IND VS PAK | ಧ್ವಜ ಸರಿಯಾಗಿ ಹಿಡಿಯಲು ಬಾರದ ಪಾಕಿಸ್ತಾನಿಗೆ ಕಾಶ್ಮೀರ ಬೇಕಂತೆ! ಫುಲ್‌ ಟ್ರೋಲ್‌ - Vistara News

T20 ವಿಶ್ವಕಪ್

IND VS PAK | ಧ್ವಜ ಸರಿಯಾಗಿ ಹಿಡಿಯಲು ಬಾರದ ಪಾಕಿಸ್ತಾನಿಗೆ ಕಾಶ್ಮೀರ ಬೇಕಂತೆ! ಫುಲ್‌ ಟ್ರೋಲ್‌

ಭಾನುವಾರ ಎಂಸಿಜಿ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ರೋಚಕ ಪಂದ್ಯದ ವೇಳೆ ಪಾಕಿಸ್ತಾನಿ ಅಭಿಮಾನಿಯೊಬ್ಬ ಧ್ವಜವನ್ನು ಉಲ್ಟಾ ಹಿಡಿದು ಟ್ರೋಲ್‌ಗೆ ಒಳಗಾಗಿದ್ದಾನೆ.

VISTARANEWS.COM


on

t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೆಲ್ಬೋರ್ನ್‌: ಭಾನುವಾರ ಎಂಸಿಜಿ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ರೋಚಕ ಪಂದ್ಯವನ್ನು ಇಡೀ ಜಗತ್ತೆ ಕಣ್ತುಂಬಿಕೊಂಡಿದೆ. ಟೀಮ್‌ ಇಂಡಿಯಾ ಪಾಕ್ ವಿರುದ್ಧ ಕೊನೆಯ ಎಸೆತದಲ್ಲಿ ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯವನ್ನು ಬರೋಬ್ಬರಿ 90 ಸಾವಿರಕ್ಕೂ ಅಧಿಕ ಜನರು ಮೈದಾನದಲ್ಲಿ ಲೈವ್ ನೋಡುವ ಮೂಲಕ ಕಣ್ತುಂಬಿಕೊಂಡರು. ಇದೇ ವೇಳೆ ಪಾಕಿಸ್ತಾನಿ ಅಭಿಮಾನಿಯೊಬ್ಬ ಪಾಕ್‌ ತಂಡಕ್ಕೆ ಬೆಂಬಲಿಸುವ ಬರದಲ್ಲಿ ಎಡವಟ್ಟೊಂದನ್ನು ಮಾಡಿ ಟ್ರೋಲ್‌ಗೆ ಒಳಗಾಗಿದ್ದಾನೆ.

