T20 World Cup 2024 : ವಿಶ್ವ ಕಪ್ ಆಯೋಜನೆಯಲ್ಲಿ ಐಸಿಸಿಗೆ ಸಿಕ್ಕಾಪಟ್ಟೆ ನಷ್ಟ ​; ತೆರೆಮರೆಯಲ್ಲಿ ಜೋರು ಚರ್ಚೆ - Vistara News

ಕ್ರೀಡೆ

T20 World Cup 2024 : ವಿಶ್ವ ಕಪ್ ಆಯೋಜನೆಯಲ್ಲಿ ಐಸಿಸಿಗೆ ಸಿಕ್ಕಾಪಟ್ಟೆ ನಷ್ಟ ​; ತೆರೆಮರೆಯಲ್ಲಿ ಜೋರು ಚರ್ಚೆ

T20 World Cup 2024 : ಯುಎಸ್ಎಯಲ್ಲಿ ಪಂದ್ಯಾವಳಿ ಯಶಸ್ವಿಯಾಗಿದೆ ಎಂದು ತೋರುತ್ತದೆಯಾದರೂ, ಹಣಕಾಸಿನ ದೃಷ್ಟಿಯಿಂದ ಅದು ಸುಳ್ಳು. ಪಿಟಿಐ ವರದಿಯ ಪ್ರಕಾರ, ಟಿ 20 ವಿಶ್ವಕಪ್​​ ಯುಎಸ್ಎ ಚರಣ ಬಜೆಟ್​​ ಅನ್ನು ಮೀರಿದೆ ಮತ್ತು ಆಟದ ಆಡಳಿತ ಮಂಡಳಿಗೆ ದೊಡ್ಡ ನಷ್ಟವಾಗಿದೆ. ವರದಿಯ ಪ್ರಕಾರ, ಜುಲೈ 19 ರಂದು ಕೊಲಂಬೊದಲ್ಲಿ ನಡೆಯಲಿರುವ ವಿಶ್ವ ಆಡಳಿತ ಮಂಡಳಿಯ ವಾರ್ಷಿಕ ಸಮ್ಮೇಳನದಲ್ಲಿ ಐಸಿಸಿ ಮಂಡಳಿಯು ನಷ್ಟದ ಬಗ್ಗೆ ಚರ್ಚಿಸಲಿದೆ.

VISTARANEWS.COM


on

T20 World Cup 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 (T20 World Cup 2024 ) ಹಲವಾರು ಕಾರಣಗಳಿಗಾಗಿ ಸ್ಮರಣೀಯ ಎನಿಸಿದೆ. ಕ್ರಿಕೆಟ್​ ಹೆಚ್ಚು ಪ್ರಚಲಿತದಲ್ಲಿಲ್ಲದ ಯುಎಸ್ಎ ಪಂದ್ಯಾವಳಿಯ ಸಹ-ಆತಿಥ್ಯ ವಹಿಸಿದ್ದು ಆ ಕಾರಣಗಳಲ್ಲಿ ಒಂದಾಗಿದೆ. ಐಸಿಸಿ ಕೆಲವು ಸಮಯದಿಂದ ಯುಎಸ್ ಮಾರುಕಟ್ಟೆಯನ್ನು ಬೆಳೆಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವಕಪ್ ಆಯೋಜಿಸಿದ್ದ ದೊಡ್ಡ ಹೆಜ್ಜೆಯಾಗಿದೆ. ದೊಡ್ಡ ಪ್ರಮಾಣದ ಪ್ರೇಕ್ಷಕರನ್ನು ಸೆಳೆಯಲು ಐಸಿಸಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಯುಎಸ್ಎ ನಲ್ಲಿ ನಿಗದಿಪಡಿಸಿತ್ತು.

ಯುಎಸ್ಎಯಲ್ಲಿ 16 ಪಂದ್ಯಗಳನ್ನು ನಡೆಸಲಾಗಿತ್ತು. ನ್ಯೂಯಾರ್ಕ್, ಫ್ಲೋರಿಡಾ ಮತ್ತು ಡಲ್ಲಾಸ್ ಕ್ರೀಡಾಕೂಟದ ಆತಿಥ್ಯ ವಹಿಸಿದ್ದವು. ಅದರಲ್ಲೂ ಪಾಕಿಸ್ತಾನದ ವಿರುದ್ಧ ಯುಎಸ್ಎ ತಂಡದ ಅಚ್ಚರಿಯ ಗೆಲುವು ದೇಶದಲ್ಲಿ ಆಟದ ಬಗ್ಗೆ ಸಾಕಷ್ಟು ಕುತೂಹಲವ ಹುಟ್ಟುಹಾಕಿದೆ. ಐಸಿಸಿ ಪ್ರಕಾರ, ಸ್ಪರ್ಧೆಯ ಸಮಯದಲ್ಲಿ ಒಟ್ಟು 2.7 ಮಿಲಿಯನ್ ಯುಎಸ್ಎ ಮೂಲದ ಬಳಕೆದಾರರು ತಮ್ಮ ವೆಬ್​ಸೈಟ್​ ಮತ್ತು ಅಪ್ಲಿಕೇಷನ್​ ಮೂಲಕ ಪಂದ್ಯಗಳನ್ನು ವೀಕ್ಷಿಸಿದ್ದರು. ಇದು 2022 ರ ಟಿ 20 ವಿಶ್ವಕಪ್​ಗಿಂತ ಶೇಕಡಾ 370 ರಷ್ಟು ಅಧಿಕ.

