ವಿಶಾಖಪಟ್ಟಣಂ: ನಗರದ ವೈ.ಎಸ್.ರಾಜಶೇಖರರೆಡ್ಡಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ (IND vs SA 3rd T2O) ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಪಂತ್ ಪಡೆ 48 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೌಲರ್‌ಗಳು ಹಾಗೂ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದಿಂದ ಭಾರತ ಮಿಂಚುವ ಮೂಲಕ ಸರಣಿಯಲ್ಲಿ ಗೆಲುವಿನ ಅಂತರವನ್ನು 1-2 ಕಾಯ್ದುಕೊಂಡಿದೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಋತುರಾಜ್ ಗಾಯಕ್‌ವಾಡ್ (57, 35 ಎಸೆತ, 7 ಫೋರ್, 2 ಸಿಕ್ಸ್ ) ಇಶಾನ್ ಕಿಶನ್ (54, 35 ಎಸೆತ, 5 ಫೋರ್, 2 ಸಿಕ್ಸ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.
ನಂತರ 180 ರನ್ ಸವಾಲಿನ ಮೊತ್ತದ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 19.1 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲ್ ಔಟ್ ಆಯಿತು. ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳಲ್ಲಿ ಕ್ಲಾಸೆನ್(29 ರನ್) ಟಾಪ್ ಸ್ಕೋರರ್, ಹೆನ್ರಿಕ್ಸ್(23), ಪ್ರಿಟೋರಿಯಸ್(20), ಬುವುಮಾ(8), ಡಸೆನ್(1), ಡೇವಿಡ್ ಮಿಲ್ಲರ್(3), ಕೇಶವ್ ಮಹಾರಾಜ್(11), ರಬಾಡ(9), ನಾರ್ಜ್(0), ಶಂಸಿ(0) ರನ್ ಗಳಿಸಿದರು, ಪರ್ನೆಲ್(22) ನಾಟೌಟ್ ಆಗಿ ಉಳಿದರು. ಭಾರತ ಬೌಲರ್‌ಗಳಲ್ಲಿ ಹರ್ಷಲ್ ಪಟೇಲ್ 4, ಯುಜುವೇಂದ್ರ ಚಾಹಲ್ 3 ವಿಕೆಟ್ ಉರುಳಿಸಿದರೆ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ನೀಡಿದರು. ಮೊದಲಿಗೆ ಇಶಾನ್ ಕಿಶನ್ ನಿಧಾನವಾಗಿ ಆಡಿದರೂ, ಋತುರಾಜ್ ಬಿರುಸಿನ ಬ್ಯಾಟಿಂಗ್ ಆಡಿದರು. ಈ ಕ್ರಮದಲ್ಲಿ ನಾರ್ಜ್ ಹಾಕಿದ 9ನೇ ಓವರ್‌ನಲ್ಲಿ ಟಿ20 ವೃತ್ತಿಜೀವನದಲ್ಲಿ ಮೊದಲ ಅರ್ಧಶತಕ ದಾಖಲಿಸಿದ ಋತುರಾಜ್(57), ಕೇಶವ್ ಮಹಾರಾಜ್ ಹಾಕಿದ ನಂತರದ ಓವರ್‌ನಲ್ಲಿ ಔಟಾದರು. ಶಂಸಿ ಎಸೆದ 13ನೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್(14), ಪ್ರಿಟೋರಿಯಸ್ ಎಸೆದ 13 ಓವರ್‌ನಲ್ಲಿ ಇಶಾನ್ ಕಿಶನ್(54) ಔಟಾದರು. ಈ ವೇಳೆ ಭಾರತದ ರನ್ ವೇಗ ಕಡಿಮೆಯಾಯಿತು. ಬಳಿಕ ರಿಷಬ್ ಪಂತ್(6), ಹಾರ್ದಿಕ್ ಪಾಂಡ್ಯ(31) ನಾಟೌಟ್, ದಿನೇಶ್ ಕಾರ್ತಿಕ್(6), ಅಕ್ಷರ್ ಪಟೇಲ್(5) ರನ್ ನೆರವಿನಿಂದ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು.
ಇದನ್ನೂ ಓದಿ | IPL ನೇರ ಪ್ರಸಾರದ ಹಕ್ಕು ಸ್ಟಾರ್ ಇಂಡಿಯಾ, ವಯಾಕಾಮ್18, ಟೈಮ್ಸ್ ಇಂಟರ್‌ನೆಟ್ ಪಾಲು, ಒಟ್ಟು 48,390 ಕೋಟಿ ರೂ.ಗೆ ಮಾರಾಟ