ಪಂದ್ಯ ವೀಕ್ಷಣೆಯ ವೇಳೆಯಲ್ಲಿ ಪಾಕಿಸ್ತಾನ ಅಭಿಮಾನಿಯೊಬ್ಬ ಪಾಕ್ ರಾಷ್ಟ್ರಧ್ವಜವನ್ನ ಉಲ್ಟಾ ಹಿಡಿದುಕೊಂಡಿರುವ ವೇಳೆಯಲ್ಲಿ ಭಾರತೀಯ ಅಭಿಮಾನಿಗಳು ಧ್ವಜವನ್ನು ಸರಿಯಾಗಿ ಹಿಡಿದುಕೊಳ್ಳುವಂತೆ ಸೂಚಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಭಾರತ ತಂಡ ಪಾಕಿಸ್ತಾನ ನೀಡಿದ್ದ 160ರನ್ ಟಾರ್ಗೆಟ್ ಬೆನ್ನಟ್ಟುವ ವೇಳೆ ಪಾಕ್ ಅಭಿಮಾನಿಯು ತನ್ನ ದೇಶದ ಧ್ವಜವನ್ನು ಹಾರಿಸುತ್ತಾ ಪಾಕ್‌ ತಂಡಕ್ಕೆ ಪ್ರೋತ್ಸಾಹಿಸುತ್ತಿದ್ದರು. ಈ ವೇಳೆಯಲ್ಲಿ ಹತ್ತಿರದಲ್ಲೇ ಕುಳಿತಿದ್ದ ಭಾರತ ತಂಡದ ಅಭಿಮಾನಿಗಳು ಆತ ಉಲ್ಟಾ ಹಿಡಿದಿದ್ದ ಧ್ವಜವನ್ನು ಸರಿಯಾಗಿ ಹಿಡಿದುಕೊಳ್ಳವಂತೆ ಹೇಳಿದ್ದಾರೆ. ಆರಂಭದಲ್ಲಿ ಆತನಿಗೆ ಏನು ಹೇಳುತ್ತಿದ್ದಾರೆ ಎಂದು ತಿಳಿಯಲಿಲ್ಲ. ನಂತರದಲ್ಲಿ ತಾನು ರಾಷ್ಟ್ರಧ್ವಜವನ್ನು ಉಲ್ಟಾ ಹಿಡಿದಿದ್ದೇನೆ ಎಂದು ಅರಿವಾಗಿದೆ. ಈ ಘಟನೆ ವೇಳೆಯಲ್ಲಿ ಪಾಕ್ ಅಭಿಮಾನಿಯ ಕಾಳೆದಿರುವ ಟೀಂ ಇಂಡಿಯಾ ಅಭಿಮಾನಿಗಳು ‘ಸರಿಯಾಗಿ ದೇಶದ ಧ್ವಜವನ್ನೇ ಹಿಡಿಯೋಕೆ ಬಾರದ, ನಿಮಗೆ ಕಾಶ್ಮೀರ ಬೇಕಂತೆ’ ಎಂದು ಕಾಲೆಳೆದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ | IND vs PAK | ಲೈವ್‌ ಸ್ಟ್ರೀಮಿಂಗ್‌ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಭಾರತ-ಪಾಕಿಸ್ತಾನ ಪಂದ್ಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

T20 World Cup 2007: ಭಾರತ ಪರ ಬೌಲಿಂಗ್​ನಲ್ಲಿ ಇರ್ಫಾನ್​ ಪಠಾಣ್​ (16 ಕ್ಕೆ 3), ಆರ್​.ಪಿ ಸಿಂಗ್​(24ಕ್ಕೆ 3), ಜೋಗಿಂದರ್ ಶರ್ಮಾ(20ಕ್ಕೆ 2) ವಿಕೆಟ್​ ಕಿತ್ತು ಮಿಂಚಿದ್ದರು.

VISTARANEWS.COM


on

T20 World Cup 2007
Koo

ಬೆಂಗಳೂರು: ಟಿ20 ಎಂಬ ಚುಟುಕು ಮಾದರಿಯ ಮೊದಲ ವಿಶ್ವಕಪ್(ICC World T20 2007) ಗೆದ್ದ ದಾಖಲೆ ಭಾರತ ತಂಡದ ಹೆಸರಿನಲ್ಲಿದೆ. 2007 ಸೆ. 24ರಂದು(T20 World Cup 2007) ಮಹೇಂದ್ರ ಸಿಂಗ್ ಧೋನಿ(ms dhoni) ನೇತೃತ್ವದ ಯುವ ಭಾರತ ತಂಡ ವಿಶ್ವಕಪ್ ಗೆದ್ದು ಬೀಗಿತ್ತು. ದುರಾದೃಷ್ಟವೆಂದರೆ ಆ ಬಳಿಕ ಭಾರತ ಇದುವರೆಗೂ ಒಂದೂ ಟ್ರೋಫಿ ಗೆದ್ದಿಲ್ಲ. ಇದೀಗ 17 ವರ್ಷಗಳ ಬಳಿಕ ಭಾರತ ಕಪ್​ ಗೆದ್ದು ಬೀಗೀತೇ ಎಂದು ಕಾದು ನೋಡಬೇಕಿದೆ. ಚೊಚ್ಚಲ ಟಿ20 ವಿಶ್ವಕಪ್​ ಫೈನಲ್​ನ ಮೆಲುಕು ನೋಟ ಇಂತಿದೆ.

