Kalyana Karnataka : ಹೆಲ್ತ್‌ ಎಟಿಎಂ ಲೋಕಾರ್ಪಣೆ ಮಾಡಿದ ಸಿಎಂ; ಆರೋಗ್ಯ ಸೇವೆ ಹೇಗೆ, ಪ್ರಯೋಜನ ಏನು? Vistara News
Connect with us

ಆರೋಗ್ಯ

Kalyana Karnataka : ಹೆಲ್ತ್‌ ಎಟಿಎಂ ಲೋಕಾರ್ಪಣೆ ಮಾಡಿದ ಸಿಎಂ; ಆರೋಗ್ಯ ಸೇವೆ ಹೇಗೆ, ಪ್ರಯೋಜನ ಏನು?

Kalyana Karnataka : ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲಬುರಗಿಯಲ್ಲಿ ‘ಆರೋಗ್ಯ ಮಿತ್ರ’ ಯೋಜನೆಯನ್ನು ಜಾರಿ ಮಾಡಲಾಗಿದೆ. ಎಚ್.ಪಿ ಎಂಟರ್‌ಪ್ರೈಸಸ್ ವತಿಯಿಂದ 25 ಹೆಲ್ತ್ ಎಟಿಎಂ ಘಟಕಗಳನ್ನು CSR ಅನುದಾನದ ಅಡಿಯಲ್ಲಿ ಪಡೆದು ಭಾನುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ವೇಳೆ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಅದರ ಪ್ರಯೋಜನ, ಕಾರ್ಯನಿರ್ವಹಣೆ ಹೀಗಿದೆ.

VISTARANEWS.COM


on

CM Siddaramaiah inagurates Health ATM in Kalaburagi
Koo

ಕಲಬುರಗಿ: ಕಲ್ಯಾಣ ಕರ್ನಾಟಕ (Kalyana Karnataka) ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಹೆಲ್ತ್ ಕಿಯೋಸ್ಕ್” (ಹೆಲ್ತ್‌ ಎಟಿಎಂ – HEALTH ATM) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಉದ್ಘಾಟಿಸಿದ್ದಾರೆ. ಕಾರ್ಪೋರೇಟ್‌ ಕಂಪನಿಗಳ (Corporate Company) ಸಿಎಸ್‌ಆರ್‌ ನಿಧಿಯಡಿ (CSR Fund) 5 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹೆಲ್ತ್‌ ಎಟಿಎಮ್ ಯೋಜನೆ ಜಾರಿಗೊಂಡಿದೆ. ಆರೋಗ್ಯ ಕೇಂದ್ರಗಳಲ್ಲಿ, ವೆಲ್‌ನೆಸ್ ಸೆಂಟರ್ (Wellness Centre) ಸೇರಿದಂತೆ 25 ಆಯ್ದ ಸ್ಥಳಗಳಲ್ಲಿ ಹೆಲ್ತ್ ಎಟಿಎಮ್ ಅನ್ನು ಆರಂಭ ಮಾಡಲಾಗಿದೆ. ಇದರಿಂದ ಅನೇಕ ಪ್ರಯೋಜನಗಳಿವೆ. ಅಲ್ಲದೆ, ಹೆಲ್ತ್ ಎಟಿಎಂ ಹೇಗೆ ಕಾರ್ಯನಿರ್ವಹಣೆ ಮಾಡಲಿದೆ ಎಂಬುದನ್ನು ನೋಡೋಣ.

ಆರೋಗ್ಯ ಮಿತ್ರ

ಸ್ಮಾರ್ಟ್ ಹೆಲ್ತ್ ಕಿಯೋಸ್ಕ್‌ಗಳ (Smart Health Kiosk) ಮೂಲಕ ತಪಾಸಣೆ ಮತ್ತು ಶೀಘ್ರ ರೋಗ ಪತ್ತೆ ಜತೆಗೆ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಸಲಾಗುತ್ತಿದೆ. ಇದಕ್ಕಾಗಿ ವಿಶಿಷ್ಟ ಹೆಲ್ತ್ ಎಟಿಎಂ ಜಾರಿ ಮಾಡಲಾಗಿದೆ. ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲಬುರಗಿ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ‘ಆರೋಗ್ಯ ಮಿತ್ರ’ ಯೋಜನೆಯನ್ನು ಜಾರಿ ಮಾಡಲಾಗಿದೆ. ಕಲಬುರಗಿ ಜಿಲ್ಲೆಗೆ ಎಚ್.ಪಿ ಎಂಟರ್‌ಪ್ರೈಸಸ್ ವತಿಯಿಂದ 25 ಹೆಲ್ತ್ ಎಟಿಎಂ ಘಟಕಗಳನ್ನು ಸಿಎಸ್‌ಆರ್‌ ಅನುದಾನದ ಅಡಿಯಲ್ಲಿ ಪಡೆದು ಭಾನುವಾರ (ಸೆಪ್ಟೆಂಬರ್‌ 17) ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.

ಹೆಲ್ತ್ ಎಟಿಎಂ ಕಾರ್ಯನಿರ್ವಹಣೆ ಹೇಗೆ?

  • ಆರೋಗ್ಯ ಎಟಿಎಂ ಆರೋಗ್ಯ ಕ್ಷೇತ್ರದಲ್ಲಿ ಇದು ನೂತನ ತಂತ್ರಜ್ಞಾನವಾಗಿದ್ದು, ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚುವ ಮತ್ತು ರೋಗವನ್ನು ತಡೆಗಟ್ಟಬಹುದಾದ ಆರೋಗ್ಯ ಸೇವೆಗಳನ್ನು ಸುಲಭವಾಗಿ ಹಾಗೂ ಕೈಗೆಟುಕುವ ದರದಲ್ಲಿ ಒದಗಿಸುತ್ತದೆ.
  • ನಗರ ಪ್ರದೇಶಗಳಲ್ಲಿ ಜನರ ಜೀವನ ಶೈಲಿಗೆ ಅನುಗುಣವಾಗಿ, ಕಡಿಮೆ ಸಮಯದಲ್ಲಿ ಪರೀಕ್ಷೆಗಳನ್ನು ಮಾಡುವ ಮೂಲಕ ಸಮಯ ಮತ್ತು ಹಣವನ್ನು ಉಳಿಸಬಹುದು.
  • ಗ್ರಾಮೀಣ ಪ್ರದೇಶಗಳಿಗೆ ಅಗತ್ಯವಿರುವ ಆರೋಗ್ಯ ಸಿಬ್ಬಂದಿ ಅಂತರವನ್ನು ಕಡಿಮೆ ಮಾಡಿ ದುರ್ಗಮ ಪ್ರದೇಶಗಳಿಗೂ ಕೂಡ ಆರೋಗ್ಯ ಸೇವೆಗಳನ್ನು ತಲುಪಿಸಬಹುದು.
  • ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ಹಿಂದುಳಿದ ವರ್ಗವನ್ನು ಸಬಲೀಕರಣಗೊಳಿಸುವುದು ಹೆಲ್ತ್ ಎಟಿಎಂ ಗುರಿಯಾಗಿದೆ.

ಇದನ್ನೂ ಓದಿ: Weather Report : ಗಣೇಶ ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿ; ಇನ್ನೊಂದು ವಾರ ಅಲರ್ಟ್‌

ಹೆಲ್ತ್ ಎಟಿಎಂನ ಪ್ರಯೋಜನಗಳು

  • ಜನಸಂದಣಿ ಪ್ರದೇಶಗಳಲ್ಲಿ ಲಭ್ಯತೆ ಇರುವ ಆರೋಗ್ಯ ಎಟಿಎಂಗಳ ಮೂಲಕ ಸರಳವಾದ ಆರೋಗ್ಯ ಸೇವೆಗಳ ಲಭ್ಯತೆ.
  • ನಿಖರವಾದ ವೈದ್ಯಕೀಯ ಪರೀಕ್ಷೆ ಮತ್ತು ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಎಟಿಎಂಗಳನ್ನೂ ಬಳಸುವುದರಿಂದ ಸಮಯ ಮತ್ತು ಹಣ ಉಳಿತಾಯ
  • ಸಮಗ್ರ ಆರೋಗ್ಯ ಸೇವೆಗಳಿಂದ ತುರ್ತು ಸ್ಪಂದನೆ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವುದರ ಮೂಲಕ ಉತ್ತಮ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮ ಲಭ್ಯತೆ.
  • ನಿರಂತರ ಆರೋಗ್ಯ ತಪಾಸಣೆ ಮತ್ತು ಮೇಲ್ವಿಚಾರಣೆಯ ಮೂಲಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ತಡೆಗಟ್ಟಲು ಸಹಕಾರಿ.
  • ರೋಗಿಯ ದಾಖಲೆಗಳನ್ನು ಸುರಕ್ಷಿತವಾಗಿ ಮತ್ತು ಗೌಪ್ಯವಾಗಿ ಇಡಲಾಗುತ್ತದೆ.
  • 10 ನಿಮಿಷದಲ್ಲಿ 50ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಬಹುದು.
  • ತ್ವರಿತವಾಗಿ ಆರೋಗ್ಯದ ವರದಿಯನ್ನು ನೀಡಲಾಗುತ್ತದೆ.
  • ಆರೋಗ್ಯಕ್ಕೆ ಅಗತ್ಯವಿರುವ ಆಹಾರದ ಮಾಹಿತಿಯನ್ನು ನೀಡಲಾಗುವುದು.
ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Side Effects of Sugar: ಸಿಹಿ ತಿನ್ನಬೇಕು, ಆದರೆ ಎಷ್ಟು?

