Team India : ಜನವರಿಯಲ್ಲಿ ನಡೆಯಲಿದೆ ಅಫಘಾನಿಸ್ತಾನ ವಿರುದ್ಧ ಕ್ರಿಕೆಟ್​ ಸರಣಿ Vistara News

ಕ್ರಿಕೆಟ್

Team India : ಜನವರಿಯಲ್ಲಿ ನಡೆಯಲಿದೆ ಅಫಘಾನಿಸ್ತಾನ ವಿರುದ್ಧ ಕ್ರಿಕೆಟ್​ ಸರಣಿ

ಜನವರಿ 11 ರಿಂದ 17 ರವರೆಗೆ ಭಾರತವು (Team India) ಅಫ್ಘಾನಿಸ್ತಾನವನ್ನು ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಎದುರಿಸಲಿದೆ.

VISTARANEWS.COM


on

Cricket news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 2023ರ ಏಕದಿನ ವಿಶ್ವಕಪ್ ಅಭಿಯಾನವನ್ನು ಬೇಸರದಿಂದ ಕೊನೆಗೊಳಿಸಿದ ನಂತರ ಟೀಮ್ ಇಂಡಿಯಾ (Team India) ಮುಂಬರುವ ಕಾರ್ಯಯೋಜನೆಗಳತ್ತ ಗಮನ ಹರಿಸುತ್ತಿದೆ. ನವೆಂಬರ್​ ಮತ್ತು ಡಿಸೆಂಬರ್​ನಲ್ಲಿ ಆಸ್ಟ್ರೇಲಿಯಾ ನಡುವೆ ಟಿ20 ಪಂದ್ಯಗಳ ಸರಣಿ ನಡೆಲಿದ್ದು ತಂಡ ಪ್ರಕಟಗೊಂಡಿದೆ. ಇದೀಗ ಅಫಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ 20 ಐ ಸರಣಿ ಘೋಷಣೆಗೊಂಡಿದೆ. ಜನವರಿಯಲ್ಲಿ ಈ ಸರಣಿ ನಡೆಯಲಿದೆ.

ಭಾರತವು ಅಫ್ಘಾನಿಸ್ತಾನವನ್ನು ಸೀಮಿತ ಓವರ್​ಗಳ ಸರಣಿಯಲ್ಲಿ ಎದುರಿಸುತ್ತಿರುವುದು ಇದೇ ಮೊದಲು. ಮೂರು ಪಂದ್ಯಗಳ ಸರಣಿಯು 2024ರ ಜನವರಿಯಲ್ಲಿ ನಡೆಯಲಿದೆ. ಜನವರಿ 11 ರಿಂದ 17 ರವರೆಗೆ ಮೊಹಾಲಿ, ಇಂದೋರ್ ಮತ್ತು ಬೆಂಗಳೂರು ಟಿ20 ಐ ಸರಣಿಗೆ ಆತಿಥ್ಯ ವಹಿಸಲಿವೆ.

ಐಸಿಸಿ ಮತ್ತು ಎಸಿಸಿ ಪಂದ್ಯಾವಳಿಗಳ ಹೊರಗೆ ಭಾರತ ಮತ್ತು ಅಫ್ಘಾನಿಸ್ತಾನ ವೈಟ್-ಬಾಲ್ ಕ್ರಿಕೆಟ್​ನಲ್ಲಿ ಎಂದಿಗೂ ಪರಸ್ಪರ ಆಡಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. 2018ರಲ್ಲಿ ಉಭಯ ತಂಡಗಳು ಏಕೈಕ ಟೆಸ್ಟ್ ಪಂದ್ಯವನ್ನಾಡಿದ್ದವು. ವಿಶ್ವಕಪ್ ಅಭಿಯಾನದ ನಂತರ, ಭಾರತೀಯ ತಂಡವು ಹಲವಾರು ಅಂತರರಾಷ್ಟ್ರೀಯ ಕಾರ್ಯಯೋಜನೆಗಳನ್ನು ಹೊಂದಿದೆ. ನವೆಂಬರ್ 23ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

ಚೇತರಿಸಿಕೊಳ್ಳುವ ಯೋಜನೆಯಲ್ಲಿ ಭಾರತ

ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ 2023 ರಲ್ಲಿ ಆಘಾತಕಾರಿ ಸೋಲಿನ ನಂತರ ಭಾರತ ತಂಡವು ಮಾನಸಿಕವಾಗಿ ಕುಗ್ಗಿದೆ. ಭಾರತವು ಪ್ರತಿಷ್ಠಿತ ಪಂದ್ಯಾವಳಿಯ ಆತಿಥ್ಯ ವಹಿಸಿತ್ತು ಮತ್ತು ಸ್ಪರ್ಧೆಯ ಗುಂಪು ಹಂತಗಳಲ್ಲಿ ಅಜೇಯವಾಗಿ ಉಳಿದಿತ್ತು. ಆದರೆ, ಫೈನಲ್​ನಲ್ಲಿ ಸೋತಿತು.

ಒಂಬತ್ತು ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದ ತಂಡವು ವಿಶ್ವಕಪ್​​ನ ನಾಕೌಟ್ ಹಂತಕ್ಕೆ ಅರ್ಹತೆ ಪಡೆದ ಮೊದಲ ತಂಡವಾಯಿತು. ಇದಲ್ಲದೆ, ಭಾರತವು ಕಿವೀಸ್ ವಿರುದ್ಧದ ಸೋಲಿನ ಶಾಪವನ್ನು ಮುರಿಯಿತು. ಅಂತಿಮವಾಗಿ ಫೈನಲ್ ಮುಖಾಮುಖಿಗೆ ಪ್ರವೇಶಿಸಿತು.

ಆದರೆ ಭಾರತ ಅಜೇಯ ಓಟವು ಮೆನ್ ಇನ್​ ಯೆಲ್ಲೊ ಪುರುಷರ ವಿರುದ್ಧ ಕೊನೆಗೊಂಡಿತು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಾಬುಶೇನ್ ಅವರ ಅದ್ಭುತ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು 241 ರನ್​ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.

