Site icon Vistara News

2034ರ ಫಿಫಾ ವಿಶ್ವಕಪ್‌ಗೆ ಭಾರತ ಸಹ ಆತಿಥ್ಯ?; ಸೌದಿ ಫೆಡರೇಶನ್​ನ ಸ್ಪಷ್ಟನೆ ಏನು?

2034 FIFA World Cup

ದುಬೈ: 2034ರಲ್ಲಿ ನಡೆಯುವ ಪ್ರತಿಷ್ಠಿತ ಫಿಫಾ ವಿಶ್ವಕಪ್‌ನ(FIFA World Cup 2034) ಕೆಲವು ಪಂದ್ಯಗಳಿಗೆ ಭಾರತ ಕೂಡ ಆತಿಥ್ಯ(FIFA World Cup 2034 In India) ವಹಿಸಲಿದೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಸೌದಿ ಅರೇಬಿಯಾದ ಫುಟ್‌ಬಾಲ್ ಫೆಡರೇಶನ್(Saudi Arabian Football Federation) ಅಧ್ಯಕ್ಷ ಯಾಸರ್ ಅಲ್ ಮಿಸೆಹಲ್(Yasser Al Misehal) ಸ್ಪಷ್ಟನೆ ನೀಡಿದ್ದಾರೆ.

ಒಟ್ಟು 48 ತಂಡಗಳು ಭಾಗಿಯಾಗುವ 2034ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ. ಈ ಪೈಕಿ ಕನಿಷ್ಠ 10 ಪಂದ್ಯಗಳು ಭಾರತದಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಎಲ್ಲ ಊಹಾಪೋಹಗಳಿಗೆ ಸ್ಪಷ್ಟನೆ ಸಿಕ್ಕಿದೆ. ಸೌದಿಯು ಒಂದೇ ದೇಶವಾಗಿ ಈ ಟೂರ್ನಿಯ ಆತಿಥ್ಯವಹಿಸಲಿದೆ ಎಂದು ಯಾಸರ್ ಅಲ್ ಮಿಸೆಹಲ್ ತಿಳಿಸಿದ್ದಾರೆ.

ಇದನ್ನೂ ಓದಿ ಫಿಫಾ ಅರ್ಹತಾ ಸುತ್ತಿನ ಪಂದ್ಯ; ಉರುಗ್ವೆ ವಿರುದ್ಧ ಆಘಾತಕಾರಿ ಸೋಲು ಕಂಡ ಮೆಸ್ಸಿ ಪಡೆ

ನವೆಂಬರ್ 9ರಂದು ನಡೆದಿದ್ದ ಎಐಎಫ್‌ಎಫ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು 2034ರ ವಿಶ್ವಕಪ್‌ಗೆ ಸಹ ಆತಿಥ್ಯ ವಹಿಸಲು ಭಾರತ ಯೋಚಿಸಬೇಕು ಎಂದು ಹೇಳಿದ್ದರು. ಅವರ ಈ ಹೇಳಿಕೆಯ ಬಳಿಕ ಭಾರತ ಕೂಡ 2034ರ ವಿಶ್ವಕಪ್​ಗೆ ಸಹ ಆತಿಥ್ಯವಹಿಸಿಕೊಳ್ಳಲಿದೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡಿತ್ತು. ಅಲ್ಲದೆ ಕೆಲ ಮಾಧ್ಯಮಗಳಲ್ಲಿ ಈ ಕುರಿತಾದ ಸುದ್ದಿಗಳು ಕೂಡ ಪ್ರಕಟಗೊಂಡಿದ್ದವು. ಆದರೆ ಈಗ ಎಲ್ಲ ಅನುಮಾನಕ್ಕೆ ತೆರೆ ಬಿದ್ದಿದೆ.