Side Effects of Sugar: ನೈಸರ್ಗಿಕ ಸಕ್ಕರೆಯಲ್ಲಿ ಇದ್ದಷ್ಟು ಸತ್ವಗಳು ನಾವೇ ಸೇರಿಸಿಕೊಳ್ಳುವ ಸಕ್ಕರೆಯಲ್ಲಿ (Added Sugar) ಅಥವಾ ಸಿಹಿ ತಿಂಡಿಯಲ್ಲಿ ದೊರೆಯುವುದಿಲ್ಲ. ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಹಾಗಾಗಿಯೇ ಸಿಹಿ ತಿನಿಸುಗಳ ಸೇವನೆಗೆ ಮಿತಿ ಬೇಕು ಎನ್ನುವುದು.

VISTARANEWS.COM


on

Edited by

Sweets
Koo

ಬೆಂಗಳೂರು: ಶ್ರಾವಣದ ಹಬ್ಬಗಳ ಸಾಲು (Side Effects of Sugar) ಮುಗಿದಿದೆ. ಮೊನ್ನೆಯಷ್ಟೇ ಭಾದ್ರಪದದ ಚತುರ್ಥಿಯನ್ನೂ ಆಚರಿಸಿದ್ದಾಯ್ತು. ಇನ್ನೀಗ ನವರಾತ್ರಿ, ಆದಾದ ಮೇಲೆ ದೀಪಾವಳಿ. ಇಷ್ಟೊಂದು ಹಬ್ಬಗಳ ಆಚರಣೆ ಎಂದರೆ ಹುಡುಗಾಟವೇ? ಹೀಗೆ ಸಾಲು ಸಾಲು ಹಬ್ಬಗಳನ್ನು ಸಿಹಿ ತಿನ್ನದೆ ಕಳೆಯುವುದಾದರೂ ಹೇಗೆ? ಸಿಹಿ ಇಲ್ಲದ್ದು ಹಬ್ಬ ಎನಿಸೀತೆ? ಹಾಗೆಂದು ಪ್ರತೀ ಹಬ್ಬಕ್ಕೂ ಗಡದ್ದಾಗಿ ಸಿಹಿ ಬಾರಿಸಿದರೆ ನಮ್ಮ ಆರೋಗ್ಯದ ಗತಿ ಏನು? ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದರಿಂದ ನಮ್ಮ ದೇಹದ ಮೇಲಾಗುವ ಪರಿಣಾಮಗಳೇನು (What Happens When You Have Too Much Sugar) ಎನ್ನುವುದನ್ನು ತಿಳಿಯೋಣವೇ?

ಸಕ್ಕರೆ ಬೇಕು!

ಹೌದು, ನಮ್ಮ ದೇಹಕ್ಕೆ ಸಕ್ಕರೆಯೂ ಬೇಕು. ಸಕ್ಕರೆಯೆಂದರೆ ಒಂದು ತೆರನಾದ ಪಿಷ್ಟ. ಅದನ್ನು ವಿಘಟಿಸುವ ದೇಹ ಗ್ಲೂಕೋಸ್‌ ಆಗಿ ಪರಿವರ್ತಿಸಿ, ತನ್ನ ಶಕ್ತಿಯ ಅಗತ್ಯಗಳಿಗೆ ಬಳಸಿಕೊಳ್ಳುತ್ತದೆ. ಜೇನುತುಪ್ಪ, ಖರ್ಜೂರ, ಹಣ್ಣುಗಳು, ಡೈರಿ ಉತ್ಪನ್ನಗಳು ಮುಂತಾದ ಹಲವಾರು ಆಹಾರಗಳಲ್ಲಿ ಸಕ್ಕರೆ ತಾನಾಗಿಯೇ ಇರುತ್ತದೆ. ಇಂಥ ನೈಸರ್ಗಿಕ ಸಕ್ಕರೆಯಂಶ ನಮ್ಮ ದೇಹಕ್ಕೆ ಬೇಕು. ಮೆದುಳು, ನರವ್ಯೂಹಗಳು ಮತ್ತು ಕೆಂಪು ರಕ್ತಕಣಗಳಂಥವು ಸರಿಯಾಗಿ ಕೆಲಸ ಮಾಡಲು ಈ ನೈಸರ್ಗಿಕ ಸಕ್ಕರೆಯ ಅಗತ್ಯವಿದೆ.

ಆದರೆ ನಿಸರ್ಗದತ್ತವಾದ ಸಕ್ಕರೆ ಸತ್ವದ ಹೊರತಾಗಿ ಹೆಚ್ಚುವರಿ, ಅಂದರೆ ನಾವೇ ಸೇರಿಸಿದ ಸಕ್ಕರೆಯಂಶ ದೇಹಕ್ಕೇನೂ ಬೇಕೆಂದಿಲ್ಲ. ಹಾಗಾಗಿಯೇ ಸಿಹಿ ತಿನಿಸುಗಳ ಸೇವನೆಗೆ ಮಿತಿ ಬೇಕು ಎನ್ನುವುದು. ನೈಸರ್ಗಿಕ ಸಕ್ಕರೆಯಲ್ಲಿ ಇದ್ದಷ್ಟು ಸತ್ವಗಳು ನಾವೇ ಸೇರಿಸಿಕೊಳ್ಳುವ ಸಕ್ಕರೆಯಲ್ಲಿ ಅಥವಾ ಸಿಹಿ ತಿಂಡಿಯಲ್ಲಿ ದೊರೆಯುವುದಿಲ್ಲ. ತಜ್ಞರ ಪ್ರಕಾರ, ವಯಸ್ಕರು ದಿನವೊಂದಕ್ಕೆ 30 ಗ್ರಾಂ ಗಿಂತ ಹೆಚ್ಚಿನ ಸಕ್ಕರೆಯನ್ನು ತಿನ್ನಬಾರದು. ಮಕ್ಕಳಿಗೆ 25 ಗ್ರಾಂ ಒಳಗೇ ಸಾಕು. ಇದರಲ್ಲಿ ನಮ್ಮ ಆಹಾರದಲ್ಲಿರುವ ನೈಸರ್ಗಿಕ ಸಕ್ಕರೆಯನ್ನ ಸೇರಿಸಬೇಕಿಲ್ಲ.

ಇದನ್ನೂ ಓದಿ: National Nutrition Week 2023: ರಾತ್ರಿ ಊಟ ಬೇಗ ಮಾಡುವುದರಿಂದಲೂ ಆರೋಗ್ಯ ಹಾಳು?

Side Effects of Sugar

ಹೆಚ್ಚು ತಿಂದರೇನಾಗುತ್ತದೆ?