ಇದನ್ನೂ ಓದಿ : Rahul Gandhi : ಭಾರತ ವಿಶ್ವ ಕಪ್​ ಸೋಲಲು ಮೋದಿಯ ಕಾಲ್ಗುಣವೇ ಕಾರಣ ಎಂದ ರಾಹುಲ್​

ಭಾರತವನ್ನು ಆರು ವಿಕೆಟ್ ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಮುಂಬರುವ ಟಿ 20 ಐ ಸರಣಿಯಲ್ಲೂ ಇದೇ ರೀತಿಯ ಪ್ರದರ್ಶನವನ್ನು ನೀಡಲು ಎದುರು ನೋಡುತ್ತಿದೆ.

ವಿಶ್ವ ದಾಖಲೆ ಬರೆದ ವಿಶ್ವಕಪ್​!

ಮುಂಬಯಿ: ಭಾರತ ಆತಿಥ್ಯದಲ್ಲಿ ನಡೆದ ಈ ಬಾರಿ ಏಕದಿನ ವಿಶ್ವಕಪ್(ICC World Cup 2023)​ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ಒಟ್ಟು 46 ದಿನ, 48 ಪಂದ್ಯಗಳನ್ನು ದೇಶದ ಪ್ರಮುಖ 10 ನಗರಗಳಲ್ಲಿ ನಡೆಸಲಾಗಿತ್ತು. ಇದೀಗ ಈ ವಿಶ್ವಕಪ್​ ಟೂರ್ನಿ ವಿಶ್ವ ದಾಖಲೆಯೊಂದನ್ನು ಬರೆದಿದೆ. ಒಟ್ಟಾರೆಯಾಗಿ 12.5 ಲಕ್ಷ (1.25 ಮಿಲಿಯನ್‌) ಪ್ರೇಕ್ಷಕರು ಸ್ಟೇಡಿಯಂನಲ್ಲಿ ನೇರವಾಗಿ ಪಂದ್ಯವನ್ನು ವೀಕ್ಷಣೆ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮಂಗಳವಾರ ಹೇಳಿದೆ. ಇದು ವಿಶ್ವಕಪ್​ ಇತಿಹಾಸದಲ್ಲೇ ದಾಖಲೆಯ ವೀಕ್ಷಣೆ ಎಂಬ ಹಿರಿಮೆ ಪಡೆದಿದೆ.

ಈ ಹಿಂದೆ 2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ಜಂಟಿ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯನ್ನು ಒಟ್ಟು 10.16 ಲಕ್ಷ (1.016 ಮಿಲಿಯನ್‌) ಮಂದಿ ವೀಕ್ಷಿಸಿದ್ದರು. ಇದೀಗ ಈ ದಾಖಲೆ ಪತನಗೊಂಡಿದೆ. ಈ ಬಾರಿಯ ವಿಶ್ವಕಪ್​ ಅಕ್ಟೋಬರ್‌ 5 ರಿಂದ ಆರಂಭವಾಗಿ ನವೆಂಬರ್ 19 ರಂದು ಕೊನೆಗೊಂಡಿತು. ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಸೆಣಸಾಟ ನಡೆಸಿತ್ತು. ಇಲ್ಲಿ ಆಸ್ಟ್ರೇಲಿಯಾ 6 ವಿಕೆಟ್​ಗಳಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿತು.

ಒಟ್ಟಾರೆಯಾಗಿ ಈ ಬಾರಿಯ ಏಕದಿನ ವಿಶ್ವಕ‍ಪ್‌ ಪಂದ್ಯ ಅತ್ಯಂತ ಯಶಸ್ಸು ಕಂಡಿದೆ ಎಂದು ಐಸಿಸಿ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Ind vs Aus : ಭಾರತ ತಂಡಕ್ಕೆ ಕೊನೇ ಪಂದ್ಯದಲ್ಲೂ ಜಯ, 4-1 ಅಂತರದಿಂದ ಸರಣಿ ಕೈವಶ

ind vs aus : ಸರಣಿಯುದ್ದಕ್ಕೂ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿತಲ್ಲದೆ, ಯುವ ಆಟಗಾರರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.

VISTARANEWS.COM


on

indian cricket team
Koo

ಬೆಂಗಳೂರು: ಐದು ಪಂದ್ಯಗಳ ಟಿ20 ಸರಣಿಯ ಕೊನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ (ind vs aus) ವಿರುದ್ಧ 6 ರನ್​ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಕೈವಶ ಮಾಡಿಕೊಂಡಿದೆ. ರಾಯ್ಪುರದಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಭಾರತ ತಂಡ ಸರಣಿಯನ್ನು ಗೆದ್ದುಕೊಂಡಿತ್ತು. ಹೀಗಾಗಿ ಐದನೇ ಪಂದ್ಯಕ್ಕೆ ಹೆಚ್ಚಿನ ಮೌಲ್ಯ ಇರಲಿಲ್ಲ. ಆದಾಗ್ಯೂ ಭಾರತ ತಂಡ ಸರ್ವತೋಮುಖ ಪ್ರದರ್ಶನ ನೀಡುವ ಮೂಲಕ ವಿಜಯ ತನ್ನದಾಗಿಸಿಕೊಂಡಿತು. ವಿಶ್ವ ಕಪ್​ ಫೈನಲ್ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡದ ವಿರುದ್ಧವೇ ಸರಣಿ ಗೆಲ್ಲುವ ಮೂಲಕ ಭಾರತ ತಂಡ ಸಮಾಧಾನ ಮಾಡಿಕೊಂಡಿತು. ಇದೇ ವೇಳೆ ಒಟ್ಟು 136 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿರುವ ಏಕೈಕ ತಂಡ ಎಂಬ ಹೆಗ್ಗಳಿಕೆಯನ್ನೂ ಗಳಿಸಿತು.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್​ ಮಾಡಿ ನಿಗದಿತ 20 ಓವರ್​ಗಳಿಗೆ 8 ವಿಕೆಟ್​ ಕಳೆದುಕೊಂಡು 160 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮ್ಯಾಥ್ಯೂ ವೇಡ್​ ನೇತೃತ್ವದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್​ಗಳು ಮುಕ್ತಾಯಗೊಂಡಾಗ 154 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಆಸ್ಟ್ರೇಲಿಯಾ ತಂಡದ ಗೆಲುವಿಗೆ ಕೊನೇ ಓವರ್​ನಲ್ಲಿ 10 ರನ್​ ಬೇಕಾಗಿತ್ತು. ಟಿ20ಯಲ್ಲಿ ಇದು ದೊಡ್ಡ ಮೊತ್ತವೇ ಆಗಿರಲಿಲ್ಲ. ಆದರೆ, ಅರ್ಶ್​ದೀಪ್​ ಸಿಂಗ್ ಒಂದು ವಿಕೆಟ್​ ಪಡೆಯುವ ಜತೆಗೆ ಕೇವಲ ನಾಲ್ಕು ರನ್​ ನೀಡಿ ತಂಡವನ್ನು ಗೆಲ್ಲಿಸಿದರು.