ಐಸಿಸಿಗೆ ದೊಡ್ಡ ನಷ್ಟ

ಯುಎಸ್ಎಯಲ್ಲಿ ಪಂದ್ಯಾವಳಿ ಯಶಸ್ವಿಯಾಗಿದೆ ಎಂದು ತೋರುತ್ತದೆಯಾದರೂ, ಹಣಕಾಸಿನ ದೃಷ್ಟಿಯಿಂದ ಅದು ಸುಳ್ಳು. ಪಿಟಿಐ ವರದಿಯ ಪ್ರಕಾರ, ಟಿ 20 ವಿಶ್ವಕಪ್​​ ಯುಎಸ್ಎ ಚರಣ ಬಜೆಟ್​​ ಅನ್ನು ಮೀರಿದೆ ಮತ್ತು ಆಟದ ಆಡಳಿತ ಮಂಡಳಿಗೆ ದೊಡ್ಡ ನಷ್ಟವಾಗಿದೆ. ವರದಿಯ ಪ್ರಕಾರ, ಜುಲೈ 19 ರಂದು ಕೊಲಂಬೊದಲ್ಲಿ ನಡೆಯಲಿರುವ ವಿಶ್ವ ಆಡಳಿತ ಮಂಡಳಿಯ ವಾರ್ಷಿಕ ಸಮ್ಮೇಳನದಲ್ಲಿ ಐಸಿಸಿ ಮಂಡಳಿಯು ನಷ್ಟದ ಬಗ್ಗೆ ಚರ್ಚಿಸಲಿದೆ.

ಇದನ್ನೂ ಓದಿ: Kapil Dev : ಅಂಶುಮಾನ್ ಗಾಯಕ್ವಾಡ್​ಗೆ ಕ್ಯಾನ್ಸರ್​, ಬೇಸರ ವ್ಯಕ್ತಪಡಿಸಿದ ಕಪಿಲ್​ ದೇವ್​

ಲೆಕ್ಕಪರಿಶೋಧನೆ ಇನ್ನೂ ನಡೆಯುತ್ತಿರುವುದರಿಂದ ನಷ್ಟದ ನಿಖರ ಸಂಖ್ಯೆ ಸ್ಪಷ್ಟವಾಗಿಲ್ಲ. ಆದಾಗ್ಯೂ, ಪಂದ್ಯಾವಳಿಯ ಯುಎಸ್ ಲೆಗ್ಗೆ ನಷ್ಟವು ಲಕ್ಷಾಂತರ ಡಾಲರ್​ಗಳಾಗಿದೆ ಎಂಬ ಭಾವನೆ ಪ್ರಮುಖ ಮಂಡಳಿಯ ಸದಸ್ಯರಲ್ಲಿದೆ.

ಟೂರ್ನಮೆಂಟ್ ನಿರ್ದೇಶಕ ಕ್ರಿಸ್ ಟೆಟ್ಲಿ ಅವರು ಪಂದ್ಯಾವಳಿ ಪ್ರಾರಂಭವಾಗುವ ಮೊದಲೇ ರಾಜೀನಾಮೆ ನೀಡಿರುವುದು ಈ ನಷ್ಟದ ಹಿನ್ನೆಲೆಯಲ್ಲಿ ಎನ್ನಲಾಗಿದೆ. ಟೆಟ್ಲಿಯ ಪ್ರದರ್ಶನದಿಂದ ಅನೇಕ ಸದಸ್ಯರು ಸಂತೋಷವಾಗಿಲ್ಲ. ಅವರು ರಾಜೀನಾಮೆ ನೀಡಿದ್ದರು ಟಿ 20 ವಿಶ್ವಕಪ್​​ನ ಯುಎಸ್ಎ ಲೆಗ್​ಗೂ ಇದಕ್ಕೂ ಯಾವುದೇ ಸಂಬಂಧವಿದೆ ಎಂದು ಹೇಳಲಾಗುವುದಿಲ್ಲ” ಎಂದು ಐಸಿಸಿ ಮಂಡಳಿಯ ಮೂಲಗಳು ಪಿಟಿಐಗೆ ತಿಳಿಸಿವೆ.

ನ್ಯೂಯಾರ್ಕ್ ನಗರವನ್ನು ಈವೆಂಟ್​​ನ ಸ್ಥಳಗಳಲ್ಲಿ ಒಂದಾಗಿ ಆಯ್ಕೆ ಮಾಡಿದ್ದಕ್ಕಾಗಿ ಐಸಿಸಿಯ ಪ್ರಭಾವಿ ಸದಸ್ಯರು ಆಡಳಿತ ಮಂಡಳಿಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ನ್ಯೂಯಾರ್ಕ್​​ನಲ್ಲಿ ಮೀಸಲಾದ ಕ್ರಿಕೆಟ್ ಕ್ರೀಡಾಂಗಣವಿಲ್ಲದ ಕಾರಣ, ತಾತ್ಕಾಲಿಕ ಸ್ಟೇಡಿಯಮ್​ ನಿರ್ಮಿಸಲಾಗಿತ್ತು. ಆದರೆ ಪಿಚ್ ಮತ್ತು ಔಟ್​​ಫೀಲ್ಡ್​ ತೀವ್ರ ಟೀಕೆಗೆ ಒಳಗಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Rishabh Pant: ಸಹ ಆಟಗಾರ ಖಲೀಲ್​ ಅಹ್ಮದ್​ರನ್ನು ಸ್ವಿಮ್ಮಿಂಗ್ ಪೂಲ್‌​ಗೆ ತಳ್ಳಿ ಹಾಕಿದ ಪಂತ್​; ವಿಡಿಯೊ ವೈರಲ್​

Rishabh Pant: ಪಂತ್​, ಅಕ್ಷರ್ ಪಟೇಲ್​​ ಮತ್ತು ಖಲೀಲ್​ ಉತ್ತಮ ಸ್ನೇಹಿತರಾಗಿದ್ದಾರೆ. ಜತೆಗೆ ಐಪಿಎಲ್​ನಲ್ಲಿಯೂ ಈ ಮೂರು ಆಟಗಾರರು ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡುತ್ತಿದ್ದಾರೆ.