ಸಿಕ್ಕಾಪಟ್ಟೆ ಸಕ್ಕರೆ ತಿನ್ನುವುದು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಅತಿಯಾಗಿ ಸಿಹಿ ತಿಂದಾಗ ದೇಹದ ಶಕ್ತಿ ಹೆಚ್ಚುವ ಬದಲು, ಸುಸ್ತು, ಆಯಾಸ ಕಾಣಿಸಬಹುದು. ಮೂಡ್‌ ಬದಲಾವಣೆ, ಹೊಟ್ಟೆ ಉಬ್ಬರ, ಅಜೀರ್ಣ, ವಾಕರಿಕೆ ಇಂಥವು ಅಲ್ಪಕಾಲೀನ ಪರಿಣಾಮಗಳಾಗಿ ಕಾಣಿಸಿಕೊಳ್ಳಬಹುದು. ಆದರೆ ಹೆಚ್ಚು ಸಿಹಿ ತಿನ್ನುವುದನ್ನು ಮುಂದುವರಿಸಿದರೆ ದೀರ್ಘಕಾಲದಲ್ಲಿ ಪರಿಣಾಮಗಳು ಸಮಸ್ಯೆಗಳಾಗಿ ಮಾರ್ಪಡುವುದು ನಿಶ್ಚಿತ.

ಟೈಪ್‌-2 ಮಧುಮೇಹ

ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಏರದಂತೆ ನಿಯಂತ್ರಿಸಲು ನಮಗೆ ಇನ್ಸುಲಿನ್‌ ಎಂಬ ಚೋದಕ ಬೇಕು. ಇದನ್ನು ಉತ್ಪತ್ತಿ ಮಾಡುವುದು ನಮ್ಮ ಮೇದೋಜೀರಕ ಗ್ರಂಥಿ. ಆಹಾರದಲ್ಲಿರುವ ಸಕ್ಕರೆಯಂಶ ರಕ್ತಕ್ಕೆ ಸೇರುತ್ತಿದ್ದಂತೆ ಇನ್ಸುಲಿನ್‌ ಉತ್ಪತ್ತಿ ಮಾಡುವಂತೆ ಈ ಗ್ರಂಥಿಗೆ ಸಂದೇಶ ಹೋಗುತ್ತದೆ. ಆಗ ರಕ್ತದಲ್ಲಿ ಸಕ್ಕರೆ ಮಟ್ಟ ಏರದಂತೆ ನಿಯಂತ್ರಣವಾಗಿ, ಉಳಿದ ಅಂಗಾಂಗಗಳಿಗೆ ಶಕ್ತಿ ಪೂರೈಕೆಯಾಗುತ್ತದೆ. ಒಂದೊಮ್ಮೆ ದೇಹದ ಕೋಶಗಳು ಇನ್ಸುಲಿನ್‌ಗೆ ಸ್ಪಂದಿಸುವುದನ್ನು ನಿಲ್ಲಿಸಿದರೆ ಸಮಸ್ಯೆ ಶುರುವಾಗುತ್ತದೆ. ಹೆಚ್ಚೆಚ್ಚು ಸಿಹಿ ತಿಂದರೆ ನಮ್ಮ ಮೇದೋಜೀರಕ ಗ್ರಂಥಿ ಹೆಚ್ಚು ಕೆಲಸ ಮಾಡಬೇಕು, ಅತಿಯಾಗಿ ಉತ್ಪತ್ತಿಯಾಗುವ ಇನ್ಸುಲಿನ್‌ಗೆ ದೇಹ ಕೆಲವೊಮ್ಮೆ ಸ್ಪಂದಿಸದೇ (Insulin resistance) ಹೋಗಬಹುದು. ಇದೇ ಅವಸ್ಥೆಯನ್ನು ಟೈಪ್‌-2 ಮಧುಮೇಹ ಎನ್ನುತ್ತೇವೆ.

ಬೊಜ್ಜು

ಈಗ ಆರೇಳು ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ವಿಶ್ವದಲ್ಲಿ 100 ಕೋಟಿಗೂ ಅಧಿಕ ಮಂದಿ ಬೊಜ್ಜಿನಿಂದಲೇ (Obesity) ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಸಂಸ್ಕರಿಸಿದ ಆಹಾರಗಳಿಂದ (ಜ್ಯೂಸ್‌, ಸೋಡಾ, ಕೇಕ್‌ ಇತ್ಯಾದಿ) ದೇಹ ಸೇರುವ ಸಕ್ಕರೆಯಿಂದಲೇ ಬೊಜ್ಜಿಗೆ ತೊತ್ತಾದವರು. ಅತಿಯಾಗಿ ಸಕ್ಕರೆ ತಿನ್ನುವುದರಿಂದ ದೇಹಕ್ಕೆ ಬೇಕಾಗಿದ್ದಕ್ಕಿಂತ ಹೆಚ್ಚೇ ಕ್ಯಾಲರಿ ದೊರೆಯುತ್ತದೆ; ಆದರೆ ಇವೆಲ್ಲವೂ ಪೋಷಕಾಂಶವಿಲ್ಲದ ಸತ್ವಹೀನ ಕ್ಯಾಲರಿಗಳು. ಹಾಗಾಗಿ ಪೋಷಕಾಂಶಗಳ ಕೊರತೆಯಾಗುತ್ತಿದ್ದಂತೆ ಇನ್ನಷ್ಟು ತಿನ್ನಬೇಕೆಂಬ ಬಯಕೆ ದೇಹಕ್ಕೆ ಮೂಡುತ್ತದೆ. ತೂಕ ಹೆಚ್ಚಲು ಇಷ್ಟು ಸಾಲದೇ?

ಇದನ್ನೂ ಓದಿ: PM Modi Birthday: 73ರಲ್ಲೂ 23ರ ರಣೋತ್ಸಾಹ; ಇಲ್ಲಿದೆ ಮೋದಿ ಆರೋಗ್ಯದ ಗುಟ್ಟು

Side Effects of Sugar

ಹೃದಯದ ತೊಂದರೆಗಳು

ಸಕ್ಕರೆಭರಿತ ಆಹಾರಗಳು ಬೊಜ್ಜು ಹೆಚ್ಚಿಸುವುದು ಮಾತ್ರವಲ್ಲ, ದೇಹದಲ್ಲಿ ಟ್ರೈಗ್ಲಿಸರೈಡ್‌ ಅಂಶವನ್ನು ಹೆಚ್ಚಿಸುತ್ತವೆ. ಇದೇ ಮುಂದುವರಿದು ರಕ್ತನಾಳಗಳಲ್ಲಿ ಕೊಬ್ಬು ಜಮೆಯಾಗುತ್ತದೆ; ರಕ್ತದೊತ್ತಡ ಏರುತ್ತದೆ. ಮಧುಮೇಹದ ಜೊತೆಗೆ ಇವಿಷ್ಟು ಸಮಸ್ಯೆಗಳು ಸಾಕು ಹೃದಯವನ್ನು ಸಂಕಷ್ಟಕ್ಕೆ ಈಡು ಮಾಡಲು. ಇದರಿಂದ ಹೃದಯದ ತೊಂದರೆಗಳು ಮಾತ್ರವಲ್ಲ. ಪಾರ್ಶ್ವವಾಯುವಿನ ಭೀತಿಯೂ ಎದುರಾಗುತ್ತದೆ.

ಫ್ಯಾಟಿ ಲಿವರ್

ದೇಹದಲ್ಲಿ ಖರ್ಚಾಗದೆ ಉಳಿಯುವ ಶಕ್ತಿಯೆಲ್ಲಾ ಜಮೆಯಾಗುವುದು ಕೊಬ್ಬಿನ ರೂಪದಲ್ಲಿ. ಇಂಥ ಹೆಚ್ಚುವರಿ ಕೊಬ್ಬು ಜಮೆಯಾಗುವುದು ಯಕೃತ್ತಿನಲ್ಲಿ. ಆಗಿಂದಾಗ ಈ ಕೊಬ್ಬು ಖಾಲಿಯಾಗುತ್ತಿದ್ದರೆ ಹೆಚ್ಚಿನ ಜಮಾವಣೆ ಇರುವುದಿಲ್ಲ. ಆದರೆ ಅನಗತ್ಯ ಕ್ಯಾಲರಿಗಳು ಹೆಚ್ಚಾಗಿ ಕೊಬ್ಬು ಹೆಚ್ಚೆಚ್ಚು ದಾಸ್ತಾನಾಗುವುದಕ್ಕೆ ಪ್ರಾರಂಭವಾದರೆ, ಯಕೃತ್‌ನಲ್ಲಿದ್ದ ಆರೋಗ್ಯಪೂರ್ಣ ಕೋಶಗಳು ನಾಶವಾಗಿ ಈ ಕೊಬ್ಬಿನ ಕೋಶಗಳೇ ತುಂಬಲಾರಂಭಿಸುತ್ತವೆ. ಫ್ಯಾಟಿ ಲಿವರ್‌ ಕಾಡುವುದು ಹೀಗೆ. ಮದ್ಯಪಾನ ಮಾಡದೆಯೂ ಯಕೃತ್ತಿನ ಕೊಬ್ಬು ಇತ್ತೀಚೆಗೆ ಬಹಳಷ್ಟು ಜನರನ್ನು ಕಾಡಲು ಇದುವೇ ಕಾರಣ.