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆಸ್ಟ್ರೇಲಿಯಾ ತಂಡ ನಿಯಮಿತವಾಗಿ ವಿಕೆಟ್​ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಬೆನ್​ ಮೆಕ್​ಡರ್ಮಾಟ್​​ (54) ಅರ್ಧ ಶತಕ ಬಾರಿಸಿ ತಂಡವನ್ನು ಗೆಲುವಿನೆಡೆಗೆ ಸಾಗಿಸುವ ಯತ್ನ ಮಾಡಿದರು. ಆದರೆ, ಉಳಿದವರ ನೆರವು ದೊರಕದ ಕಾರಣ ತಂಡ ಸೋತಿತು. ಅದಕ್ಕಿಂತ ಮೊದಲು ಆರಂಭಿಕ ಬ್ಯಾಟರ್​​ ಟ್ರಾವಿಡ್​ ಹೆಡ್​​ 28 ರನ್ ಬಾರಿಸಿದರೆ ಕೊನೆಯಲ್ಲಿ ಮ್ಯಾಥ್ಯೂ ವೇಡ್​ 22 ರನ್​ ಬಾರಿಸಿದರೂ ತಂಡವನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲ.

ಇದನ್ನೂ ಓದಿ : IND vs SA : ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಕುರಿತ ಪೂರ್ಣ ವಿವರ ಇಲ್ಲಿದೆ

ಭಾರತ ತಂಡ ಪರ ಬೌಲಿಂಗ್​ನಲ್ಲಿ ಮುಖೇಶ್ ಕುಮಾರ್​ 3 ವಿಕೆಟ್​ ಪಡೆದರೆ ರವಿ ಬಿಷ್ಣೋಯ್​ 2 ಹಾಗೂ ಅರ್ಶ್​ದೀಪ್ ಸಿಂಗ್ 2 ವಿಕೆಟ್ ತಮ್ಮದಾಗಿಸಿಕೊಂಡರು.

ಸಾಧಾರಣ ಬ್ಯಾಟಿಂಗ್​

ಬೆಂಗಳೂರಿನಲ್ಲಿ ಭಾರತ ತಂಡದ ಬ್ಯಾಟರ್​ಗಳು ಅಬ್ಬರಿಸಬಹುದು ಎಂಬ ನಿರೀಕ್ಷೆ ಈ ಪಂದ್ಯದಲ್ಲಿ ಸುಳ್ಳಾಯಿತು. ಉತ್ತಮ ಆರಂಭ ನೀಡಿತ ಹೊರತಾಗಿಯೂ ಯಶಸ್ವಿ ಜೈಸ್ವಾಲ್​ 15 ಎಸೆತಕ್ಕೆ 21 ರನ್ ಬಾರಿಸಿ ಔಟಾದರು. ಹೀಗಾಗಿ 33 ರನ್​ಗೆ ಭಾರತ ಮೊದಲ ವಿಕೆಟ್​ ಕಳೆದುಕೊಂಡಿತು. ಋತುರಾಜ್ ಗಾಯಕ್ವಾಡ್ ಕೂಡ 10 ರನ್​ಗೆ ಸೀಮಿತಗೊಂಡರು. ಸೂರ್ಯಕುಮಾರ್​ ಯಾದವ್​ ಮತ್ತೆ ಬ್ಯಾಟಿಂಗ್​ನಲ್ಲಿ ವೈಫಲ್ಯ ಎದುರಿಸಿ 5 ರನ್​ಗೆ ಸೀಮಿತಗೊಂಡರು. ಹಿಂದಿನ ನಾಲ್ಕ ಪಂದ್ಯಗಳಲ್ಲಿ ತಂಡ ಗೆಲುವಿಗೆ ಪ್ರಾಮಾಣಿಕ ಕೊಡುಗೆ ಕೊಟ್ಟಿದ್ದ ರಿಂಕು ಸಿಂಗ್​ ಇಲ್ಲಿ 6 ರನ್​ಗೆ ಸೀಮಿತಗೊಂಡರು. ಈ ಸರಣಿಯಲ್ಲಿ ಇದು ಅವರ ಮೊದಲ ಒಂದಂಕಿ ಮೊತ್ತವಾಗಿದೆ. ಹೀಗಾಗಿ ಭಾರತ 55 ರನ್​ಗಳಿಗೆ ಮೊದಲ ನಾಲ್ಕು ವಿಕೆಟ್​ ಕಳೆದುಕೊಂಡಿತು.

