Site icon Vistara News

IOC Session: ಮುಂಬೈನಲ್ಲಿ ನಡೆಯಲಿದೆ ಐತಿಹಾಸಿಕ ಒಲಿಂಪಿಕ್ಸ್​ ಅಧಿವೇಶನ; ಏನಿದರ ವಿಶೇಷ?

IOC Sesson

ಮುಂಬಯಿ: ಐಒಸಿ ಅಧಿವೇಶನವು (IOC Session) ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (International Olympic Committee) ಕಾರ್ಯನಿರ್ವಾಹಕ ಮಂಡಳಿಯ ಎಲ್ಲಾ ಸದಸ್ಯರ ಸಭೆಯಾಗಿದೆ. ಈ ಸಭೆಯಲ್ಲಿ ನಾಮನಿರ್ದೇಶನಗೊಂಡಿರುವ ಸದಸ್ಯರು ಕೂಡ ಭಾಗವಹಿಸಲಿದ್ದಾರೆ. ಮುಂಬರುವ ಅಧಿವೇಶನವು 141 ನೇ ಐಒಸಿ ಅಧಿವೇಶನವಾಗಿದೆ. ಇದು ಈ ಬಾರಿ ಭಾರತದ ವಾಣಿಜ್ಯ ರಾಜಧಾನಿ ಮುಂಬಯಿನಲ್ಲಿ ಆಯೋಜನೆಗೊಂಡಿದೆ. ರಿಲಯನ್ಸ್​ ಫೌಂಡೇಷನ್​​ನ ಮುಖ್ಯಸ್ಥರಾದ ನೀತಾ ಅಂಬಾನಿ ಅವರ ಶ್ರಮದಿಂದಾಗಿ ಈ ಅಧಿವೇಶನಕ್ಕೆ ಭಾರತವು ಈ ಬಾರಿ ಆತಿಥ್ಯ ವಹಿಸುತ್ತಿದೆ.

ಅಂದ ಹಾಗೆ ಈ ಅಧಿವೇಶನ ಭಾರತದಲ್ಲಿ ನಡೆಯುತ್ತಿರುವುದು ನಾಲ್ಕು ದಶಕಗಳ ಬಳಿಕ. ಅಂದರೆ 1983ರಲ್ಲಿ ರಾಷ್ಟ್ರ ರಾಜಧಾನಿ ಡೆಲ್ಲಿಯಲ್ಲಿ ಒಲಿಂಪಿಕ್ಸ್​ ಅಧೀವೇಶನ ನಡೆದಿತ್ತು. ಈ ನಿಟ್ಟಿನಲ್ಲಿ ಇದು ಭಾರತದ ಕ್ರೀಡಾ ಕ್ಷೇತ್ರದ ಪಾಲಿಗೆ ಇದು ವಿಶೇಷ ಕ್ಷಣವಾಗಿದೆ.

ಸಾಮಾನ್ಯವಾಗಿ, ಮುಂಬರುವ ಕ್ರೀಡಾಕೂಟಗಳಿಗೆ ಆತಿಥ್ಯ ವಹಿಸುವ ನಗರಗಳು, ಕ್ರೀಡೆಗಳು ಮತ್ತು ಫೆಡರೇಶನ್​ಗಳ ಸೇರ್ಪಡೆ ಅಥವಾ ಹೊರಗಿಡುವಿಕೆ ಮತ್ತು ಒಲಿಂಪಿಕ್ ಚಾರ್ಟರ್​ನಲ್ಲಿರುವ ಬದಲಾವಣೆಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಐಒಸಿ ಅಧಿವೇಶನಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಕೆಲವು ಪರಿಸ್ಥಿತಿಗಳನ್ನು ಹೊರತುಪಡಿಸಿ ಪ್ರತಿ ಬೇಸಿಗೆ ಮತ್ತು ಚಳಿಗಾಲದ ಒಲಿಂಪಿಕ್ಸ್ ಸಮಯದಲ್ಲಿ ಐಒಸಿ ಅಧಿವೇಶನವನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ.

