Site icon Vistara News

World Athletics Championship | ನಾನು ಚಿನ್ನದ ಹುಡುಗ, ಒತ್ತಡಕ್ಕೆ ಬೀಳುವುದಿಲ್ಲ

World Athletics Championship

ಒರೆಗಾನ್‌ : ನಾನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದವ.World Athletics Championship ಸ್ಪರ್ಧೆಯ ಮೊದಲ ಪ್ರಯತ್ನದಲ್ಲಿ ಫೌಲ್‌ ಅದಾಗ ನಾನೇನೂ ಒತ್ತಡಕ್ಕೆ ಬೀಳಲಿಲ್ಲ. ಬಳಿಕ ಸಿಕ್ಕ ಅವಕಾಶಗಳಲ್ಲಿ ಪ್ರದರ್ಶನ ಸುಧಾರಣೆ ಮಾಡಿಕೊಂಡು ಬಂದೆ…

ಹೀಗೆಂದು ಅಮೆರಿಕದಲ್ಲಿ ನಡೆಯುತ್ತಿರುವ World Athletics Championship ಕೂಟದಲ್ಲಿ ಬೆಳ್ಳಿಯ ಪದಕ ಗೆದ್ದಿರುವ ನೀರಜ್ ಚೋಪ್ರಾ ತಮ್ಮ ಸಾಧನೆಯ ಬಗ್ಗೆ ಹೆಮ್ಮೆಪಟ್ಟುಕೊಂಡಿದ್ದಾರೆ. ಇದೇ ವೇಳೆ ಅವರು ಮುಂದಿನ ಆವೃತ್ತಿಯಲ್ಲಿ ಪ್ರದರ್ಶನ ಸುಧಾರಣೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ನಾನು ಒತ್ತಡಕ್ಕೆ ಬೀಳಲಿಲ್ಲ. ಯಾಕೆಂದರೆ ನಾನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದವ. ನನಗೆ ನನ್ನ ಬಗ್ಗೆ ವಿಶ್ವಾಸವಿದೆ. ಹೀಗಾಗಿ ಹಿನ್ನಡೆಯಿಂದ ಸುಧಾರಿಸಿಕೊಂಡು ಎಸೆದೆ ಹಾಗೂ ಬೆಳ್ಳಿಯ ಪದಕ ಗೆದ್ದೆ. ಮುಂದಿನ ಬಾರಿ ಪದಕದ ಬಣ್ಣ ಬದಲಾಯಿಸುವೆ,” ಎಂದು ಅವರು ಹೇಳಿದ್ದಾರೆ.

“ಸ್ಪರ್ಧೆ ನೋಡುವುದಕ್ಕೆ ಸುಲಭ ಎಂದು ಅನಿಸಬಹುದು. ಅದರೆ, ಚಿನ್ನ ಗೆದ್ದಿರುವ ಪೀಟರ್‌ ಆಂಡರ್ಸನ್‌ ಅವರು ೯೦ ಮೀಟರ್‌ಗಿಂತಲೂ ಆಚೆ ಈಟಿ ಎಸೆಯಲು ದೊಡ್ಡ ಪ್ರಯತ್ನವನ್ನೇ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರು ಅತ್ಯಂತ ಸಮರ್ಥ ಈಟಿ ಎಸೆತಗಾರ. ಹೆಚ್ಚಿನ ಸಂದರ್ಭದಲ್ಲಿ ಅವರು ೯೦ ಮೀಟರ್‌ಗಿಂತಲೂ ದೂರ ಎಸೆದಿದ್ದಾರೆ. ನಾನು ಉತ್ತಮ ಸಾಧನೆಯನ್ನೇ ಮಾಡಿದ್ದೇನೆ, ” ಎಂಬುದಾಗಿಯೂ ನೀರಜ್‌ ಹೇಳಿದ್ದಾರೆ.

ಸರಕಾರಕ್ಕೆ ಧನ್ಯವಾದ

ಬೆಳ್ಳಿ ಪದಕ ಗೆದ್ದಿರುವ ತಮ್ಮ ಸಾಧನೆಯ ಬಗ್ಗೆ ಹೆಮ್ಮೆ ಪಡುವ ಜತೆಗೆ ನೀರಜ್‌ ಅವರು ಭಾರತ ಸರಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರ, ಕೇಂದ್ರ ಸರಕಾರ, ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಮ್‌ ಸ್ಕೀಮ್‌ (TOPS) ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ದೇಶಕ್ಕಾಗಿ ನಾನು ಬೆಳ್ಳಿ ಗೆದ್ದೆ. ವಿದೇಶದಲ್ಲಿ ಅಭ್ಯಾಸ, ವಿದೇಶಿ ಕೋಚ್‌ಗಳನ್ನು ನೇಮಕ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

ಇದನ್ನೂ ಓದಿ | World Athletics Championships | ಒಂದೇ ತಿಂಗಳಲ್ಲಿ ಎರಡು ಬೆಳ್ಳಿ ಪದಕ ಗೆದ್ದ ನೀರಜ್‌ ಚೋಪ್ರಾ

Exit mobile version