ಅಹಮದಾಬಾದ್: ಆಸ್ಟ್ರೇಲಿಯಾ ತಂಡ ಭಾನುವಾರ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಭಾರತ 50 ಓವರ್ಗಳಲ್ಲಿ 240 ರನ್ಗಳಿಗೆ ಆಲ್ಔಟ್ ಆಗಿದೆ. ದೊಡ್ಡ ಮೊತ್ತ ಕೂಡಿಕೆಯಾಗುವ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಇದು ಕನಿಷ್ಠ ಮೊತ್ತವೆಂದು ಹೇಳಲಾಗುತ್ತಿದೆ. ಇದು ಭಾರತ ತಂಡದ ಗೆಲುವಿಗೆ ಸಾಕೇ ಎಂಬುದು ಪ್ರಶ್ನೆಯಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಫೈನಲ್ನಲ್ಲಿ ಏಳು ಬಾರಿ ಗೆದ್ದಿದೆ. ಮೊದಲು ಬೌಲಿಂಗ್ ಮಾಡಿದ ಐದು ತಂಡಗಳು ಜಯ ಸಾಧಿಸಿದೆ. ಹೀಗಾಗಿ ಭಾರತ ತಂಡ ತಾನು ಪೇರಿಸಿದ 240 ರನ್ಗಳನ್ನು ಕಾಪಾಡಿಕೊಳ್ಳುವುದೇ ಎಂದು ಕಾದು ನೋಡಬೇಕಾಗಿದೆ. ಆದರೆ, ಭಾರತ ತಂಡವೇ ಅತ್ಯಂತ ಕನಿಷ್ಠ ಮೊತ್ತವನ್ನು ರಕ್ಷಿಸಿಕೊಂಡು ಪ್ರಶಸ್ತಿ ಗೆದ್ದಿರುವ ಇತಿಹಾಸವಿದೆ.
ಏಕದಿನ ವಿಶ್ವಕಪ್ ಫೈನಲ್ ನಲ್ಲಿ ರಕ್ಷಿಸಲಾದ ಅತ್ಯಂತ ಕಡಿಮೆ ಸ್ಕೋರ್ ಯಾವುದು?
1983ರ ಫೈನಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 183 ರನ್ ಗಳಿಸಿತ್ತು. ಏಕದಿನ ವಿಶ್ವಕಪ್ ಫೈನಲ್ನಲ್ಲಿ ತಂಡವೊಂದು ಯಶಸ್ವಿಯಾಗಿ ರಕ್ಷಿಸಿದ ಅತ್ಯಂತ ಕಡಿಮೆ ಸ್ಕೋರ್ ಅದಾಗಿದೆ. ಮೊಹಿಂದರ್ ಅಮರ್ನಾಥ್ ಮತ್ತು ಮದನ್ ಲಾಲ್ ತಲಾ 3 ವಿಕೆಟ್ ಪಡೆದಿದ್ದರು. ಈ ಮೂಲಕ ಭಾರತದ ಬೌಲರ್ಗಳು ಬಲಿಷ್ಠ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೈನ್ಅಪ್ ಅನ್ನು 140 ರನ್ಗಳಿಗೆ ಸೀಮಿತಗೊಳಿಸಿ ಟ್ರೋಫಿ ಗೆದ್ದಿತ್ತು. ಇದು ವಿಶ್ವ ಕಪ್ ಇತಿಹಾಸದಲ್ಲಿ ತಂಡವೊಂದು ಕನಿಷ್ಠ ಮೊತ್ತವನ್ನು ರಕ್ಷಿಸಿ ಗೆದ್ದ ಸಂದರ್ಭವಾಗಿದೆ. 1992ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 249 ರನ್ ಬಾರಿಸಿದ್ದು ವಿಶ್ವಕಪ್ ತಂಡವೊಂದು ಯಶಸ್ವಿಯಾಗಿ ರಕ್ಷಿಸಿದ ಎರಡನೇ ಕನಿಷ್ಠ ಮೊತ್ತವಾಗಿದೆ.
ಇದನ್ನೂ ಓದಿ : Virat Kohli: ಕೊಹ್ಲಿಗೆ ಸ್ಮರಣೀಯ ಉಡುಗೊರೆ ನೀಡಿದ ಸಚಿನ್ ತೆಂಡೂಲ್ಕರ್
ಏಕದಿನ ವಿಶ್ವಕಪ್ ಫೈನಲ್ ಚೇಸಿಂಗ್ನಲ್ಲಿ ಆಸ್ಟ್ರೇಲಿಯಾದ ದಾಖಲೆ ಏನು?
ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ಒಟ್ಟು ಮೂರು ಬಾರಿ ಚೇಸ್ ಮಾಡಿ. ಎರಡು ಬಾರಿ ಗೆದ್ದಿದೆ ಮತ್ತು ಒಂದು ಬಾರಿ ಸೋತಿದೆ. 1975ರ ವಿಶ್ವಕಪ್ ಫೈನಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 17 ರನ್ಗಳ ಸೋಲಿಗೆ ಒಳಗಾಗಿತ್ತು.
ಭಾರತ ತಂಡ ವಿಶ್ವ ಕಪ್ ಫೈನಲ್ನಲ್ಲಿ 240 ರನ್ ಬಾರಿಸಿರುವ ಕಾರಣ ಭಾರತ ತಂಡ ಗೆಲ್ಲುವುದೇ ಎಂಬ ಸಂಶಯ ಭಾರತ ತಂಡದ ಅಭಿಮಾನಿಗಳದ್ದು. ಆದರೆ, ವಿಶ್ವ ಕಪ್ನಲ್ಲಿ ಫೈನಲ್ನಲ್ಲಿ ಕನಿಷ್ಠ ಮೊತ್ತವನ್ನು ಹಲವು ತಂಡಗಳು ರಕ್ಷಿಸಿ ಗೆದ್ದಿವೆ. ಹೀಗಾಗಿ ಭಾರತ ತಂಡಕ್ಕೆ ಮತ್ತೊಂದು ಅವಕಾಶ ಸೃಷ್ಟಿಯಾಗಲಿದೆ.
ಭಾರತದ ಬ್ಯಾಟಿಂಗ್ ವೈಫಲ್ಯ
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಫೈನಲ್ನಲ್ಲಿ ಭಾರತ ತಂಡದ ಬ್ಯಾಟರ್ಗಳು ಪರದಾಟ ನಡೆಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಭಾರತ ತಂಡದ ಆರಂಭದಲ್ಲಿ ವೇಗದ ರನ್ ಗಳಿಕೆಗೆ ಯತ್ನಿಸಿದರೂ ಬಳಿಕ ಸತತವಾಗಿ ವಿಕೆಟ್ ಕಳೆದುಕೊಂಡಿತು. ಹೀಗಾಗಿ ದೊಡ್ಡ ಮೊತ್ತದ ಗುರಿಯೊಂದಿಗೆ ಆಡಿದ ಭಾರತ ತಂಡಕ್ಕೆ ಹಿನ್ನಡೆ ಉಂಟಾಯಿತು. ಭಾರತ ತಂಡದ ಬ್ಯಾಟರ್ಗಳು ಕೇವಲ 13 ಫೋರ್ ಹಾಗೂ 3 ಸಿಕ್ಸರ್ಗಳನ್ನು ಮಾತ್ರ ಬಾರಿಸಿದ್ದಾರೆ. ಇದರಲ್ಲಿ 4 ಫೊರ್ ಹಾಗೂ 3 ಸಿಕ್ಸರ್ ರೋಹಿತ್ ಶರ್ಮಾ ಬಾರಿಸಿದ್ದಾರೆ.
ಭಾರತ ತಂಡ ಮೊದಲ 39 ಎಸೆತಗಳಿಗೆ 50 ರನ್ ಬಾರಿಸಿತ್ತು. ಹೀಗಾಗಿ ದೊಡ್ಡ ಮೊತ್ತ ಗ್ಯಾರಂಟಿ ಎಂದು ನಂಬಲಾಗಿತ್ತು. ಆದರೆ ಅದಕ್ಕಿಂತ ಮೊದಲೇ ಶುಭ್ಮನ್ ಗಿಲ್ 4 ರನ್ ಬಾರಿಸಿ ಔಟಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿಯೂ ರನ್ ಗತಿ ಇಳಿಕೆಯಾಗದಂತೆ ನೋಡಿಕೊಂಡಿತು. ಆದರೆ, ನಂತರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲು ಮುಂದಾದ ರೋಹಿತ್ ಶರ್ಮಾ 47 ರನ್ಗಳಿಗೆ ಔಟಾದರು. ಅವರು 31 ಎಸೆತಗಳಿಗೆ 47 ರನ್ ಬಾರಿಸಿದ್ದರು. ಆದರೆ, ಆ ಬಳಿಕ ಬ್ಯಾಟ್ ಮಾಡಲು ಬಂದ ಶ್ರೇಯಸ್ ಅಯ್ಯರ್ 4 ರನ್ ಗೆ ಔಟಾದರು. ಅವರು ಅದಕ್ಕಿಂತ ಮೊದಲು ಅವರು ಒಂದು ಫೋರ್ ಬಾರಿಸಿದ್ದರು.