ಇದು ಯಾವಾಗ ನಡೆಯಲಿದೆ?

ಐಒಸಿಯ 141 ನೇ ಅಧಿವೇಶನವು ಈ ವರ್ಷ ಅಕ್ಟೋಬರ್ 15, 16 ಮತ್ತು 17 ರಂದು ಭಾರತದ ಮುಂಬೈನಲ್ಲಿ ನಡೆಯಲಿದೆ. ಅಧಿವೇಶನಕ್ಕೂ ಮುನ್ನ ಅಕ್ಟೋಬರ್ 12 ಮತ್ತು 13 ರಂದು ಐಒಸಿ ಕಾರ್ಯನಿರ್ವಾಹಕ ಮಂಡಳಿ ಸಭೆ ನಡೆಯಲಿದೆ. ಐಒಸಿ ಅಧಿವೇಶನದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 14 ರಂದು ನಡೆಯಲಿದೆ.

ಭಾರತವು ಹೋಸ್ಟಿಂಗ್ ಹಕ್ಕುಗಳನ್ನು ಹೇಗೆ ಪಡೆಯಿತು?

2022 ರ ಫೆಬ್ರವರಿಯಲ್ಲಿ ಬೀಜಿಂಗ್​​ನಲ್ಲಿ ನಡೆದ 139 ನೇ ಐಒಸಿ ಅಧಿವೇಶನದಲ್ಲಿ ಐಒಸಿ ಸದಸ್ಯರು ಭಾರತದಲ್ಲಿ 141 ನೇ ಐಒಸಿ ಅಧಿವೇಶನವನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಂಡರು. ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ, ಐಒಸಿ ಸದಸ್ಯೆ ನೀತಾ ಅಂಬಾನಿ, ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಆತಿಥ್ಯ ಹಕ್ಕುಗಳಿಗಾಗಿ ಭಾರತದ ಪ್ರಸ್ತಾಪವನ್ನು ಮಂಡಿಸಿದ್ದರು. 75 ಸದಸ್ಯರು ಮುಂಬೈ ಪರವಾಗಿ ಮತ ಚಲಾಯಿಸಿದರೆ, ಒಬ್ಬರು ವಿರುದ್ಧವಾಗಿ ಮತ ಚಲಾಯಿಸಿದರು.
“40 ವರ್ಷಗಳ ಕಾಯುವಿಕೆಯ ನಂತರ ಒಲಿಂಪಿಕ್ ಚಳುವಳಿ ಭಾರತಕ್ಕೆ ಮರಳಿದೆ. 2023 ರಲ್ಲಿ ಮುಂಬೈನಲ್ಲಿ ಐಒಸಿ ಅಧಿವೇಶನದ ಆತಿಥ್ಯ ವಹಿಸುವ ಗೌರವವನ್ನು ಭಾರತಕ್ಕೆ ವಹಿಸಿದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ” ಎಂದು ಅಂಬಾನಿ ಯಶಸ್ವಿ ಬಿಡ್ ನಂತರ ಅಭಿಪ್ರಾಯಪಟ್ಟಿದ್ದರು.

ಭಾರತವು ಈ ಹಿಂದೆ ಎಂದಾದರೂ ಅಧಿವೇಶನವನ್ನು ಆಯೋಜಿಸಿದೆಯೇ?

ಐಒಸಿ ಅಧಿವೇಶನದ ಆತಿಥ್ಯ ವಹಿಸುವುದು ಭಾರತಕ್ಕೆ ದೊಡ್ಡ ಸಾಧನೆಯಾಗಿದೆ. ಏಕೆಂದರೆ ಭಾರತ ಈ ಹಿಂದೆ, ಸರಿಯಾಗಿ 40 ವರ್ಷಗಳ ಹಿಂದೆ 1983 ರಲ್ಲಿ ನವದೆಹಲಿಯಲ್ಲಿ ಒಮ್ಮೆ ಮಾತ್ರ ಆತಿಥ್ಯ ವಹಿಸಿದ್ದರು.

