Site icon Vistara News

Team India : ಜನವರಿಯಲ್ಲಿ ನಡೆಯಲಿದೆ ಅಫಘಾನಿಸ್ತಾನ ವಿರುದ್ಧ ಕ್ರಿಕೆಟ್​ ಸರಣಿ

Cricket news

ಬೆಂಗಳೂರು: 2023ರ ಏಕದಿನ ವಿಶ್ವಕಪ್ ಅಭಿಯಾನವನ್ನು ಬೇಸರದಿಂದ ಕೊನೆಗೊಳಿಸಿದ ನಂತರ ಟೀಮ್ ಇಂಡಿಯಾ (Team India) ಮುಂಬರುವ ಕಾರ್ಯಯೋಜನೆಗಳತ್ತ ಗಮನ ಹರಿಸುತ್ತಿದೆ. ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ಆಸ್ಟ್ರೇಲಿಯಾ ನಡುವೆ ಟಿ20 ಪಂದ್ಯಗಳ ಸರಣಿ ನಡೆಲಿದ್ದು ತಂಡ ಪ್ರಕಟಗೊಂಡಿದೆ. ಇದೀಗ ಅಫಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ 20 ಐ ಸರಣಿ ಘೋಷಣೆಗೊಂಡಿದೆ. ಜನವರಿಯಲ್ಲಿ ಈ ಸರಣಿ ನಡೆಯಲಿದೆ.

ಭಾರತವು ಅಫ್ಘಾನಿಸ್ತಾನವನ್ನು ಸೀಮಿತ ಓವರ್​ಗಳ ಸರಣಿಯಲ್ಲಿ ಎದುರಿಸುತ್ತಿರುವುದು ಇದೇ ಮೊದಲು. ಮೂರು ಪಂದ್ಯಗಳ ಸರಣಿಯು 2024ರ ಜನವರಿಯಲ್ಲಿ ನಡೆಯಲಿದೆ. ಜನವರಿ 11 ರಿಂದ 17 ರವರೆಗೆ ಮೊಹಾಲಿ, ಇಂದೋರ್ ಮತ್ತು ಬೆಂಗಳೂರು ಟಿ20 ಐ ಸರಣಿಗೆ ಆತಿಥ್ಯ ವಹಿಸಲಿವೆ.

ಐಸಿಸಿ ಮತ್ತು ಎಸಿಸಿ ಪಂದ್ಯಾವಳಿಗಳ ಹೊರಗೆ ಭಾರತ ಮತ್ತು ಅಫ್ಘಾನಿಸ್ತಾನ ವೈಟ್-ಬಾಲ್ ಕ್ರಿಕೆಟ್​ನಲ್ಲಿ ಎಂದಿಗೂ ಪರಸ್ಪರ ಆಡಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. 2018ರಲ್ಲಿ ಉಭಯ ತಂಡಗಳು ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದವು. ವಿಶ್ವಕಪ್ ಅಭಿಯಾನದ ನಂತರ, ಭಾರತೀಯ ತಂಡವು ಹಲವಾರು ಅಂತರರಾಷ್ಟ್ರೀಯ ಕಾರ್ಯಯೋಜನೆಗಳನ್ನು ಹೊಂದಿದೆ. ನವೆಂಬರ್ 23ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

ಚೇತರಿಸಿಕೊಳ್ಳುವ ಯೋಜನೆಯಲ್ಲಿ ಭಾರತ

ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ 2023 ರಲ್ಲಿ ಆಘಾತಕಾರಿ ಸೋಲಿನ ನಂತರ ಭಾರತ ತಂಡವು ಮಾನಸಿಕವಾಗಿ ಕುಗ್ಗಿದೆ. ಭಾರತವು ಪ್ರತಿಷ್ಠಿತ ಪಂದ್ಯಾವಳಿಯ ಆತಿಥ್ಯ ವಹಿಸಿತ್ತು ಮತ್ತು ಸ್ಪರ್ಧೆಯ ಗುಂಪು ಹಂತಗಳಲ್ಲಿ ಅಜೇಯವಾಗಿ ಉಳಿದಿತ್ತು. ಆದರೆ, ಫೈನಲ್​ನಲ್ಲಿ ಸೋತಿತು.

