ನವ ದೆಹಲಿ: ICC ODI Ranking | ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಏಕದಿನ ಮಾದರಿ ಕ್ರಿಕೆಟ್‌ನ ಪ್ರಸ್ತುತ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ನ್ಯೂಜಿಲೆಂಡ್ ತಂಡವು ಅಗ್ರಸ್ಥಾನದಲ್ಲಿದೆ ಹಾಗೂ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿದೆ.
ಈ ಮುನ್ನ ಭಾರತ ತಂಡವು 4ನೇ ಸ್ಥಾನದಲ್ಲಿತ್ತು. ಪಾಕಿಸ್ತಾನ 5ನೇ ಸ್ಥಾನದಲ್ಲಿತ್ತು. ಆದರೆ, ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಮೂರು ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿ 4ನೇ ಸ್ಥಾನಕ್ಕೇರಿದೆ. ಪಾಕಿಸ್ತಾನ ಹಾಗೂ ಭಾರತದ ನಡುವೆ ಕೇವಲ 1 ರೇಟಿಂಗ್‌ನ ಅಂತರವಿದೆ. ಭಾರತದ ರೇಟಿಂಗ್ 105 ಇದ್ದರೆ, ಪಾಕಿಸ್ತಾನ 106 ರೇಟಿಂಗ್ ಪಡೆದು ಮುನ್ನಡೆ ಸಾಧಿಸಿದೆ.
ಹೆಚ್ಚಿನ ಓದಿಗಾಗಿ ಇಲ್ಲಿ ಒತ್ತಿ
ಪಾಕಿಸ್ತಾನದ ಮುಂದಿನ ಪಂದ್ಯ ಆಗಸ್ಟ್‌ನಲ್ಲಿದೆ. ಅದಕ್ಕೂ ಮುನ್ನ ಭಾರತವು ಎರಡು ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಸರಣಿಯಲ್ಲಿ ಭಾರತವು ಗೆಲುವು ಸಾಧಿಸಿದರೆ ಅಂಕಪಟ್ಟಿಯಲ್ಲಿ ಮೇಲೇರುತ್ತದೆ.
ಐಸಿಸಿ ರ‍್ಯಾಂಕಿಂಗ್‌ನಲ್ಲಿರುವ ಟಾಪ್ 5 ತಂಡಗಳ ವಿವರ
ಸ್ಥಾನ | ತಂಡ | ಪಂದ್ಯ | ಅಂಕ | ರೇಟಿಂಗ್ |
1 | ನ್ಯೂಜಿಲೆಂಡ್ | 12 | 1505 | 125 |
2 | ಇಂಗ್ಲೆಂಡ್ | 19 | 2353 | 124 |
3 | ಆಸ್ಟ್ರೇಲಿಯಾ | 18 | 1929 | 107 |
4 | ಪಾಕಿಸ್ತಾನ | 19 | 2005 | 106 |
5 | ಭಾರತ | 22 | 2304 | 107 |
ಇದನ್ನೂ ಓದಿ: 25 ವರ್ಷ ಹಿಂದೆ ಪಾಕಿಸ್ತಾನಿ ಬ್ಯಾಟರ್ ಬೌಲ್ಡ್ ಆಗಿದ್ದು ಈಗ ಏಕೆ ಟ್ರೆಂಡ್ ಆಗುತ್ತಿದೆ?