ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 (T20 World Cup 2024 ) ಹಲವಾರು ಕಾರಣಗಳಿಗಾಗಿ ಸ್ಮರಣೀಯ ಎನಿಸಿದೆ. ಕ್ರಿಕೆಟ್ ಹೆಚ್ಚು ಪ್ರಚಲಿತದಲ್ಲಿಲ್ಲದ ಯುಎಸ್ಎ ಪಂದ್ಯಾವಳಿಯ ಸಹ-ಆತಿಥ್ಯ ವಹಿಸಿದ್ದು ಆ ಕಾರಣಗಳಲ್ಲಿ ಒಂದಾಗಿದೆ. ಐಸಿಸಿ ಕೆಲವು ಸಮಯದಿಂದ ಯುಎಸ್ ಮಾರುಕಟ್ಟೆಯನ್ನು ಬೆಳೆಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವಕಪ್ ಆಯೋಜಿಸಿದ್ದ ದೊಡ್ಡ ಹೆಜ್ಜೆಯಾಗಿದೆ. ದೊಡ್ಡ ಪ್ರಮಾಣದ ಪ್ರೇಕ್ಷಕರನ್ನು ಸೆಳೆಯಲು ಐಸಿಸಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಯುಎಸ್ಎ ನಲ್ಲಿ ನಿಗದಿಪಡಿಸಿತ್ತು.
ಯುಎಸ್ಎಯಲ್ಲಿ 16 ಪಂದ್ಯಗಳನ್ನು ನಡೆಸಲಾಗಿತ್ತು. ನ್ಯೂಯಾರ್ಕ್, ಫ್ಲೋರಿಡಾ ಮತ್ತು ಡಲ್ಲಾಸ್ ಕ್ರೀಡಾಕೂಟದ ಆತಿಥ್ಯ ವಹಿಸಿದ್ದವು. ಅದರಲ್ಲೂ ಪಾಕಿಸ್ತಾನದ ವಿರುದ್ಧ ಯುಎಸ್ಎ ತಂಡದ ಅಚ್ಚರಿಯ ಗೆಲುವು ದೇಶದಲ್ಲಿ ಆಟದ ಬಗ್ಗೆ ಸಾಕಷ್ಟು ಕುತೂಹಲವ ಹುಟ್ಟುಹಾಕಿದೆ. ಐಸಿಸಿ ಪ್ರಕಾರ, ಸ್ಪರ್ಧೆಯ ಸಮಯದಲ್ಲಿ ಒಟ್ಟು 2.7 ಮಿಲಿಯನ್ ಯುಎಸ್ಎ ಮೂಲದ ಬಳಕೆದಾರರು ತಮ್ಮ ವೆಬ್ಸೈಟ್ ಮತ್ತು ಅಪ್ಲಿಕೇಷನ್ ಮೂಲಕ ಪಂದ್ಯಗಳನ್ನು ವೀಕ್ಷಿಸಿದ್ದರು. ಇದು 2022 ರ ಟಿ 20 ವಿಶ್ವಕಪ್ಗಿಂತ ಶೇಕಡಾ 370 ರಷ್ಟು ಅಧಿಕ.
ಐಸಿಸಿಗೆ ದೊಡ್ಡ ನಷ್ಟ
ಯುಎಸ್ಎಯಲ್ಲಿ ಪಂದ್ಯಾವಳಿ ಯಶಸ್ವಿಯಾಗಿದೆ ಎಂದು ತೋರುತ್ತದೆಯಾದರೂ, ಹಣಕಾಸಿನ ದೃಷ್ಟಿಯಿಂದ ಅದು ಸುಳ್ಳು. ಪಿಟಿಐ ವರದಿಯ ಪ್ರಕಾರ, ಟಿ 20 ವಿಶ್ವಕಪ್ ಯುಎಸ್ಎ ಚರಣ ಬಜೆಟ್ ಅನ್ನು ಮೀರಿದೆ ಮತ್ತು ಆಟದ ಆಡಳಿತ ಮಂಡಳಿಗೆ ದೊಡ್ಡ ನಷ್ಟವಾಗಿದೆ. ವರದಿಯ ಪ್ರಕಾರ, ಜುಲೈ 19 ರಂದು ಕೊಲಂಬೊದಲ್ಲಿ ನಡೆಯಲಿರುವ ವಿಶ್ವ ಆಡಳಿತ ಮಂಡಳಿಯ ವಾರ್ಷಿಕ ಸಮ್ಮೇಳನದಲ್ಲಿ ಐಸಿಸಿ ಮಂಡಳಿಯು ನಷ್ಟದ ಬಗ್ಗೆ ಚರ್ಚಿಸಲಿದೆ.