ಅದು, ವೆಸ್ಟ್‌ ಇಂಡೀಸ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವು ಹೀನಾಯವಾಗಿ ಸೋಲು ಕಂಡ ವರ್ಷವಾಗಿತ್ತು. ಈ ಸೋಲಿನಿಂದ ಕಂಗೆಟ್ಟಿದ್ದ ಸಚಿನ್​ ತೆಂಡೂಲ್ಕರ್​, ರಾಹುಲ್​ ದ್ರಾವಿಡ್​, ಸೌರವ್​ ಗಂಗೂಲಿ ಸೇರಿ ಖ್ಯಾತನಾಮ ಆಟಗಾರರು ಈ ಟೂರ್ನಿಯಲ್ಲಿ ಆಡಲು ಹಿಂದೇಟು ಹಾಕಿದರು. ಎಲ್ಲರು ವಿಶ್ರಾಂತಿ ಬಯಸಿದರು. ದಿಕ್ಕು ತೋಚದೆ ಬಿಸಿಸಿಐ ಆಗಿದ್ದಾಗಲಿ ಎಂದು ವಿಕೆಟ್‌ಕೀಪರ್ ಧೋನಿಗೆ ನಾಯಕತ್ವ ನೀಡಿ ಯುವ ಪಡೆಯನ್ನು ಕಣಕ್ಕಿಳಿಸಿತು. ಧೋನಿ ನೇತೃತ್ವದ ಯುವಪಡೆ ತಮ್ಮ ಮೊದಲ ಪ್ರಯತ್ನದಲೇ ಕಪ್​ ಗೆದ್ದು ಇತಿಹಾಸ ಸೃಷ್ಟಿಸಿತ್ತು.

ಹಲವು ಅಚ್ಚರಿ


ಕೂಟದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿ ಭಾರತ ತಂಡ ಫೈನಲ್ ಪ್ರವೇಶ ಪಡೆದಿತ್ತು. ಲೀಗ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಬಾಲ್ ಔಟ್ ಮುಖಾಂತರ ಜಯ ಸಾಧಿಸಿದ್ದ ಭಾರತ ಮತ್ತೊಂದು ಹೈ ವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿತ್ತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 157 ರನ್ ಗಳಿಸಿತು. ಗೌತಮ್ ಗಂಭೀರ್ 75 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ 30 ರನ್ ಕೊಡುಗೆ ನೀಡಿದ್ದರು. ಉಳಿದ ಯಾರಿಂದಲೂ ಹೇಳಿಕೊಳ್ಳುವ ಪ್ರದರ್ಶನ ತಂಡಕ್ಕೆ ಸಿಗಲಿಲ್ಲ. ಪಾಕ್ ಪರ ಉಮರ್ ಗುಲ್ ಮೂರು ವಿಕೆಟ್ ಕಿತ್ತಿದ್ದರು.

ಇದನ್ನೂ ಓದಿ T20 World Cup 2024: ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳು ಯಾರು?

