WPL 2023 : ಹರ್ಮನ್​ಪ್ರೀತ್​ ಕೌರ್​ ಸ್ಫೋಟಕ ಅರ್ಧ ಶತಕ, ಗುಜರಾತ್​ ತಂಡಕ್ಕೆ 208 ರನ್​ ಗೆಲುವಿನ ಗುರಿ - Vistara News

ಕ್ರಿಕೆಟ್

WPL 2023 : ಹರ್ಮನ್​ಪ್ರೀತ್​ ಕೌರ್​ ಸ್ಫೋಟಕ ಅರ್ಧ ಶತಕ, ಗುಜರಾತ್​ ತಂಡಕ್ಕೆ 208 ರನ್​ ಗೆಲುವಿನ ಗುರಿ

ಡಬ್ಲ್ಯುಪಿಎಲ್​ನ (WPL 2023) ಮೊದಲ ಪಂದ್ಯದಲ್ಲಿ ಮುಂಬಯಿ ತಂಡದ ಬ್ಯಾಟರ್​ಗಳು ಅಬ್ಬರಿಸಿದರು.

VISTARANEWS.COM


on

Harmanpreet Kaur's explosive half-century, Gujarat's target of 208 runs to win
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ನಾಯಕಿ ಹರ್ಮನ್​ಪ್ರೀತ್​ ಕೌರ್​ (66 ರನ್​, 30 ಎಸೆತ, 14 ಫೋರ್​) ಅವರ ಸ್ಫೋಟಕ ಅರ್ಧ ಶತಕ ಹಾಗೂ ಆರಂಭಿಕ ಬ್ಯಾಟರ್​ ಹೇಲಿ ಮ್ಯಾಥ್ಯೂಸ್​ (47) ಹಾಗೂ ಅಮೇಲಿಯಾ ಕೆರ್​ (45) ಭರ್ಜರಿ ಬ್ಯಾಟಿಂಗ್ ನೆರವು ಪಡೆದ ಮುಂಬಯಿ ಇಂಡಿಯನ್ಸ್​ ತಂಡ, ಮಹಿಳೆಯರ ಪ್ರೀಮಿಯರ್ ಲೀಗ್​ನ (WPL 2023) ಉದ್ಘಾಟನಾ ಪಂದ್ಯದಲ್ಲಿ ಎದುರಾಳಿ ಗುಜರಾತ್​ ಜಯಂಟ್ಸ್​ ತಂಡಕ್ಕೆ 208 ರನ್​ಗಳ ​ ಗೆಲುವಿನ ಗುರಿ ಒಡ್ಡಿದೆ.

ಇಲ್ಲಿನ ಡಿವೈ ಪಾಟೀಲ್​ ಸ್ಟೇಡಿಯಮ್​ನಲ್ಲಿ ಟಾಸ್​ ಗೆದ್ದ ಗುಜರಾತ್​ ತಂಡದ ನಾಯಕಿ ಬೆತ್​ ಮೂನಿ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್​ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ತನ್ನ ಪಾಲಿನ 20 ಓವರ್​ಗಳು ಮುಕ್ತಾಯಗೊಂಡಾಗ 5 ವಿಕೆಟ್​​ ಕಳೆದುಕೊಂಡು207 ರನ್​ ಬಾರಿಸಿತು.

ಟಾಸ್​ ಗೆದ್ದ ಗುಜರಾತ್ ತಂಡದ ನಾಯಕಿ ಬೆತ್​ ಮೂನಿ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಯೋಜನೆ ರೂಪಿಸಿದ್ದರೂ ಅದು ಯಶಸ್ಸು ಕಾಣಲಿಲ್ಲ. ಆರಂಭಿಕ ಬ್ಯಾಟರ್​ ಹೇಲಿ ಮ್ಯಾಥ್ಯೂಸ್​ ಭರ್ಜರಿ ಆರಂಭ ತಂದುಕೊಟ್ಟರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಲು ಇಳಿದ ನ್ಯಾಟ್​ ಸ್ಕೀವರ್​ ಬ್ರಂಟ್​ (23) ರನ್​ ಗಳಿಕೆಯನ್ನು ಮುಂದುವರಿಸಿದರು. ಏತನ್ಮಧ್ಯೆ, ಆರಂಭಿಕ ಬ್ಯಾಟರ್​ ಯಸ್ತಿಕಾ ಭಾಟಿಯಾ 1 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು.