VISTARANEWS.COM


on

Rishabh Pant
Koo

ಮುಂಬಯಿ: ಟಿ20 ವಿಶ್ವಕಪ್​ ಗೆದ್ದ ಬಳಿಕ ಟೀಮ್​ ಇಂಡಿಯಾದ ಆಟಗಾರರು ತಮ್ಮ ಗೆಳೆಯರ, ಕುಟುಂಬದ ಜತೆ ದೇಶ-ವಿದೇಶಕ್ಕೆ ಪ್ರವಾಸ ಕೈಗೊಳ್ಳುತ್ತಾ ಎಂಜಾಯ್​ ಮಾಡುತ್ತಿದ್ದಾರೆ. ವಿಶ್ವಕಪ್​ ತಂಡದ ಭಾಗವಾಗಿದ್ದ, ಆತ್ಮೀಯ ಗೆಳೆಯರು ಆಗಿರುವ ರಿಷಭ್​ ಪಂತ್(Rishabh Pant)​, ಅಕ್ಷರ್​ ಪಟೇಲ್​ ಮತ್ತು ಖಲೀಲ್​ ಅಹ್ಮದ್​(Khaleel Ahmed) ಕೂಡ ಪ್ರವಾಸ ಹೋಗಿದ್ದಾರೆ. ಈ ವೇಳೆ ಪಂತ್​ ಖಲೀಲ್ ಅವರನ್ನು ಸ್ವಿಮ್ಮಿಂಗ್ ಪೂಲ್‌​ಗೆ(Khaleel Ahmed in a swimming pool) ತಳ್ಳಿ ಹಾಕಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಮೂರು ಆಟಗಾರರು ವಿದೇಶ ಪ್ರವಾಸದಲ್ಲಿ ಎಂಜಾಯ್​ ಮಾಡುತ್ತಿದ್ದು, ಹೊಟೇಲ್​ನಿಂದ ಬೀಚ್​ಗೆ ನಡೆದುಕೊಂಡು ಹೋಗುವಾಗ ಪಂತ್​ ಅವರು ಖಲೀಲ್​ ಅವರನ್ನು ಮಾತನಾಡಿಸುವಂತೆ ಹತ್ತಿರಕ್ಕೆ ಬಂದು ಸ್ವಿಮ್ಮಿಂಗ್ ಪೂಲ್‌​ಗೆ ದೂಡಿ ಹಾಕಿದ್ದಾರೆ. ನೀರಿಗೆ ಬೀಳುವ ಮುನ್ನವೇ ಖಲೀಲ್​ ತಮ್ಮ ಕೈಯಲ್ಲಿದ್ದ ಮೊಬೈಲ್​ ಮೇಲಕ್ಕೆ ಎಸೆದು ಮೊಬೈಲ್​ ನೀರಿಗೆ ಬೀಳದಂತೆ ನೋಡಿಕೊಂಡಿದ್ದಾರೆ. ನೀರಿಗೆ ಬಿದ್ದ ಖಲೀಲ್​ ಕಂಡು ಪಂತ್​ ಮತ್ತು ಇಲ್ಲಿ ನೆರೆದಿದ್ದ ಇತರ ಪ್ರವಾಸಿಗರು ಜೋರಾಗಿ ನಕ್ಕಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಿಂದ ಮೇಲೆದ್ದು ಬಂದ ಬಳಿಕ ಪಂತ್​ ಖಲೀಲ್​ ಅವರನ್ನು ತಬ್ಬಿಕೊಂಡಿದ್ದಾರೆ.

ಪಂತ್​, ಅಕ್ಷರ್​ ಮತ್ತು ಖಲೀಲ್​ ಉತ್ತಮ ಸ್ನೇಹಿತರಾಗಿದ್ದಾರೆ. ಐಪಿಎಲ್​ನಲ್ಲಿಯೂ ಈ ಮೂರು ಆಟಗಾರರು ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡುತ್ತಾರೆ. ಪಂತ್​ ತಮಾಷೆಗೆಂದೇ ಖಲೀಲ್​ ಅವರನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಿದ್ದು. ಸದ್ಯ ಗೆಳೆಯರ ಈ ಚೇಷ್ಟೆಯ ವಿಡಿಯೊ ವೈರಲ್​ ಆಗಿದ್ದು ನೆಟ್ಟಿಗರು ಈ ವಿಡಿಯೊಗೆ ದೇಕೊ ಪಂತ್​ನೇ ಏ ಕ್ಯಾ ಕಿಯಾ(ನೋಡಿ ಪಂತ್​ ಏನು ಮಾಡಿದ್ದಾರೆ) ಎಂದು ಕಮೆಂಟ್ ಮಾಡಿದ್ದಾರೆ.​

ಮುಂದಿನ ವರ್ಷ ಪಂತ್​ ಅವರು ಡೆಲ್ಲಿ ತಂಡ ತೊರೆದು ಬೇರೆ ಫ್ರಾಂಷೈಸಿ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಪಂತ್​ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮಹೇಂದ್ರ ಸಿಂಗ್​ ಧೋನಿ ಮುಂದಿನ ವರ್ಷ ಐಪಿಎಲ್​ ಆಡುವುದು ಖಚಿತತೆ ಇಲ್ಲ. ಇಂಪ್ಯಾಕ್ಟ್​ ನಿಯಮ ಇದ್ದರೆ ಆಡುವುದಾಗಿ ಫ್ರಾಂಚೈಸಿ ಮೂಲಗಳು ಈಗಾಗಲೇ ಮಾಹಿತಿ ನೀಡಿದೆ. ಈ ಬಾರಿಯೇ ಧೋನಿ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು. ಧೋನಿ ಸ್ಥಾನಕ್ಕೆ ಪಂತ್​ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯೊಂದು ಕಂಡುಬಂದಿದೆ.

