರರ್ ವರದಿ ಪ್ರಕಾರ, ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು. ಏಕೆಂದರೆ ಪಾಂಡ್ಯ ಅವರ ಹೆಂಡತಿ ಸರ್ಬಿಯಾ ದೇಶದವರು. ಹೀಗಾಗಿ ಅವರು ಜೀವನಾಂಶವನ್ನು ಸರ್ಬಿಯನ್ ದಿನಾರ್​ನಲ್ಲಿ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ಇದು ಅಸಾಧ್ಯ ಎನ್ನುವಂತಿದೆ.

ಹೌದು, ಹಾರ್ದಿಕ್​ ಪಾಂಡ್ಯ ಅವರು ಮುಂಬೈಯಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದರೂ ಕೂಡ ತಮ್ಮ ಹೆಸರಿನಲ್ಲಿ ಹೆಚ್ಚು ಆಸ್ತಿಯನ್ನು ಮಾಡಿಲ್ಲ. ಬಹುತೇಕ ಆಸ್ತಿಯನ್ನು ತನ್ನ ಪೋಷಕರ ಹೆಸರಿನಲ್ಲಿ ಮಾಡಿಟ್ಟಿದ್ದಾರೆ. ಈ ವಿಚಾರವನ್ನು ಪಾಂಡ್ಯ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ಈ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದ ಪಾಂಡ್ಯ, “ನಾನು ಜಾಹಿರಾತು, ಕ್ರಿಕೆಟ್​ ಸೇರಿ ಇನ್ನಿತರ ಮೂಲಗಳಿಂದ ಎಷ್ಟೇ ಹಣ ಸಂಪಾದಿಸಿದರೂ ಕೂಡ ಇದನೆಲ್ಲ ನನ್ನ ಹೆಸರಿನಲ್ಲಿ ಇಟ್ಟಿಲ್ಲ. ನನ್ನ ಬಳಿ ದುಬಾರಿ ಕಾರು, ಬಂಗಲೆ ಇದ್ದರೂ ಕೂಡ ಇದೆಲ್ಲ ನನ್ನ ಸಹೋದರ, ತಂದೆ ಮತ್ತು ತಾಯಿಯ ಹೆಸರಿನಲ್ಲಿದೆ. ಹೀಗಾಗಿ ನಾನು ಯಾವುದೇ ಸಮಸ್ಯೆ ಬಂದರೂ ಕೂಡ ಯಾರೀಗೂ ನನ್ನ ಆಸ್ತಿಯಲ್ಲಿ ಶೇ. 50ರಷ್ಟು ಜೀವನಾಂಶ ಕೊಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದ್ದರು. ಈ ವಿಡಿಯೊ ಈಗ ವೈರಲ್​ ಆಗಿದ್ದು ಪಾಂಡ್ಯಗೆ ಜೀವನದಲ್ಲಿ ಮುದೊಂದು ದಿನ ಪ್ರೇಯಸಿಯಿಂದ ದೋಖಾ ಎದುರಾಗುವ ಸುಳಿವು ಮೊದಲೇ ತಿಳಿದಿತ್ತಾ? ಎನ್ನುವ ನಿಗೂಡ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇದನ್ನೂ ಓದಿ Hardik Pandya: ಪತ್ನಿಗೆ ಶೇ.70ರಷ್ಟು ಆಸ್ತಿ ವರ್ಗಾಯಿಸಲು ಮುಂದಾದ ಹಾರ್ದಿಕ್​ ಪಾಂಡ್ಯ; ಶೀಘ್ರದಲ್ಲೇ ವಿಚ್ಛೇದನ!

ಹಾರ್ದಿಕ್​ ಪಾಂಡ್ಯ ಅವರ ಅಂದಿನ ಸಂದರ್ಶನ ಕಂಡ ನೆಟ್ಟಿಗರು ಇದೀಗ ವಿಭಿನ್ನ ಕಮೆಂಟ್​ ಮಾಡಿದ್ದಾರೆ. ನೀವು ನಿಜವಾಗಿಯೂ ಕೂಡ ಗುಜರಾತಿ ಎನ್ನುವುದು ಸಾಬೀತುಪಡಿಸಿದ್ದೀರಿ ಎಂದಿದ್ದಾರೆ. ನೆಟ್ಟಿಗರು ಈ ಮಾತು ಹೇಳಲು ಕೂಡ ಒಂದು ಕಾರಣವಿದೆ. ಗುಜರಾತಿಗಳು ಪಕ್ಕಾ ಲೆಕ್ಕಾಚಾರದ ಜೀವನ ನಡೆಸುವುದುರಲ್ಲಿ ಎತ್ತಿದ ಕೈ ಇದೇ ಕಾರಣದಿಂದ ಈ ಕಮೆಂಟ್​ ಮಾಡಿದ್ದಾರೆ.

ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ನತಾಶಾ ಅವರನ್ನು ಪಾಂಡ್ಯ ಗರ್ಭಿಣಿ ಮಾಡಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ, ರಾಕಿಣಗ್​ ಸ್ಟಾರ್ ಯಶ್​ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು.

ಮಾರ್ಚ್ 4 ರಂದು ಪತ್ನಿ ನತಾಶಾ ಅವರ ಹುಟ್ಟುಹಬ್ಬವಿತ್ತು. ಆದರೆ, ಪತ್ನಿಯ ಹುಟ್ಟುಹಬ್ಬಕ್ಕೆ ಹಾರ್ದಿಕ್ ಯಾವುದೇ ಶುಭ ಹಾರೈಕೆಯ ಪೋಸ್ಟ್ ಮಾಡಿಲ್ಲ. ಕೆಲ ದಿನಗಳ ಹಿಂದೆ ನತಾಶಾ ಅವರು ಸಿಂಗಲ್​ ಫೋಟೋವನ್ನು ಮತ್ತು ಮಗನ ಜತೆಗಿನ ಫೋಟೊವನ್ನು ಮಾತ್ರ ಪೋಸ್ಟ್​ ಮಾಡಿದ್ದರು. ಇದೆನೆಲ್ಲ ನೋಡುವಾಗ ಈ ಜೋಡಿ ಸದ್ಯದಲ್ಲೇ ದೂರವಾಗು ಸೂಚನೆಯೊಂದು ಲಭಿಸಿದೆ. ಹಾರ್ದಿಕ್ ಜತೆಗಿರುವ ಇತ್ತೀಚಿನ ಎಲ್ಲ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ ಎಂದು ಹೇಳಲಾಗಿದೆ. 

ಐಪಿಎಲ್​ ಪಂದ್ಯದಲ್ಲಿಯೂ ನತಾಶಾ ಸ್ಟೇಡಿಯಂಗೆ ಬಂದು ಗಂಡನಿಗೆ ಬೆಂಬಲ ಸೂಚಿಸಿದ್ದರು. ಆದರೆ ಈ ಬಾರಿ ಮುಂಬೈ ತಂಡವನ್ನು ಮುನ್ನಡೆಸಿ ವೇಳೆ ಒಮ್ಮೆಯೂ ಕೂಡ ನತಾಶಾ ಪಂದ್ಯ ನೋಡಲು ಸ್ಟೇಡಿಯಂಗೆ ಬಂದಿರಲಿಲ್ಲ. ಅಲ್ಲದೆ ನತಾಶಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಹೆಸರನ್ನು ಕೂಡ ಬದಲಿಸಿದ್ದಾರೆ ಹೀಗಾಗಿ ಈ ಜೋಡಿ ಬೇರ್ಪಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಪಾಂಡ್ಯ ಆಗಲಿ ನತಾಶ ಇದುವರೆಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.

Exit mobile version