ಸಾಧಾರಣ ಗುರಿ ಬೆನ್ನತ್ತಿದ್ದ ಪಾಕ್​ ಓಂದೆಡೆ ವಿಕೆಟ್ ಬೀಳುತ್ತಿದ್ದರೂ ಮಿಸ್ಬಾ ಉಲ್ ಹಕ್ ನಿಂತು ಆಡುತ್ತಿದ್ದರು. ಕೊನೆಯ ಓವರ್ ನಲ್ಲಿ 13 ರನ್ ಬೇಕಾಗಿತ್ತು. ಕೈಯಲ್ಲಿ ಇದ್ದಿದ್ದು ಒಂದು ವಿಕೆಟ್. ಜೋಗಿಂದರ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಮಿಸ್ಬಾ ಮೂರನೇ ಎಸೆತವನ್ನು ಫೈನ್ ಲೆಗ್​ಗೆ ಸ್ಕೂಪ್ ಮಾಡಿದ್ದರು. ಆದರೆ ಚೆಂಡು ಶ್ರೀಶಾಂತ್ ಕೈ ಸೇರಿತ್ತು. ಪಾಕಿಸ್ತಾನ ಆಲ್​ಔಟ್​ ಆಯಿತು. ಭಾರತ ಕೇವಲ 5 ರನ್​ ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಇಲ್ಲಿದ ಧೋನಿ ಯುವ ಕೂಡ ಆರಂಭವಾಯಿತು. ಭಾರತ ಪರ ಬೌಲಿಂಗ್​ನಲ್ಲಿ ಇರ್ಫಾನ್​ ಪಠಾಣ್​ (16 ಕ್ಕೆ 3), ಆರ್​.ಪಿ ಸಿಂಗ್​(24ಕ್ಕೆ 3), ಜೋಗಿಂದರ್ ಶರ್ಮಾ(20ಕ್ಕೆ 2) ವಿಕೆಟ್​ ಕಿತ್ತು ಮಿಂಚಿದ್ದರು.

Continue Reading

ಕ್ರೀಡೆ

T20 World Cup 2024: ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳು ಯಾರು?

T20 World Cup 2024: ಈ ಬಾರಿಯ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಲೀಗ್​ ಪಂದ್ಯಗಳು ಜೂನ್​ 1ರಿಂದ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಾಡ ಮುಖಾಮುಖಿಯಾಗಲಿವೆ. ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ.

VISTARANEWS.COM


on

T20 World Cup 2024
Koo

ಬೆಂಗಳೂರು: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನು 2 ದಿನ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಟೂರ್ನಿಯಲ್ಲಿ ದಾಖಲಾದ ಹಲವು ದಾಖಲೆಗಳನ್ನು ಮೆಲುಕು ಹಾಕಲಾಗಿದೆ. ಇದೀಗ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳು ಯಾರೆಂಬ ಮಾಹಿತಿ ಇಂತಿದೆ.

ವಿರಾಟ್​ ಕೊಹ್ಲಿ


ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ ಅವರು ಟಿ20 ವಿಶ್ವಕಪ್​ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 2014ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕೊಹ್ಲಿ 319 ರನ್​ ಬಾರಿಸಿದ್ದರು. 2022ರಲ್ಲಿಯೂ ಕೊಹ್ಲಿ 296 ರನ್​ ಬಾರಿಸಿದ್ದರು. 2 ಬಾರಿ ಟೂರ್ನಿಯೊಂದರಲ್ಲಿ ಗರಿಷ್ಠ ರನ್​ ಗಳಿಸಿದ ದಾಖಲೆಯೂ ಅವರ ಹೆಸರಿನಲ್ಲಿದೆ. ಸದ್ಯ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ಕೊಹ್ಲಿ ಈ ಬಾರಿಯೂ ಸ್ಫೋಟಕ ಬ್ಯಾಟಿಂಗ್​ ನಡೆಸುವ ಸಾಧ್ಯತೆ ಇದೆ. ಕೆಲವು ದಿನಗಳ ಹಿಂದೆ ಮುಕ್ತಾಯ ಕಂಡಿದ್ದ 17ನೇ ಆವೃತ್ತಿಯ ಐಪಿಎಲ್​ನಲ್ಲಿ ಕೊಹ್ಲಿ 700 ರನ್​ಗಳ ಗಡಿ ದಾಟಿ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಎಂದೆನಿಸಿದ್ದರು.

ತಿಲಕರತ್ನೆ ದಿಲ್ಶನ್


ಶ್ರೀಲಂಕಾ ಕ್ರಿಕೆಟ್​ ತಂಡದ ಮಾಜಿ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶನ್ ಅವರು ಟಿ20 ವಿಶ್ವಕಪ್​ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳ ಯಾದಿಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ. 2009ರಲ್ಲಿ ತಿಲಕರತ್ನೆ ದಿಲ್ಶನ್ 317 ರನ್​ ಬಾರಿಸಿದ್ದರು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು ಯಾರು?


ಬಾಬರ್​ ಅಜಂ


ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ ಅವರು 2021ರಲ್ಲಿ ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ 303 ರನ್​ ಬಾರಿಸಿದ್ದರು. ಟಿ20 ವಿಶ್ವಕಪ್​ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿಯೂ ಆಡುತ್ತಿರುವ ಅವರಿಗೆ ಈ ದಾಖಲೆಯನ್ನು ಮತ್ತೆ ತಿದ್ದಿ ಬರೆಯುವ ಅವಕಾಶವಿದೆ.


ಮಹೇಲಾ ಜಯವರ್ಧನೆ


ಟಿ20 ವಿಶ್ವಕಪ್​ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳ ಯಾದಿಯಲ್ಲಿ ಶ್ರೀಲಂಕಾ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಲಾ ಜಯವರ್ಧನೆ ನಾಲ್ಕನೇ ಸ್ಥಾನಿಯಾಗಿದ್ದಾರೆ. ಅವರು 2010ರಲ್ಲಿ ನಡೆದಿದ್ದ ಟೂರ್ನಿಯಲ್ಲಿ 302 ರನ್​ ಬಾರಿಸಿದ್ದರು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು

ಈ ಬಾರಿಯ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಲೀಗ್​ ಪಂದ್ಯಗಳು ಜೂನ್​ 1ರಿಂದ ಆರಂಭಗೊಳ್ಳಲಿದೆ. ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಾಡ ಮುಖಾಮುಖಿಯಾಗಲಿವೆ. ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ.

Continue Reading

ಕ್ರೀಡೆ

IND vs PAK: ಉಗ್ರರಿಂದ ‘ಒಂಟಿ ತೋಳ’ ದಾಳಿ ಬೆದರಿಕೆ; ಭಾರತ-ಪಾಕ್​ ಪಂದ್ಯಕ್ಕೆ ಭಾರೀ ಭದ್ರತಾ ವ್ಯವಸ್ಥೆ

IND vs PAK: ಇತ್ತಂಡಗಳ ನಡುವೆ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium)ನಲ್ಲಿ ಪಂದ್ಯ ನಡೆಯಲಿದೆ. ಇದೇ ವೇಳೆ ಡ್ರೋನ್ ದಾಳಿ ನಡೆಸುವ ಸಾಧ್ಯತೆ ಕಂಡುಬಂದಿದೆ. ಹೀಗಾಗಿ ಪಂದ್ಯ ನಡೆಯುವ ಕ್ರೀಡಾಂಗಣದ ಸುತ್ತ ‘ನೊ-ಫ್ಲೈ ಝೋನ್’ ಎಂದು ಘೋಷಿಸುವಂತೆ ನ್ಯೂಯಾರ್ಕ್ ಪೊಲೀಸ್ ಯುಎಸ್​ ಏವಿಯೇಷನ್ ​​​​ಅಡ್ಮಿನಿಸ್ಟ್ರೇಷನ್‌ಗೆ ವಿನಂತಿಸಿದೆ

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಜೂನ್​ 9ರಂದು ನಡೆಯಲಿರುವ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಪಂದ್ಯಕ್ಕೆ ಉಗ್ರರಿಂದ ದಾಳಿಯ ಬೆದರಿಕೆ ಬಂದಿರುವ ಕಾರಣ ಕ್ರೀಡಾಂಗಣದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕೈಗೊಳಲಾಗಿದೆ ಎಂದು ನ್ಯೂಯಾರ್ಕ್‌ನ ಗವರ್ನರ್‌ ಕ್ಯಾಥಿ ಹೊಚುಲ್‌(New York Governor Kathy Hochul) ತಿಳಿಸಿದ್ದಾರೆ.

ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿ ನಡೆಸುವುದಾಗಿ ಘೋಷಿಸಿತ್ತು. ಇತ್ತಂಡಗಳ ನಡುವೆ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium)ನಲ್ಲಿ ಪಂದ್ಯ ನಡೆಯಲಿದೆ. ಇದೇ ವೇಳೆ ಡ್ರೋನ್ ದಾಳಿ ನಡೆಸುವ ಸಾಧ್ಯತೆ ಕಂಡುಬಂದಿದೆ. ಹೀಗಾಗಿ ಪಂದ್ಯ ನಡೆಯುವ ಕ್ರೀಡಾಂಗಣದ ಸುತ್ತ ‘ನೊ-ಫ್ಲೈ ಝೋನ್’ ಎಂದು ಘೋಷಿಸುವಂತೆ ನ್ಯೂಯಾರ್ಕ್ ಪೊಲೀಸ್ ಯುಎಸ್​ ಏವಿಯೇಷನ್ ​​​​ಅಡ್ಮಿನಿಸ್ಟ್ರೇಷನ್‌ಗೆ ವಿನಂತಿಸಿದೆ. ಈ ಮೂಲಕ ಉಗ್ರರ ದಾಳಿ ಮೇಲೆ ಕಣ್ಣಿಡಲು ಏವಿಯೇಷನ್ ​​​​ಅಡ್ಮಿನಿಸ್ಟ್ರೇಷನ್​ಗೆ ಮನವಿ ಮಾಡಲಾಗಿದೆ.

“ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಪಂದ್ಯಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ” ಎಂದು ನ್ಯೂಯಾರ್ಕ್‌ನ ಗವರ್ನರ್‌ ಕ್ಯಾಥಿ ಹೊಚುಲ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸುಧಾರಿತ ಕಣ್ಗಾವಲು ಮತ್ತು ಸಂಪೂರ್ಣ ಸ್ಕ್ರೀನಿಂಗ್ ಪ್ರಕ್ರಿಯೆಗಳು ಸೇರಿದಂತೆ ಉನ್ನತ ಭದ್ರತಾ ಕ್ರಮಗಳಲ್ಲಿ ತೊಡಗಿಸಿಕೊಳ್ಳಲು ನಾನು ನ್ಯೂಯಾರ್ಕ್ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೊಚುಲ್‌ ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ಪ್ರೊ-ಇಸ್ಲಾಮಿಕ್ ಸ್ಟೇಟ್ (ಐಎಸ್)ನಿಂದ ವೆಸ್ಟ್​ ಇಂಡೀಸ್​ನಲ್ಲಿ ನಡೆಯುವ ಪಂದ್ಯಗಳಿಗೆ ದಾಳಿಯ ಬೆದರಿಕೆಯೊಂದು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ  ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿತ್ತು.  ಕೆನ್ಸಿಂಗ್ಟನ್ ಓವಲ್(Kensington Oval Cricket Ground) ಕ್ರಿಕೆಟ್ ಮೈದಾನ, ಬಾರ್ಬಡೋಸ್​ನಲ್ಲಿ(Barbados) ಭದ್ರತಾ ಸಿಬ್ಬಂದಿಗಳು ಅಣುಕು ಪ್ರದರ್ಶನ ಮಾಡುತ್ತಿರುವ ಫೋಟೊ ಕೂಡ ವೈರಲ್​ ಆಗಿತ್ತು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಎಷ್ಟು ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ?

ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ಏರ್ಪಡಿಸಲಾಗಿದೆ ಎನ್ನಲಾಗಿದೆ.