ಇದನ್ನೂ ಓದಿ Rishabh Pant: ಡೆಲ್ಲಿ ತೊರೆದು ಮುಂದಿನ ಐಪಿಎಲ್​ನಲ್ಲಿ ಈ ಫ್ರಾಂಚೈಸಿ ಪರ ಆಡಲಿದ್ದಾರೆ ರಿಷಭ್​ ಪಂತ್​

ಧೋನಿ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ, ರಿಷಭ್​ ಪಂತ್​ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಣ್ಣನ ಸ್ಥಾನದಲ್ಲಿ ನಿಂತು ಧೋನಿ ಅವರು ಪಂತ್​ಗೆ ಸಲಹೆ ನೀಡುತ್ತಾರೆ. ಪಂತ್​ ಕೂಡ ಧೋನಿ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಧೋನಿಯೇ ಪಂತ್​ ಅವರನ್ನು ಸಿಎಸ್​ಕೆ ತಂಡಕ್ಕೆ ಆಹ್ವಾನಿಸಬಹುದು. ಪಂತ್​ ಚೆನ್ನೈ ಸೇರಿದರೆ ಕೀಪಿಂಗ್​ ನಡೆಸಬಹುದು. ಧೋನಿ ಇಂಪ್ಯಾಕ್ಟ್​ ಆಟಗಾರನಾಗಿ ಬ್ಯಾಟಿಂಗ್​ ಮಾತ್ರ ನಡೆಸುವ ಸಾಧ್ಯತೆ ಇದೆ.

Continue Reading

ಕ್ರೀಡೆ

RCB: ಆರ್​ಸಿಬಿ ಕಪ್​ ಗೆಲ್ಲದಿರಲು ನೈಜ ಕಾರಣ ತಿಳಿಸಿದ ತಂಡದ ಮಾಜಿ ಆಟಗಾರ

RCB: ಆರ್​ಸಿಬಿ ತಂಡದಲ್ಲಿ ಸಂಸ್ಕೃತಿ ಎಂಬುದೇ ಇಲ್ಲ. ತಂಡದ ಪ್ರದರ್ಶನದ ಗಮನಿಸಿದರೆ ಎಲ್ಲವೂ ತಿಳಿಯುತ್ತದೆ. ಒಂದು ತಂಡವಾಗಿ ಆಡಲು ಬೇಕಾದ ಸಂಸ್ಕೃತಿ ಇಲ್ಲದೇ ಇರುವುದಕ್ಕೇ ಆರ್‌ಸಿಬಿ ಈವರೆಗೆ ಟ್ರೋಫಿ ಗೆದ್ದಿಲ್ಲ. ತಂಡದ ಎಲ್ಲ ಆಟಗಾರರನ್ನು ಒಂದೇ ರೀತಿಯಲ್ಲಿ ಕಂಡರೆ ಖಂಡಿತಾ ಕಪ್​ ಗೆಲ್ಲುವುದು ಖಚಿತ ಎಂದು ಪಾರ್ಥಿವ್‌ ಪಟೇಲ್‌ ಹೇಳಿದ್ದಾರೆ.

VISTARANEWS.COM


on

RCB
Koo

ಮುಂಬಯಿ: ಐಪಿಎಲ್​ನ ನತದೃಷ್ಠ ತಂಡಗಳಲ್ಲಿ ಒಂದಾಗಿರುವ ಆರ್​ಸಿಬಿ(RCB) ತಂಡ ಇದುವರೆಗೂ ಕಪ್​ ಗೆಲ್ಲಲು ಸಾಧ್ಯವಾಗಲಿಲ್ಲ ಏಕೆ ಎಂಬ ಸತ್ಯವನ್ನು ತಂಡದ ಮಾಚಿ ಆಟಗಾರ ಪಾರ್ಥಿವ್‌ ಪಟೇಲ್‌(Parthiv Patel) ರಿವೀಲ್​ ಮಾಡಿದ್ದಾರೆ. ತಂಡದಲ್ಲಿ ಉತ್ತಮ ಸಂಸ್ಕೃತಿ ಇಲ್ಲದೇ ಇರುವುದೇ ಕಪ್​ ಗೆಲ್ಲದಿರಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಆರ್‌ಸಿಬಿ(Royal Challengers Bengaluru) ತಂಡದಲ್ಲಿ ಆಡುತ್ತಿದ್ದ ದಿನಗಳನ್ನು ಸ್ಮರಿಸಿರುವ ಪಾರ್ಥಿವ್‌ ಪಟೇಲ್‌, “ನಾನೂ ಆರ್‌ಸಿಬಿ ತಂಡದಲ್ಲಿ ಹಲವು ವರ್ಷಗಳ ಕಾಲ ಆಡಿದ್ದೇನೆ. ಆ ತಂಡಕ್ಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಆದರೆ, ಆ ತಂಡದಲ್ಲಿ ಎಲ್ಲವೂ ವ್ಯಕ್ತಿ ಪೂಜೆಯ ಮೇಲೆ ನಿಂತಿದೆ. ಕೆಲವೇ ಕೆಲ ಸ್ಟಾರ್‌ ಆಟಗಾರರಿಗೆ ಮಾತ್ರ ವಿಶೇಷ ಸತ್ಕಾರ ನೀಡಲಾಗುತ್ತದೆ. ಈ ಆಟಗಾರರ ಸೇವೆಯ ಬಳಿಕವಷ್ಟೇ ತಂಡದ ಉಳಿದ ಆಟಗಾರರನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ಇದನ್ನೂ ನಾನು ಕಣ್ಣಾರೆ ಕಂಡಿದ್ದೇನೆ” ಎಂದು ಹೇಳಿದ್ದಾರೆ.