ಅತಿಯಾದ ಸಿಹಿಯಿಂದ ಹಲ್ಲು ಮತ್ತು ಬಾಯಿಯ ಆರೋಗ್ಯವೂ ಕ್ರಮೇಣ ನಶಿಸುತ್ತದೆ. ಅತಿ ಸಿಹಿ ಉತ್ಪತ್ತಿ ಮಾಡುವ ಆಮ್ಲಗಳಿಗೆ ಹಲ್ಲುಗಳ ಎನಾಮಲ್‌ ನಾಶವಾಗಿ, ಕುಳಿಗಳು ಬೀಳುತ್ತವೆ. ಒಸಡುಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಹಾಗಾಗಿ ದೇಹಕ್ಕೆ ಅಗತ್ಯವಾದ ಸಕ್ಕರೆಯಂಶವನ್ನು ನೈಸರ್ಗಿಕ ತಿನಿಸುಗಳಿಂದ ಒದಗಿಸುವುದು ಕ್ಷೇಮವೇ ಹೊರತು ನಾವೇ ಬೆಲ್ಲ/ ಸಕ್ಕರೆ ಸುರಿದು ಮಾಡಿದ ಸಿಹಿತಿಂಡಿಗಳಿಂದ ಅಲ್ಲ. ಇದರರ್ಥ ಸಿಹಿ ತಿನ್ನುವುದನ್ನು ಸಂಪೂರ್ಣ ನಿಲ್ಲಿಸಬೇಕೆಂದಲ್ಲ. ಆದರೆ ತಿನ್ನುವ ಪ್ರಮಾಣದ ಮೇಲೆ ಖಂಡಿತವಾಗಿ ಮಿತಿ ಇರಲೇಬೇಕು.

Continue Reading

ಆರೋಗ್ಯ

Pneumonia Remedy: ನ್ಯುಮೋನಿಯಾಗೆ ಸೂಪರ್‌ಫುಡ್‌ ಯಾವುವೆಂದು ತಿಳಿದಿದೆಯೇ?

ನ್ಯುಮೋನಿಯಾ ಸಂದರ್ಭ ಹಾಗೂ, ಗುಣಮುಖರಾದ ಮೇಲೂ ಯಾವೆಲ್ಲ ಕೆಲವು ಆಹಾರಗಳು ನ್ಯುಮೋನಿಯಾದಿಂದ ಬಹುಬೇಗನೆ ಗುಣಮುಖರಾಗುವಂತೆ (pneumonia remedy) ಮಾಡುತ್ತದೆ ಎಂಬುದನ್ನು ನೋಡೋಣ.

VISTARANEWS.COM


on

Edited by

Pneumonia Remedy
Koo

ಕೆಲವೊಮ್ಮೆ ಕೆಲವರಿಗೆ ಸಾಮಾನ್ಯ ಜ್ವರ ನ್ಯುಮೋನಿಯಾಕ್ಕೆ (pneumonia) ತಿರುಗುವುದುಂಟು. ಸಾಮಾನ್ಯ ಜ್ವರ (viral fever) ಎಂದುಕೊಂಡು ಔಷಧಿಗಳನ್ನು ತೆಗೆದುಕೊಂಡರೂ, ದಿನಗಳೆದಂತೆ, ಕಫ, ಮೂಗು ಕಟ್ಟಿರುವುದು, ಕಡಿಮೆಯಾಗದ ಜ್ವರ, ಜೊತೆಗೆ ಚಳಿ ಎಲ್ಲವೂ ಉಲ್ಬಣಿಸಿ ಇದು ನ್ಯುಮೋನಿಯಾ ಎಂಬ ತೀರ್ಮಾನಕ್ಕೆ ವೈದ್ಯರು ಪರೀಕ್ಷೆಗಳಿಂದ ದೃಢಪಡಿಸುತ್ತಾರೆ. ಶ್ವಾಸಕೋಶದೊಳಗಿನ ಗಾಳಿಚೀಲಗಳಿಗೂ ಇನ್‌ಫೆಕ್ಷನ್‌ (Infection) ಹರಡಿಕೊಂಡು ಎದೆನೋವು ಕೂಡಾ ಕಾಣಿಸಿಕೊಳ್ಳುತ್ತದೆ. ಉಸಿರಾಟಕ್ಕೆ ಕಷ್ಟವಾಗುವುದು, ನಿರ್ಜಲೀಕರಣ (dehydration), ನಿತ್ರಾಣ, ಉಬ್ಬಸದಂತಹ ಸಮಸ್ಯೆ, ಕೆಮ್ಮಿನ ಸಂದರ್ಭ ಹಸಿರು ಮಿಶ್ರಿತ ಹಳದಿ ಬಣ್ಣದ ಕಫ ಹೊರಗೆ ಬರುವುದು, ಕೆಲವೊಮ್ಮೆ ರಕ್ತವೂ ಸೇರಿ ಕಫ ಹೊರಗೆ ಬರುವುದು ಇತ್ಯಾದಿಗಳೆಲ್ಲ ಆಗಿ ನ್ಯುಮೋನಿಯಾ ಬಹಳವಾಗಿ ಕಾಡುತ್ತದೆ. ಹೀಗೆ ನ್ಯುಮೋನಿಯಾ ಜ್ವರದಿಂದ ಬಳಲಿ ವೈದ್ಯರ ಆರೈಕೆಯ ನಂತರ ಗುಣಮುಖರಾದರೂ ಕೂಡಾ, ಬಹಳ ದಿನಗಳವರೆಗೆ ಶಿಸ್ತುಬದ್ಧ ಆಹಾರ ಸೇವನೆ, ಆರೋಗ್ಯದ ಬಗ್ಗೆ ಕಾಳಜಿ ಎಲ್ಲವೂ ಅತ್ಯಂತ ಅಗತ್ಯ. ಇದರ ನಿರ್ಲಕ್ಷ್ಯ ಸಲ್ಲದು. ಅತ್ಯಂತ ಕಾಳಜಿಯುಕ್ತ ಆಹಾರ ಸೇವನೆಯೂ (Food habit) ಅಗತ್ಯ. ಹಾಗಾಗಿ ಬನ್ನಿ, ನ್ಯುಮೋನಿಯಾ ಸಂದರ್ಭ ಹಾಗೂ, ಗುಣಮುಖರಾದ (pneumonia cure) ಮೇಲೂ ಯಾವೆಲ್ಲ ಕೆಲವು ಆಹಾರಗಳು ನ್ಯುಮೋನಿಯಾದಿಂದ ಬಹುಬೇಗನೆ ಗುಣಮುಖರಾಗುವಂತೆ (pneumonia remedy) ಮಾಡುತ್ತದೆ ಎಂಬುದನ್ನು ನೋಡೋಣ.

1. ಜೇನುತುಪ್ಪ: ಜೇನುತುಪ್ಪ ಶ್ವಾಸಕೋಶದ ಸಮಸ್ಯೆಗಳಿಗೆ ಅತ್ಯಂತ ಒಳ್ಳೆಯದು. ಇದು ಕಫ, ಶೀತ, ನೆಗಡಿ ಮತ್ತಿತರ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರ ನೀಡುತ್ತದೆ. ನಿತ್ಯವೂ ಒಂದು ಚಮಚ ಜೇನುತುಪ್ಪ ಸೇವನೆಯಿಂದ ಅಥವಾ ಜೇನುತುಪ್ಪದ ಜೊತೆಗೆ ತುಳಸಿರಸ, ಶುಂಠಿರಸ ಸೇರಿಸಿ ಸೇವಿಸುವುದರಿಂದ ಕಫ ಬಹುಬೇಗನೆ ಕರಗಿ ಶ್ವಾಸಕೋಶಗಳಿಗೆ ಆರಾಮ ದೊರೆಯುತ್ತದೆ.

