Site icon Vistara News

WPL 2023 : ಹರ್ಮನ್​ಪ್ರೀತ್​ ಕೌರ್​ ಸ್ಫೋಟಕ ಅರ್ಧ ಶತಕ, ಗುಜರಾತ್​ ತಂಡಕ್ಕೆ 208 ರನ್​ ಗೆಲುವಿನ ಗುರಿ

Harmanpreet Kaur's explosive half-century, Gujarat's target of 208 runs to win

#image_title

ಮುಂಬಯಿ: ನಾಯಕಿ ಹರ್ಮನ್​ಪ್ರೀತ್​ ಕೌರ್​ (66 ರನ್​, 30 ಎಸೆತ, 14 ಫೋರ್​) ಅವರ ಸ್ಫೋಟಕ ಅರ್ಧ ಶತಕ ಹಾಗೂ ಆರಂಭಿಕ ಬ್ಯಾಟರ್​ ಹೇಲಿ ಮ್ಯಾಥ್ಯೂಸ್​ (47) ಹಾಗೂ ಅಮೇಲಿಯಾ ಕೆರ್​ (45) ಭರ್ಜರಿ ಬ್ಯಾಟಿಂಗ್ ನೆರವು ಪಡೆದ ಮುಂಬಯಿ ಇಂಡಿಯನ್ಸ್​ ತಂಡ, ಮಹಿಳೆಯರ ಪ್ರೀಮಿಯರ್ ಲೀಗ್​ನ (WPL 2023) ಉದ್ಘಾಟನಾ ಪಂದ್ಯದಲ್ಲಿ ಎದುರಾಳಿ ಗುಜರಾತ್​ ಜಯಂಟ್ಸ್​ ತಂಡಕ್ಕೆ 208 ರನ್​ಗಳ ​ ಗೆಲುವಿನ ಗುರಿ ಒಡ್ಡಿದೆ.

ಇಲ್ಲಿನ ಡಿವೈ ಪಾಟೀಲ್​ ಸ್ಟೇಡಿಯಮ್​ನಲ್ಲಿ ಟಾಸ್​ ಗೆದ್ದ ಗುಜರಾತ್​ ತಂಡದ ನಾಯಕಿ ಬೆತ್​ ಮೂನಿ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್​ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ತನ್ನ ಪಾಲಿನ 20 ಓವರ್​ಗಳು ಮುಕ್ತಾಯಗೊಂಡಾಗ 5 ವಿಕೆಟ್​​ ಕಳೆದುಕೊಂಡು207 ರನ್​ ಬಾರಿಸಿತು.

ಟಾಸ್​ ಗೆದ್ದ ಗುಜರಾತ್ ತಂಡದ ನಾಯಕಿ ಬೆತ್​ ಮೂನಿ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಯೋಜನೆ ರೂಪಿಸಿದ್ದರೂ ಅದು ಯಶಸ್ಸು ಕಾಣಲಿಲ್ಲ. ಆರಂಭಿಕ ಬ್ಯಾಟರ್​ ಹೇಲಿ ಮ್ಯಾಥ್ಯೂಸ್​ ಭರ್ಜರಿ ಆರಂಭ ತಂದುಕೊಟ್ಟರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಇಳಿದ ನ್ಯಾಟ್​ ಸ್ಕೀವರ್​ ಬ್ರಂಟ್​ (23) ರನ್​ ಗಳಿಕೆಯನ್ನು ಮುಂದುವರಿಸಿದರು. ಏತನ್ಮಧ್ಯೆ, ಆರಂಭಿಕ ಬ್ಯಾಟರ್​ ಯಸ್ತಿಕಾ ಭಾಟಿಯಾ 1 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು.

ಇದನ್ನೂ ಓದಿ : WPL 2023 : ಟಾಸ್​ ಗೆದ್ದ ಗುಜರಾತ್​ ಜಯಂಟ್ಸ್​​ ತಂಡದಿಂದ ಫೀಲ್ಡಿಂಗ್ ಆಯ್ಕೆ

ಮೂರು ವಿಕೆಟ್ ಉರುಳಿದ ಬಳಿಕ ಮುಂಬಯಿ ತಂಡ ಬ್ಯಾಟಿಂಗ್​ನಲ್ಲಿ ಅಬ್ಬರಿಸಿತು. ಹರ್ಮನ್​ಪ್ರಿತ್ ಕೌರ್​ ಹಾಗೂ ಅಮೇಲಿಯಾ ಕೆರ್​ವಿಸ್ಫೋಟಕ ಬ್ಯಾಟಿಂಗ್ ನಡೆಸಿದರು. ಈ ಜೋಡಿ ನಾಲ್ಕನೇ ವಿಕೆಟ್​ಗೆ 89 ರನ್​ ಬಾರಿಸಿತು. ಅದರಲ್ಲೂ ಹರ್ಮನ್​ಪ್ರೀತ್​ ಕೌರ್​ ಅಬ್ಬರಿಸಿದರು. ಅವರು ಸತತ ಏಳು ಸೇರಿದಂತೆ ಒಟ್ಟು 14 ಫೋರ್​ ಬಾರಿಸಿ ಎದುರಾಳಿ ತಂಡಕ್ಕೆ ಆಘಾತ ಉಂಟು ಮಾಡಿದರು. ಕೊನೆಯಲ್ಲಿ ಪೂಜಾ ವಸ್ತ್ತಾಕರ್​ 15 ರನ್​ಗಳ ಕೊಡುಗೆ ಕೊಟ್ಟರು.

ಗುಜರಾತ್​ ತಂಡದ ಪರ ಸ್ನೇಹಾ ರಾಣಾ 2 ವಿಕೆಟ್ ಪಡೆದರು.

Exit mobile version