ಇದನ್ನೂ ಓದಿ : WPL 2023 : ಟಾಸ್​ ಗೆದ್ದ ಗುಜರಾತ್​ ಜಯಂಟ್ಸ್​​ ತಂಡದಿಂದ ಫೀಲ್ಡಿಂಗ್ ಆಯ್ಕೆ

ಮೂರು ವಿಕೆಟ್ ಉರುಳಿದ ಬಳಿಕ ಮುಂಬಯಿ ತಂಡ ಬ್ಯಾಟಿಂಗ್​ನಲ್ಲಿ ಅಬ್ಬರಿಸಿತು. ಹರ್ಮನ್​ಪ್ರಿತ್ ಕೌರ್​ ಹಾಗೂ ಅಮೇಲಿಯಾ ಕೆರ್​ವಿಸ್ಫೋಟಕ ಬ್ಯಾಟಿಂಗ್ ನಡೆಸಿದರು. ಈ ಜೋಡಿ ನಾಲ್ಕನೇ ವಿಕೆಟ್​ಗೆ 89 ರನ್​ ಬಾರಿಸಿತು. ಅದರಲ್ಲೂ ಹರ್ಮನ್​ಪ್ರೀತ್​ ಕೌರ್​ ಅಬ್ಬರಿಸಿದರು. ಅವರು ಸತತ ಏಳು ಸೇರಿದಂತೆ ಒಟ್ಟು 14 ಫೋರ್​ ಬಾರಿಸಿ ಎದುರಾಳಿ ತಂಡಕ್ಕೆ ಆಘಾತ ಉಂಟು ಮಾಡಿದರು. ಕೊನೆಯಲ್ಲಿ ಪೂಜಾ ವಸ್ತ್ತಾಕರ್​ 15 ರನ್​ಗಳ ಕೊಡುಗೆ ಕೊಟ್ಟರು.

ಗುಜರಾತ್​ ತಂಡದ ಪರ ಸ್ನೇಹಾ ರಾಣಾ 2 ವಿಕೆಟ್ ಪಡೆದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

IPL 2024: ಸೌರವ್ ಗಂಗೂಲಿಯ ಐಪಿಎಲ್​ ದಾಖಲೆ ಮುರಿದ ಫಿಲ್​ ಸಾಲ್ಟ್​

IPL 2024: ಫಿಲ್ ಸಾಲ್ಟ್​ ಅವರು ಅರ್ಧಶತಕ ಬಾರಿಸುವ ಮೂಲಕ ಐಪಿಎಲ್​ ಆವೃತ್ತಿಯೊಂದರಲ್ಲಿ ಕೆಕೆಆರ್​ ಪರ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೂಲಕ ಸೌರವ್​ ಗಂಗೂಲಿಯ ದಾಖಲೆಯನ್ನು ಮುರಿದರು

VISTARANEWS.COM


on

IPL 2024
Koo

ಕೋಲತ್ತಾ: ಡೆಲ್ಲಿ ಕ್ಯಾಟಪಿಲ್ಸ್​ ವಿರುದ್ಧ ಪ್ರಚಂಡ ಬ್ಯಾಟಿಂಗ್​ ನಡೆಸಿ ಗಮನಸೆಳೆದ ಕೆಕೆಆರ್(​KKR vs DC) ತಂಡದ ಆರಂಭಿಕ ಆಟಗಾರ ಫಿಲ್​ ಸಾಲ್ಟ್(Phil Salt)​ ಅವರು ಮಾಜಿ ಆಟಗಾರ ದಾದಾ ಖ್ಯಾತಿಯ ಸೌರವ್ ಗಂಗೂಲಿಯ(Sourav Ganguly) ಐಪಿಎಲ್​(IPL 2024) ದಾಖಲೆಯೊಂದನ್ನು ಮುರಿದಿದ್ದಾರೆ.