ಅಧಿವೇಶನ ಎಲ್ಲಿ ನಡೆಯಲಿದೆ?

ಮುಂಬೈನ ಅತ್ಯಾಧುನಿಕ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ಈ ಸೆಷನ್ ನಡೆಯಲಿದೆ. ವಿಶ್ವದ ಪ್ರಸಿದ್ಧ ಕ್ರೀಡಾ ವ್ಯಕ್ತಿಗಳು ಭಾರತದ ಆತಿಥ್ಯ ಪಡೆಯಲಿದ್ದಾರೆ.

ಅಧಿವೇಶದಲ್ಲಿ ಹಾಜರಿವು ದೊಡ್ಡ ಹೆಸರುಗಳು ಯಾವುವು?

ಐಒಸಿ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ವಿಶೇಷವಾಗಿ ಎರಡು ಬಾರಿ ಒಲಿಂಪಿಕ್ 1500 ಮೀಟರ್ ಚಾಂಪಿಯನ್ ಮತ್ತು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಶ್ರೀ ಸೆಬಾಸ್ಟಿಯನ್ ಕೋ, ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ, ಏಳು ಬಾರಿ ಒಲಿಂಪಿಕ್ ಈಜು ಪದಕ ವಿಜೇತ ಮತ್ತು ಐಒಸಿ ಸಮನ್ವಯ ಆಯೋಗದ ಅಧ್ಯಕ್ಷ ಕಿರ್ಸ್ಟಿ ಕೊವೆಂಟ್ರಿ, ಮೊನಾಕೊದ ರಾಜಕುಮಾರ ಸೌವೇರೈನ್ ಆಲ್ಬರ್ಟ್ II ಸೇರಿದಂತೆ ಐಒಸಿ ಸದಸ್ಯರು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಎರಡು ಬಾರಿ ಒಲಿಂಪಿಕ್ ಪೋಲ್ ವಾಲ್ಟ್ ಚಿನ್ನದ ಪದಕ ವಿಜೇತೆ ಯೆಲೆನಾ ಇಸೆನ್ಬಯೇವಾ, ಎರಡು ಬಾರಿ ಒಲಿಂಪಿಕ್ 10,000 ಮೀಟರ್ ಬೆಳ್ಳಿ ಪದಕ ವಿಜೇತ ಮತ್ತು ಕೀನ್ಯಾದ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಪಾಲ್ ಟೆರ್ಗಟ್, ಒಲಿಂಪಿಕ್ ಪೋಲ್ ವಾಲ್ಟ್ ಚಿನ್ನದ ಪದಕ ವಿಜೇತ ಸೆರ್ಗೆ ಬುಬ್ಕಾ, ಒಲಿಂಪಿಕ್ ಶೂಟಿಂಗ್ ಚಾಂಪಿಯನ್ ಅಭಿನವ್ ಬಿಂದ್ರಾ ಸೇರಿದಂತೆ ಹಲವರು ಗಣ್ಯರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ : IOC Sessions : 40 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಐಒಸಿ ಅಧಿವೇಶನ

ಅಧಿವೇಶನದ ಪ್ರಾಮುಖ್ಯತೆಯ ಬಗ್ಗೆ ಐಒಸಿ ಸದಸ್ಯರ ಅಭಿಪ್ರಾಯಗಳು ಇಂತಿವೆ

ನಾವು ಭಾರತವನ್ನು ಆಯ್ಕೆ ಮಾಡಿದ್ದೇವೆ ಏಕೆಂದರೆ ಅದು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ, ಅತ್ಯಂತ ಯುವಕರನ್ನು ಹೊಂದಿರುವ ಮತ್ತು ಒಲಿಂಪಿಕ್ ಕ್ರೀಡೆ ಆಯೋಜಿಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಎಂದು ಅಂತಾರಾಷ್ಟ್ರಿಯ ಒಲಿಂಪಿಕ್ಸ್​ ಸಮಿತಿಯ ಥಾಮಸ್ ಬಾಕ್ ಹೇಳಿದ್ದಾರೆ.

