Site icon Vistara News

IPL Auction | ಮಿನಿ ಹರಾಜಿನ ಬಳಿಕ ಆರ್‌ಸಿಬಿ ತಂಡ ಹೇಗಿದೆ? ಟೀಮ್‌ ಸೇರಿದ ಹೊಸ ಆಟಗಾರರು ಯಾರು?

IPL 2023

ಕೊಚ್ಚಿ: ಐಪಿಎಲ್‌ನ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಈ ಬಾರಿ ಕಡಿಮೆ ಹಣದೊಂದಿಗೆ ಮಿನಿ ಹರಾಜಿನಲ್ಲಿ (IPL Auction) ಪಾಲ್ಗೊಂಡರೂ ಹಲವು ಲೆಕ್ಕಾಚಾರದೊಂದಿಗೆ ಆಟಗಾರರನ್ನು ಖರೀದಿಸಿದೆ.

ಆರ್‌ಸಿಬಿಯು 8.75 ಕೋಟಿ ರೂಪಾಯಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಂಡು, ಐದು ಆಟಗಾರರನ್ನು ಕೈಬಿಟ್ಟರೆ, ಏಳು ಆಟಗಾರರನ್ನು ಖರೀದಿಸಿತು. ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ವಿಲ್‌ ಜಾಕ್ಸ್‌ ಅವರನ್ನು 3.2 ಕೋಟಿ ರೂ. ಕೊಟ್ಟು ಖರೀದಿಸಿತು. ಹಾಗೆಯೇ, ಆಲ್‌ರೌಂಡರ್‌ ಆದ ಕನ್ನಡಿಗ ಮನೋಜ್‌ ಭಾಂಡಗೆ ಅವರನ್ನು 20 ಲಕ್ಷ ರೂ.ಗೆ ಖರೀದಿಸಿತು.

ಇನ್ನುಳಿದಂತೆ, ರೀಸ್‌ ಟಾಪ್ಲೆ 1.90 ಕೋಟಿ ರೂ., ರಾಜನ್‌ ಕುಮಾರ್‌ 70 ಲಕ್ಷ ರೂ., ಅವಿನಾಶ್‌ ಸಿಂಗ್‌ 60 ಲಕ್ಷ ರೂ., ಹಿಮಾಂಶು ಶರ್ಮಾ 20, ಲಕ್ಷ ರೂ. ಹಾಗೂ ಸೋನು ಯಾದವ್‌ ಅವರನ್ನು 20 ಲಕ್ಷ ರೂ.ಗೆ ಖರೀದಿಸಿತು. ಐಪಿಎಲ್‌ ಹರಾಜಿನ ಬಳಿಕ ಆರ್‌ಸಿಬಿ ಬಳಿ 1.75 ಕೋಟಿ ರೂ. ಬಾಕಿ ಉಳಿದಿದೆ. ತಂಡದಲ್ಲೀಗ ಒಟ್ಟು 25 ಆಟಗಾರರಿದ್ದು, 17 ಆಟಗಾರರು ಭಾರತೀಯರಾಗಿದ್ದರೆ, ಉಳಿದ ಎಂಟು ಆಟಗಾರರು ವಿದೇಶದವರಾಗಿದ್ದಾರೆ.