ಫಿಲ್ ಸಾಲ್ಟ್​ ಅವರು ಅರ್ಧಶತಕ ಬಾರಿಸುವ ಮೂಲಕ ಐಪಿಎಲ್​ ಆವೃತ್ತಿಯೊಂದರಲ್ಲಿ ಕೆಕೆಆರ್​ ಪರ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೂಲಕ ಸೌರವ್​ ಗಂಗೂಲಿಯ ದಾಖಲೆಯನ್ನು ಮುರಿದರು. ಗಂಗೂಲಿ 2010ರ ಆವೃತ್ತಿಯಲ್ಲಿ 7 ಇನಿಂಗ್ಸ್​ ಆಡಿ 331 ರನ್​ ಬಾರಿಸಿದ್ದರು. ಆದರೆ ಫಿಲ್​ ಸಾಲ್ಟ್​ ಕೇವಲ 6 ಇನಿಂಗ್ಸ್​ಗಳಿಂದ 344* ರನ್​ ಕಲೆಹಾಕುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಆ್ಯಂಡ್ರೆ ರಸೆಲ್​ ಮೂರನೇ ಸ್ಥಾನದಲ್ಲಿದ್ದಾರೆ. ರಸೆಲ್​ 2019ರಲ್ಲಿ 7 ಇನಿಂಗ್ಸ್​ ನಿಂದ 311 ರನ್​ ಬಾರಿಸಿದ್ದೆರು.

ಈಡನ್​ ಗಾರ್ಡನ್ಸ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಕೆಕೆಆರ್ ಆಟಗಾರರು


ಫಿಲ್​ ಸಾಲ್ಟ್​-344* ರನ್​, 6* ಇನಿಂಗ್ಸ್​

ಸೌರವ್​ ಗಂಗೂಲಿ-331 ರನ್​, 7 ಇನಿಂಗ್ಸ್​

ಆ್ಯಂಡ್ರೆ ರಸೆಲ್​- 311 ರನ್​, 7 ಇನಿಂಗ್ಸ್​

ಕ್ರಿಸ್​ ಲೀನ್​-303 ರನ್​, 9 ಇನಿಂಗ್ಸ್​

ಚೇಸಿಂಗ್​ ವೇಳೆ ಫಿಲ್​ ಸಾಲ್ಟ್​ 17 ರನ್​ ಗಳಿಸಿದ್ದ ವೇಳೆ ಖಲೀಲ್​ ಅಹ್ಮದ್​ ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲಿ ಲಿಜಾಡ್ ವಿಲಿಯಮ್ಸ್ ಅವರಿಂದ ಕ್ಯಾಚ್​ ಕೈಚೆಲ್ಲಿ ಜೀವದಾನ ಪಡೆದರು. ಇದರ ಸಂಪೂರ್ಣ ಲಾಭವೆತ್ತಿದ ಸಾಲ್ಟ್​ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ವಿಲಿಯಮ್ಸ್ ಕಳಪೆ ಫೀಲ್ಡಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಸರಿಯಾಗಿ ದಂಡಿಸಿಕೊಂಡರು. ಮೂರು ಓವರ್​ಗೆ 38 ರನ್​ ಹೊಡೆಸಿಕೊಂಡರು. ಸಾಲ್ಟ್​ 33 ಎಸೆತಗಳಿಂದ 68 ರನ್​ ಚಚ್ಚಿದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 5 ಸೊಗಸಾದ ಸಿಕ್ಸರ್​ ಮತ್ತು 7 ಬೌಂಡರಿ ಸಿಡಿಯಿತು.

 ಈಡನ್​ ಗಾರ್ಡನ್ಸ್​ನಲ್ಲಿ ಸೋಮವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ​ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders) 16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 157 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದು ಕೆಕೆಆರ್​ಗೆ 9ನೇ ಪಂದ್ಯದಲ್ಲಿ ಒಲಿದ 6ನೇ ಗೆಲುವಾಗಿದೆ. ಸದ್ಯ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ.

