1. G20 Summit 2023: ಅದ್ಧೂರಿ ಜಿ 20 ಶೃಂಗಸಭೆ ಮುಕ್ತಾಯ; ವಿಶ್ವ ನಾಯಕರಿಗೆ ಮೋದಿ ಧನ್ಯವಾದ, ಭಾರತಕ್ಕೆ ಜಗತ್ತು ಮೆಚ್ಚುಗೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ದಿನ ಅದ್ಧೂರಿಯಾಗಿ ನಡೆದ ಜಿ 20 ಶೃಂಗಸಭೆಯು (G20 Summit 2023) ಭಾನುವಾರ (ಸೆಪ್ಟೆಂಬರ್ 10) ಮುಕ್ತಾಯಗೊಂಡಿದೆ. ಬ್ರೆಜಿಲ್‌ಗೆ ಜಿ 20 ಅಧ್ಯಕ್ಷತೆಯನ್ನು ಹಸ್ತಾಂತರಿಸಿದ ಪ್ರಧಾನಿ ನರೇಂದ್ರ ಮೋದಿ ಸಮಾರೋಪ ಭಾಷಣ ಮಾಡಿದರು. “ಭಾರತವು ನವೆಂಬರ್‌ವರೆಗೆ ಜಿ 20 ಶೃಂಗಸಭೆಯ ಅಧ್ಯಕ್ಷತೆಯನ್ನು ಹೊಂದಿರುತ್ತದೆ. ನವೆಂಬರ್ ಕೊನೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ಆಯೋಜಿಸಲಾಗುತ್ತದೆ. ಭಾರತದಲ್ಲಿ ಜಿ 20 ಆಯೋಜಿಸಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : 2023: ಜಿ 20 ಶೃಂಗಸಭೆಯ 2 ದಿನದಲ್ಲಿ ಏನೇನಾಯ್ತು? ಪ್ರಮುಖ ತೀರ್ಮಾನಗಳು ಇಲ್ಲಿವೆ
ಇದನ್ನೂ ಓದಿ : ಮೋದಿ ಆಹ್ವಾನದಿಂದ ಸಮಾರೋಪದವರೆಗೆ; ಜಿ20 ಮೋಡಿ, ಚಿತ್ರಗಳಲ್ಲಿ ನೋಡಿ
ಜಿ 20 ಶೃಂಗ ಸಭೆಯ ಸಮಗ್ರ ಮಾಹಿತಿಗಾಗಿ ಕ್ಲಿಕ್ ಮಾಡಿ
2. ನಾಳೆ ರಸ್ತೆಗಿಳಿಯಲ್ಲ ಸ್ಕೂಲ್ ಬಸ್, ವ್ಯಾನ್; ಮಕ್ಕಳಿಗೆ ಶಾಲೆ ಇದ್ಯಾ? ಇಲ್ವಾ?
ಬೆಂಗಳೂರು: ಪೋಷಕರೇ ನೀವೇನಾದರೂ ಸೋಮವಾರ (ಸೆ.11) ಬೆಳಗ್ಗೆ ಮನೆ ಮುಂದೆ ಸ್ಕೂಲ್ ವ್ಯಾನ್, ಬಸ್, ಆಟೋ, ಕಾರು ಬರುತ್ತೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ ಎಂದುಕೊಂಡರೆ ತೊಂದರೆ ಗ್ಯಾರಂಟಿ. ಯಾಕೆಂದರೆ ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟ ಸಮರಕ್ಕೆ ಮುಂದಾಗಿದ್ದು, ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಎಚ್.ಡಿ. ಕುಮಾರಸ್ವಾಮಿಗೆ ಬಿಜೆಪಿ ಸೇರಿ ಸಿಎಂ ಆಗಲು ಮೋದಿ ಆಫರ್ ಕೊಟ್ಟಿದ್ದರು: ಎಚ್.ಡಿ. ದೇವೇಗೌಡ
ಬೆಂಗಳೂರು: ನನ್ನ ಮಗ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಇರುವವರೆಗೂ ಮುಖ್ಯಮಂತ್ರಿ ಮಾಡುತ್ತೇನೆ. ಇಂದೇ ರಾಜೀನಾಮೆ ಕೊಟ್ಟು ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ (PM Nanrenda Modi) ಅವರು ಆಫರ್ ಕೊಟ್ಟಿದ್ದರು. ಇಂದು ರಾಜೀನಾಮೆ ಕೊಟ್ಟು ಬಂದರೆ ನಾಳೆಯೇ ಸಿಎಂ ಮಾಡುತ್ತೇನೆ ಎಂದು ಹೇಳಿದ್ದರು. ಈ ವಿಷಯವನ್ನು ನಾನು ಇಂದು ಬಹಿರಂಗವಾಗಿ ಹೇಳುತ್ತಿದ್ದೇನೆ. ಆದರೆ, ಕುಮಾರಸ್ವಾಮಿ ಇದನ್ನು ನಿರಾಕರಿಸಿ ಬಂದರು. ಮತ್ತೆ ತಂದೆಯವರಿಗೆ ನೋವು ಕೊಡುವುದಿಲ್ಲ ಎಂದು ತಿರಸ್ಕರಿಸಿ ಬಂದಿದ್ದರು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister HD Deve Gowda) ಮಾಹಿತಿ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಬಿಜೆಪಿ-ಜೆಡಿಎಸ್ ಮೈತ್ರಿ ನಿಜ; ಸೀಟು ಹಂಚಿಕೆಯನ್ನು ಮೋದಿ-ಎಚ್‌ಡಿಕೆ ಡಿಸೈಡ್ ಮಾಡ್ತಾರೆ: ಎಚ್.ಡಿ. ದೇವೇಗೌಡ
