Site icon Vistara News

 Emmanuel Macron : ಒಲಿಂಪಿಕ್ಸ್​ಗೆ ಆತಿಥ್ಯ ವಹಿಸುವ ಭಾರತದ ಉತ್ಸಾಹಕ್ಕೆ ಬೆಂಬಲ ನೀಡಿದ ಫ್ರಾನ್ಸ್​ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರೋನ್

Emmanuel Macron

ಬೆಂಗಳೂರು: ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಸಾಮರ್ಥ್ಯದ ಬಗ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ನಂಬಿಕೆ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಜಾಗತಿಕ ಕ್ರೀಡಾಕೂಟ ಆಯೋಜಿಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. 2036 ರಲ್ಲಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಕ್ರೀಡಾಕೂಟದ ಆತಿಥ್ಯ ವಹಿಸುವುದಕ್ಕಾಗಿ ಭಾರತ ಯತ್ನಿಸುತ್ತಿದೆ. ಈ ನಡುವೆ ಜಿಯೋ ಸಿನೆಮಾಗೆ ನೀಡಿದ ಸಂದರ್ಶನದಲ್ಲಿ, ಮ್ಯಾಕ್ರನ್ ಭಾರತದ ಸಾಮರ್ಥ್ಯದ ಬಗ್ಗೆ ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ 2026ರ ಒಲಿಂಪಿಕ್ಸ್​​ ಭಾರತ ಮತ್ತು ಈಜಿಪ್ಟ್ ಸೇರಿದಂತೆ ಹಲವಾರು ದೇಶಗಳು ಬಿಡ್ ಸಲ್ಲಿಸಿವೆ.

ಭಾರತ ಮತ್ತು ಈಜಿಪ್ಟ್ ಎರಡೂ ಈ ಹಿಂದೆ ಒಲಿಂಪಿಕ್ಸ್ ಅನ್ನು ಆಯೋಜಿಸಿಲ್ಲ. ಎರಡೂ ದೇಶಗಳು ತಮ್ಮ ಕ್ರೀಡಾ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವುದರಿಂದ ಇದನ್ನು ಆದ್ಯತಾ ಕ್ರಮವೆಂದು ಲೆಕ್ಕಹಾಕಿದೆ. ಒಲಿಂಪಿಕ್ಸ್ ಆತಿಥ್ಯ ವಹಿಸುವುದು ತೀವ್ರ ಸ್ಪರ್ಧೆಯಾಗಿದೆ ಎಂದು ಒಪ್ಪಿಕೊಂಡ ಅವರು, ಭಾರತವು ತನ್ನ ಸಾಮರ್ಥ್ಯವನ್ನು ಕಡೆಗಣಿಸಬಾರದು ಎಂದರು. 2024ರ ಒಲಿಂಪಿಕ್ಸ್​ಗೆ ಬಿಡ್ ಮಾಡುವಾಗ ಅಮೆರಿಕದೊಂದಿಗಿನ ಸ್ಪರ್ಧೆಯನ್ನು ಅವರು ನೆನಪಿಸಿಕೊಂಡರು.

ನಾನು ನಿಮ್ಮ ದೇಶ ಮತ್ತು ನಿಮ್ಮ ದೇಶದ ಭವಿಷ್ಯದ ಬಗ್ಗೆ ಬಲವಾದ ನಂಬಿಕೆ ಹೊಂದಿದ್ದೇನೆ. ನಿಮಗೆ ಒಲಿಂಪಿಕ್​ನಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯವಿದೆ. ಇದು ತೀವ್ರ ಸ್ಪರ್ಧೆ ವಿಚಾರ ಎಂದು ನಾನು ಭಾವಿಸುತ್ತೇನೆ. ಆ ಸಂಗತಿಯನ್ನು ಕಡಿಮೆ ಅಂದಾಜು ಮಾಡಬಾರದು. ಏಳು ವರ್ಷಗಳ ಹಿಂದೆ ನಾವು ಲೌಸಾನ್ ಗೆ ಹೋದಾಗ, ನಾವು ಆ ಸಮಯದಲ್ಲಿ ಯುಎಸ್ ನೊಂದಿಗೆ ಸ್ಪರ್ಧಿಸಿದ್ದೆವು. ಬಿಡ್​ಗಾಗಿ ಸ್ಪರ್ಧಿಸುವುದು ಉತ್ತಮ ಸಿದ್ಧತೆ” ಎಂದು ಮಾರ್ಕಾನ್ ಜಿಯೋ ಸಿನೆಮಾಗೆ ತಿಳಿಸಿದರು.

