ಉಜ್ಜಯಿನಿ: ಟೀಮ್ ಇಂಡಿಯಾ ವಿಶ್ವಕಪ್(ICC World Cup 2023) ತಂಡದಲ್ಲಿ ಸ್ಥಾನ ಸಿಗದಿದ್ದರೂ ಶಿಖರ್ ಧವನ್(Shikhar Dhawan) ಅವರು ಭಾರತ ತಂಡ ವಿಶ್ವಕಪ್ ಗೆಲ್ಲುವಂತಾಗಲಿ ಎಂದು ಉಜ್ಜಯಿನಿಯ(Ujjain) ಬಾಬಾ ಮಹಾಕಾಳೇಶ್ವರದ ಜ್ಯೋತಿರ್ಲಿಂಗ(Mahakaleshwar Temple) ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್(Akshay Kumar) ಕೂಡ ಹಾಜರಿದ್ದರು. ಈ ವಿಡಿಯೊ ವೈರಲ್ ಆಗಿದೆ.
ದೇವರಲ್ಲಿ ಪ್ರಾರ್ಥನೆ
ಉತ್ತಮ ಫಾರ್ಮ್ನಲ್ಲಿದ್ದರೂ ಕಳೆದ ಒಂದು ವರ್ಷಗಳಿಂದ ಧವನ್ ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡದೆ ಕಡೆಗಣಿಸಲಾಗಿದೆ. ಆದರೂ ಈ ವಿಚಾರದ ಬಗ್ಗೆ ಧವನ್ ಇದುವರೆಗೆ ಆಯ್ಕೆ ಸಮಿತಿಯ ಅಥವಾ ಬಿಸಿಸಿಐ ಬಗ್ಗೆ ಇದುವರೆಗೆ ಯಾವುದೇ ಆಕ್ಷೇಪ ಮತ್ತು ಆರೋಪವನ್ನು ಮಾಡಿಲ್ಲ. ಭಾರತ ತಂಡ ವಿಶ್ವಕಪ್ ಗೆಲ್ಲಬೇಕು ಎನ್ನುವುದು ಅವರ ಕನಸಗಿದೆ. ಇದಕ್ಕಾಗಿ ಅವರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತಂಡದ ಮೇಲಿನ ಅವರ ಈ ನಿಷ್ಕಲ್ಮಶ ಪ್ರೀತಿಗೆ ಕ್ರಿಕೆಟ್ ಅಭಿಮಾನಿಗಳು ತಲೆಬಾಗಿದ್ದಾರೆ.
ತಂಡ ವಿಶ್ವಕಪ್ ಗೆಲ್ಲುವುದೇ ನನ್ನ ಆಶಯ
ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಧವನ್, “ನಾನು ದೇವರ ಆಶೀರ್ವಾದ ಪಡೆಯಲು ಬಂದಿದ್ದೇನೆ ಮತ್ತು ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಯಶಸ್ಸಿಗೆ ಪ್ರಾರ್ಥಿಸಿದ್ದೇನೆ ಭಾರತ ವಿಶ್ವಕಪ್ ಗೆಲ್ಲಲಿ ಎಂಬುದು ಎಲ್ಲರ ಆಶಯವಾಗಿದ್ದು, ನಾನು ಕೂಡ ಅದೇ ಹಾರೈಕೆಯನ್ನು ಮಾಡುತ್ತೇನೆ” ಎಂದು ಹೇಳಿದರು.
ಕಳೆದ ಮಂಗಳವಾರ ಏಕದಿನ ವಿಶ್ವಕಪ್ಗೆ 15 ಮಂದಿ ಸದಸ್ಯರ ತಂಡ ಪ್ರಕಟಗೊಂಡಿತ್ತು. ಈ ವೇಳೆವೂ ಧವನ್ ಟ್ವೀಟ್ ಮೂಲಕ ಭಾರತ ತಂಡಕ್ಕೆ ಮತ್ತು ಅವಕಾಶ ಪಡೆದ ಆಟಗಾರರಿಗೆ ಶುಭ ಹಾರೈಸಿದ್ದರು. ಈ ಮೂಲಕ ಭಾರತೀಯರ ಮನಗೆದ್ದಿದ್ದರು.
ಇದನ್ನೂ ಓದಿ ICC World Cup: ಏಕದಿನ ವಿಶ್ವಕಪ್ಗೆ ಭಾರತ ತಂಡ ಪ್ರಕಟ; ತಂಡದಲ್ಲಿ ಏಕೈಕ ಕನ್ನಡಿಗ
2 ವಿಶ್ವಕಪ್ ಆಡಿದ್ದಾರೆ ಧವನ್
ಶಿಖರ್ ಧವನ್ ಅವರು 2013 ಹಾಗೂ 2017ರ ಚಾಂಪಿಯನ್ಸ್ ಟ್ರೋಫಿ, 2015ರ ವಿಶ್ವಕಪ್ ಟೂರ್ನಿ ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಅಮೋಘ ಪ್ರದರ್ಶನ ತೋರಿದ್ದರು. ಅದರಲ್ಲೂ 2019ರಲ್ಲಿ ಲಂಡನ್ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ್ದರು. ಆದರೆ ಅದೇ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ ಅವರಿಗೆ ಸರಿಯಾದ ಅವಕಾಶ ಸಿಗಲೇ ಇಲ್ಲ.
Viral Video: ಕಾಲರ್ ಪಟ್ಟಿ ಹಿಡಿದು ಶಿಖರ್ ಧವನ್ಗೆ ವಾರ್ನಿಂಗ್ ನೀಡಿದ ತಂದೆ
ಏಕದಿನದಲ್ಲಿ 17 ಶತಕ
ಶಿಖರ್ ಧವನ್ ಅವರು ಭಾರತ ಪರ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್ 68 ಪಂದ್ಯ ಆಡಿ 1759 ರನ್ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.