2. ಅರಿಶಿನ: ನಿತ್ಯವೂ ಭಾರತೀಯರು ಅಡುಗೆಯಲ್ಲಿ ಬಳಸುವ ಮಸಾಲೆಗಳಲ್ಲಿ ಒಂದು. ಇದನ್ನು ನಮ್ಮ ಹಲವು ಸಮಸ್ಯೆಗಳಿಗೂ ನಮಗೆ ಬಳಸಿ ಗೊತ್ತು. ಯಾಕೆಂದರೆ ಇದು ತನ್ನಲ್ಲಿ ಆಂಟಿಸೆಪ್ಟಿಕ್‌ ಗುಣಗಳನ್ನು ಹೊಂದಿರುವ ಮಸಾಲೆ ಪದಾರ್ಥ. ಇದರ ಸೇವನೆಯಿಂದಲೂ ಕೂಡಾ ಇನ್‌ಫೆಕ್ಷನ್‌ ಬಹುಬೇಗನೆ ದೇಹದಿಂದ ವಾಸಿಯಾಗಿ, ಆರೋಗ್ಯ ನಮ್ಮದಾಗುತ್ತದೆ.

3. ಶುಂಠಿ: ಶೀತ, ಕಫ, ನೆಗಡಿಯಂತಹ ಸಮಸ್ಯೆಗಳಿಗೆ ಎಲ್ಲರಿಗೂ ಮೊದಲು ನೆನಪಾಗುವ ಮನೆಮದ್ದು ಎಂದರೆ ಶುಂಠಿ. ಈ ಶುಂಠಿಯೂ ನ್ಯುಮೋನಿಯಾದಂತಹ ಸಮಸ್ಯೆಗೂ ಕೂಡಾ ಅತಯುತ್ತಮ ಕೆಲಸವನ್ನೇ ಮಾಡುತ್ತದೆ. ಜೇನುತುಪ್ಪದ ಜೊತೆ ಶುಂಠಿ ರಸ ಸೇರಿಸಿ ಸೇವನೆ ಮಾಡುವುದು, ಶುಂಠಿ ಸೇರಿಸಿ ಕಷಾಯ ಮಾಡುವುದು ಅಥವಾ ಶುಂಠಿ ಟೀ ಮಾಡಿ ಕುಡಿಯುವುದರಿಂದಲೂ ಸಮಸ್ಯೆಗೆ ಉತ್ತಮ ಫಲ ಸಿಗುತ್ತದೆ.

ಇದನ್ನೂ ಓದಿ: Cashew Health Tips: ಗೋಡಂಬಿ ತಿಂದರೆ ಏನಾಗುತ್ತದೆ?

4. ಸಿಟ್ರಸ್‌ ಹಣ್ಣುಗಳು: ನಿಂಬೆಹಣ್ಣು, ಮುಸಂಬಿ ಹಾಗೂ ಕಿತ್ತಳೆ ಹಣ್ಣುಗಳಲ್ಲಿ ಹೇರಳವಾಗಿ ವಿಟಮಿನ್‌ ಸಿ ಇರುವುದರಿಂದ ಇವು ಕೂಡಾ ಶೀತ, ನೆಗಡಿ, ಕಫದಂತಹ ಸಮಸ್ಯೆಗಳಿಗೆ ನೆರವಾಗಬಲ್ಲುದು. ನ್ಯುಮೋನಿಯಾ ನಂತರಕ್ಕಿಂತ, ಇವನ್ನು ಮೊದಲೇ ನಮ್ಮ ಆಹಾರಗಳಲ್ಲಿ ಸೇವಿಸುವುದರಿಂದ ದೇಹಕ್ಕೆ ಮೊದಲೇ ವಿಟಮಿನ್‌ ಸಿ ಸರಿಯಾಗಿ ಲಭ್ಯವಾಗುವ ಮೂಲಕ ಇಂತಹ ಇನ್‌ಫೆಕ್ಷನ್‌ಗಳಿಂದ ಇವು ನಮ್ಮನ್ನು ದೂರ ಇರಿಸುವಲ್ಲಿ ನೆರವಾಗುತ್ತವೆ. ರೋಗನಿರೋಧಕ ಶಕ್ತಿಯನ್ನು ಇವು ಹೆಚ್ಚಿಸುವ ಮೂಲಕ ಇನ್‌ಫೆಕ್ಷನ್‌ಗಳಿಂದ ನಮ್ಮನ್ನು ದೂರವಿರಿಸುತ್ತವೆ.

5. ಬೀಜಗಳು: ಬಾದಾಮಿ, ಪಿಸ್ತಾ, ವಾಲ್‌ನಟ್‌ನಂತಹ ಬೀಜಗಳನ್ನು ಸೇವನೆ ಮಾಡುವ ಮೂಲಕವೂ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪ್ರೊಟೀನ್‌ ಹಾಗೂ ಪೋಷಕಾಂಶಗಳನ್ನು ನೀಡುತ್ತಾ ರೋಗಗಳಿಂದ ರಕ್ಷಿಸಿಕೊಳ್ಳಬಹುದು.

ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!

Continue Reading

ಆರೋಗ್ಯ

Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!

ʻಮ್ಯಾಜಿಕ್‌ ಡ್ರಿಂಕ್‌ʼ ಎಳನೀರಿನಿಂದ ಲಾಭಗಳಿರುವಷ್ಟೇ, ತೊಂದರೆಗಳೂ ಇವೆ. ಅವು ಯಾವುವು, ಹೇಗೆ, ಅದನ್ನು ತಪ್ಪಿಸುವುದು ಹೇಗೆ (Health tips) ಎಂಬುದನ್ನು ಇಲ್ಲಿ ನೋಡೋಣ.

VISTARANEWS.COM


on

Edited by

drinking tender coconut
Koo

ಕಲ್ಪವೃಕ್ಷದಿಂದ ಬರುವ ಎಳನೀರು (Tender coconut) ಅಮೃತವೆಂದರೆ ತಪ್ಪಿಲ್ಲ ನಿಜ. ನಿಸರ್ಗದತ್ತವಾಗಿ ಲಭ್ಯವಿರುವ ಪೋಷಕಾಂಶಯುಕ್ತ (Nutrient rich) ಪಾನೀಯವಿದು. ನಮ್ಮ ದಾಹ ತಣಿಸುವ ಅಷ್ಟೇ ಅಲ್ಲದೆ, ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಖನಿಜ ಲವಣಗಳನ್ನು ಪೂರೈಸುವ ಈ ಪಾನೀಯ ನಿಜಕ್ಕೂ ನೈಸರ್ಗಿಕ ಅದ್ಭುತಗಳಲ್ಲಿ ಒಂದು. ಇದರಲ್ಲಿ, ರೋಗನಿರೋಧಕ ಶಕ್ತಿ (Immunity power) ನಮ್ಮನ್ನು ಹಲವು ರೋಗಗಳಿಂದ ರಕ್ಷಿಸುವುದಲ್ಲದೆ, ದೇಹಕ್ಕೆ ದಿಢೀರ್‌ ಶಕ್ತಿಯನ್ನೂ ಚೈತನ್ಯವನ್ನೂ ನೀಡುತ್ತದೆ. ಇಂತಹ ಎಳನೀರು ಅಮೃತವೆಂದು ಸಿಕ್ಕಾಪಟ್ಟೆ ಕುಡಿದರಾದೀತೇ ಹೇಳಿ? ಅಮೃತ ವಿಷವಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗಾದರೆ, ಬನ್ನಿ, ಈ ʻಮ್ಯಾಜಿಕ್‌ ಡ್ರಿಂಕ್‌ʼ ಎಳನೀರಿನಿಂದ ಲಾಭಗಳಿರುವಷ್ಟೇ, ತೊಂದರೆಗಳೂ ಇವೆ. ಅವು ಯಾವುವು, ಹೇಗೆ, ಅದನ್ನು ತಪ್ಪಿಸುವುದು ಹೇಗೆ (Health tips) ಎಂಬುದನ್ನು ಇಲ್ಲಿ ನೋಡೋಣ.

