1. Asia Cup 2023 : ಭಾರತ ಏಷ್ಯಾ ಕಪ್ ಚಾಂಪಿಯನ್, 8ನೇ ಬಾರಿ ಟ್ರೋಫಿ ಎತ್ತಿದ ಟೀಮ್ ಇಂಡಿಯಾ
ಕೊಲೊಂಬೊ: ಕಳೆದ ಆವೃತ್ತಿಯ ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ (Asia Cup 2023) ತಂಡದ ವಿರುದ್ಧದ ನಿರಾಯಸ ಗೆಲುವು ಸಾಧಿಸಿದ ಭಾರತ ತಂಡದ ಟ್ರೋಫಿ ಎತ್ತಿ ಹಿಡಿದಿದೆ. ಇದು ಭಾರತ ತಂಡದ ಪಾಲಿಗೆ ಎಂಟನೇ ಚಾಂಪಿಯನ್ಷಿಪ್ ಆಗಿದ್ದು, ಏಷ್ಯಾ ಕಪ್ನಲ್ಲಿ ತನ್ನ ಪಾರಮ್ಯ ಮುಂದುವರಿಸಿದೆ. ಫೈನಲ್ ಪಂದ್ಯದ ಗೆಲುವಿನಲ್ಲಿ ಭಾರತ ತಂಡದ ಬೌಲರ್ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರ ವಹಿಸಿದರು. ಅವರು ಲಂಕಾ ತಂಡದ ಪ್ರಮುಖ ಆರು ವಿಕೆಟ್ಗಳನ್ನು ಉರುಳಿಸಿ ಮಿಂಚಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : Mohammed Siraj : ಹೈದರಾಬಾದ್ ಹರಿಕೇನ್ ಸಿರಾಜ್ ಸೃಷ್ಟಿಸಿದ ದಾಖಲೆಗಳ ಪಟ್ಟಿ ಇಲ್ಲಿದೆ
2. ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನ ‘ಯಶೋಭೂಮಿ’ ಲೋಕಾರ್ಪಣೆ, ಏನಿದು ಕೇಂದ್ರ
ನವದೆಹಲಿ: ತಮ್ಮ ಜನ್ಮದಿನವಾದ ಸೆಪ್ಟೆಂಬರ್ 17, ಭಾನುವಾರ ಪ್ರಧಾನಿ ನರೇಂದ್ರ ಮೋದಿ (PM Modi Birthday) ಅವರು ದಿಲ್ಲಿಯ ದ್ವಾರಕದಲ್ಲಿರುವ ಇಂಡಿಯಾ ಇಂಟರ್‌ನ್ಯಾಷನಲ್ ಕನವೆನ್ಷನ್ ಸೆಂಟರ್ (IICC) ‘ಯಶೋಭೂಮಿ’ಯ (YashoBhoomi) ಮೊದಲ ಹಂತವನ್ನು ಉದ್ಘಾಟಿಸಿದರು. 5,400 ರೂಪಾಯಿ ವೆಚ್ಚದಲ್ಲಿ ಈ ಐಐಸಿಸಿ ಕೇಂದ್ರವನ್ನು ಕೇಂದ್ರ ಸರ್ಕಾರವು ನಿರ್ಮಾಣ ಮಾಡುತ್ತಿದೆ. ಸುಮಾರು 73, 000 ಚದರ ಅಡಿ ಜಾಗದಲ್ಲಿ ಈ ಭವನ ತಲೆ ಎತ್ತಲಿದೆ(PM Narendra Modi). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ವಿಶ್ವಕರ್ಮ ಯೋಜನೆಗೆ ಮೋದಿ ಚಾಲನೆ; ಹೀಗೆ ಮಾಡಿ, ಉಪಯೋಗ ಪಡೆಯಿರಿ
3. ಹೆಲ್ತ್ ಎಟಿಎಂ ಲೋಕಾರ್ಪಣೆ ಮಾಡಿದ ಸಿಎಂ; ಆರೋಗ್ಯ ಸೇವೆ ಹೇಗೆ, ಪ್ರಯೋಜನ ಏನು?
ಕಲಬುರಗಿ: ಕಲ್ಯಾಣ ಕರ್ನಾಟಕ (Kalyana Karnataka) ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಹೆಲ್ತ್ ಕಿಯೋಸ್ಕ್” (ಹೆಲ್ತ್ ಎಟಿಎಂ – HEALTH ATM) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಉದ್ಘಾಟಿಸಿದ್ದಾರೆ. ಕಾರ್ಪೋರೇಟ್ ಕಂಪನಿಗಳ (Corporate Company) ಸಿಎಸ್‌ಆರ್ ನಿಧಿಯಡಿ (CSR Fund) 5 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹೆಲ್ತ್ ಎಟಿಎಮ್ ಯೋಜನೆ ಜಾರಿಗೊಂಡಿದೆ. ಆರೋಗ್ಯ ಕೇಂದ್ರಗಳಲ್ಲಿ, ವೆಲ್‌ನೆಸ್ ಸೆಂಟರ್ (Wellness Centre) ಸೇರಿದಂತೆ 25 ಆಯ್ದ ಸ್ಥಳಗಳಲ್ಲಿ ಹೆಲ್ತ್ ಎಟಿಎಮ್ ಅನ್ನು ಆರಂಭ ಮಾಡಲಾಗಿದೆ. ಇದರಿಂದ ಅನೇಕ ಪ್ರಯೋಜನಗಳಿವೆ. ಅಲ್ಲದೆ, ಹೆಲ್ತ್ ಎಟಿಎಂ ಹೇಗೆ ಕಾರ್ಯನಿರ್ವಹಣೆ ಮಾಡಲಿದೆ ಎಂಬುದನ್ನು ನೋಡೋಣ. ಪೂರ್ಣ ಸುದ್ದಿಗೆ ಕ್ಲಿಕ್ ಮಾಡಿ.