ಒಲಿಂಪಿಕ್ಸ್​​ ತಯಾರಿ ನಡೆಸುವಲ್ಲಿ ಫ್ರಾನ್ಸ್ ಮತ್ತು ಭಾರತದ ನಡುವಿನ ಸಹಯೋಗದ ಪ್ರಯತ್ನಗಳನ್ನು ಮ್ಯಾಕ್ರನ್ ಎತ್ತಿ ತೋರಿಸಿದರು. ಸಿದ್ಧತೆಗಳಲ್ಲಿ ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್​​ ತಾಂತ್ರಿಕ ತಂಡವನ್ನು ವಿನಂತಿಸಿದ್ದಾರೆ. ಭಾರತೀಯ ಅಧಿಕಾರಿಗಳು ತಮ್ಮ ಅನುಭವದಿಂದ ಕಲಿಯಲು ಫ್ರೆಂಚ್ ತಂಡಗಳನ್ನು ಭೇಟಿ ಮಾಡಿದ್ದಾರೆ. ಒಲಿಂಪಿಕ್ಸ್​ಗೆ ಭಾರತದ ಸಂಭಾವ್ಯ ಬಿಡ್ ಅನ್ನು ಬೆಂಬಲಿಸಲು ತಂತ್ರಜ್ಞಾನವನ್ನು ನೀಡುವುದಾಗಿ ಹೇಳಿದರು.

ಇದಲ್ಲದೆ, ಒಲಿಂಪಿಕ್ಸ್ ಅನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಕ್ರೀಡಾ ಸಂಸ್ಥೆಗಳು, ಸ್ಥಳೀಯ ಸಮುದಾಯಗಳು ಮತ್ತು ರಾಜ್ಯ ಸೇರಿದಂತೆ ವಿವಿಧ ಮಧ್ಯಸ್ಥಗಾರರ ನಡುವೆ ಏಕತೆಯ ಮಹತ್ವವನ್ನು ಮ್ಯಾಕ್ರನ್ ಒತ್ತಿ ಹೇಳಿದರು. ಕಳೆದ ಏಳು ವರ್ಷಗಳಲ್ಲಿ ಈ ಕಾರ್ಯಕ್ರಮದಲ್ಲಿ ಫ್ರಾನ್ಸ್ ನ ಗಮನಾರ್ಹ ಹೂಡಿಕೆ ಮಾಡಿತ್ತು. ಸಿದ್ಧತೆ ಪ್ರಕ್ರಿಯೆಯಲ್ಲಿ ಉದ್ಭವಿಸುವ ಸವಾಲುಗಳನ್ನು ನಿವಾರಿಸುವಲ್ಲಿ ಸ್ಥಿರತೆ ಮತ್ತು ಬದ್ಧತೆ ನಿರ್ಣಾಯ ಎಂದು ನುಡಿದರು.

ಇದನ್ನೂ ಓದಿ: Paris Olympics 2024 : ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯಿಂದ ಪ್ಯಾರಿಸ್ ಒಲಿಂಪಿಕ್ಸ್ ಸಾಧಕರಿಗೆ ಆತಿಥ್ಯ

ನನ್ನ ಪ್ರಕಾರ, ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಪ್ರಮುಖವಾದುದು ಸಮಗ್ರತೆ. ಸ್ಥಳೀಯ ಸಮುದಾಯಗಳು, ಸ್ಥಳೀಯ ಕ್ಷೇತ್ರಗಳು ಮತ್ತು ನಿಸ್ಸಂಶಯವಾಗಿ ರಾಜ್ಯಗಳ ನೆರವು ಬೇಕು. ಭದ್ರತೆಯಿಂದ ಸಂಘಟನೆಯವರೆಗೆ ಎಲ್ಲವೂ ವಿಶೇಷ.” ಎಂದು ಮ್ಯಾಕ್ರನ್ ಹೇಳಿದ್ದಾರೆ.

Exit mobile version