“ಆರ್​ಸಿಬಿ ತಂಡದಲ್ಲಿ ಸಂಸ್ಕೃತಿ ಎಂಬುದೇ ಇಲ್ಲ. ತಂಡದ ಪ್ರದರ್ಶನದ ಗಮನಿಸಿದರೆ ಎಲ್ಲವೂ ತಿಳಿಯುತ್ತದೆ. ಒಂದು ತಂಡವಾಗಿ ಆಡಲು ಬೇಕಾದ ಸಂಸ್ಕೃತಿ ಇಲ್ಲದೇ ಇರುವುದಕ್ಕೇ ಆರ್‌ಸಿಬಿ ಈವರೆಗೆ ಟ್ರೋಫಿ ಗೆದ್ದಿಲ್ಲ. ತಂಡದ ಎಲ್ಲ ಆಟಗಾರರನ್ನು ಒಂದೇ ರೀತಿಯಲ್ಲಿ ಕಂಡರೆ ಖಂಡಿತಾ ಕಪ್​ ಗೆಲ್ಲುವುದು ಖಚಿತ” ಎಂದು ಪಾರ್ಥಿವ್‌ ಪಟೇಲ್‌ ಹೇಳಿದ್ದಾರೆ.

ಪಾರ್ಥಿವ್‌ ಅವರ ಈ ಹೇಳಿಕೆಗೆ ನೆಟ್ಟಿಗರರು ಕಮೆಂಟ್​ ಮಾಡಿದ್ದು, ದೊಡ್ಡ ಚಿಂತಕ, ಕ್ರಿಕೆಟ್‌ ವಿಮರ್ಶಕ, ದೇಶಿಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆಟಗಾರ, ಯುವಕ, ಐಪಿಎಲ್‌ ಅನುಭವ ಹಾಗೂ ಆಟಗಾರರ ಸಾಮರ್ಥ್ಯದ ಅರಿವು ಹೊಂದಿರುವ ನೀವು ಏಕೆ ಆರ್​ಸಿಬಿ ಮ್ಯಾನೆಜ್​ಮೆಂಟ್​ ಸೇರಿ ಉತ್ತಮ ಸಂಸ್ಕೃತಿಯ ವಾತಾವರಣ ನಿರ್ಮಾಣ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.

ಮುಂದಿನ ವರ್ಷ ಮೆಗಾ ಹರಾಜು ಕೂಡ ನಡೆಯಲಿದೆ. (IPL 2025)​ 18ನೇ ಆವೃತ್ತಿಯಲ್ಲಿ ಬೆಂಗಳೂರು ತಂಡದಲ್ಲಿ ಕೂಡ ದೊಡ್ಡ ಬದಲಾವಣೆಯೊಂದು ಸಂಭವಿಸುವ ಮುನ್ಸೂಚನೆಯೊಂದು ಲಭಿಸಿದೆ. ಈ ಹಿಂದೆ ತಂಡದ ನಾಯಕನಾಗಿದ್ದ ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್​ ಅವರನ್ನು ಕೈ ಬಿಟ್ಟು ಮಾಜಿ ನಾಯಕ ವಿರಾಟ್​ ಕೊಹ್ಲಿ(Virat Kohli)ಗೆ ಮತ್ತೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ IPL 2025: ಕೆಕೆಆರ್​ ತಂಡದ ಮೆಂಟರ್​ ಆಗಲಿದ್ದಾರಾ ರಾಹುಲ್ ದ್ರಾವಿಡ್?

ವಿರಾಟ್​ ಕೊಹ್ಲಿ ಅವರು ಭಾರತ ತಂಡದ ಮೂರು ಮಾದರಿಯ ನಾಯಕತ್ವ ವಹಿಸಿಕೊಂಡಿದ್ದ ವೇಳೆ ಐಪಿಎಲ್​ನಲ್ಲಿಯೂ ತಂಡವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ, ಕೆಲಸದ ಒತ್ತಡದಿಂದಾಗಿ ಆಟದ ಕಡೆ ಸರಿಯಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಐಪಿಎಲ್​ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಸೂಕ್ತ ನಾಯಕನ ಸ್ಥಾನಕ್ಕೆ ಚೆನ್ನೈ ತಂಡದಲ್ಲಿದ್ದ ಫಾಫ್​ ಡುಪ್ಲೆಸಿಸ್​ ಅವರನ್ನು ಖರೀದಿ ಮಾಡಿ ಅವರಿಗೆ ನಾಯಕತ್ವ ನೀಡಲಾಗಿತ್ತು.

ಕಳೆದ ಮೂರು ಸೀಸನ್​ನಲ್ಲಿ ಡುಪ್ಲೆಸಿಸ್ ಆರ್​ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಕಳೆದ ಬಾರಿಯಂತೂ ಲೀಗ್​ನಿಂದಲೇ ಹೊರಬಿದ್ದಿತ್ತು. ಇದೀಗ ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿ ಮತ್ತೆ ನಾಯಕನಾದರೂ ಅಚ್ಚರಿಯಿಲ್ಲ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದರೂ ಕೂಡ ಕೊಹ್ಲಿ ಇದಕ್ಕೆ ಒಪ್ಪಲಿದ್ದಾರಾ ಎನ್ನುವುದು ಕುತೂಹಲ. ಈ ಐಪಿಎಲ್​ನಲ್ಲಿ ಕೊಹ್ಲಿ ಪ್ರಚಂಡ ಬ್ಯಾಟಿಂಗ್​ ಮೂಲಕ 700ಕ್ಕೂ ಅಧಿಕ ರನ್​ ಕಲೆ ಹಾಕಿ ಟೂರ್ನಿಯ ಅತ್ಯಧಿಕ ಸ್ಕೋರ್​ ಎನಿಸಿಕೊಂಡಿದ್ದರು.