ಇದನ್ನೂ ಓದಿ: Kapil Dev : ಅಂಶುಮಾನ್ ಗಾಯಕ್ವಾಡ್ಗೆ ಕ್ಯಾನ್ಸರ್, ಬೇಸರ ವ್ಯಕ್ತಪಡಿಸಿದ ಕಪಿಲ್ ದೇವ್
ಲೆಕ್ಕಪರಿಶೋಧನೆ ಇನ್ನೂ ನಡೆಯುತ್ತಿರುವುದರಿಂದ ನಷ್ಟದ ನಿಖರ ಸಂಖ್ಯೆ ಸ್ಪಷ್ಟವಾಗಿಲ್ಲ. ಆದಾಗ್ಯೂ, ಪಂದ್ಯಾವಳಿಯ ಯುಎಸ್ ಲೆಗ್ಗೆ ನಷ್ಟವು ಲಕ್ಷಾಂತರ ಡಾಲರ್ಗಳಾಗಿದೆ ಎಂಬ ಭಾವನೆ ಪ್ರಮುಖ ಮಂಡಳಿಯ ಸದಸ್ಯರಲ್ಲಿದೆ.
ಟೂರ್ನಮೆಂಟ್ ನಿರ್ದೇಶಕ ಕ್ರಿಸ್ ಟೆಟ್ಲಿ ಅವರು ಪಂದ್ಯಾವಳಿ ಪ್ರಾರಂಭವಾಗುವ ಮೊದಲೇ ರಾಜೀನಾಮೆ ನೀಡಿರುವುದು ಈ ನಷ್ಟದ ಹಿನ್ನೆಲೆಯಲ್ಲಿ ಎನ್ನಲಾಗಿದೆ. ಟೆಟ್ಲಿಯ ಪ್ರದರ್ಶನದಿಂದ ಅನೇಕ ಸದಸ್ಯರು ಸಂತೋಷವಾಗಿಲ್ಲ. ಅವರು ರಾಜೀನಾಮೆ ನೀಡಿದ್ದರು ಟಿ 20 ವಿಶ್ವಕಪ್ನ ಯುಎಸ್ಎ ಲೆಗ್ಗೂ ಇದಕ್ಕೂ ಯಾವುದೇ ಸಂಬಂಧವಿದೆ ಎಂದು ಹೇಳಲಾಗುವುದಿಲ್ಲ” ಎಂದು ಐಸಿಸಿ ಮಂಡಳಿಯ ಮೂಲಗಳು ಪಿಟಿಐಗೆ ತಿಳಿಸಿವೆ.
ನ್ಯೂಯಾರ್ಕ್ ನಗರವನ್ನು ಈವೆಂಟ್ನ ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಿದ್ದಕ್ಕಾಗಿ ಐಸಿಸಿಯ ಪ್ರಭಾವಿ ಸದಸ್ಯರು ಆಡಳಿತ ಮಂಡಳಿಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ನ್ಯೂಯಾರ್ಕ್ನಲ್ಲಿ ಮೀಸಲಾದ ಕ್ರಿಕೆಟ್ ಕ್ರೀಡಾಂಗಣವಿಲ್ಲದ ಕಾರಣ, ತಾತ್ಕಾಲಿಕ ಸ್ಟೇಡಿಯಮ್ ನಿರ್ಮಿಸಲಾಗಿತ್ತು. ಆದರೆ ಪಿಚ್ ಮತ್ತು ಔಟ್ಫೀಲ್ಡ್ ತೀವ್ರ ಟೀಕೆಗೆ ಒಳಗಾಯಿತು.