ಮೆಲ್ಬೋರ್ನ್: ಭಾನುವಾರ ಎಂಸಿಜಿ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ರೋಚಕ ಪಂದ್ಯವನ್ನು ಇಡೀ ಜಗತ್ತೆ ಕಣ್ತುಂಬಿಕೊಂಡಿದೆ. ಟೀಮ್ ಇಂಡಿಯಾ ಪಾಕ್ ವಿರುದ್ಧ ಕೊನೆಯ ಎಸೆತದಲ್ಲಿ ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯವನ್ನು ಬರೋಬ್ಬರಿ 90 ಸಾವಿರಕ್ಕೂ ಅಧಿಕ ಜನರು ಮೈದಾನದಲ್ಲಿ ಲೈವ್ ನೋಡುವ ಮೂಲಕ ಕಣ್ತುಂಬಿಕೊಂಡರು. ಇದೇ ವೇಳೆ ಪಾಕಿಸ್ತಾನಿ ಅಭಿಮಾನಿಯೊಬ್ಬ ಪಾಕ್ ತಂಡಕ್ಕೆ ಬೆಂಬಲಿಸುವ ಬರದಲ್ಲಿ ಎಡವಟ್ಟೊಂದನ್ನು ಮಾಡಿ ಟ್ರೋಲ್‌ಗೆ ಒಳಗಾಗಿದ್ದಾನೆ.
ಪಂದ್ಯ ವೀಕ್ಷಣೆಯ ವೇಳೆಯಲ್ಲಿ ಪಾಕಿಸ್ತಾನ ಅಭಿಮಾನಿಯೊಬ್ಬ ಪಾಕ್ ರಾಷ್ಟ್ರಧ್ವಜವನ್ನ ಉಲ್ಟಾ ಹಿಡಿದುಕೊಂಡಿರುವ ವೇಳೆಯಲ್ಲಿ ಭಾರತೀಯ ಅಭಿಮಾನಿಗಳು ಧ್ವಜವನ್ನು ಸರಿಯಾಗಿ ಹಿಡಿದುಕೊಳ್ಳುವಂತೆ ಸೂಚಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಭಾರತ ತಂಡ ಪಾಕಿಸ್ತಾನ ನೀಡಿದ್ದ 160ರನ್ ಟಾರ್ಗೆಟ್ ಬೆನ್ನಟ್ಟುವ ವೇಳೆ ಪಾಕ್ ಅಭಿಮಾನಿಯು ತನ್ನ ದೇಶದ ಧ್ವಜವನ್ನು ಹಾರಿಸುತ್ತಾ ಪಾಕ್ ತಂಡಕ್ಕೆ ಪ್ರೋತ್ಸಾಹಿಸುತ್ತಿದ್ದರು. ಈ ವೇಳೆಯಲ್ಲಿ ಹತ್ತಿರದಲ್ಲೇ ಕುಳಿತಿದ್ದ ಭಾರತ ತಂಡದ ಅಭಿಮಾನಿಗಳು ಆತ ಉಲ್ಟಾ ಹಿಡಿದಿದ್ದ ಧ್ವಜವನ್ನು ಸರಿಯಾಗಿ ಹಿಡಿದುಕೊಳ್ಳವಂತೆ ಹೇಳಿದ್ದಾರೆ. ಆರಂಭದಲ್ಲಿ ಆತನಿಗೆ ಏನು ಹೇಳುತ್ತಿದ್ದಾರೆ ಎಂದು ತಿಳಿಯಲಿಲ್ಲ. ನಂತರದಲ್ಲಿ ತಾನು ರಾಷ್ಟ್ರಧ್ವಜವನ್ನು ಉಲ್ಟಾ ಹಿಡಿದಿದ್ದೇನೆ ಎಂದು ಅರಿವಾಗಿದೆ. ಈ ಘಟನೆ ವೇಳೆಯಲ್ಲಿ ಪಾಕ್ ಅಭಿಮಾನಿಯ ಕಾಳೆದಿರುವ ಟೀಂ ಇಂಡಿಯಾ ಅಭಿಮಾನಿಗಳು ‘ಸರಿಯಾಗಿ ದೇಶದ ಧ್ವಜವನ್ನೇ ಹಿಡಿಯೋಕೆ ಬಾರದ, ನಿಮಗೆ ಕಾಶ್ಮೀರ ಬೇಕಂತೆ’ ಎಂದು ಕಾಲೆಳೆದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ | IND vs PAK | ಲೈವ್ ಸ್ಟ್ರೀಮಿಂಗ್‌ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಭಾರತ-ಪಾಕಿಸ್ತಾನ ಪಂದ್ಯ