Continue Reading

ಕ್ರೀಡೆ

Rohit Sharma: ‘ಎಲಾ ಉನ್ನಾರು?’; ತೆಲುಗಿನಲ್ಲಿ ಮಾತನಾಡಿದ ರೋಹಿತ್ ಶರ್ಮ; ವಿಡಿಯೊ ವೈರಲ್​

Rohit Sharma: ಮುಂಬೈಕರ್​​ ಅಂತಲೇ ಫೇಮಸ್​ ಆಗಿರುವ ರೋಹಿತ್​ ಶರ್ಮ ಅವರಿಗೆ ಹೈದರಾಬಾದ್​ ನಂಟು ಕೂಡ ಇದೆ. ಅಚ್ಚರಿ ಎಂದರೆ ಅವರ ಮಾತೃ ಭಾಷೆ ಕೂಡ ತೆಲುಗು. ಹೌದು, ರೋಹಿತ್​ ಮೂಲತಃ ಆಂಧ್ರ ಪ್ರದೇಶದವರು.

VISTARANEWS.COM


on

Rohit Sharma
Koo

ಹೈದರಾಬಾದ್​: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಅವರು ವೇದಿಕೆಯೊಂದರಲ್ಲಿ ತೆಲುಗು ಮಾತನಾಡಿದ ವಿಡಿಯೊ ವೈರಲ್​ ಆಗಿದೆ. ಅಭಿಮಾನಿಗಳಿಗೆ ರೋಹಿತ್​, ಎಲಾ ಉನ್ನಾರು?(ಹೇಗಿದ್ದೀರಾ) ಎಂದು ಕೇಳಿದ್ದಾರೆ. ರೋಹಿತ್​ ತೆಲುಗು ಮಾತನಾಡುತ್ತಿದ್ದಂತೆ ನೆರದಿದ್ದ ಅಭಿಮಾನಿಗಳು ಖಷಿಯಿಂದ ಜೋರಾಗಿ ಕಿರುಚಾಡಿದರು.

ಮುಂಬೈಕರ್​​ ಅಂತಲೇ ಫೇಮಸ್​ ಆಗಿರುವ ರೋಹಿತ್​ ಶರ್ಮ ಅವರಿಗೆ ಹೈದರಾಬಾದ್​ ನಂಟು ಕೂಡ ಇದೆ. ಅಚ್ಚರಿ ಎಂದರೆ ಅವರ ಮಾತೃ ಭಾಷೆ ಕೂಡ ತೆಲುಗು. ಹೌದು, ರೋಹಿತ್​ ಮೂಲತಃ ಆಂಧ್ರ ಪ್ರದೇಶದವರು. ಈ ವಿಚಾರವನ್ನು ಅವರು ಹಿಂದೊಮ್ಮೆ ಸಂದರ್ಶನದಲ್ಲಿಯೂ ಹೇಳಿದ್ದರು. ತಾಯಿಯ ಜತೆ ಮನೆಯಲ್ಲಿ ತೆಲುಗು ಭಾಷೆಯನ್ನೇ ಮಾತನಾಡುತ್ತೇನೆ ಎಂದಿದ್ದರು. ರೋಹಿತ್​ ತಾಯಿ ವೈಜಾಗ್​ನವರು.

ಹೈದರಾಬಾದ್​ನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ರೋಹಿತ್​ ನೆರದಿದ್ದ ಅಭಿಮಾನಿಗಳ ಬಳಿ ಎಲಾ ಉನ್ನಾರು?(ಹೇಗಿದ್ದೀರಾ), ಬನ್ನಿ ಉಪ್ಪಳ(ಹೈದರಾಬಾದ್​) ಸ್ಟ್ರೇಡಿಯಂಗೆ ಹೋಗೋಣ ಎಂದು ತೆಲುಗಿನಲ್ಲೇ ಹೇಳಿದ್ದಾರೆ. ಸದ್ಯ ಈ ವಿಡಿಯೊವನ್ನು ಹೈದರಾಬಾದ್​ನ ರೋಹಿತ್​ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶೇರ್ ಮಾಡುತ್ತಿದ್ದಾರೆ.

​ಇದೇ ಕಾರ್ಯಕ್ರಮದಲ್ಲಿ ರೋಹಿತ್(rohit sharma retirement)​ ತಮ್ಮ ನಿವೃತ್ತಿಯ ವಿಚಾರದಲ್ಲಿ ಹರಿದಾಡುತ್ತಿದ್ದ ಎಲ್ಲ ಉಹಾಪೋಹಕ್ಕೆ ಸ್ಪಷ್ಟನೆ ನೀಡಿದ್ದರು.  “ನಾನು ನಿವೃತ್ತಿಯ ಬಗ್ಗೆ ಈಗಲೇ ಏನೂ ಯೋಚನೆ ಮಾಡಿಲ್ಲ. ಜೀವನವು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಪ್ರಸ್ತುತ ನಾನು ಚೆನ್ನಾಗಿ ಆಡುತ್ತಿದ್ದು, ಮುಂದಿನ ಕೆಲ ವರ್ಷಗಳ ಕಾಲ ಭಾರತ ಪರ ಟೆಸ್ಟ್​ ಮತ್ತು ಏಕದಿನ ಆಡುವ ಯೋಜನೆಯಲ್ಲಿದ್ದೇನೆ ಎಂದು ಹೇಳುವ ತಮ್ಮ ನಿವೃತ್ತಿ ಕುರಿತ ಊಹಾಪೋಹಕ್ಕೆ ತೆರೆ ಎಳೆದಿದ್ದರು.

ಇದನ್ನೂ ಓದಿ Rohit Sharma: ಕ್ರಿಕೆಟ್​ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ರೋಹಿತ್​ ಶರ್ಮ

ಸದ್ಯ ರೋಹಿತ್​ ವಿಶ್ರಾಂತಿಯಲ್ಲಿದ್ದು ಶ್ರೀಲಂಕಾ ವಿರುದ್ಧದ ಸರಣಿಗೂ ಗೈರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ರೋಹಿತ್ ನಾಯಕತ್ವದಲ್ಲಿ, ಜೂನ್​ 29ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.

ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮ(Rohit Sharma) ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(BCCI secretary Jay Shah) ಈಗಾಗಲೇ ಹೇಳಿಕೆ ನೀಡಿದ್ದಾರೆ. ಜತೆಗೆ ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ(Champions Trophy) ಟೂರ್ನಿಯಲ್ಲಿಯೂ ರೋಹಿತ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

Continue Reading

ಕ್ರಿಕೆಟ್

IND vs SL: ಶ್ರೀಲಂಕಾ ಪ್ರವಾಸಕ್ಕೆ ಇಂದು ಭಾರತ ತಂಡ ಪ್ರಕಟ ಸಾಧ್ಯತೆ: ಯಾರಿಗೆಲ್ಲ ಸಿಗಲಿದೆ ಅವಕಾಶ?

IND vs SL: 2021ರ ಬಳಿಕ ಭಾರತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ದ್ವಿಪಕ್ಷೀಯ ಸರಣಿ ಆಡಲಿದೆ. ಉಭಯ ತಂಡಗಳು ಹೊಸ ಕೋಚ್​ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ. ಗಂಭೀರ್‌ಗೆ ಶ್ರೀಲಂಕಾ ವಿರುದ್ಧದ ಸರಣಿ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಲಂಕಾ, ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಆಡಲಿದೆ.

VISTARANEWS.COM


on

IND vs SL
Koo

ಮುಂಬಯಿ: ಮುಂಬರುವ ಶ್ರೀಲಂಕಾ(IND vs SL) ಪ್ರವಾಸಕ್ಕೆ ಭಾರತ(India tour of Sri Lanka) ತಂಡದ ಆಯ್ಕೆ ಇಂದು ಅಥವಾ ನಾಳೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ರೋಹಿತ್​ ಮತ್ತು ಕೊಹ್ಲಿ ಸೇರಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ಖಚಿತ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕನ್ನಡಿಗ ಕೆ.ಎಲ್​ ರಾಹುಲ್ ಏಕದಿನ, ಹಾರ್ದಿಕ್​ ಪಾಂಡ್ಯ ಟಿ20ಯಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

ರೋಹಿತ್ ಶರ್ಮಾ ವಿರಾಮ ತೆಗೆದುಕೊಳ್ಳದೆ ಸುಮಾರು ಆರು ತಿಂಗಳು ಕಳೆದಿದೆ. ಸುದೀರ್ಘವಾಗಿ ಆಡುತ್ತಿರುವ ಕಾರಣದಿಂದ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ಬಯಸಿದೆ ಎನ್ನಲಾಗಿದೆ. ಜತೆಗೆ ಕೊಹ್ಲಿಯೂ ವಿಶ್ರಾಂತಿ ನೀಡಲಾಗುವುದು ಎಂದು ವರದಿಯಾಗಿದೆ. ತವರಿನ ದೀರ್ಘ ಟೆಸ್ಟ್ ಋತುವಿನ ಹಿನ್ನಲೆಯಲ್ಲಿ ಉಭಯ ಆಟಗಾರರಿಗೆ ವಿಶ್ರಾಂತಿ ನೀಡಲು ಯೋಚಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಕ್ರಿಕ್​ಇನ್ಫೋ ತನ್ನ ವರದಿಯಲ್ಲಿ ತಿಳಿಸಿದೆ. ಜಸ್​ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್​ ಸಿರಾಗ್​ಗೂ ವಿಶ್ರಾಂತಿ ನೀಡುವ ಸಾಧ್ಯತೆ ಕಂಡುಬಂದಿದೆ.

ಕೆಎಲ್ ರಾಹುಲ್ ಟಿ 20 ವಿಶ್ವಕಪ್​​ ಗೆ ಹೋಗಿದ್ದ ಭಾರತದ ತಂಡದಿಂದ ಹೊರಗುಳಿದಿದ್ದರು. ಆದರೆ ಈಗ ಶ್ರೀಲಂಕಾ ಪ್ರವಾಸದ ಏಕದಿನ ಹಂತದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ನಾಯಕತ್ವದ ಪಾತ್ರವನ್ನು ಸಹ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ವರದಿ ಪ್ರಕಾರ ಸಂಜು ಸ್ಯಾಮ್ಸನ್ ಕೂಡ ಏಕದಿನ ಮತ್ತು ಟಿ20 ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆದಿದ್ದರೂ ಕೂಡ ಅಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಜಿಂಬಾಬ್ವೆ ಸರಣಿಯಲ್ಲಿ ಒಂದು ಅರ್ಧಶತಕ ಬಾರಿಸಿ ಮಿಂಚಿದ್ದರು. ಹೀಗಾಗಿ ಲಂಕಾ ಸರಣಿಗೂ ಆಯ್ಕೆಯಾಗಬಹುದು. ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದ ತಂಡದಲ್ಲಿ ಸ್ಥಾನ ಪಡೆದಿದ್ದ ರಿಯಾನ್ ಪರಾಗ್, ಸಾಯಿ ಸುದರ್ಶನ್ ಮತ್ತು ಜಿತೇಶ್ ಶರ್ಮಾಗೂ ಅವಕಾಶ ಸಿಗುವುದು ಕಷ್ಟ ಸಾಧ್ಯ.