Continue Reading

ಕ್ರೀಡೆ

T20 World Cup 2024: ಇಂದು ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಸಂಭಾವ್ಯ ತಂಡ ಹೀಗಿದೆ

T20 World Cup 2024: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್(Ajit Agarkar)​ ಕಳೆದ 2 ದಿನಗಳ ಹಿಂದೆಯೇ ದೆಹಲಿಯಲ್ಲಿ ಸಭೆ ನಡೆಸಿ ತಂಡವನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಂಡ ಪ್ರಕಟಿಸುವ ಸುದ್ದಿಗೋಷ್ಠಿಯಲ್ಲಿ ಅಜಿತ್‌ ಅಗರ್ಕರ್‌ ಮತ್ತು ಕೋಚ್‌ ರಾಹುಲ್‌ ದ್ರಾವಿಡ್‌(Rahul Dravid) ಭಾಗವಹಿಸಲಿದ್ದಾರೆ ಎನ್ನಲಾಗಿದೆ.

VISTARANEWS.COM


on

T20 World Cup 2024
Koo

ಮುಂಬಯಿ: ಟಿ20 ವಿಶ್ವಕಪ್‌ಗೆ(T20 World Cup 2024) ಮಂಗಳವಾರ ಭಾರತೀಯ ತಂಡ(Team India) ಪ್ರಕಟಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ನ್ಯೂಜಿಲ್ಯಾಂಡ್ ತಂಡ ಪ್ರಟಕಗೊಂಡಿದೆ. ಟಿ20 ವಿಶ್ವಕಪ್‌ಗಾಗಿ ತಂಡ ಪ್ರಕಟಿಸಲು ಮೇ 1 (ಬುಧವಾರ) ಕೊನೆಯ ದಿನವಾಗಿರುವುದರಿಂದ ಭಾರತ ಸೇರಿ ಇನ್ನುಳಿದ ದೇಶಗಳು ಕೂಡ ಇಂದೇ ತಮ್ಮ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್(Ajit Agarkar)​ ಕಳೆದ 2 ದಿನಗಳ ಹಿಂದೆಯೇ ದೆಹಲಿಯಲ್ಲಿ ಸಭೆ ನಡೆಸಿ ತಂಡವನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಂಡ ಪ್ರಕಟಿಸುವ ಸುದ್ದಿಗೋಷ್ಠಿಯಲ್ಲಿ ಅಜಿತ್‌ ಅಗರ್ಕರ್‌ ಮತ್ತು ಕೋಚ್‌ ರಾಹುಲ್‌ ದ್ರಾವಿಡ್‌(Rahul Dravid) ಭಾಗವಹಿಸಲಿದ್ದಾರೆ ಎನ್ನಲಾಗಿದೆ. ರೋಹಿತ್​ ಅವರು ಇಂದು ಲಕ್ನೋ ವಿರುದ್ಧ ಪಂದ್ಯವನ್ನಾಡುವ ಹಿನ್ನಡೆಯಲ್ಲಿ ಈ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿದುಬಂದಿದೆ.

ತಂಡ ಪ್ರಕಟಗೊಳ್ಳುವ ಮುನ್ನವೇ ಕ್ರಿಕ್​ಬಜ್​ ಸೇರಿ ಕೆಲ ಆಂಗ್ಲ ಮಾಧ್ಯಗಳು ಕೆಲ ಆಟಗಾರರಿಗೆ ಅವಕಾಶ ಸಿಗುವುದು ಅನುಮಾನ ಎನ್ನುವ ಸುದ್ದಿಯನ್ನು ಪ್ರಕಟಿಸಿದೆ. ಕೆಲ ವರದಿಗಳ ಪ್ರಕಾರ ಹಾರ್ದಿಕ್​ ಪಾಂಡ್ಯ ಬದಲು ರಿಷಭ್​ ಪಂತ್ ಅವರನ್ನು ತಂಡದ ಉಪನಾಯಕನನ್ನಾಗಿ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಪಂತ್​ ಮೊದಲ ಆಯ್ಕೆಯ ಕೀಪರ್​ ಅಲ್ಲ ಸಂಜು ಸ್ಯಾಮ್ಸನ್​ ಮೊದಲ ಆಯ್ಕೆಯ ಕೀಪರ್​ ಎನ್ನಲಾಗಿದೆ.​

