ಬೆಂಗಳೂರು: ಜೂನ್ 23 ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಲಾಗದ ದಿನ. ಹೌದು, 2013ರಲ್ಲಿ ಭಾರತ ತಂಡ ಮಹೇಂದ್ರ ಸಿಂಗ್ ಧೋನಿ(MS Dhoni) ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಕಪ್(ICC Champions Trophy 2013) ಗೆದ್ದಿತು, ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಪಂದ್ಯದಲ್ಲಿ ಧೋನಿ ನೇತೃತ್ವದ ಭಾರತ ಫೈನಲ್‌ನಲ್ಲಿ 5 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ರೋಚಕ ಹೋರಾಟದಲ್ಲಿ ಸೋಲಿಸಿತ್ತು. ಈ ಸಂಭ್ರಕ್ಕೆ ಇದೀಗ 10 ವರ್ಷಗಳು ತುಂಬಿದೆ.
ಚಾಂಪಿಯನ್ಸ್ ಟ್ರೋಫಿ ಗೆದ್ದು 10 ವರ್ಷಗಳು ತುಂಬಿದ ಹಿನ್ನಲೆ ಬಿಸಿಸಿಐ ಭಾರತ ತಂಡ ಕಪ್ ಎತ್ತಿಹಿಡಿದಿರುವ ಫೋಟೊವನ್ನು ಟ್ವೀಟ್ ಮಾಡುವ ಮೂಲಕ ಮೂರು ಮಾದರಿಯ ಐಸಿಸಿ ಟ್ರೋಫಿ ಗೆದ್ದ ಮೊದಲ ಭಾರತ ತಂಡದ ನಾಯಕ ಎಂದು ಬರೆದುಕೊಂಡಿದೆ.
2013ರಲ್ಲಿ ನಡೆದ ಈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಭಾರತ ಪ್ರಶಸ್ತಿಗಾಗಿ ಸೆಣಸಾಟ ನಡೆಸಿತ್ತು. ಮಳೆಯಿಂದ ಅಡಚಣೆಯಾದ ಈ ಪಂದ್ಯದವನ್ನು ಡಕ್ವರ್ತ್ ನಿಯಮದನ್ವಯ 20 ಓವರ್ಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ವಿರಾಟ್ ಕೊಹ್ಲಿ(Virat Kohli) ಮತ್ತು ರವೀಂದ್ರ ಜಡೇಜಾ(ravindra jadeja) ಅವರ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ಗೆ 129 ರನ್ ಬಾರಿಸಿತು. ಬಳಿಕ ಗುರಿ ಬೆನ್ನಟ್ಟಿದ ಆಂಗ್ಲ ಪಡೆ ಗೆಲುವಿನ ಅಂಚಿನ ವರೆಗೆ ಬಂದು 5 ರನ್ ಅಂತರದಲ್ಲಿ ಸೋಲು ಕಂಡಿತು.
ಇದನ್ನೂ ಓದಿ ICC World Cup 2023: ಏಕದಿನ ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ
#OnThisDay in 2️⃣0️⃣1️⃣3️⃣
— BCCI (@BCCI) June 23, 2023
The @msdhoni-led #TeamIndia, beat England to lift the ICC Champions Trophy. 🏆
MS Dhoni became the first Captain (in Men's cricket) to win all three ICC trophies in limited-overs cricket 👏🏻👏🏻 pic.twitter.com/x4le09coFM
ವಿಪರ್ಯಾಸವೆಂದರೆ ಭಾರತ ಈ ಟ್ರೋಫಿ ಗೆದ್ದ ಬಳಿಕ ಇದುವರೆಗೂ ಒಂದೂ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. 2013ರ ಬಳಿಕ ಸೆಮಿಫೈನಲ್, ಫೈನಲ್ ಗಡಿಗಳಲ್ಲೇ ಟೀಮ್ ಇಂಡಿಯಾದ ಅಭಿಯಾನ ಕೊನೆಗೊಳ್ಳುತ್ತಿದೆ. 2014ರ ಟಿ20 ವಿಶ್ವಕಪ್ ಫೈನಲ್, 2016ರ ಟಿ20 ವಿಶ್ವಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್, 2021ರ ಐಸಿಸಿ ಟೆಸ್ಟ್ ವಿಶ್ವ ಕಪ್ ಫೈನಲಲ್, 2022ರ ಟಿ20 ವಿಶ್ವ ಕಪ್ ಸೆಮಿಫೈನಲ್… ಹೀಗೆ ಸಾಗುತ್ತ ಬಂದಿದೆ. ಇದೀಗ ಭಾರತದ ಆತಿಥ್ಯದಲ್ಲೇ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯನ್ನಾದರು ಗೆದ್ದು ಈ ಪ್ರಶಸ್ತಿ ಬರವನ್ನು ನೀಗಿಸಿತೇ ಎನ್ನುವುದು ಸದ್ಯದ ಕುತೂಹಲವಾಗಿದೆ. ಈ ಏಕದಿನ ವಿಶ್ವ ಟೂರ್ನಿ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯಲಿದೆ.