Site icon Vistara News

Ind vs Sa T20 | ಬೆಂಗಳೂರಿನಲ್ಲಿ ಇಂದು ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದೇ?

t20 match

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಸೆಣೆಸಾಟಕ್ಕೆ ಇಂದು ಮಂಗಲ. ಈಗಾಗಲೇ ಸರಣಿ ಸಮಬಲವಾಗಿದ್ದು, ಇಂದಿನ ಪಂದ್ಯ ನಿರ್ಣಾಯಕವಾಗಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ಟ್ರೋಫಿ ದಕ್ಕಲಿದೆ. ಈ ನಿರ್ಣಾಯಕ ಪಂದ್ಯವು ಇಂದು (ಜೂನ್ 19) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋಲನ್ನು ಕಂಡ ಭಾರತ ತಂಡವು ನಂತರದ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಮೂರನೇ ಹಾಗೂ ನಾಲ್ಕನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡ ಸರಣಿಯನ್ನು 2-2 ಅಂಕಗಳೊಂದಿಗೆ ಸಮಬಲಗೊಳಿಸಿತು.

ಕಳೆದ ಎರಡು ಪಂದ್ಯಗಳನ್ನು ಗಮನಿಸಿದಾಗ ಭಾರತದ ಆಟಗಾರರು ಒಳ್ಳೆಯ ಫಾರ್ಮ್‌ನಲ್ಲಿರುವುದು ಕಂಡುಬರುತ್ತದೆ. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಇಂದ ಈ ಸರಣಿಯಲ್ಲಿ ಭರವಸೆಯ ಆಟ ಕಂಡುಬಂದಿಲ್ಲ, ಆದರೆ ಈ ಪಂದ್ಯದಲ್ಲಿ ಅವರ ಉತ್ತಮ ಆರಂಭ ನೀಡಬೇಕು. ಇನ್ನು ಮಧ್ಯಮ ಕ್ರಮಾಂಕದ ಆಟಗಾರರು ಜವಾಬ್ದಾರಿಯುತವಾಗಿ ಆಡಿದರೆ ಗೆಲ್ಲುವ ಅವಕಾಶ ಹೆಚ್ಚಾಗುತ್ತದೆ. ಭಾರತದ ಬೌಲರ್‌ಗಳ ಪ್ರಹಾರ ಕಳೆದೆರಡು ಪಂದ್ಯಗಳಲ್ಲಿ ಅತ್ಯುತ್ತಮವಾಗಿದೆ. ಇಂದೂ ಕೂಡ ಅವರಿಂದ ಅದೇ ನಿರೀಕ್ಷೆಯಿದೆ.

ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಕಳೆದ ಎರಡೂ ಪಂದ್ಯಗಳಲ್ಲಿ ಭಾರತದ ಬೌಲರ್‌ಗಳ ಎಸೆತಕ್ಕೆ ರನ್ ಗಳಿಸಲು ಪರದಾಡಿದ್ದರು. ಆದರೆ ಇಂದಿನ ಪಂದ್ಯ ಅವರಿಗೂ ಮಹತ್ವದ್ದಾಗಿದೆ. ಹಾಗಾಗಿ ಅವರಿಂದ ಉತ್ತಮ ಆಟವನ್ನು ನಿರೀಕ್ಷಿಸಬಹುದು.

ಭಾರತ ಆಟಗಾರರ ಈಗಿರುವ ಫಾರ್ಮ್‌ ಗಮನಿಸಿದರೆ ಇಂದಿನ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಪಿಚ್ ರಿಪೋರ್ಟ್

ಇಂದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರು ಹವಾಮಾನ ವರದಿ ಪ್ರಕಾರ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಹಾಗಾದರೆ ಪಂದ್ಯದ ಆರಂಭದಲ್ಲಿ ವಿಳಂಬವಾಗುತ್ತದೆ.

ಈ ಪಿಚ್ ಸ್ಪಿನ್ ಬೌಲರ್‌ಗಳಿಗೆ ಪೂರಕವಾಗಿಲಿದೆ. ಈ ಪಿಚ್‌ನಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿದ ಪ್ರಮಾಣ ಹೆಚ್ಚಿರುವುದರಿಂದ ಟಾಸ್ ಗೆದ್ದವರು ಮೊದಲು ಬೌಲಿಂಗ್ ಆಯ್ಕೆ ಮಾಡಿದರೆ ಉತ್ತಮ.

ಕಳೆದ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಟಾಸ್ ಸೋತಿರುವ ಪಂತ್ ಈ ನಿರ್ಣಾಯಕ ಪಂದ್ಯದಲ್ಲಾದರೂ ಟಾಸ್ ಗೆಲ್ಲಬಬಹದೇ? ಎಂದು ಕಾದುನೋಡಬೇಕಿದೆ.

ಸಂಭವನೀಯ ತಂಡ

ಭಾರತ: ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್(ನಾಯಕ, ವಿಕೆಟ್‌ ಕೀಪರ್), ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌, ಅಕ್ಷರ್‌ ಪಟೇಲ್‌, ಯುಜ್ವೇಂದ್ರ ಚಹಲ್‌, ಭುವನೇಶ್ವರ್‌ ಕುಮಾರ್‌, ಹರ್ಷಲ್‌ ಪಟೇಲ್‌, ಆವೇಶ್‌ ಖಾನ್‌.

ದಕ್ಷಿಣ ಆಫ್ರಿಕ: ಕ್ವಿಂಟನ್‌ ಡಿ ಕಾಕ್, ಟೆಂಬಾ ಬವುಮಾ(ನಾಯಕ), ರಸ್ಸಿ ವ್ಯಾನ್‌ ಡರ್‌ ಡಸ್ಸೆನ್‌, ಡೇವಿಡ್‌ ಮಿಲ್ಲರ್‌, ಹೆನ್ರಿಕ್‌ ಕ್ಲಾಸೀನ್, ಡ್ವೈನ್‌ ಪಿಟೋರಿಯಸ್‌, ಕೇಶವ್‌ ಮಹಾರಾಜ್‌, ಮಾರ್ಕೊ ಜಾನ್ಸೆನ್‌, ತಬ್ರಿಜ್‌ ಶಂಸಿ, ಅನ್ರಿಚ್‌ ನೊಕಿಯೆ, ಲುಂಗಿ ಎನ್‌ಗಿಡಿ.

Exit mobile version