ಇದನ್ನೂ ಓದಿ T20 World Cup 2024: ಆಸ್ಟ್ರೇಲಿಯಾದಿಂದ ಹಡಗಿನಲ್ಲೇ 3 ಕ್ರಿಕೆಟ್ ಪಿಚ್ ತಂದ ಅಮೆರಿಕ

ಭಾರತದ ಸಂಭಾವ್ಯರ ಪಟ್ಟಿ

ರೋಹಿತ್‌ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌/ಕೆ.ಎಲ್​ ರಾಹುಲ್​, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಶಿವಂ ದುಬೆ, ರಿಂಕು ಸಿಂಗ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಅರ್ಶ್‌ದೀಪ್‌ ಸಿಂಗ್‌, ಆವೇಶ್‌ ಖಾನ್‌/ಮೊಹಮದ್‌ ಸಿರಾಜ್‌.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಆದರೆ, ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.
ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

Continue Reading

ಕ್ರೀಡೆ

IPL 2024 Points Table: ಡೆಲ್ಲಿ ಕ್ಯಾಪಿಟಲ್ಸ್​ ಸೋಲಿನ ಬಳಿಕ ಹೀಗಿದೆ ಅಂಕಪಟ್ಟಿ

IPL 2024 Points Table: ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್(LSG vs MI)​ ಮತ್ತು ಸತತವಾಗಿ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್​ ಸೆಣಸಾಟ ನಡೆಸಲಿದೆ. ಸದ್ಯ ಮುಂಬೈ ಅಂಕಪಟ್ಟಿಯಲ್ಲಿ 9ನೇ ಸ್ಥಾನಿಯಾಗಿರುವ ಮುಂಬೈಗೆ ಪ್ಲೇ ಆಫ್​ ಆಸೆ ಜೀವಂತವಿರಿಸಬೇಕಿದ್ದರೆ ಇದು ಮಸ್ಟ್​ ವಿನ್​ ಗೇಮ್​ ಆಗಿದೆ. ಲಕ್ನೋಗೂ ಕೂಡ ಮಹತ್ವದ ಪಂದ್ಯವಾಗಿದೆ.

VISTARANEWS.COM


on

IPL 2024 Points Table
Koo

ಕೋಲ್ಕತ್ತಾ: ಸೋಮವಾರ ರಾತ್ರಿ ನಡೆದ ಐಪಿಎಲ್​(IPL 2024) ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡ ಡೆಲ್ಲಿ ಕ್ಯಾಪಿಟಲ್ಸ್​(Delhi Capitals) ವಿರುದ್ಧ ಭರ್ಜರಿ 7 ವಿಕೆಟ್​ ಅಂತರದ ಗೆಲುವು ಸಾಧಿಸಿತು. ಡೆಲ್ಲಿ ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ(IPL 2024 Points Table) ಹಿಂದಿನಂತೆ 6ನೇ ಸ್ಥಾನದಲ್ಲೇ ಮುಂದುವರಿದಿದೆ. ಕೆಕೆಆರ್​ 2ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಸೋಲಿನಿಂದ ಪಂತ್​ ಪಡೆಯ ಪ್ಲೇ ಆಫ್​ ಪಯಣ ಕೂಡ ದುರ್ಗಮಗೊಂಡಿದೆ. ಇನ್ನುಳಿದ 3 ಪಂದ್ಯಗಳನ್ನು ಕೂಡ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಡೆಲ್ಲಿ ಪ್ಲೇ ಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ. ಸದ್ಯ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿರುವ ಕೆಕೆಆರ್​ಗೆ ಇನ್ನೂ 5 ಪಂದ್ಯಗಳು ಬಾಕಿ ಉಳಿದಿವೆ. ಈ ಪೈಕಿ ಕನಿಷ್ಠ 2 ಪಂದ್ಯ ಗೆದ್ದರೂ ಪ್ಲೇ ಆಫ್​ ಟಿಕೆಟ್​ ಖಚಿತಗೊಳ್ಳಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​96312 (+1.096)
ಚೆನ್ನೈ​​95410 (+0.810)
ಹೈದರಾಬಾದ್​95410 (+0.075)
ಲಕ್ನೋ95410 (+0.059)
ಡೆಲ್ಲಿ115610 (-0.442)
ಗುಜರಾತ್​10468 (-1.113)
ಪಂಜಾಬ್9368 (-0.187)
ಮುಂಬೈ9366 (-0.261)
ಆರ್​ಸಿಬಿ10376 (-0.415)