ಟಿ20 ಮುಖಾಮುಖಿ

ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್​ ಅಂತರದ ಹೀನಾಯ ಸೋಲಾಗಿತ್ತು.

Continue Reading

ಕ್ರೀಡೆ

Viral Video: ಜಡಿ ಮಳೆಗೆ ಒದ್ದೆಯಾಗುತ್ತಲೇ ಓಡೋಡಿ ಬಂದು ಕಾರು ಹತ್ತಿದ ರೋಹಿತ್​, ದ್ರಾವಿಡ್​

Viral Video: ಬುಧವಾರ ಟೀಮ್​ ಇಂಡಿಯಾದ ಆಟಗಾರರೆಲ್ಲ ರನ್ನಿಂಗ್​ ಮತ್ತು ಫುಟ್ಬಾಲ್​ ಆಡುವ ಮೂಲಕ ಫಿಟ್​ನೆಸ್​ ತರಬೇತಿ ಪಡೆದಿದ್ದರು. ಇಂದಿನಿಂದ(ಗುರುವಾರ) ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ನಡೆಸಲಿದ್ದಾರೆ.

VISTARANEWS.COM


on

Viral Video
Koo

ನ್ಯೂಯಾರ್ಕ್​: ಟಿ20 ವಿಶ್ವಕಪ್​(T20 World Cup 2024) ಆಡುವ ಸಲುವಾಗಿ ನ್ಯೂಯಾರ್ಕ್​ನಲ್ಲಿರುವ(New York) ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ಮತ್ತು ಕೋಚ್​ ರಾಹುಲ್​ ದ್ರಾವಿಡ್(Rahul Dravid)​ ಅವರು ಜಡಿ ಮಳೆಯಲ್ಲಿಯೇ ಒದ್ದೆಯಾಗುತ್ತಾ ಓಡಿ ಹೋಗಿ ಕಾರು ಹತ್ತಿದ ವಿಡಿಯೊ ವೈರಲ್​(Viral Video) ಆಗಿದೆ. ರೆಸ್ಟೋರೆಂಟ್​ನಲ್ಲಿ ಡಿನ್ನರ್​ ಮುಗಿಸಿ ಹೊರ ಬರುವ ವೇಳೆ ಭಾರೀ ಮಳೆ ಸುರಿದಿದೆ. ಮಳೆಯನ್ನು ಕೂಡ ಲೆಕ್ಕಿಸದೆ ರೋಹಿತ್​ ಓಡಿ ಹೋಗಿ ಕಾರು ಹತ್ತಿದ್ದಾರೆ. ಇದರ ಹಿಂದೆಯೇ ದ್ರಾವಿಡ್​ ಕೂಡ ಓಡೋಡಿ ಬಂದು ಕಾರು ಹತ್ತಿದರು.

ಬುಧವಾರ ಟೀಮ್​ ಇಂಡಿಯಾದ ಆಟಗಾರರೆಲ್ಲ ರನ್ನಿಂಗ್​ ಮತ್ತು ಫುಟ್ಬಾಲ್​ ಆಡುವ ಮೂಲಕ ಫಿಟ್​ನೆಸ್​ ತರಬೇತಿ ಪಡೆದಿದ್ದರು. ಇಂದಿನಿಂದ(ಗುರುವಾರ) ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ನಡೆಸಲಿದ್ದಾರೆ. ಬಿಡುವಿನ ವೇಳೆ ಆಟಗಾರರು ನ್ಯೂಯಾರ್ಕ್​ ಸಿಟಿಗೆ ಒಂದು ರೌಂಡ್​ ಹಾಕಿದ್ದಾರೆ. ಇಲ್ಲಿನ ಕೆಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಫೋಟೊಗಳನ್ನು ಆಟಗಾರರು ತಮ್ಮ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಭಾರತೀಯ ಕ್ರಿಕೆಟ್​ ಅಭಿಮಾನಿಗಳು ನೂತನ ಜೆರ್ಸಿ ತೊಟ್ಟು ತಂಡ ಕಪ್​ ಗೆಲ್ಲಲಿ ಎಂದು ಹಾರೈಸಿದ್ದಾರೆ.