ಟೂರ್ನಿಗೆ ಸೌದಿ ಅರೇಬಿಯಾ ಏಕಮಾತ್ರ ರಾಷ್ಟ್ರವಾಗಿ ಆತಿಥ್ಯ ವಹಿಸುತ್ತದೆ. ನಮ್ಮಲ್ಲಿ ಬಹಳಷ್ಟು ನಗರಗಳು ಮತ್ತು ಹಲವು ಕ್ರೀಡಾಂಗಣಗಳಿವೆ. ನಮ್ಮ ಯೋಜನೆ ಟೂರ್ನಿಗೆ ಏಕೈಕ ಆತಿಥೇಯ ರಾಷ್ಟ್ರ ಆಗುವುದು” ಎಂದು ಅಲ್ ಮಿಸೆಹಲ್ ಹೇಳುವ ಮೂಲಕ ಭಾರತಕ್ಕೆ ಸಹ ಆತಿಥ್ಯದ ಅವಕಾಶ ನೀಡುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಅವರ ಈ ಹೇಳಿಕೆಯಿಂದಾಗಿ ಮೊದಲ ಬಾರಿಗೆ ಭಾರತದಲ್ಲಿ ಫಿಫಾ ಟೂರ್ನಿಯ ಪಂದ್ಯವನ್ನು ನಿರೀಕ್ಷೆ ಮಾಡಿದ್ದ ಫುಟ್ಬಾಲ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.

2026ರ ಫಿಫಾ ಫುಟ್ಬಾಲ್​ ವಿಶ್ವಕಪ್​ನಲ್ಲಿ ಮಹತ್ವದ ಬದಲಾವಣೆ

2026ರಲ್ಲಿ ಅಮೆರಿಕದಲ್ಲಿ(USA) ನಡೆಯಲಿರುವ ಫಿಫಾ ವಿಶ್ವ ಕಪ್​ ಫುಟ್ಬಾಲ್​ ಟೂರ್ನಿಯಲ್ಲಿ(FIFA World Cup 2026) ಮಹತ್ವದ ಬದಲಾವಣೆ ಮಾಡಲಾಗಿದೆ. 2022ರಲ್ಲಿ ಕತಾರ್​ನಲ್ಲಿ ನಡೆದ ಕೂಟದಲ್ಲಿ 32 ತಂಡಗಳು ಪಾಲ್ಗೊಂಡಿದ್ದವು ಆದರೆ ಈ ಬಾರಿ ತಂಡಗಳ ಸಂಖ್ಯೆಯನ್ನು 48ಕ್ಕೆ ಏರಿಸಲಾಗಿದೆ ಫಿಫಾ ಈಗಾಗಲೇ ತಿಳಿಸಿದೆ.

2022ರ ಫಿಫಾ ವಿಶ್ವಕಪ್​ಗೆ​ ಅಮೆರಿಕ, ಕೆನಡಾ(Canada) ಮತ್ತು ಮೆಕ್ಸಿಕೋ(Mexico) ದೇಶಗಳು ಆತಿಥ್ಯ ವಹಿಸಿಕೊಳ್ಳಲಿವೆ. ಈ ಟೂರ್ನಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿರುವ ವಿವಾರವನ್ನು ಮಂಗಳವಾರ ಫಿಫಾ ಕೌನ್ಸಿಲ್ ತಿಳಿಸಿದೆ. ಹೊಸ ನಿಯಮದಂತೆ ಈ ಹಿಂದೆ ಇದ್ದ 16 ತಂಡಗಳ ಮೂರು ಗುಂಪನ್ನು 12 ತಂಡದ ನಾಲ್ಕು ಗುಂಪಾಗಿ ವಿಭಾಗಿಸಲಾಗಿದೆ. ಕತಾರ್​ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಒಟ್ಟು 64 ಪಂದ್ಯಗಳನ್ನು ಆಡಿಸಲಾಗಿತ್ತು. ಇದೀಗ ಹೊಸ ಬದಲಾವಣೆಯ ಪ್ರಕಾರ 104 ಪಂದ್ಯಗಳು ನಡೆಯಲಿವೆ.

ಪರಿಷ್ಕೃತ ಸ್ಪರ್ಧೆಯ ರಚನೆಯು ಹಲವು ದೇಶಗಳಿಗೆ ವಿಶ್ವಕಪ್ ಆಡುವ ಕನಸು ನನಸಾಗಿಸಲು ಸಹಾಯ ಮಾಡಲಿದೆ ಎಂದು ಫಿಫಾ ಕೌನ್ಸಿಲ್ ತಿಳಿಸಿದೆ. ಈ ಟೂರ್ನಿಯ ಪಂದ್ಯಗಳು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳ ಪ್ರಮುಖ 16 ನಗರಗಳಲ್ಲಿ ನಡೆಯಲಿವೆ. ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೂರ್ನಿಗೆ ಮೂರು ತಂಡಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿದೆ.

Exit mobile version