1. ಅತಿಯಾಗಿ ಎಳನೀರು ಕುಡಿಯುವುದರಿಂದ ನಮ್ಮ ಜೀರ್ಣಾಂಗವ್ಯೂಹಕ್ಕೆ ತೊಂದರೆಯಾಗುತ್ತದೆ. ಇದರಲ್ಲಿ ಲಾಕ್ಸೇಟಿವ್‌ ಗುಣಗಳೂ ಇರುವುದರಿಂದ ಅತಿಯಾಗಿ ಕುಡಿದ ತಕ್ಷಣ ಅಜೀರ್ಣವಾಗಿ ಭೇದಿ ಶುರುವಾಗಬಹುದು. ಅಷ್ಟೇ ಅಲ್ಲ, ದೇಹ ಅತಿಯಾಗಿ ತಂಪಾಗಿ ಮೊದಲೇ ಶೀತಪ್ರಕೃತಿಯ ದೇಹವಿರುವ ಮಂದಿಗಂತೂ ಇದು ಥಂಡಿಗೆ ತಿರುಗಬಹುದು. ಹೀಗಾಗಿ ಎಳನೀರು ಅತಿಯಾಗದಂತೆಯೂ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ.

2. ಅಥ್ಲೀಟ್‌ಗಳಿಗೂ ಎಳನೀರು ಒಳ್ಳೆಯದಲ್ಲ. ನೀರಿಗೆ ಬದಲಾಗಿ ಎಳನೀರು ಕುಡಿದು ಆಟೋಟಗಳ ಅಭ್ಯಾಸ ಒಳ್ಳೆಯದಲ್ಲ. ಅದರ ಬದಲು ಅವರಿಗೆ ಖಾಲಿ ನೀರೇ ಒಳ್ಳೆಯದು. ಇದು ನೈಸರ್ಗಿಕವಾಗಿ ಸಿಗುವ ಎಲೆಕ್ಟ್ರೋಲೈಟ್‌ ಆಗಿದ್ದರೂ, ಇದರಲ್ಲಿ ಸಾಕಷ್ಟು ಖನಿಜ ಲವಣಗಳಿದ್ದರೂ ಇದು ಯುವ ಅಥ್ಲೀಟ್‌ಗಳಿಗೆ ಯಾವಾಗಲೂ ಒಳ್ಳೆಯದಲ್ಲ. ಅತಿಯಾದ ವರ್ಕೌಟ್‌ ಹಾಗೂ ನಿರಂತರ ತರಬೇತಿಗಳಿದ್ದ ಸಂದರ್ಭ ಶಕ್ತಿಗಾಗಿ ಇವನ್ನು ಕುಡಿಯಬಹುದೇ ಹೊರತು, ಸಾಮಾನ್ಯ ನಿತ್ಯದ ತರಬೇತಿಗಳಿಗೆ ನಿತ್ಯವೂ ಎಳನೀರಿನ ಅಗತ್ಯವಿಲ್ಲ. ಅದರ ಬದಲಾಗಿ ನೀರನ್ನೇ ಕುಡಿಯುವುದು ಅತ್ಯುತ್ತಮ ಎನ್ನುತ್ತಾರೆ ತಜ್ಞರು.

3. ಎಳನೀರಿನ ಇನ್ನೊಂದು ಸಮಸ್ಯೆ ಎಂದರೆ, ಇದನ್ನು ಕುಡಿದರೆ, ಆಗಾಗ ವಾಶ್‌ರೂಂ ಹೋಗಬೇಕಾಗುತ್ತದೆ ಎಂಬುದು. ಇದರ ಡೈಯೂರೆಟಿಕ್‌ ಗುಣಗಳಿಂದಾಗಿ ಇದು ಸಾಮಾನ್ಯ ನೀರಿಗಿಂತ ಆಗಾಗ ಮೂತ್ರವಿಸರ್ಜನೆಯನ್ನು ಪ್ರೇರೇಪಿಸುತ್ತದೆ.

4. ಇದು ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದು ನಿಜವೇ ಆದರೂ, ಇದರಲ್ಲಿ ಹೇರಳವಾಗಿ ನೈಸರ್ಗಿಕ ಸಕ್ಕರೆಯ ಅಂಶವೂ ಇದೆ. ಹಣ್ಣುಗಳಿಗೆ ಹೋಲಿಸಿದರೆ, ಇದರಲ್ಲಿರುವ ಸಕ್ಕರೆಯ ಅಂಶ ಕಡಿಮೆಯಾದರೂ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾರ್ಬೋಹೈಡ್ರೇಟುಗಳೂ ಇವೆ. ಹಾಗಾಗಿ ಇದು ಸಹಜವಾಗಿಯೇ ಹೆಚ್ಚು ಕ್ಯಾಲರಿಯ ಪೇಯ. ಒಂದು ಕಪ್‌ ಎಳನೀರಿನಲ್ಲಿ ಸುಮಾರು 60 ಕ್ಯಾಲರಿಗಳಿರುವುದರಿಂದ ಹಾಗೂ ಇದರಲ್ಲಿ ಹೇರಳವಾಗಿ ಪೊಟಾಶಿಯಂ ಹಾಗೂ ಸೋಡಿಯಂ ಕೂಡಾ ಇರುವುದರಿಂದ, ಕ್ಯಾಲರಿಯ ಆಧಾರದಲ್ಲಿ ಆಹಾರ ತೆಗೆದುಕೊಳ್ಳುವ ಮಂದಿಗೆ ಇದು ವರವಾಗಲಾರದು. ಹಾಗೆ ಯೋಚಿಸುವ ಮಂದಿಗೆ ದಾಹ ಇಳಿಸಲು ನೀರೇ ಸೂಕ್ತ.

ಆದರೆ, ಇದರಲ್ಲಿರುವ ಪೋಷಕಾಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಇದು ಅಮೃತ ಎಂಬುದರಲ್ಲಿ ಅನುಮಾಣವಿಲ್ಲ. ಹಾಗಾಗಿ ನಿತ್ಯವೂ ಅಲ್ಲದಿದ್ದರೂ, ಆಗಾಗ ಹಿತಮಿತವಾಗಿ ಎಳನೀರಿನ ಸೇವನೆ ಮಾಡುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು. ಆದರೆ, ಪೊಟಾಶಿಯಂ ಹಾಗೂ ಸೋಡಿಯಂ ಏರಿಳಿತದ ಸಮಸ್ಯೆಯಿರುವ ಮಂದಿ ಎಳನೀರು ಕುಡಿಯುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಇದನ್ನೂ ಓದಿ: Health Tips: ಚಹಾದ ಜೊತೆಗೆ ಈ ಬಗೆಯ ಆಹಾರಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಗೊತ್ತೇ?!

Continue Reading

ಆರೋಗ್ಯ

World Alzheimer’s Day 2023 : ಮರೆವಿನ ಸಮಸ್ಯೆ ಕಾಡುವ ಮುನ್ನ ಈ ಸಂಗತಿಯನ್ನು ಮರೆಯಬೇಡಿ!

ಅಲ್‌ಜೈಮರ್ಸ್‌ ರೋಗ (World Alzheimer’s Day 2023) ಬಂದರೆ ಹಾಗಂತೆ, ಹೀಗಂತೆ ಎಂಬಂಥವು ಬಹಳಷ್ಟು ಹರಿದಾಡುತ್ತವೆ. ಸರಿಯಾದ ಅರಿವು ಮಾತ್ರವೇ ನಮ್ಮ ಇರವನ್ನು ಕಾಪಾಡಬಲ್ಲದು. ಮರೆಯುವುದು ಮಾಮೂಲು ಎಂದು ಕಡೆಗಣಿಸಬೇಡಿ. ನಮ್ಮ ಅಸ್ಮಿತೆಯ ಅರಿವನ್ನೇ ಅಳಿಸಿಹಾಕುವ ಈ ರೋಗವನ್ನು ಪ್ರಾರಂಭದಲ್ಲೇ ಗುರುತಿಸಿದರೆ ಚಿಕಿತ್ಸೆಗಳು ಲಭ್ಯ ಇವೆ.