ಐಒಸಿ ಅಧಿವೇಶನವು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಭಾರತದ ಮೇಲೆ ಇಟ್ಟಿರುವ ನಂಬಿಕೆಯ ಸಂಕೇತವಾಗಿದೆ. ಭಾರತ ಹೊಂದಿರುವ ಸಾಮರ್ಥ್ಯ ನಮಗೆ ತಿಳಿದಿದೆ ಮತ್ತು ಐಒಸಿ ಅಧಿವೇಶನವನ್ನು ಆಯೋಜಿಸಲು ಭಾರತದಲ್ಲಿನ ನಮ್ಮ ಸಹೋದ್ಯೋಗಿಗಳೊಂದಿಗೆ ಪಾಲುದಾರರಾಗಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಈ ವೇದಿಕೆಯಲ್ಲಿ ಸಾಕಷ್ಟು ಪ್ರಮುಖ ನಿರ್ಧಾರಗಳು ತೆಗೆದುಕೊಳ್ಳಲಿದ್ದೇವೆ ಎಂದು ಒಲಿಂಪಿಕ್ ಸಾಲಿಡಾರಿಟಿ ಮತ್ತು ಒಲಿಂಪಿಸಮ್ 365 ನಿರ್ದೇಶಕ ಜೇಮ್ಸ್ ಮ್ಯಾಕ್ಲಿಯೋಡ್ ಹೇಳಿದ್ದಾರೆ.

ಇದನ್ನೂ ಓದಿ : Vistara Explainer: ಇಸ್ರೇಲಿ ಗುಪ್ತಚರಕ್ಕೆ ಹಮಾಸ್ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ? ಕತೆ ರೋಚಕವಾಗಿದೆ!

ಇದು ಭಾರತಕ್ಕೆ ಒಲಿಂಪಿಕ್ಸ್​ ಆತಿಥ್ಯ ದೊರೆಯು ವಿಚಾರದಲ್ಲಿ ಮಹತ್ವದ ಬೆಳವಣಿಗೆಯಾಗಲಿದೆ ಮತ್ತು ಭಾರತೀಯ ಕ್ರೀಡಾ ಕ್ಷೇತ್ರದ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಎಂದು ಭಾರತದಿಂದ ಐಒಸಿ ಸದಸ್ಯರಾಗಿ ಆಯ್ಕೆಯಾದ ಮೊದಲ ಮಹಿಳೆಯಾಗಿರುವ ನೀತಾ ಅಂಬಾನಿ ಹೇಳಿದ್ದಾರೆ.

ಸಂಭವನೀಯ ಪ್ರಮುಖ ಫಲಿತಾಂಶಗಳು

ಈ ಅಧಿವೇಶನದಲ್ಲಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್​ ನ ಸ್ಪರ್ಧೆಗಳ ಪಟ್ಟಿಯನ್ನು ಅಂತಿಮಗೊಳ್ಳಲಿದೆ. ಈ ಕೆಳಗಿನ ಕ್ರೀಡೆಗಳು ಅನುಮೋದನೆ ಪಡೆಯಬೇಕಾಗಿರುವ ಪಟ್ಟಿಯಲ್ಲಿದೆ.

ಭಾರತದ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ

ಐಒಸಿ ಅಧಿವೇಶನವು ಐಒಸಿ ಸದಸ್ಯರಿಗೆ ಕಳೆದ ಕೆಲವು ವರ್ಷಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಗೆ ಸಾಕ್ಷಿಯಾಗಲು ಮತ್ತು ಒಲಿಂಪಿಕ್ಸ್ ಅಥವಾ ಯೂತ್ ಒಲಿಂಪಿಕ್ಸ್ ನಂತಹ ಪ್ರಮುಖ ಕ್ರೀಡಾಕೂಟವನ್ನು ಆಯೋಜಿಸಲು ದೇಶ ನಡೆಸಿದ ಸಿದ್ಧತೆಯನ್ನು ನೋಡಲು ಒಂದು ಅತ್ಯುತ್ತಮ ಅವಕಾಶವಾಗಿದೆ.

Exit mobile version