ಇಲ್ಲಿನ ಐತಿಹಾಸಿಕ ಕ್ರಿಕೆಟ್​ ಸ್ಟೇಡಿಯಂ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಸೋಮವಾರದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ​ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders) 16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 157 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಇಂದಿನ ಪಂದ್ಯ


ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್(LSG vs MI)​ ಮತ್ತು ಸತತವಾಗಿ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್​ ಸೆಣಸಾಟ ನಡೆಸಲಿದೆ. ಸದ್ಯ ಮುಂಬೈ ಅಂಕಪಟ್ಟಿಯಲ್ಲಿ 9ನೇ ಸ್ಥಾನಿಯಾಗಿರುವ ಮುಂಬೈಗೆ ಪ್ಲೇ ಆಫ್​ ಆಸೆ ಜೀವಂತವಿರಿಸಬೇಕಿದ್ದರೆ ಇದು ಮಸ್ಟ್​ ವಿನ್​ ಗೇಮ್​ ಆಗಿದೆ. ಲಕ್ನೋಗೂ ಕೂಡ ಮಹತ್ವದ ಪಂದ್ಯವಾಗಿದೆ.

ಇದನ್ನೂ ಓದಿ IPL 2024: ರಿಂಕು ಸಿಂಗ್​ಗೆ ಬೌಲಿಂಗ್​ ಮಾಡಿದ ಶಾರುಖ್‌ ಪುತ್ರ ಅಬ್ರಾಮ್; ವಿಡಿಯೊ ವೈರಲ್​

ಮುಂಬೈ ತಂಡದಲ್ಲಿ ನಾಯಕತ್ವ ಬದಲಾವಣೆ ಬಳಿಕ ಯಾರು ಕೂಡ ಸಂಘಟಿತ ಪ್ರದರ್ಶನ ತೋರುತಿಲ್ಲ. ಇಶಾನ್​ ಕಿಶನ್​, ಸೂರ್ಯಕುಮಾರ್​ ಯಾದವ್​, ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ ಅವರಂತಹ ಘಟಾನುಘಟಿ ಆಟಗಾರರಿದ್ದರೂ ಕೂಡ ತಂಡಕ್ಕಾಗಿ ಆಡುತ್ತಿಲ್ಲ. ಸೋತರೂ ಗೆದ್ದರೂ ಕೂಡ ಜೋಶ್​ ಕಾಣುತ್ತಿಲ್ಲ. ನೂತನ ನಾಯಕ ಹಾರ್ದಿಕ್​ ಪಾಂಡ್ಯ ಕೂಡ ಗಂಭೀರವಾಗಿ ಆಡುತ್ತಿಲ್ಲ. ಅವರ ವರ್ತನೆಗಳೇ ವಿಚಿತ್ರವಾಗಿ ಗೋಚರಿಸಿದೆ.

Continue Reading

ಕ್ರೀಡೆ

Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

Rohit Sharma Birthday: ರೋಹಿತ್ ಶರ್ಮಾ ಈವರೆಗೆ 262 ಏಕದಿನ ಏಕದಿನ ಪಂದ್ಯಗಳ್ನನಾಡಿದ್ದಾರೆ. ಇದರಲ್ಲಿ 31 ಶತಕ, 3 ದ್ವಿಶತಕ ಮತ್ತು 55 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 10709 ರನ್​ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 59 ಪಂದ್ಯಗಳಿಂದ 4138 ರನ್​ ಬಾರಿಸಿದ್ದಾರೆ. 12 ಶತಕ ,1 ದ್ವಿಶತಕ ಮತ್ತು 17 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ 151 ಪಂದ್ಯ, 3974 ರನ್​, 5 ಶತಕ ಮತ್ತು 29 ಅರ್ಧಶತಕ ಬಾರಿಸಿದ್ದಾರೆ.