ಶ್ರೇಯಸ್ ಅರ್ಧ ಶತಕ

ಭಾರತ ತಂಡ ಸಂಕಷ್ಟದಲ್ಲಿದ್ದ ವೇಳೆ ನೆರವಿಗೆ ನಿಂತ ಶ್ರೇಯಸ್​​ ಅಯ್ಯರ್ ಅರ್ಧ ಶತಕ ಬಾರಿಸಿತು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಅವರು ಆರಂಭದಲ್ಲಿ ನಿಧಾನಕ್ಕೆ ಆಡಿ ಬಳಿಕ ರನ್​ ಗಳಿಕೆ ನೆರವಾದರು. 37 ಎಸೆತಗಳನ್ನು ಎದುರಿಸಿದ ಅವರು 5 ಫೊರ್ ಹಾಗೂ 2 ಸಿಕ್ಸರ್​ಗಳನ್ನ ಬಾರಿಸಿ ಮಿಂಚಿದರು. ಇವರು ವಿಕೆಟ್​ ಕೀಪರ್ ಜಿತೇಶ್​ ಶರ್ಮಾ ಅವರ ಜತೆ ಅಮೂಲ್ಯ ಜತೆಯಾಟವಾಡಿದರು. ಜಿತೇಶ್​ 16 ಎಸೆತಕ್ಕೆ 3 ಫೊರ್​ ಹಾಗೂ 1 ಸಿಕ್ಸರ್ ಬಾರಿಸಿದರು. ಕೊನೆಯಲ್ಲಿ ಅಕ್ಷರ್ ಪಟೇಲ್​ ಸಿಡಿದೆದ್ದರು. ಅವರು 21 ಎಸೆತಕ್ಕೆ 31 ರನ್​ ಗಳ ಕೊಡುಗೆ ಕೊಟ್ಟರು. ಹೀಗಾಗಿ ಭಾರತದ ಗಳಿಕೆ ಹೆಚ್ಚಾಯಿತು.

Continue Reading

ಕ್ರಿಕೆಟ್

IND vs SA : ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಕುರಿತ ಪೂರ್ಣ ವಿವರ ಇಲ್ಲಿದೆ

IND vs SA: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ಮೂರು ಟಿ20, ಮೂರು ಏಕದಿನ ಹಾಗೂ ಎರಡು ಟೆಸ್ಟ್​ ಪಂದ್ಯಗಳಲ್ಲಿ ಭಾಗಿಯಾಗಲಿದೆ.

VISTARANEWS.COM


on

Team India
Koo

ಬೆಂಗಳೂರು: ತವರು ನೆಲದಲ್ಲಿ ಆಸ್ಟ್ರೇಲಿಯಾವನ್ನು ಟಿ20 ಐ ಸರಣಿಯಲ್ಲಿ ಮಣಿಸಿದ ನಂತರ ಭಾರತವು ದಕ್ಷಿಣ ಆಫ್ರಿಕಾ (IND vs SA) ಪ್ರವಾಸ ಮಾಡಲಿದೆ. ಮೂರು ಟಿ 20, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಡಿಸೆಂಬರ್ 10 ರಿಂದ ಮೂರು ಪಂದ್ಯಗಳ ಟಿ 20 ಐ ಸರಣಿಯೊಂದಿಗೆ ಪ್ರವಾಸ ಪ್ರಾರಂಭವಾಗಲಿದ್ದು, ಏಕದಿನ ಸರಣಿ ಡಿಸೆಂಬರ್ 17 ರಂದು ಪ್ರಾರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಚಕ್ರದ (2023-25) ಭಾಗವಾಗಿರುವ ಎರಡು ಟೆಸ್ಟ್ ಪಂದ್ಯಗಳು ಡಿಸೆಂಬರ್ 26 ರಿಂದ ಆರಂಭವಾಗಲಿದೆ.

ಬಿಸಿಸಿಐ (BCCI) ಇತ್ತೀಚೆಗೆ ಪ್ರವಾಸದ ಎಲ್ಲಾ ಮೂರು ಸ್ವರೂಪಗಳಿಗೆ ತಂಡಗಳನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರಿಗೆ ವಿಶ್ವಕಪ್ ಅಭಿಯಾನದ ನಂತರ ವೈಟ್ ಬಾಲ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಇವರೆಲ್ಲ ನಾಯಕರು

ಸೂರ್ಯಕುಮಾರ್ ಯಾದವ್ ಟಿ20 ತಂಡವನ್ನು ಮುನ್ನಡೆಸಲಿದ್ದು, ರವೀಂದ್ರ ಜಡೇಜಾ ಉಪನಾಯಕನಾಗಿರುತ್ತಾರೆ. ಕೆಎಲ್ ರಾಹುಲ್ ಏಕದಿನ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಟೆಸ್ಟ್ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಮರಳಲಿದ್ದರೆ. ಭಾರತವು ನಿರ್ಣಾಯಕ ಡಬ್ಲ್ಯುಟಿಸಿ ಅಂಕಗಳನ್ನು ಗಳಿಸಲು ಎದುರು ನೋಡುತ್ತಿದೆ.

2010-11 ರಲ್ಲಿ ಮೊದಲ ಬಾರಿಗೆ ಡ್ರಾ ಸಾಧಿಸಿದ್ದನ್ನು ಹೊರತುಪಡಿಸಿ, 1992ರಿಂದ ಈ ದೇಶದಲ್ಲಿ ಭಾರತ ಇನ್ನೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಇದಲ್ಲದೆ, ಮೆನ್ ಇನ್ ಬ್ಲೂ 50 ಓವರ್​ಗಳ ಸ್ವರೂಪದಲ್ಲಿ ನಿರಾಶಾದಾಯಕ ದಾಖಲೆಯನ್ನು ಹೊಂದಿದೆ. ಕಾಮನಬಿಲ್ಲು ರಾಷ್ಟ್ರದಲ್ಲಿ ಆಡಿದ ಎಂಟು ಏಕದಿನ ಪಂದ್ಯಗಳಲ್ಲಿ ಕೇವಲ ಒಂದು ಏಕದಿನ ಸರಣಿಯನ್ನು ಗೆದ್ದಿದೆ.