ಇದನ್ನೂ ಓದಿ KL Rahul : ಕೆ. ಎಲ್ ರಾಹುಲ್​ ಎಲ್​ಎಸ್​ಜಿ ತಂಡದಿಂದ ಹೊರಕ್ಕೆ, ಆಂತರಿಕ ಗುಟ್ಟು ಬಿಟ್ಟುಕೊಟ್ಟ ಅಮಿತ್ ಮಿಶ್ರಾ

ಪ್ರವಾಸದ ಮೊದಲ 3 ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪಲ್ಲೆಕಿಲೆಯಲ್ಲಿ ನಡೆಯಲಿವೆ. ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿಯಲ್ಲಿ 26ರಿಂದ ಟಿ20 ಪಂದ್ಯ ಆರಂಭವಾಗಬೇಕಿತ್ತು. ಏಕದಿನ ಸರಣಿ ಕೂಡ ಒಂದು ದಿನ ತಡವಾಗಿ ಶುರುವಾಗಬೇಕಿತ್ತು. ಏಕದಿನ ಆಗಸ್ಟ್​ 1ರದ ಬದಲಾಗಿ ಆಗಸ್ಟ್​ 2ರಿಂದ ಆರಂಭಗೊಳ್ಳಲಿದೆ. ಉಳಿದ ಪಂದ್ಯಗಳ ದಿನಾಂಕ ಬದಲಾಗಲಿಲ್ಲ. ಈ ಹಿಂದಿನಂತೆ ಆಗಸ್ಟ್​ 4 ಮತ್ತು 7ರಂದೇ ನಡೆಯಲಿದೆ.

2021ರ ಬಳಿಕ ಭಾರತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ದ್ವಿಪಕ್ಷೀಯ ಸರಣಿ ಆಡಲಿದೆ. ಉಭಯ ತಂಡಗಳು ಹೊಸ ಕೋಚ್​ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ. ಗಂಭೀರ್‌ಗೆ ಶ್ರೀಲಂಕಾ ವಿರುದ್ಧದ ಸರಣಿ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಲಂಕಾ, ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಆಡಲಿದೆ.

Continue Reading
Advertisement
CM Siddaramaiah
ಕರ್ನಾಟಕ5 mins ago

CM Siddaramaiah: ಆಸ್ತಿ ಬಗ್ಗೆ ತಪ್ಪು ಮಾಹಿತಿ; ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಮತ್ತೆರಡು ದೂರು

Viral News
Latest23 mins ago

Viral News: ಬಾಸ್‌ ಜತೆ ಚಕ್ಕಂದವಾಡುತ್ತಿದ್ದ ಕಿಲಾಡಿ ಪತ್ನಿ; ಡ್ರೋನ್‌ ಬಳಸಿ ಪತ್ತೆ ಹಚ್ಚಿದ ಚಾಲಾಕಿ ಗಂಡ!

Rishabh Pant
ಕ್ರಿಕೆಟ್27 mins ago

Rishabh Pant: ಸಹ ಆಟಗಾರ ಖಲೀಲ್​ ಅಹ್ಮದ್​ರನ್ನು ಸ್ವಿಮ್ಮಿಂಗ್ ಪೂಲ್‌​ಗೆ ತಳ್ಳಿ ಹಾಕಿದ ಪಂತ್​; ವಿಡಿಯೊ ವೈರಲ್​

Karnataka Rain
ಮಳೆ27 mins ago

Karnataka Rain : ಭಾರಿ ಮಳೆ ಎಫೆಕ್ಟ್‌-ಮಲಗಿದ್ದ‌ ವ್ಯಕ್ತಿ ಮೇಲೆ ಬಿದ್ದ ಗೋಡೆ; ಮರ ಬಿದ್ದು ಕಾರು ಜಖಂ, ಚಾಲಕ ಜಸ್ಟ್‌ ಮಿಸ್‌

2nd Puc Result
ಪ್ರಮುಖ ಸುದ್ದಿ32 mins ago

‌2nd PUC Exam Result: ದ್ವಿತೀಯ ಪಿಯುಸಿ ಪರೀಕ್ಷೆ- 3 ಫಲಿತಾಂಶ ಪ್ರಕಟ, 23.73% ವಿದ್ಯಾರ್ಥಿಗಳು ಪಾಸ್

Stuck in Lift
Latest39 mins ago

Stuck in Lift: ಫ್ಯಾನಿಲ್ಲ, ಲೈಟಿಲ್ಲ, ಆಹಾರವಿಲ್ಲ; 2 ದಿನ ಲಿಫ್ಟ್‌ನಲ್ಲಿ ಸಿಲುಕಿದ್ದವನ ಸ್ಥಿತಿ ಹೇಗಿರಬಹುದು ಊಹಿಸಿ!

7th Pay Commission
ಕರ್ನಾಟಕ54 mins ago

7th Pay Commission: ಸರ್ಕಾರಿ ನೌಕರರ ವೇತನ, ಪಿಂಚಣಿ 58% ಹೆಚ್ಚಳ; ಸಂಪೂರ್ಣ ಲೆಕ್ಕ ಕೊಟ್ಟ ಸಿದ್ದರಾಮಯ್ಯ

Viral Video
Latest57 mins ago

Viral Video: ಸ್ಟ್ರೆಚರ್‌ ಇಲ್ಲದ ಸರ್ಕಾರಿ ಆಸ್ಪತ್ರೆ; ಪತಿಯನ್ನು ಬೆನ್ನ ಮೇಲೆ ಹೊತ್ತು ನಡೆದ ಪತ್ನಿ! ಮನಮಿಡಿಯುವ ವಿಡಿಯೊ

7th Pay Commission
ಕರ್ನಾಟಕ1 hour ago

7th Pay Commission: ಆ.1ರಿಂದ ನೌಕರರ ವೇತನ ಹೆಚ್ಚಳ; ಸರ್ಕಾರಕ್ಕೆ ವಾರ್ಷಿಕ 20,208 ಕೋಟಿ ಹೆಚ್ಚುವರಿ ಹೊರೆ ಎಂದ ಸಿಎಂ

Sexual Abuse
Latest1 hour ago

Sexual Abuse: ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ22 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