ಮೆಲ್ಬೋರ್ನ್: ಟಿ೨೦ ವಿಶ್ವ ಕಪ್‌ನ ಸೂಪರ್ 12 ಹಂತದ ಪಾಕಿಸ್ತಾನ ಮತ್ತು ಭಾರತ (IND VS PAK) ವಿರುದ್ಧದ ಭಾನುವಾರದ ಸೂಪರ್ ಥ್ರಿಲ್ಲಿಂಗ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ವಿಶ್ವ ಕಪ್ ಕೂಟಕ್ಕೆ ಮತಷ್ಟು ಮೆರುಗು ತಂದಿದೆ. ಅದರಲ್ಲೂ ಪಾಕ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದು ಅಭಿಮಾನಿಗಳಿಗೆ ಮತಷ್ಟು ಖುಷಿ ತಂದಿದೆ. ಜತೆಗೆ ಪಾಕ್ ಕೂಡ ಮುಂದಿನ ಪಂದ್ಯದಲ್ಲಿ ಗೆದ್ದು ಮತ್ತೊಮ್ಮೆ ಭಾರತ ವಿರುದ್ಧ ಮುಖಾಮುಖಿಯಾಗಬೇಕೆಂದು ಅಭಿಮಾನಿಗಳು ಬಯಸಿದ್ದಾರೆ. ಅಷ್ಟರ ಮಟ್ಟಿಗೆ ಕಾಂಗಾರೂ ನಾಡಿನ ವಿಶ್ವ ಸಮರ ಕ್ರೇಜ್ ಹುಟ್ಟಿಸಿದೆ.
ಯಾವುದೇ ಐಸಿಸಿ ಕೂಟದಲ್ಲಿಯೂ ಭಾರತ ಪಂದ್ಯಕ್ಕೆ ಇರುವಂತಹ ಕ್ರೇಜ್ ಉಳಿದ ಯಾವ ಪಂದ್ಯಕ್ಕೂ ಕಾಣಸಿಗದು. ಅದರಲ್ಲೂ ಪಾಕ್ ವಿರುದ್ಧದ ಪಂದ್ಯಕ್ಕಂತ್ತೂ ಹೇಳುವುದೇ ಬೇಡ. ನಿರೀಕ್ಷೆಗೂ ಮೀರಿ ಕ್ರೇಜ್ ಕಂಡುಬರುತ್ತದೆ. ಭಾರತ ಮುಂದಿನ ಪಂದ್ಯಗಳಲ್ಲಿಯೂ ಗೆಲುವು ಕಂಡು ಚಾಂಪಿಯನ್ ಆಗಬೇಕು ಎನ್ನುವುದು ಕೇವಲ ಭಾರತೀಯರ ಮಾತ್ರ ಆಶಯವಲ್ಲ. ಹೊರತಾಗಿ ಇಡೀ ಜಗತ್ತೆ ಭಾರತ ಚಾಂಪಿಯನ್ ಆಗಬೇಕೆಂದು ಕನವರಿಸುತ್ತಿದೆ. ಇದಕ್ಕೆ ಕಾರಣ ಆದಾಯ.
ಹೌದು ಭಾರತ ಈ ಕೂಡದಲ್ಲಿ ಇದ್ದಷ್ಟು ದಿನ ಜಾಹಿರಾತು, ಪ್ರಸಾರ ಮಾದ್ಯಮ, ಸಾಮಾಜಿಕ ಜಾಲತಾಣಗಳಿಗೆ ಎಲ್ಲಿಲ್ಲದ ಆದಾಯ. ಆದ್ದರಿಂದ ಭಾರತ ಈ ಕೂಟದ ಫೇವರಿಟ್. ಕಳೆದ ಟಿ20 ವಿಶ್ವ ಕಪ್‌ನಲ್ಲಿ ಭಾರತ ಸೋತು ಹೊರಬಿದ್ದ ಬಳಿಕ ಎಲ್ಲ ಆದಾಯ ಮೂಲವೂ ಕುಸಿತ ಕಂಡಿತ್ತು. ಇದೀಗ ಭಾರತ ಮೊದಲ ಪಂದ್ಯದಲ್ಲೇ ಊಹೆಗೂ ಮೀರದ ಪ್ರದರ್ಶನ ತೋರಿದ ಕಾರಣ ಟೀಮ್ ಇಂಡಿಯಾ ಮೇಲೆ ಹೂಡಿಕೆದಾರರಿಗೆ ವಿಶ್ವಾಸ ಮೂಡಿದೆ. ಆದ್ದರಿಂದ ಭಾರತದ ಮುಂದಿನ ಪಂದ್ಯವೂ ಸಹಜವಾಗಿಯೇ ಕ್ರೇಜ್ ಹುಟ್ಟಿಸಿದೆ.
ಇದನ್ನೂ ಓದಿ | T20 World Cup | ಐರ್ಲೆಂಡ್ ತಂಡದ ವಿರುದ್ಧ 9 ವಿಕೆಟ್ ಗೆಲುವು ಸಾಧಿಸಿ ಖಾತೆ ತೆರೆದ ಶ್ರೀಲಂಕಾ