ಇದನ್ನೂ ಓದಿ : IPL 2024 : ಐಪಿಎಲ್​ ಹರಾಜಿನ ದಿನಾಂಕ, ಸ್ಥಳದ ಬಗ್ಗೆ ಖಚಿತ ಮಾಹಿತಿ ನೀಡಿದ ಬಿಸಿಸಿಐ

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಮಾದರಿಯಲ್ಲಿ ಭಾರತ ಪ್ರಾಬಲ್ಯ ಹೊಂದಿದೆ. ಆಡಿದ ನಾಲ್ಕು ಸರಣಿಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿದೆ. ಆದ್ದರಿಂದ, ಮುಂಬರುವ ಪ್ರವಾಸದಲ್ಲಿ ಏಕದಿನ ಮತ್ತು ಟೆಸ್ಟ್ ಸರಣಿಗಳನ್ನು ಗೆಲ್ಲುವ ಮೂಲಕ ತಮ್ಮ ದಾಖಲೆಗಳನ್ನು ಸುಧಾರಿಸಲು ಭಾರತ ಉತ್ಸುಕವಾಗಿದೆ.

ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ ಕಿಂಗ್ಸ್​ಮೀಡ್, ಡರ್ಬಾನ್ ಭಾನುವಾರ, ಡಿಸೆಂಬರ್ 10 ರಾತ್ರಿ 9:30
  • 2ನೇ ಟಿ20 ಪಂದ್ಯ ಸೇಂಟ್ ಜಾರ್ಜ್ಸ್ ಪಾರ್ಕ್, ಗ್ಕೆಬೆರ್ಹಾ ಮಂಗಳವಾರ, ಡಿಸೆಂಬರ್ 12 ರಾತ್ರಿ 9:30
  • 3ನೇ ಟಿ20 ಪಂದ್ಯ ನ್ಯೂ ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್​​ಬರ್ಗ್​​ ಗುರುವಾರ, ಡಿಸೆಂಬರ್ 14 ರಾತ್ರಿ 9:30

ಏಕದಿನ ಸರಣಿ ವೇಳಾಪಟ್ಟಿ 2023 ಪಂದ್ಯ

  • ಮೊದಲ ಏಕದಿನ ಪಂದ್ಯ ನ್ಯೂ ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್​ಬರ್ಗ್​​ ಭಾನುವಾರ, ಡಿಸೆಂಬರ್ 17 ಮಧ್ಯಾಹ್ನ 1:30
  • 2ನೇ ಏಕದಿನ ಪಂದ್ಯ ಸೇಂಟ್ ಜಾರ್ಜ್ಸ್ ಪಾರ್ಕ್, ಗ್ಕೆಬೆರ್ಹಾ ಮಂಗಳವಾರ, ಡಿಸೆಂಬರ್ 19 ಸಂಜೆ 4:30
  • 3ನೇ ಏಕದಿನ ಪಂದ್ಯ ಬೋಲ್ಯಾಂಡ್ ಪಾರ್ಕ್, ಪಾರ್ಲ್ ಗುರುವಾರ, ಡಿಸೆಂಬರ್ 21 ಸಂಜೆ 4:30

ಟೆಸ್ಟ್ ವೇಳಾಪಟ್ಟಿ 2023

  • ಮೊದಲ ಟೆಸ್ಟ್ ಸೂಪರ್ ಸ್ಪೋರ್ಟ್ ಪಾರ್ಕ್, ಸೆಂಚೂರಿಯನ್ ಮಂಗಳವಾರ, ಡಿಸೆಂಬರ್ 26 ಮಧ್ಯಾಹ್ನ 1:30
  • 2ನೇ ಟೆಸ್ಟ್ ನ್ಯೂಲ್ಯಾಂಡ್ಸ್, ಕೇಪ್ ಟೌನ್ ಬುಧವಾರ, ಜನವರಿ 03 ಮಧ್ಯಾಹ್ನ 2:00

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ

ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹರ್.

ಏಕದಿನ ತಂಡ: ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಷ್ದೀಪ್ ಸಿಂಗ್, ದೀಪಕ್ ಚಹರ್.

ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ*, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ.

ನೇರ ಪ್ರಸಾರ ಪ್ರಸಾರ ವಿವರಗಳು

ಭಾರತದ ಸಂಪೂರ್ಣ ದಕ್ಷಿಣ ಆಫ್ರಿಕಾ ಪ್ರವಾಸದ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​ನಲ್ಲಿ ಲಭ್ಯವಿದ್ದರೆ, ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್​ಸೈಟ್​ನಲ್ಲಿ ಲಭ್ಯವಿರುತ್ತದೆ.

ನೇರ ಪ್ರಸಾರ- ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ಲೈವ್ ಸ್ಟ್ರೀಮಿಂಗ್- ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ ಅಪ್ಲಿಕೇಶನ್ ಮತ್ತು ವೆಬ್ಸೈಟ್

Continue Reading

ಕ್ರಿಕೆಟ್

Ind vs Aus : ಟಾಸ್ ಗೆದ್ದ ಆಸ್ಟ್ರೇಲಿಯಾ, ಭಾರತಕ್ಕೆ ಮೊದಲು ಬ್ಯಾಟಿಂಗ್​

ind vs aus : ಐದು ಪಂದ್ಯಗಳ ಸರಣಿಯನ್ನು ಭಾರತ ತಂಡ 3-1 ಅಂತರದಿಂದ ಕೈವಶ ಮಾಡಿಕೊಂಡಿದ್ದು, ಇದು ಔಪಚಾರಿಕ ಪಂದ್ಯ ಎನಿಸಿಕೊಳ್ಳಲಿದೆ.