ಇದನ್ನೂ ಓದಿ : ಕಲ್ಯಾಣ ಕರ್ನಾಟಕದ ಶಿಕ್ಷಣಕ್ಕಾಗಿ 750 ಕೋಟಿ ರೂ.: ಸಿಎಂ ಸಿದ್ದರಾಮಯ್ಯ
4. ಜನ ಹಿತ ಮರೆತ ರಾಜ್ಯ ಸರ್ಕಾರವನ್ನು ಎಚ್ಚರಿಸಲು ರಾಜ್ಯವ್ಯಾಪಿ ಹೋರಾಟ: ಬಿ.ಎಸ್.ಯಡಿಯೂರಪ್ಪ
ಕೋಲಾರ: ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರಿಗೆ ಹಾಹಾಕಾರವಿದ್ದರೂ ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ಜನಹಿತ ಮರೆತಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ. ಗಣೇಶ ಹಬ್ಬದ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ (BJP State Tour) ಮಾಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್.
5. 10 ರೂಪಾಯಿ ಹರಿದ ನೋಟೇ ಕೋಡ್‌ವರ್ಡ್! ಚೈತ್ರಾಗೆ ತಲುಪಿದ್ದು ಎಷ್ಟು ಕೋಟಿ?
ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಮತ್ತು ಟೀಮ್ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ (BJP ticket fraud) ಕೊಡಿಸುವುದಾಗಿ ಹೇಳಿ ಐದು ಕೋಟಿ ರೂ. ವಂಚಿಸಿದ ಪ್ರಕರಣ ಸಂಬಂಧ ಒಂದೊಂದೇ ವಿಷಯಗಳು ಹೊರಗೆ ಬರುತ್ತಿವೆ. ಚೈತ್ರಾ ಮತ್ತು ಗ್ಯಾಂಗ್‌ಗೆ ಹಣ ತಲುಪಿದ್ದು ಹೇಗೆ? ಯಾವ ರೀತಿಯಲ್ಲಿ ಹಣ ಸಂದಾಯ ಆಗಿದೆ? ಎಷ್ಟು ಹಣ ತಲುಪಿದೆ ಎಂಬ ಇಂಚಿಂಚು ಮಾಹಿತಿಗಳು ಇದೀಗ ಹೊರ ಬಿದ್ದಿದೆ. ಇನ್ನೊಂದು ಕುತೂಹಲಕರ ವಿಷಯವೆಂದರೆ ಹಣ ಬದಲಾವಣೆಗೆ ಹರಿದ ಹತ್ತು ರೂಪಾಯಿ ನೋಟೇ (torn Rs 10 note ) ಆಧಾರವಾಗಿತ್ತು! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Weather Report : ನಾಳೆ ಕರಾವಳಿಯಲ್ಲಿ ಸಿಕ್ಕಾಪಟ್ಟೆ ಮಳೆ; ಬೆಂಗಳೂರಿನಲ್ಲೂ ಸಂಜೆಗೆ ವರ್ಷಧಾರೆ
7. ಗೆಲ್ಲಬೇಕಿದ್ದರೆ ಅನಗತ್ಯವಾಗಿ ಮಾಧ್ಯಮಗಳ ಮುಂದೆ ಹೋಗಬೇಡಿ; ಪಕ್ಷದ ನಾಯಕರಿಗೆ ಸೋನಿಯಾ ಕಿವಿಮಾತು
ಈ ಸುದ್ದಿಯನ್ನೂ ಓದಿ: ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದೇ ಮಹಾತ್ಮ ಗಾಂಧಿಗೆ ಸಲ್ಲಿಸುವ ನೈಜ ಶ್ರದ್ಧಾಂಜಲಿ ಎಂದ ಖರ್ಗೆ
8. 5ನೇ ದಿನಕ್ಕೆ ಕಾಲಿಟ್ಟ ಎನ್‌ಕೌಂಟರ್; ಸೈನಿಕರಿಗೆ ಎದುರಾದ ಸವಾಲುಗಳೇನು?
9. ಕಮಲ ಹಾಸನ್ ಪುಷ್ಪಕ ವಿಮಾನ ಮರು ಬಿಡುಗಡೆ
10. Sunday Read: ಹೊಸ ಪುಸ್ತಕ: ಪುನರ್ನವ: ಅಳಿದುಳಿದ ಕುರುಕ್ಷೇತ್ರದಲ್ಲಿ