4. ನಾನು ಸಂಘ ಪರಿವಾರಕ್ಕೆ ಸೇರದೇ ಇದ್ದಿದ್ದರೆ ಬೀಡಿ ಸೇದಿಕೊಂಡು ಎಲ್ಲೋ ಇರುತ್ತಿದ್ದೆ: ಈಶ್ವರಪ್ಪ
ಬೆಂಗಳೂರು: ಬಿಜೆಪಿ ಎಂಬುದು ಶಿಸ್ತಿನ (BJP disciplined party) ಪಕ್ಷವಾಗಿದೆ. ಬೂತ್ ಮಟ್ಟದ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸಿ ಐದು ಬಾರಿ ಗೆಲ್ಲಿಸಿ ಅನೇಕ ಇಲಾಖೆಯಲ್ಲಿ ಸಚಿವ ಸ್ಥಾನದ ಜವಾಬ್ದಾರಿಯನ್ನು ನೀಡಿದೆ. ಅಲ್ಲದೆ, ಉಪ ಮುಖ್ಯಮಂತ್ರಿ ಮಾಡಿದೆ. ಈಗ ಸಂಘಟನೆಯ ಕೆಲಸವನ್ನು ನೀನು ಮಾಡಬೇಕು ಎಂದು ಪಕ್ಷ ಸೂಚನೆ ನೀಡಿದೆ. ಹೀಗಾಗಿ ನಾನು ಹಿರಿಯರ ಆದೇಶವನ್ನು ಪಾಲನೆ ಮಾಡಿದ್ದೇನೆ. ನನ್ನ ಅಪ್ಪ ಅಡಿಕೆ ಮಂಡಿಯಲ್ಲಿ ಗುಮಾಸ್ತರು, ಅಮ್ಮ ಅಲ್ಲಿ ಅಡಿಕೆ ಆರಿಸುತ್ತಿದ್ದ ಕೂಲಿ ಹೆಣ್ಣು ಮಗಳಾಗಿದ್ದಾಳೆ. ಆದರೆ, ನಾನು ಸಂಘ ಪರಿವಾರಕ್ಕೆ ಸೇರಿರಲಿಲ್ಲವಾಗಿದ್ದರೆ ಎಲ್ಲಿಯೋ ಬೀಡಿ ಸೇದಿಕೊಂಡು ಇರುತ್ತಿದ್ದೆನೇನೋ ಎಂದು ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ತಾವು ಬೆಳೆದು ಬಂದ ಹಾದಿಯನ್ನು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ವಿವರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ವಿಶ್ವ ಕಪ್ ವೇಳಾಪಟ್ಟಿಯಲ್ಲಿ ಮತ್ತೆ ಗೊಂದಲ, ಪಾಕಿಸ್ತಾನದ ಪಂದ್ಯ ಮತ್ತೆ ಮುಂದೂಡಿಕೆ
ಹೈದರಾಬಾದ್: 2023ರ ಏಕದಿನ ವಿಶ್ವಕಪ್ (World Cup 2023) ವೇಳಾಪಟ್ಟಿ ಗೊಂದಲದಿಂದಾಗಿ ಬಿಸಿಸಿಐ (BCCI) ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. 2023ರ ಏಕದಿನ ವಿಶ್ವಕಪ್ ಪಂದ್ಯಗಳ ದಿನಾಂಕವನ್ನು ಬದಲಾಯಿಸುವಂತೆ ಮತ್ತೊಂದು ರಾಜ್ಯ ಅಸೋಸಿಯೇಷನ್ ಭಾರತೀಯ ಕ್ರಿಕೆಟ್ ಮಂಡಳಿಯನ್ನು (BCCI) ಕೇಳಿದೆ. ಹೀಗಾಗಿ ಅನಿವಾರ್ಯವಾಗಿ ಮತ್ತೊಂದು ಪಂದ್ಯದ ದಿನಾಂಕವನ್ನು ಬದಲಿಸುವ ಅನಿವಾರ್ಯತೆಗೆ ಬಿಸಿಸಿಐಗೆ ಒಳಗಾಗಿದೆ. ಇದೆಲ್ಲ ಕಾರಣದಿಂದಾಗಿ ಕ್ರಿಕೆಟ್ ಪ್ರೇಮಿಗಳು ಹಾಗೂ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಸಿದ್ದರಾಮಯ್ಯ ವಿರುದ್ಧ ಅಹಿಂದ ಪಾಲಿಟಿಕ್ಸ್; ಸೆಡ್ಡು ಹೊಡೆದ ಬಿ.ಕೆ. ಹರಿಪ್ರಸಾದ್!
7. ಸೆ.11ಕ್ಕೆ ಕರಾವಳಿಯಲ್ಲಿ ಅಬ್ಬರಿಸುವ ಮಳೆ; ಮೀನುಗಾರಿಕೆಗೆ ಬ್ರೇಕ್
8. ಕೆವೈಸಿ ಸರಿಯಾಗದೆ ಬ್ಯಾಂಕ್ ಖಾತೆ ನಿಷ್ಕ್ರಿಯವಾದರೆ ಸಕ್ರಿಯಗೊಳಿಸೋದು ಹೇಗೆ?
9. ವಿಭಿನ್ನ ಅವತಾರದಲ್ಲಿ ಬರಲಿದ್ದಾರೆ ರಮೇಶ್ ಅರವಿಂದ್; ಸೆಟ್ಟೇರಲಿದೆ ʻದೈಜಿʼ!
10 ಶುಚಿ ಯೋಜನೆಯಲ್ಲಿ ಹೊಸ ಪ್ರಯೋಗ; ನ್ಯಾಪ್ಕಿನ್‌ಗೆ ಪರ್ಯಾಯವಾಗಿ ಮೆನ್‌ಸ್ಟ್ರುಯಲ್ ಕಪ್