VISTARANEWS.COM


on

Suryakuamr Yadav
Koo

ಬೆಂಗಳೂರು: ಟಿ20 ಸರಣಿಯ ಐದನೇ ಹಾಗೂ ಕೊನೇ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಟಾಸ್​ ಗೆದ್ದಿದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಭಾರತ ತಂಡ ಮೊದಲು ಬ್ಯಾಟ್​ ಮಾಡಿ ದೊಡ್ಡ ಮೊತ್ತ ಪೇರಿಸಿ ಅದನ್ನು ಕಾಪಾಡಿಕೊಳ್ಳಬೇಕಾಗಿದೆ. ಸರಣಿಯಲ್ಲಿ ಮೊದಲೆರಡು ಹಾಗೂ ನಾಲ್ಕನೇ ಪಂದ್ಯವನ್ನು ಗೆದ್ದಿರುವ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಹೀಗಾಗಿ ಇದು ಔಪಚಾರಿಕ ಪಂದ್ಯ ಎನಿಸಿಕೊಳ್ಳಲಿದೆ. ಆದಾಗ್ಯೂ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸುವುದು ಎರಡೂ ತಂಡಗಳ ಉದ್ದೇಶವಾಗಿರುತ್ತದೆ.

ಟಾಸ್ ಗೆದ್ದಿರುವ ಆಸ್ಟ್ರೇಲಾ ತಂಡದ ನಾಯಕ ಮಾತನಾಡಿ, ನಮ್ಮ ಬಳಿ ಒಂದು ಬೌಲಿಂಗ್ ಆಯ್ಕೆಯಿದೆ. ವಿಕೆಟ್ ಸ್ವಲ್ಪ ಜಟಿಲವಾಗಿದೆ ಹಾಗೂ ಹವಾಮಾನ ಪರಿಸ್ಥಿತಿ ಸೂಕ್ತವಾಗಿಲ್ಲ. ಕ್ಯಾಮರೂನ್​ ಗ್ರೀನ್ ಬದಲಿಗೆ ನೇಥಾನ್​ ಎಲ್ಲಿಸ್ ತಂಡ ಸೇರಿದ್ದಾರೆ. ತಂಡದ ಆಟಗಾರರಿಗೆ ಉತ್ತಮ ಪ್ರದರ್ಶನ ನೀಡಲು ಸೂಕ್ತ ಸಮಯ ಎಂದು ಹೇಳಿದ್ದಾರೆ.

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮಾತನಾಡಿ, ನಾವು ಮೊದಲು ಬೌಲಿಂಗ್ ಮಾಡಲು ಇಷ್ಟಪಡುತ್ತಿದ್ದೆವು. ಅದ್ಭುತ ಪ್ರೇಕ್ಷಕರ ಮುಂದೆ ಆಡಲು ಮತ್ತೊಂದು ಅವಕಾಶ, ಬ್ಯಾಟಿಂಗ್ ಘಟಕಕ್ಕೆ ಉತ್ತಮ ಪ್ರದರ್ಶನ ನೀಡಲು ಹೇಳಿದ್ದೇನೆ. ದೀಪಕ್ ಚಾಹರ್ ಬದಲಿಗೆ ಅರ್ಶ್​ದೀಪ್​ ಕಣಕ್ಕಿಳಿಯಲಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಅವರು (ದೀಪಕ್) ಮನೆಗೆ ಮರಳಿದ್ದಾರೆ ಎಂದು ಹೇಳಿದರು.

ಮೂರು ವಾರಗಳ ಹಿಂದೆ, ಇದೇ ಸಮಯದಲ್ಲಿ, ಭಾರತವು ಬೆಂಗಳೂರಿನಲ್ಲಿ ಆಡಿತ್ತು. ವಿಶ್ವಕಪ್​ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತ್ತು. ಅಂತಿಮ ಹಂತಲ್ಲಿ ಭಾರತವು ಟ್ರೋಫಿ ನಷ್ಟ ಮಾಡಿಕೊಂಡಿದ್ದರೂ ಸಾಕಷ್ಟು ನಿರ್ಭೀತ ಕ್ರಿಕೆಟ್ ಅಡಿತ್ತು. ಇದೀಗ ರಿಂಕು, ರುತುರಾಜ್, ಯಶಸ್ವಿ, ಜಿತೇಶ್ ಸೇರಿದಂತೆ ಹಲವರು ನಿರ್ಭೀತ ಕ್ರಿಕೆಟ್ ಆಡಲು ಬೆಂಗಳೂರಿಗೆ ಬಂದಿದ್ದಾರೆ. ಗುವಾಹಟಿ ಹೊರತುಪಡಿಸಿ ಭಾರತವು ಈ ಸರಣಿಯ ಪ್ರಮುಖ ಭಾಗಗಳಲ್ಲಿ ತಮ್ಮ ಪ್ರಾಬಲ್ಯ ಮೆರೆದಿತ್ತು. ಕಳೆದ ಪಂದ್ಯದಲ್ಲಿ 20 ರನ್​ಗಳ ಜಯ ಸಾಧಿಸಿದ ಆತಿಥೇಯರು ರಾಯ್ಪುರದಲ್ಲಿ ಸರಣಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ತಂಡಗಳು

ಭಾರತ ತಂಡ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ಸಿ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆ), ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್, ಅರ್ಷ್ದೀಪ್ ಸಿಂಗ್.

ಇದನ್ನೂ ಓದಿ : IPL 2024 : ಐಪಿಎಲ್​ ಹರಾಜಿನ ದಿನಾಂಕ, ಸ್ಥಳದ ಬಗ್ಗೆ ಖಚಿತ ಮಾಹಿತಿ ನೀಡಿದ ಬಿಸಿಸಿಐ

ಆಸ್ಟ್ರೇಲಿಯಾ ತಂಡ: ಟ್ರಾವಿಸ್ ಹೆಡ್, ಜೋಶ್ ಫಿಲಿಪ್, ಬೆನ್ ಮೆಕ್ಡರ್ಮಾಟ್, ಆ್ಯರೋನ್ ಹಾರ್ಡಿ, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮ್ಯಾಥ್ಯೂ ವೇಡ್ (ಸಿ & ವಿಕೆ), ಬೆನ್ ಡ್ವಾರ್ಶುಯಿಸ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್ಡಾರ್ಫ್, ತನ್ವೀರ್ ಸಂಗಾ

Continue Reading

ಕ್ರಿಕೆಟ್

Rishabh Pant : ಸಿಎಸ್​ಕೆ ತಂಡ ಸೇರ್ತಾರಾ ರಿಷಭ್​ ಪಂತ್​?