ವಿರಾಟ್​ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್​ ತಮ್ಮ ವೈಯಕ್ತಿಕ ಕಾರಣಗಳಿಂದ ತಂಡ ಸೇರುವುದು ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್​ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ಎಷ್ಟು ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ?

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ
Continue Reading
Advertisement
T20 World Cup 2007
ಕ್ರಿಕೆಟ್20 mins ago

T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

Gold Rate Today
ಚಿನ್ನದ ದರ20 mins ago

Gold Rate Today: ತುಸು ಇಳಿಕೆ ಕಂಡ ಚಿನ್ನದ ಬೆಲೆ; ಇಲ್ಲಿದೆ ದರದ ವಿವರ

Munawar Faruqui second wife Mehzabeen Coatwala single mom and makeup artist
ಬಾಲಿವುಡ್21 mins ago

Munawar Faruqui:  ʻಬಿಗ್ ಬಾಸ್ 17ʼರ ವಿಜೇತ  ಮುನಾವರ್ ಫಾರೂಕಿ ಎರಡನೇ ಪತ್ನಿ ಸಿಂಗಲ್‌ ಪೇರೆಂಟ್‌!

Lokayukta Raid
ಕ್ರೈಂ41 mins ago

Lokayukta Raid : ಲಂಚಕ್ಕೆ ಕೈವೊಡ್ಡಿದ ಕೆಆರ್‌ ಆಸ್ಪತ್ರೆ ವೈದ್ಯನಿಗೆ 4 ವರ್ಷ ಶಿಕ್ಷೆ, 50 ಸಾವಿರ ರೂ. ದಂಡ

Illegal Bangla Immigrants
ಕ್ರೈಂ53 mins ago

Illegal Bangla Immigrants: ಸಿಸಿಬಿ ದಾಳಿ, ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Viral News
ವೈರಲ್ ನ್ಯೂಸ್56 mins ago

Viral News: ಸರ ಕದ್ದು ಪರಾರಿಯಾಗಲು ಬೈಕ್‌ ಏರಿದವರಿಗೆ ಕಾದಿತ್ತು ಶಾಕ್‌; ವಿಡಿಯೊ ಇಲ್ಲಿದೆ

PM Narendra Modi
ದೇಶ60 mins ago

PM Narendra Modi: ಮೋದಿ ಧ್ಯಾನ ಮಾಡುವುದು ನೀತಿ ಸಂಹಿತೆ ಉಲ್ಲಂಘನೆಯೆ? ಕಾನೂನು ತಜ್ಞರ ಅಭಿಪ್ರಾಯ ಹೀಗಿದೆ

Saanvi Sudeep New Tattoo Piku meaning
ಸ್ಯಾಂಡಲ್ ವುಡ್1 hour ago

Saanvi Sudeep: ಟ್ಯಾಟೂ ಹಾಕಿಸಿಕೊಂಡ ಕಿಚ್ಚ ಸುದೀಪ್‌ ಮುದ್ದಿನ ಮಗಳು: ʻPIKUʼ ಅರ್ಥ ಏನು?

Nandamuri Balakrishna Pushes Away Actress Anjali
ಟಾಲಿವುಡ್1 hour ago

Nandamuri Balakrishna: ಕುಡಿದು ಬಂದು ವೇದಿಕೆ ಮೇಲೆ ನಟಿ ಅಂಜಲಿಯನ್ನು ತಳ್ಳಿದ್ರಾ ಬಾಲಯ್ಯ?

T20 World Cup 2024
ಕ್ರೀಡೆ1 hour ago

T20 World Cup 2024: ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳು ಯಾರು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