VISTARANEWS.COM


on

Alzheimer's
Koo

ಇಂದು ವಿಶ್ವ ಅಲ್‌ಜೈಮರ್ಸ್‌ ದಿನ (World Alzheimer’s Day 2023). ಜಗತ್ತಿನಲ್ಲಿ ಕೋಟಿಗಟ್ಟಲೆ ಜನರನ್ನು ಬಲಿ ತೆಗೆದುಕೊಂಡು, ವರ್ಷಂಪ್ರತಿ ಇನ್ನೂ ಹೆಚ್ಚಿನ ಜನರನ್ನು ತನ್ನ ತೆಕ್ಕೆಗೆ ಬೀಳಿಸಿಕೊಳ್ಳುತ್ತಿರುವ ಈ ರೋಗದ ಕುರಿತಾದ ಅರಿವು ಮಾತ್ರವೇ ನಮ್ಮನ್ನು ಕಾಪಾಡಬಲ್ಲದು. ಅದರಲ್ಲೂ ಕೋವಿಡ್‌ ಮಹಾಮಾರಿಯ ಕೃಪೆಯಿಂದಾಗಿ, ಒಂಟಿತನ, ಖಿನ್ನತೆಗಳು ಕಳೆದ ಮೂರು ವರ್ಷಗಳಲ್ಲಿ ಇನ್ನೂ ಹೆಚ್ಚಿನ ಜನರನ್ನು, ಮತ್ತಷ್ಟು ವೇಗವಾಗಿ ಈ ರೋಗದತ್ತ ತಳ್ಳುತ್ತಿವೆ. ನಮ್ಮ ಆಪ್ತರಿಗೇ ಈ ಸಮಸ್ಯೆ ಇದ್ದರೂ ಗುರುತಿಸುವುದು ತಡವಾದರೆ, ರೋಗ ಉಲ್ಬಣಿಸುವುದನ್ನು ತಡೆಯಲು ದಾರಿ ಕಾಣದಾಗುತ್ತದೆ. ಹೌದು, ಚಿಕಿತ್ಸೆ ಇಲ್ಲದ ಈ ಮರೆವಿನ ರೋಗ ಮುಂದುವರಿಯುವುದನ್ನು ನಿಧಾನ ಮಾಡುವಷ್ಟು ಅನುಕೂಲ ನಮ್ಮ ವೈದ್ಯ ವಿಜ್ಞಾನಕ್ಕಿದೆ. ಹಾಗಾಗಿ ಈ ರೋಗದ ಸುತ್ತ ಹರಿಡಿರುವ ಹಲವು ಮಿಥ್ಯೆಗಳನ್ನು ಒಡೆಯಬೇಕಿದೆ.

ವಯಸ್ಸಾದವರಿಗಷ್ಟೇ ಈ ರೋಗ ಬರುತ್ತದೆ

ವಯಸ್ಸಾದವರಲ್ಲಿ ಮರೆವು ಹೊಸದಲ್ಲ, ನಿಜ. ಹಾಗೆಂದು ಭವವನ್ನೇ ಮರೆಯುವಂಥ ಸ್ಥಿತಿ ಬರಬಾರದಲ್ಲ. ವಯಸ್ಸಾದ ಮೇಲೆ ಈ ರೋಗದ ಚಿಹ್ನೆಗಳು ಹೆಚ್ಚಾಗಿ ಗೋಚರಿಸಬಹುದು. ಆದರೆ ಪ್ರಾರಂಭ 60 ವರ್ಷದೊಳಗೇ ಆಗಿರುವ ಸಾಧ್ಯತೆ ಇರುತ್ತದೆ. ಡೌನ್ಸ್‌ ಸಿಂಡ್ರೋಮ್‌ ಇರುವವರಲ್ಲಿ ೪೦ ವರ್ಷಕ್ಕೆ ಅಲ್‌ಜೈಮರ್ಸ್‌ ಪ್ರಾರಂಭವಾದ ಉದಾಹರಣೆಗಳಿವೆ.

ಅಲ್‌ಜೈಮರ್ಸ್‌, ಡಿಮೆನ್ಶಿಯಾ- ಎರಡೂ ಒಂದೇ ಅಲ್ಲ!:

ಹಲವು ರೀತಿಯ ಡಿಮೆನ್ಶಿಯಾಗಳಲ್ಲಿ ಅಲ್‌ಜೈಮರ್ಸ್‌ ಸಹ ಒಂದು. ಆದರೆ ಡಿಮೆನ್ಶಿಯಾ ಪ್ರಕರಣಗಳಲ್ಲಿ ಮುಕ್ಕಾಲುಪಾಲು ಪ್ರಕರಣಗಳು ಅಲ್‌ಜೈಮರ್ಸ್‌ ಆಗಿದ್ದು, ಮೊದಲಿಗೆ ಅಷ್ಟಾಗಿ ಕೇಳದ ಭಾರತದಲ್ಲಿಯೂ ಈ ರೋಗ ಸಿಕ್ಕಾಪಟ್ಟೆ ಹೆಚ್ಚುತ್ತಿದೆ.

ಈ ರೋಗ ಹೆತ್ತವರಿಗಿದ್ದರೆ ಮಕ್ಕಳಿಗೂ ಬರತ್ತದೆಯೆ?

ಹಾಗೇನಿಲ್ಲ. ತಂದೆ-ತಾಯಿಯರಲ್ಲಿ ಯಾರಿಗಾದರೂ ಇದ್ದರೆ ಮಕ್ಕಳಿಗೆ ಬಂದೇ ಬರುತ್ತದೆ ಎನ್ನುವುದಕ್ಕೆ ಸಾಕಷ್ಟು ಆಧಾರಗಳಿಲ್ಲ. ಹಾಗಂತ ಬರುವುದಿಲ್ಲ ಎನ್ನಲೂ ಸಾಧ್ಯವಿಲ್ಲ. ವಂಶವಾಹಿಗಳಿಗಿಂತ ಮುಖ್ಯವಾಗಿ ಜೀವನಶೈಲಿ ಮತ್ತು ಪಾರಿಸಾರಿಕ ವಿಷಯಗಳು ರೋಗಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದು ಸಾಬೀತಾಗಿದೆ. ಹಾಗಾಗಿ ಉತ್ತಮ ಆಹಾರ, ಜೀವನಶೈಲಿ, ಒಳ್ಳೆಯ ಸಾಮಾಜಿಕ ಸಂಬಂಧಗಳು ವ್ಯಕ್ತಿಗಳ ಮಾನಸಿಕ ಆರೋಗ್ಯವನ್ನು ಗಾಢವಾಗಿ ಪ್ರಭಾವಿಸುತ್ತವೆ

ಈ ರೋಗಕ್ಕೆ ಚಿಕಿತ್ಸೆಯೇ ಇಲ್ಲ

ಒಮ್ಮೆ ಪ್ರಾರಂಭವಾದ ಮೇಲೆ ಈ ರೋಗ ಗುಣವಾಗುವುದಿಲ್ಲ ಎನ್ನುವುದು ನಿಜ. ಆದರೆ ಮೊದಲಿಗಿಂತ ಬಹಳ ಮುಂದುವರಿದ ಪ್ರಮಾಣದಲ್ಲಿ ಚಿಕಿತ್ಸೆಗಳು ಲಭ್ಯವಿವೆ. ರೋಗ ಮುಂದುವರಿಯುವುದನ್ನು ನಿಧಾನ ಮಾಡುವ ಚಿಕಿತ್ಸೆಗಳು ಪ್ರಚಲಿತದಲ್ಲಿವೆ. ಉಳಿದಂತೆ, ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗಿಗಳ ಮತ್ತು ಅವರ ಆಪ್ತರ ಬದುಕುಗಳನ್ನು ಸಹನೀಯವಾಗಿಸಲು ಖಂಡಿತಾ ಸಾಧ್ಯವಿದೆ.

ಇತ್ತೀಚೆಗೆ ತುಂಬಾ ಮರೆವು, ನನಗೂ…?