Rishabh Pant: ಧೋನಿ ಹಾಗೂ ರಿಷಭ್ ಆತ್ಮೀಯರಾಗಿರುವ ಕಾರಣ ಚೆನ್ನೈಗೆ ತರಲು ಫ್ರಾಂಚೈಸಿ ಪ್ರಯತ್ನ ಮಾಡಬಹುದು ಎಂದು ದೀಪ್​ ದಾಸ್​​ಗುಪ್ತಾ ಹೇಳಿದ್ದಾರೆ.

VISTARANEWS.COM


on

Dhoni and Rishabh Pant
Koo

ನವದೆಹಲಿ: ಎಂಎಸ್ ಧೋನಿ ಐಪಿಎಲ್ 2024 ರ ನಂತರ ನಿವೃತ್ತಿ ಹೊಂದಲು ನಿರ್ಧರಿಸಿದರೆ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವದು ಖಚಿತ ಎಂದು ಭಾರತದ ಮಾಜಿ ವಿಕೆಟ್​ ಕೀಪರ್ ದೀಪ್ ದಾಸ್​​ ಗುಪ್ತಾ ಹೇಳಿದ್ದಾರೆ.

ದೀಪ್​ದಾಸ್​ಗುಪ್ತಾ ಹೇಳಿಕೆ ವಿಡಿಯೊ ಇಲ್ಲಿದೆ

ರಿಷಭ್ ಪಂತ್ 2016 ರಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದಾಗಿನಿಂದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಪರ 98 ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಮತ್ತು 15 ಅರ್ಧಶತಕಗಳೊಂದಿಗೆ 34.61 ಸರಾಸರಿ ಮತ್ತು 147.97 ಸ್ಟ್ರೈಕ್ ರೇಟ್​​ನಲ್ಲಿ 2838 ರನ್ ಗಳಿಸಿದ್ದಾರೆ. ಐಪಿಎಲ್ 2021 ಮತ್ತು 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು.

ಪಂತ್ ಅವರು ಡಿಸೆಂಬರ್ 2022ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದ ವೇಳೆ ಉಂಟಾದ ಗಾಯದಿಂದ ಸ್ಥಿರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅದೇ ಕಾರಣಕ್ಕೆ ಐಪಿಎಲ್ 2023 ಅನ್ನು ತಪ್ಪಿಸಿಕೊಂಡಿದ್ದರು. ಪಂತ್ ಉತ್ತಮ ಸ್ಥಿತಿಯಲ್ಲಿದ್ದಾರೆ ಮತ್ತು ಐಪಿಎಲ್ 2024 ರಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಡಿಸಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಹೇಳಿದ್ದಾರೆ. ಹೀಗಾಗಿ ಅವರು ಈ ಬಾರಿ ಆಡುವುದು ಖಚಿತ ಎನ್ನಲಾಗಿದೆ.

ಈ ಬಾರಿಯೂ ಆಡಲಿದ್ದಾರೆ ಧೋನಿ

ಸಿಎಸ್​ಕೆ ತಂಡ ಐಪಿಎಲ್ 2023ರ ಆವೃತ್ತಿಯಲ್ಲಿ ಚಾಂಪಿಯನ್ ಆದ ಬಳಿಕ ನಾಯಕ ಎಂಎಸ್ ಧೋನಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಸಿಎಸ್ಕೆ ಧೋನಿಯನ್ನು ಉಳಿಸಿಕೊಂಡಿರುವುದರಿಂದ, ಅವರು ಮುಂದಿನ ವರ್ಷ ಐಪಿಎಲ್​​ನಲ್ಲಿ ಆಡುವುದು ಖಚಿತವಾಗಿದೆ.

ಐಪಿಎಲ್ 2025 ರ ಹೊತ್ತಿಗೆ ಎಂಎಸ್ ಧೋನಿಗೆ ಸುಮಾರು 44 ವರ್ಷ ವಯಸ್ಸಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಿಎಸ್​ಕೆ ತಮ್ಮ ಬಲಿಷ್ಠ ನಾಯಕನ ಬದಲಿಯಾಗಿ ಪಂತ್ ಅವರನ್ನು ತಂಡಕ್ಕೆ ಕರೆತರಬಹುದು ಭಾರತದ ಮಾಜಿ ಕೀಪರ್ ದೀಪ್ ದಾಸ್​ಗುಪ್ತಾ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Virat kohli : ಪಂಚೆ ಉಟ್ಟು ಹೋದರೆ ಕೊಹ್ಲಿಯ ರೆಸ್ಟೋರೆಂಟ್​ಗೆ ಪ್ರವೇಶವಿಲ್ಲ!