ಒಂಬತ್ತು ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದ ತಂಡವು ವಿಶ್ವಕಪ್​​ನ ನಾಕೌಟ್ ಹಂತಕ್ಕೆ ಅರ್ಹತೆ ಪಡೆದ ಮೊದಲ ತಂಡವಾಯಿತು. ಇದಲ್ಲದೆ, ಭಾರತವು ಕಿವೀಸ್ ವಿರುದ್ಧದ ಸೋಲಿನ ಶಾಪವನ್ನು ಮುರಿಯಿತು. ಅಂತಿಮವಾಗಿ ಫೈನಲ್ ಮುಖಾಮುಖಿಗೆ ಪ್ರವೇಶಿಸಿತು.

ಆದರೆ ಭಾರತ ಅಜೇಯ ಓಟವು ಮೆನ್ ಇನ್​ ಯೆಲ್ಲೊ ಪುರುಷರ ವಿರುದ್ಧ ಕೊನೆಗೊಂಡಿತು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಾಬುಶೇನ್ ಅವರ ಅದ್ಭುತ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು 241 ರನ್​ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.

ಇದನ್ನೂ ಓದಿ : Rahul Gandhi : ಭಾರತ ವಿಶ್ವ ಕಪ್​ ಸೋಲಲು ಮೋದಿಯ ಕಾಲ್ಗುಣವೇ ಕಾರಣ ಎಂದ ರಾಹುಲ್​

ಭಾರತವನ್ನು ಆರು ವಿಕೆಟ್ ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಮುಂಬರುವ ಟಿ 20 ಐ ಸರಣಿಯಲ್ಲೂ ಇದೇ ರೀತಿಯ ಪ್ರದರ್ಶನವನ್ನು ನೀಡಲು ಎದುರು ನೋಡುತ್ತಿದೆ.

ವಿಶ್ವ ದಾಖಲೆ ಬರೆದ ವಿಶ್ವಕಪ್​!

ಮುಂಬಯಿ: ಭಾರತ ಆತಿಥ್ಯದಲ್ಲಿ ನಡೆದ ಈ ಬಾರಿ ಏಕದಿನ ವಿಶ್ವಕಪ್(ICC World Cup 2023)​ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ಒಟ್ಟು 46 ದಿನ, 48 ಪಂದ್ಯಗಳನ್ನು ದೇಶದ ಪ್ರಮುಖ 10 ನಗರಗಳಲ್ಲಿ ನಡೆಸಲಾಗಿತ್ತು. ಇದೀಗ ಈ ವಿಶ್ವಕಪ್​ ಟೂರ್ನಿ ವಿಶ್ವ ದಾಖಲೆಯೊಂದನ್ನು ಬರೆದಿದೆ. ಒಟ್ಟಾರೆಯಾಗಿ 12.5 ಲಕ್ಷ (1.25 ಮಿಲಿಯನ್‌) ಪ್ರೇಕ್ಷಕರು ಸ್ಟೇಡಿಯಂನಲ್ಲಿ ನೇರವಾಗಿ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮಂಗಳವಾರ ಹೇಳಿದೆ. ಇದು ವಿಶ್ವಕಪ್​ ಇತಿಹಾಸದಲ್ಲೇ ದಾಖಲೆಯ ವೀಕ್ಷಣೆ ಎಂಬ ಹಿರಿಮೆ ಪಡೆದಿದೆ.

ಈ ಹಿಂದೆ 2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ಜಂಟಿ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯನ್ನು ಒಟ್ಟು 10.16 ಲಕ್ಷ (1.016 ಮಿಲಿಯನ್‌) ಮಂದಿ ವೀಕ್ಷಿಸಿದ್ದರು. ಇದೀಗ ಈ ದಾಖಲೆ ಪತನಗೊಂಡಿದೆ. ಈ ಬಾರಿಯ ವಿಶ್ವಕಪ್​ ಅಕ್ಟೋಬರ್‌ 5 ರಿಂದ ಆರಂಭವಾಗಿ ನವೆಂಬರ್ 19 ರಂದು ಕೊನೆಗೊಂಡಿತು. ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಟ ನಡೆಸಿತ್ತು. ಇಲ್ಲಿ ಆಸ್ಟ್ರೇಲಿಯಾ 6 ವಿಕೆಟ್​ಗಳಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿತು.

ಒಟ್ಟಾರೆಯಾಗಿ ಈ ಬಾರಿಯ ಏಕದಿನ ವಿಶ್ವಕ‍ಪ್‌ ಪಂದ್ಯ ಅತ್ಯಂತ ಯಶಸ್ಸು ಕಂಡಿದೆ ಎಂದು ಐಸಿಸಿ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿದ್ದಾರೆ.

Exit mobile version