VISTARANEWS.COM


on

Rohit Sharma Birthday
Koo

ಮುಂಬಯಿ: ಭಾರತ ಕ್ರಿಕೆಟ್​ ತಂಡದ ನಾಯಕ, ಹಿಟ್​ಮ್ಯಾನ್ ಎಂದೇ ಖ್ಯಾತಿ ಗಳಿಸಿರುವ ರೋಹಿತ್ ಶರ್ಮಾ(Rohit Sharma Birthday) ಅವರಿಗೆ ಇಂದು 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. 30 ಏಪ್ರಿಲ್ 1987ರಲ್ಲಿ ಜನಿಸಿದ ರೋಹಿತ್​ ಅವರ ಪೂರ್ಣ ಹೆಸರು ರೋಹಿತ್ ಗುರುನಾಥ್ ಶರ್ಮಾ. ಏಕದಿನ ಕ್ರಿಕೆಟ್​​ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಖ್ಯಾತಿ ಇವರದ್ದು. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರೋಹಿತ್​ಗೆ ಬಿಸಿಸಿಐ, ಮುಂಬೈ ಇಂಡಿಯನ್ಸ್​ ಸೇರಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು, ಹಾಲಿ ಮತ್ತು ಮಾಜಿ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಹರಸಿ ಹಾರೈಸಿದ್ದಾರೆ.

ನವೆಂಬರ್ 2013 ರಲ್ಲಿ, ಸಚಿನ್ ತೆಂಡೂಲ್ಕರ್ ಅವರ ವಿದಾಯ ಸರಣಿಯ ಸಮಯದಲ್ಲಿ, ಶರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ತಮ್ಮ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಸದ್ಯ ರೋಹಿತ್ ಶರ್ಮಾ ಟೀಂ ಇಂಡಿಯಾದ 3 ಮಾದರಿಯ ನಾಯಕರಾಗಿದ್ದಾರೆ.

ಇದನ್ನೂ ಓದಿ IPL 2024: ರಿಂಕು ಸಿಂಗ್​ಗೆ ಬೌಲಿಂಗ್​ ಮಾಡಿದ ಶಾರುಖ್‌ ಪುತ್ರ ಅಬ್ರಾಮ್; ವಿಡಿಯೊ ವೈರಲ್​

ರೋಹಿತ್ ಶರ್ಮಾ ಈವರೆಗೆ 262 ಏಕದಿನ ಏಕದಿನ ಪಂದ್ಯಗಳ್ನನಾಡಿದ್ದಾರೆ. ಇದರಲ್ಲಿ 31 ಶತಕ, 3 ದ್ವಿಶತಕ ಮತ್ತು 55 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 10709 ರನ್​ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 59 ಪಂದ್ಯಗಳಿಂದ 4138 ರನ್​ ಬಾರಿಸಿದ್ದಾರೆ. 12 ಶತಕ ,1 ದ್ವಿಶತಕ ಮತ್ತು 17 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ 151 ಪಂದ್ಯ, 3974 ರನ್​, 5 ಶತಕ ಮತ್ತು 29 ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್​ನಲ್ಲಿಯೂ ಉತ್ತಮ ಸಾಧನೆ ಮಾಡಿರುವ ರೋಹಿತ್​ ನಾಯಕನಾಗಿ ಮುಂಬೈ ತಂಡಕ್ಕೆ 5 ಬಾರಿ ಕಪ್​ ಗೆದ್ದಿದ್ದಾರೆ. 252 ಐಪಿಎಲ್​ ಪಂದ್ಯಗಳಿಂದ 6522 ರನ್​, 2 ಶತಕ ಮತ್ತು 42 ಅರ್ಧಶತಕ ಬಾರಿಸಿದ್ದಾರೆ.