ಐಪಿಎಲ್ 2025ರ ವೇಳೆಗೆ ರಿಷಭ್ ಪಂತ್ ಚೆನ್ನೈ ಸೇರಿದರೆ ಆಶ್ಚರ್ಯ ಪಡಬೇಡಿ. ಎಂಎಸ್ ಧೋನಿ ಮತ್ತು ರಿಷಭ್ ಪಂತ್​​​​ಗೆ ತುಂಬಾ ಸಾಮ್ಯತೆಗಳಿವೆ. ನಿಸ್ಸಂಶಯವಾಗಿ ರಿಷಭ್ ಅವರು ಎಂಎಸ್ ಧೋನಿಯನ್ನು ಆರಾಧಿಸುತ್ತಾರೆ. ಎಂಎಸ್ ಕೂಡ ಅವರನ್ನು ತುಂಬಾ ಇಷ್ಟಪಡುತ್ತಾರೆ. ಅವರು ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಾರೆ. ಅವರ ಸಂಪರ್ಕ ಮತ್ತು ರಿಷಭ್ ಅವರ ಆಲೋಚನೆ ತುಂಬಾ ಹೋಲುತ್ತದೆ, ಅವರು ತುಂಬಾ ಆಕ್ರಮಣಕಾರಿ ಮತ್ತು ಸಕಾರಾತ್ಮಕವಾಗಿದ್ದಾರೆ. ಅವರು ಯಾವಾಗಲೂ ಗೆಲ್ಲುವ ಬಗ್ಗೆ ಮಾತನಾಡುತ್ತಾರೆ” ಎಂದು ದಾಸ್​ಗುಪ್ತಾ ಹೇಳಿದ್ದಾರೆ.

ದುಬೈನಲ್ಲಿ ಮಿನಿ ಹರಾಜು

ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ರ ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾನುವಾರ ದೃಢಪಡಿಸಿದೆ. ಅಂದ ಹಾಗೆ ವಿದೇಶದಲ್ಲಿ ಐಪಿಎಲ್​ ಹರಾಜು ನಡೆಯುತ್ತಿರುವುದು ಇದೇ ಮೊದಲು. ಆದರೆ, ಮೂರು ಬಾರಿ ವಿದೇಶಿ ನೆಲದಲ್ಲಿ ಟೂರ್ನಿ ನಡೆದಿದೆ.

ಮಿನಿ ಹರಾಜಿಗೆ 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಕೊಂಡಿದ್ದಾರೆ ಎಂದು ವರದಿಗಳು ಸೂಚಿಸಿವೆ. ಈ ಪಟ್ಟಿಯಲ್ಲಿ 212 ಅಂತಾರಾಷ್ಟ್ರೀಯ ಪಂದ್ಯವಾಡಿದವರು , 909 ಅಂತಾರಾಷ್ಟ್ರೀಯ ಕ್ರಿಕೆಟ್ ಆಡದವರು ಮತ್ತು 45 ಅಸೋಸಿಯೇಟ್ ಆಟಗಾರರು ಇದ್ದಾರೆ. ಈ ಪೈಕಿ ವಿದೇಶಿ ಆಟಗಾರರ ಸಂಖ್ಯೆ 336.

Continue Reading
Advertisement
Sangeetha is more cruel than Vinay drinking tonic task bigg boss
ಬಿಗ್ ಬಾಸ್2 mins ago

BBK SEASON 10: ವಿನಯ್‌ಗಿಂತ ಸಂಗೀತಾಗೆ ಕೊಬ್ಬು ಜಾಸ್ತಿ; ಟಾನಿಕ್ ಕುಡಿಸಿದ ಮೇಲೆ ಒದ್ದಾಟ-ಗುದ್ದಾಟ!

Kichcha Sudeep Save Snehith Gowda And Michel From Eliminations
ಬಿಗ್ ಬಾಸ್16 mins ago

BBK SEASON 10: ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲು; ಈ ವಾರ ನೋ ಎಲಿಮಿನೇಶನ್‌! ಸ್ನೇಹಿತ್- ಮೈಕಲ್‌ ಸೇಫ್‌!

Kodagu News
ಕರ್ನಾಟಕ44 mins ago

ಕೊಡಗು ಜಿಲ್ಲೆಯ ಹೊಳೆಯಲ್ಲಿ ತಾಯಿ, ಇಬ್ಬರು ಯುವತಿಯರ ಶವ ಪತ್ತೆ; ಸಾವಿಗೆ ಕಾರಣ?

Ishwar Sahu
ದೇಶ2 hours ago

ಮುಸ್ಲಿಮರಿಂದ ಹತ್ಯೆಗೀಡಾದ ಯುವಕನ ತಂದೆ 7 ಬಾರಿಯ ಕಾಂಗ್ರೆಸ್ ಶಾಸಕನನ್ನು ಸೋಲಿಸಿದರು!

Jyothi Reddy CEO of American Company
ಅಂಕಣ2 hours ago

Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್‌ ಕಂಪನಿ ಸಿಇಓ!

Venkataramana Reddy
ದೇಶ2 hours ago

ತೆಲಂಗಾಣದಲ್ಲಿ ಹಾಲಿ, ಭಾವಿ ಸಿಎಂಗಳನ್ನೇ ಸೋಲಿಸಿದ ಬಿಜೆಪಿಯ ವೆಂಕಟರಮಣ ರೆಡ್ಡಿ; ಯಾರಿವರು?

Complaint to CM Siddaramaiah
ಕರ್ನಾಟಕ2 hours ago

Complaint to CM : ಸಿಎಂಗೆ ದೂರು ನೀಡಬೇಕೇ? ಈ ನಂಬರ್‌ಗೆ ಕರೆ ಮಾಡಿ!

women enjoying in rain
ಉಡುಪಿ2 hours ago

Karnataka Weather : ಮಳೆಯೊಂದಿಗೆ 30 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

Mizoram Election Result
ದೇಶ3 hours ago

Mizoram Election Result: ಮಿಜೋರಾಂ ಫಲಿತಾಂಶಕ್ಕೆ ಕ್ಷಣಗಣನೆ; ಯಾರಿಗೆ ಗೆಲುವು?

4 state election results shows us that, freebies are not the way for win elections
ದೇಶ3 hours ago

ವಿಸ್ತಾರ ಸಂಪಾದಕೀಯ: ವಿಧಾನಸಭೆ ಚುನಾವಣೆ ಫಲಿತಾಂಶ; ‘ಗ್ಯಾರಂಟಿ’ಯೇ ಅಂತಿಮವಲ್ಲ!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ4 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ21 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