ಮರೆಯುವವರಿಗೆಲ್ಲಾ ಈ ರೋಗವಿದೆ ಎನ್ನಲು ಸಾಧ್ಯವಿಲ್ಲ. ಮರೆವು ಸಾಮಾನ್ಯ ಸಂಗತಿ. ವಯಸ್ಸಾದವರಲ್ಲಿ ಇದು ಇನ್ನೂ ಮಾಮೂಲು. ಆದರೆ ಈ ಮರೆವಿನಿಂದ ಬದುಕು ಲಯ ತಪ್ಪುತ್ತಿದೆ ಎಂಬ ಭಾವ ಒಂದೆಳೆಯಷ್ಟು ಬಂದರೂ ವೈದ್ಯರನ್ನು ಭೇಟಿ ಮಾಡಿ. ಪ್ರಾರಂಭದಲ್ಲೇ ಈ ರೋಗವನ್ನು ಪತ್ತೆ ಹಚ್ಚುವುದು ಅಗತ್ಯ

ಅಲ್‌ಜೈಮರ್ಸ್‌ ಬಾರದಂತೆ ತಡೆಯಬಹುದು

ಇದನ್ನೂ ಓದಿ : Health Care | ತಾವರೆ ಬೀಜ ಅಥವಾ ಮಖನಾ ತಿನ್ನಲು ರುಚಿ ಮಾತ್ರವೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು

ಇದಕ್ಕೆ ಖಚಿತ ಪುರಾವೆಗಳಿಲ್ಲ. ಆದರೆ ಬದುಕಿನಲ್ಲಿನ ಕೆಲವು ಧನಾತ್ಮಕ ಬದಲಾವಣೆಗಳಿಂದ ನರಗಳು ಕ್ಷಯಿಸುತ್ತಾ ಹೋಗುವ ಈ ರೋಗ ಬರುವ ಸಾಧ್ಯತೆಗಳನ್ನು ಖಂಡಿತಾ ಕಡಿಮೆ ಮಾಡಬಹುದು. ಆರೋಗ್ಯಪೂರ್ಣ ಆಹಾರಕ್ರಮ ಮತ್ತು ಕ್ರಿಯಾಶೀಲವಾದ ಬದುಕನ್ನು ಅಪ್ಪಿಕೊಳ್ಳುವತ್ತ ಮುಖಮಾಡಿ. ಚಟಗಳನ್ನು ದೂರ ಮಾಡಿ, ಮಧುಮೇಹ, ಬಿಪಿ, ಕೊಲೆಸ್ಟ್ರಾಲ್‌ ಸಮಸ್ಯೆಗಳಿದ್ದರೆ ನಿಯಂತ್ರಣದಲ್ಲಿ ಇರಿಸಿ. ತೂಕ ಮಿತಿಯಲ್ಲಿರಲಿ. ಸಾಮಾಜಿಕ ಸಂಪರ್ಕಗಳನ್ನು ವೃದ್ಧಿಸಿಕೊಳ್ಳಿ. ಮೆದುಳಿಗೆ ರಚನಾತ್ಮಕ ಕೆಲಸ ಕೊಡಿ. ವಯಸ್ಸು ಎಷ್ಟಾದರೂ ಹೊಸದನ್ನು ಕಲಿಯಲು ಬೇಸರಿಸಬೇಡಿ. ಮನಸ್ಸು ಭಾರ ಮಾಡಿಕೊಳ್ಳದೆ ಮುಕ್ತವಾಗಿರಿ.

Continue Reading
Advertisement
Ruturaj Gaikwad
ಕ್ರಿಕೆಟ್25 mins ago

ind vs aus : ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಜಯ, ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 1-0 ಮುನ್ನಡೆ

Cat eyed snake
ಕರ್ನಾಟಕ40 mins ago

Cat Eyed Snake : ಬೆಕ್ಕಿನ ಕಣ್ಣಿನ ಸುಂದರಿಯರನ್ನು ನೋಡೇ ಇರ್ತೀರಿ, ಬೆಕ್ಕಿನ ಕಣ್ಣಿನ ಹಾವು ನೋಡಿದ್ದೀರಾ?

Dakshin Bharat Utsav
ಕರ್ನಾಟಕ42 mins ago

Dakshin Bharat Utsav: ಪ್ರವಾಸೋದ್ಯಮ ಉತ್ತೇಜಿಸಲು ಖಾಸಗಿ ವಲಯಕ್ಕೆ 550 ಸ್ಮಾರಕ ದತ್ತು: ಸಚಿವ ಎಚ್‌.ಕೆ. ಪಾಟೀಲ್

savings
ದೇಶ49 mins ago

Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!

Mohammed Shami
ಕ್ರಿಕೆಟ್1 hour ago

Mohammed Shami : ಬೌಲಿಂಗ್​ನಲ್ಲಿ ಹೊಸ ಮಿಂಚು ಸೃಷ್ಟಿಸಿದ ಮೊಹಮ್ಮದ್ ಶಮಿ; ಏನಿದು ಸಾಧನೆ

Vijayanagara DC Diwakar MS Visit and inspection of hospital in Hagaribommanahalli
ವಿಜಯನಗರ1 hour ago

Vijayanagara News: ಹಗರಿಬೊಮ್ಮನಹಳ್ಳಿಯ ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ಡಿಸಿ ದಿವಾಕರ್‌ ದಿಢೀರ್‌ ಭೇಟಿ

Neegilu Kavya Abhiyan programme at gubbi
ತುಮಕೂರು1 hour ago

Tumkur News: ಗುಬ್ಬಿಯಲ್ಲಿ ನೇಗಿಲು ಕಾವ್ಯ ಅಭಿಯಾನಕ್ಕೆ ಸಾಹಿತಿ ಸಂತೋಷ್ ಮಡೆನೂರು ಚಾಲನೆ

T20 wordl cup venue
ಕ್ರಿಕೆಟ್1 hour ago

T20 World Cup : 2024 ಟಿ20 ವಿಶ್ವ ಕಪ್​ ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತವೆ ಎಂಬ ಮಾಹಿತಿ ಇಲ್ಲಿದೆ

sugar factory representatives and sugarcane growers meeting at DC office Karwar
ಉತ್ತರ ಕನ್ನಡ1 hour ago

Uttara Kannada News: ಕಬ್ಬು ಬೆಳೆಗಾರರಿಗೆ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿ: ಡಿಸಿ ಗಂಗೂಬಾಯಿ ಮಾನಕರ್

Vishwa Hindu Mahasabha Ganapati Utsav Committee Honorary President Sanjiva Achar spoke at the pressmeet
ಶಿವಮೊಗ್ಗ2 hours ago

Shivamogga News: ವಿಶ್ವ ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿಯಿಂದ ಸೆ.23ರಿಂದ ಸೊರಬದಲ್ಲಿ ಕಾರ್ಯಕ್ರಮ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ3 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ7 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ2 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ನಂಬಿದ ವ್ಯಕ್ತಿಗಳು ಮೋಸ ಮಾಡ್ತಾರೆ ಹುಷಾರ್‌!

dina bhavishya
ಪ್ರಮುಖ ಸುದ್ದಿ5 days ago

Dina Bhavishya : ಆಪ್ತರೊಂದಿಗೆ ಜಗಳವಾದೀತು ಹುಷಾರ್‌!

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಈ ರಾಶಿಯವರು ಇಂದು ಮುಟ್ಟಿದ್ದೆಲ್ಲಾ ಚಿನ್ನ!

Ramalinga Reddy
ಕರ್ನಾಟಕ6 days ago

ಇನ್ಮುಂದೆ ಹೇಗಂದ್ರೆ ಹಾಗೆ ದೇವಸ್ಥಾನ ಕಟ್ಟೋ ಹಾಗಿಲ್ಲ! ರಾಮಲಿಂಗಾ ರೆಡ್ಡಿ ಮಾಸ್ಟರ್ ಪ್ಲಾನ್

Bannerghatta Park
ಆರೋಗ್ಯ6 days ago

Nipah Virus : ನಿಫಾ ವೈರಸ್‌ ಭೀತಿ; ಬನ್ನೇರುಘಟ್ಟ ಪಾರ್ಕ್‌ನಲ್ಲಿ ಹೈ ಅಲರ್ಟ್

Villagers exclude menstruating women
ಕರ್ನಾಟಕ6 days ago

Tumkur News : ಮುಟ್ಟಾದ ಮಹಿಳೆಯರನ್ನು ಗ್ರಾಮದಿಂದ ಹೊರಗಿಟ್ಟು ಮೌಡ್ಯಾಚರಣೆ!

dina bhavishya
ಪ್ರಮುಖ ಸುದ್ದಿ7 days ago

Dina Bhavishya : ಈ ದಿನ ಭೂಮಿ, ಆಸ್ತಿ ಖರೀದಿಸುವ ಮುನ್ನ ಎಚ್ಚರ!

Kadri temple is the target for Shariq NIA reveals
ಕರ್ನಾಟಕ1 week ago

ಮಂಗಳೂರು ಸ್ಫೋಟ : ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್; ರಿವೀಲ್ ಮಾಡಿದ ಎನ್ಐಎ

Dina bhavishya
ಪ್ರಮುಖ ಸುದ್ದಿ1 week ago

Dina Bhavishya : ಈ ರಾಶಿಯವರು ಹೂಡಿಕೆ ಮಾಡಿದರೆ ನಷ್ಟ ಗ್ಯಾರಂಟಿ!

ಟ್ರೆಂಡಿಂಗ್‌