ರೋಹಿತ್ ಶರ್ಮಾ ಕ್ರಿಕೆಟ್ ಸಾಧನೆಗೆ 2015ರಲ್ಲಿ ಅರ್ಜುನ ಪ್ರಶಸ್ತಿ, 2020ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗಳು ಲಭಿಸಿವೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಎಲ್ಲ ಲೀಗ್​ ಪಂದ್ಯಗಳನ್ನು ಗೆದ್ದು ಫೈನಲ್​ ಪ್ರವೇಶಿಸಿತ್ತು. ಆದರೆ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಪ್ರಶಸ್ತಿ ವಂಚಿತವಾಗಿತ್ತು. ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಸಾರಥ್ಯದಲ್ಲೇ ಟೀಮ್​ ಇಂಡಿಯಾ ಕಣಕ್ಕಿಳಿಯಲಿದೆ. ಟಿ20 ವಿಶ್ವಕಪ್​ ಜೂನ್​ 1ರಿಂದ 29ರ ತನಕ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

Continue Reading
Advertisement
IPL 2024
ಕ್ರೀಡೆ17 mins ago

IPL 2024: ಸೌರವ್ ಗಂಗೂಲಿಯ ಐಪಿಎಲ್​ ದಾಖಲೆ ಮುರಿದ ಫಿಲ್​ ಸಾಲ್ಟ್​

Hassan Pen Drive Case
ಪ್ರಮುಖ ಸುದ್ದಿ18 mins ago

Hassan Pen Drive Case: ಎಸ್‌ಐಟಿಗೆ 18 ಸಿಬ್ಬಂದಿ ನೇಮಕ; ಅಶ್ಲೀಲ ವಿಡಿಯೋದಲ್ಲಿ ಇರುವವರು ಯಾರು?

T20 World Cup 2024
ಕ್ರೀಡೆ48 mins ago

T20 World Cup 2024: ಇಂದು ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಸಂಭಾವ್ಯ ತಂಡ ಹೀಗಿದೆ

Manipur Violence
ದೇಶ52 mins ago

Manipur Violence:ಮಹಿಳೆಯರ ವಿವಸ್ತ್ರ ಕೇಸ್‌; ಪೊಲೀಸರೆದುರೇ ನಡೆದಿತ್ತು ನೀಚ ಕೃತ್ಯ

taliban writing muniraju
ಕ್ರೈಂ1 hour ago

Taliban Writing: ಗೋಡೆ ಮೇಲೆ ತಾಲಿಬಾನ್‌ ಬರಹ ಬರೆದ ಪೇದೆ ಮುನಿರಾಜು ಈಗ ಮುಸ್ಲಿಂ ಅಂತೆ!

IPL 2024 Points Table
ಕ್ರೀಡೆ1 hour ago

IPL 2024 Points Table: ಡೆಲ್ಲಿ ಕ್ಯಾಪಿಟಲ್ಸ್​ ಸೋಲಿನ ಬಳಿಕ ಹೀಗಿದೆ ಅಂಕಪಟ್ಟಿ

Rohit Sharma Birthday
ಕ್ರೀಡೆ2 hours ago

Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

road accident anekal
ಬೆಂಗಳೂರು ಗ್ರಾಮಾಂತರ2 hours ago

Road Accident: ಪಂಚರ್‌ ಹಾಕುತ್ತಿದ್ದ ಲಾರಿ ಚಾಲಕ ಬೈಕ್‌ ಡಿಕ್ಕಿಯಾಗಿ ಸಾವು, ಹಿಟ್‌ ಆ್ಯಂಡ್‌ ರನ್‌ನಲ್ಲಿ ಯುವಕ ಮೃತ

Baba Ramdev
ದೇಶ2 hours ago

Patanjali Case: ಪತಂಜಲಿಗೆ ಮತ್ತೆ ಸಂಕಷ್ಟ; ಬ್ಯಾನ್‌ ಆಗುತ್ತಾ ಈ ಉತ್ಪನ್ನಗಳು?

CET exam 2024
ಪ್ರಮುಖ ಸುದ್ದಿ2 hours ago

CET Exam: ಸಿಇಟಿ ಕೀ ಉತ್ತರಗಳು ಪ್ರಕಟ, ಪಠ್ಯೇತರ ಪ್ರಶ್ನೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ5 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202421 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202423 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