Site icon Vistara News

T20 World Cup | ಭಾರತ-ಪಾಕ್​ ಪಂದ್ಯಕ್ಕೆ ಮಳೆ ಬಂದರೆ ಫಲಿತಾಂಶ ನಿರ್ಧಾರ ಹೇಗೆ?

t20

ಮೆಲ್ಬೋರ್ನ್: ಟಿ20 ವಿಶ್ವಕಪ್ ​(T20 World Cup) ನ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೆಜ್​ ಪಂದ್ಯಕ್ಕಾಗಿ ಕ್ರಿಕೆಟ್​ ಲೋಕವೇ ಎದುರು ನೋಡುತ್ತಿದೆ. ಅಕ್ಟೋಬರ್ 23ರಂದು ನಡೆಯಲಿರುವ ಈ ಪಂದ್ಯದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ಇದೀಗ ಈ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.

ವಿಶ್ವ ಕಪ್​ಗೆ ಮಳೆ ಭೀತಿ

ಬ್ರಿಸ್ಬೇನ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬುಧವಾರದ ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ ಗಳೆಲ್ಲವೂ ಕೊಚ್ಚಿ ಹೋದವು. ಇದರಲ್ಲಿ ಭಾರತ-ನ್ಯೂಜಿಲೆಂಡ್‌ ಮುಖಾಮುಖಿಯೂ ಸೇರಿತ್ತು. ಬೆಳಗ್ಗಿನ ಅಫ್ಘಾನಿಸ್ತಾನ-ಪಾಕಿಸ್ತಾನ ಪಂದ್ಯ 22.2 ಓವರ್‌ಗಳ ಆಟವನ್ನು ಕಂಡಿತಾದರೂ ಬಳಿಕ ಸುರಿದ ಮಳೆಯಿಂದಾಗಿ ಫ‌ಲಿತಾಂಶ ಪ್ರಕಟಗೊಳ್ಳಲಿಲ್ಲ. ಇದೀಗ ಸೂಪರ್​-12 ಪಂದ್ಯಕ್ಕೂ ಮಳೆ ಭೀತಿ ಕಾಡಲಾರಂಭಿಸಿದೆ. ವಿಶ್ವ ಕಪ್​ನ ಸೂಪರ್‌-12 ಹಂತದ ಆರಂಭಿಕ ಪಂದ್ಯ ಆಸ್ಟ್ರೇಲಿಯಾ-ನ್ಯೂಜಿಲೆಂಡ್‌ ನಡುವೆ ಶನಿವಾರ ಸಿಡ್ನಿಯಲ್ಲಿ ನಡೆಯಲಿದ್ದು ಈ ಪಂದ್ಯಕ್ಕೂ ಮಳೆ ಅಡಚಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಹವಾಮಾನ ಇಲಾಖೆ ಮುನ್ಸೂಚನೆ

ಮೆಲ್ಬೋರ್ನ್​ನಲ್ಲಿ ಶುಕ್ರವಾರದಿಂದ ಮಳೆಯ ಅಬ್ಬರ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಭಾನುವಾರ ಮಳೆ ಸಾಧ್ಯತೆ ಶೇ. 80ರಷ್ಟಿದೆ ಎಂದು ವರದಿಯಾಗಿದೆ. ಇದೇ ದಿನ ಭಾರತ-ಪಾಕಿಸ್ತಾನ ಪಂದ್ಯ ಮೊದಲ್ಗೊಳ್ಳಲಿದೆ. ಹೀಗಾಗಿ ಪಂದ್ಯ ರದ್ದಾಗುವ ಆತಂಕ ಎದುರಾಗಿದೆ.

ಮೀಸಲು ದಿನ ಇಲ್ಲ

ಅಕ್ಟೋಬರ್​ 23ರಂದು ಭಾರತ-ಪಾಕ್​ ಪಂದ್ಯಕ್ಕೆ ಮಳೆ ಅಡಚಣೆಯಾದರೆ ಐಸಿಸಿ ನಿಯಮದ ಪ್ರಕಾರ ನಿಗದಿತ ಸಮಯದ ವರೆಗೆ ಕಾದು ನೋಡುವ ತಂತ್ರ ಅನುಸರಿಸಲಾಗುತ್ತದೆ. ಈ ನಿಗದಿತ ಸಮಯದ ಒಳಗಡೆ ಮಳೆ ನಿಂತರೆ ಆಗ ಓವರ್​ ಕಡಿತಗೊಳಿಸಿ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗುತ್ತದೆ. ಒಂದೊಮ್ಮೆ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವೇ ಇಲ್ಲ ಎಂದಾದರೆ ಲೀಗ್​ ಹಂತದ ಪಂದ್ಯಗಳಿಗೆ ಮೀಸಲು ದಿನ ಇರದ ಕಾರಣ, ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಿ ಉಭಯ ತಂಡಕ್ಕೂ ತಲಾ ಒಂದು ಅಂಕ ನೀಡಲಾಗುತ್ತದೆ.

ಮೆಲ್ಬೋರ್ನ್​ನಲ್ಲಿ ಭಾರತ ಬಲಿಷ್ಠ

ಮೆಲ್ಬೋರ್ನ್‌ನಲ್ಲಿ ಈವರೆಗೆ ಭಾರತ ಒಟ್ಟು 15 ಟಿ20 ಪಂದ್ಯ ಆಡಿದೆ. ಇದರಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ 9 ಪಂದ್ಯದಲ್ಲಿ ಗೆಲುವು ಮತ್ತು 5 ರಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಈ ನಿಟ್ಟಿನಲ್ಲಿ ಭಾರತ ಮೆಲ್ಬೋರ್ನ್​ನಲ್ಲಿ ಬಲಿಷ್ಠ ಎನ್ನಲಡ್ಡಿಯಿಲ್ಲ.

ಟಿ20 ದಾಖಲೆಗಳು:
ಗರಿಷ್ಠ ಮೊತ್ತ:
ಭಾರತ 184/3
ಕಡಿಮೆ ಮೊತ್ತ: ಭಾರತ 74 ರನ್​ಗೆ ಆಲೌಟ್

ಇದನ್ನೂ ಓದಿ | T20 World Cup | ಮೆಲ್ಬೋರ್ನ್​ ತಲುಪಿದ ಟೀಮ್​ ಇಂಡಿಯಾ, ಶುಕ್ರವಾರದಿಂದ ಅಭ್ಯಾಸ ಆರಂಭ

Exit mobile version