ಹೀಗಿದೆ ಆಟಗಾರರು, ಅವರ ಆಟದ ಮಾದರಿ ಹಾಗೂ ಅವರಿಗೆ ಸಿಕ್ಕಿರುವ ಮೊತ್ತ

ವಿರಾಟ್ ಕೊಹ್ಲಿ ಬ್ಯಾಟ್ಸ್‌ಮನ್ 15 ಕೋಟಿ ರೂ.
ಗ್ಲೆನ್ ಮ್ಯಾಕ್ಸ್‌ವೆಲ್ ಆಲ್ ರೌಂಡರ್ 11 ಕೋಟಿ ರೂ.
ಮೊಹಮ್ಮದ್ ಸಿರಾಜ್ ಬೌಲರ್ 7 ಕೋಟಿ ರೂ.
ಫಾಫ್ ಡು ಪ್ಲೆಸಿಸ್ ಬ್ಯಾಟ್ಸ್‌ಮನ್ 7 ಕೋಟಿ ರೂ.
ಹರ್ಷಲ್ ಪಟೇಲ್ ಬೌಲರ್ 10.75 ಕೋಟಿ ರೂ.
ವನಿಂದು ಹಸರಂಗ ಬೌಲರ್ 10.75 ಕೋಟಿ ರೂ.
ದಿನೇಶ್ ಕಾರ್ತಿಕ್ ಬ್ಯಾಟ್ಸ್‌ಮನ್/ವಿಕೆಟ್ ಕೀಪರ್ 5.5 ಕೋಟಿ ರೂ.
ಶಹಬಾಜ್ ಅಹಮದ್ ಆಲ್ ರೌಂಡರ್ 2.4 ಕೋಟಿ ರೂ.
ರಜತ್ ಪಾಟಿದಾರ್ ಬ್ಯಾಟ್ಸ್‌ಮನ್ 20 ಲಕ್ಷ ರೂ.
ಅನುಜ್ ರಾವತ್ ಬ್ಯಾಟ್ಸ್‌ಮನ್/ವಿಕೆಟ್ ಕೀಪರ್ 3.4 ಕೋಟಿ ರೂ.
ಆಕಾಶ್ ದೀಪ್ ಬೌಲರ್ 20 ಲಕ್ಷ ರೂ.
ಜೋಶ್ ಹ್ಯಾಜಲ್‌ವುಡ್ ಬೌಲರ್ 7.75 ಕೋಟಿ ರೂ.
ಮಹಿಪಾಲ್ ಲೊಮ್ರೋರ್ ಆಲ್ ರೌಂಡರ್ 95 ಲಕ್ಷ ರೂ.
ಫಿನ್ ಅಲೆನ್ ಬ್ಯಾಟ್ಸ್‌ಮನ್/ವಿಕೆಟ್ ಕೀಪರ್ 80 ಲಕ್ಷ ರೂ.
ಸುಯಶ್ ಪ್ರಭುದೇಸಾಯಿ ಬ್ಯಾಟ್ಸ್‌ಮನ್ 30 ಲಕ್ಷ ರೂ.
ಕರ್ಣ್ ಶರ್ಮಾ ಬ್ಯಾಟ್ಸ್‌ಮನ್ 50 ಲಕ್ಷ ರೂ.
ಸಿದ್ಧಾರ್ಥ್ ಕೌಲ್ ಬ್ಯಾಟ್ಸ್‌ಮನ್ 75 ಲಕ್ಷ ರೂ.
ಡೇವಿಡ್ ವಿಲ್ಲಿ ಬೌಲರ್ 2 ಕೋಟಿ ರೂ.
ರೀಸ್ ಟಾಪ್ಲಿ ಬೌಲರ್ 1.9 ಕೋಟಿ ರೂ.
ಹಿಮಾಂಶು ಶರ್ಮಾ ಬೌಲರ್ 20 ಲಕ್ಷ ರೂ.
ವಿಲ್ ಜಾಕ್ಸ್ ಬ್ಯಾಟ್ಸ್‌ಮನ್ 3.2 ಕೋಟಿ ರೂ.
ಮನೋಜ್ ಭಾಂಡಗೆ ಆಲ್ ರೌಂಡರ್ 20 ಲಕ್ಷ ರೂ.
ರಾಜನ್ ಕುಮಾರ್ ಬೌಲರ್ 70 ಲಕ್ಷ ರೂ.
ಅವಿನಾಶ್ ಸಿಂಗ್ ಬೌಲರ್ 60 ಲಕ್ಷ ರೂ.
ಸೋನು ಯಾದವ್ ಆಲ್ ರೌಂಡರ್ 20 ಲಕ್ಷ ರೂ.

ಇದನ್ನೂ ಓದಿ | IPL Auction | ದೊಡ್ಡ ಮೊತ್ತ ಜೇಬಿಗಿಳಿಸಿದ ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರರು ಇವರು

Exit mobile version