ರಾಹುಲ್- ಕೊಹ್ಲಿ ಮೇಲೆ ಒತ್ತಡ
ಮೊದಲ ಮೂರು ವಿಕೆಟ್ಗಳು 81 ರನ್ಗೆ ಪತನಗೊಂಡ ಕಾರಣ ಭಾರತ ತಂಡದ ಮೇಲೆ ಒತ್ತಡ ಬಿತ್ತು. ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ಕೆ. ಎಲ್ ರಾಹುಲ್ ಮೇಲೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಬಿತ್ತು. ಬಲಿಕ ಅವರಿಬ್ಬರು 67 ರನ್ಗಳ ಜತೆಯಾಟವಾಡಿದರು. ಈ ವೇಳೆ ಭಾರತ ತಂಡದ ರನ್ ಗಳಿಕೆ ಕುಸಿತಗೊಂಡಿತ್ತು. 11 ಓವರ್ಗಳ ಒಳಗೆ ಮೂರು ವಿಕೆಟ್ ನಷ್ಟ ಮಾಡಿಕೊಂಡಿದ್ದರಿಂದ ವಿಕೆಟ್ ಕಾಪಾಡುವುದು ಈ ಬ್ಯಾಟರ್ಗಳ ಪಾಲಿಗೆ ದೊಡ್ಡ ಸವಾಲಾಯಿತು. ಇವರಿಬ್ಬರ ಜತೆಯಾಟದ ವೇಳೆ ಸಿಂಗಲ್ ರನ್ಗಳೇ ಹೆಚ್ಚು ಗಳಿಕೆಯಾಯಿತು.
ಏತನ್ಮಧ್ಯೆ ವಿರಾಟ್ ಕೊಹ್ಲಿಯ ವಿಕೆಟ್ ದುರದೃಷ್ಟಕರವಾಗಿ ನಷ್ಟವಾಯಿತು. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರ ಎಸೆತವನ್ನು ರಕ್ಷಿಸಲು ಮುಂದಾದ ಅವರು ಇನ್ಸೈಡ್ ಎಜ್ ಆಗಿ ಬೌಲ್ಡ್ ಆದರು. ಈ ವೇಳೆ ತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. ಯಾಕೆಂದರೆ ಮುಂದೆ ಆಡಲು ಬಂದ ರವೀಂದ್ರ ಜಡೇಜಾ 9 ರನ್ಗಳಿಗೆ ಔಟ್ ಆದರು. ಅದಾದ ಬಳಿಕ ಆಡಲು ಬಂದ ಸೂರ್ಯಕುಮಾರ್ ಯಾದವ್ಗೆ ದೊಡ್ಡ ಮೊತ್ತ ಪೇರಿಸಲು ಸಾಧ್ಯವೇ ಆಗಲಿಲ್ಲ. ಅವರು 28 ಎಸೆತಗಳಿಗೆ ಕೇವಲ 18 ರನ್ ಬಾರಿಸಿದರು. ಏತನ್ಮಧ್ಯೆ, ಕೆ. ಎಲ್ ರಾಹುಲ್ ಸ್ಟಾರ್ಕ್ ಎಸೆತಕ್ಕೆ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಔಟಾದರು.
ರಾಹುಲ್ ಇರುವ ತನಕ ಭಾರತ ತಂಡ 270 ಪ್ಲಸ್ ರನ್ಗಳ ಸ್ಪರ್ಧಾತ್ಮ ಮೊತ್ತ ಗಳಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರ ವಿಕೆಟ್ ಬಳಿಕ ಭಾರತೀಯ ಬ್ಯಾಟರ್ಗಳಿಗೆ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ.
ಈ ರನ್ ಸಾಕೇ?
ಎರಡನೇ ಇನಿಂಗ್ಸ್ ವೇಳೆ ಇಬ್ಬನಿ ಪರಿಣಾಮ ಇರುತ್ತದೆ. ಬೌಲಿಂಗ್ ಮಾಡಲು ಕಷ್ಟ ಎಂಬ ಕಾರಣಕ್ಕೆ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮೊದಲು ಫೀಲ್ಡಿಂಗ್ ಮಾಡಿದ್ದರು. ಹೀಗಾಗಿ 250 ರನ್ಗಳಿಗಿಂತ ಕಡಿಮೆ ಮೊತ್ತ ಗೆಲುವಿಗೆ ಸಾಕಾಗಉತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಭಾರತ ತಂಡ 270ಕ್ಕಿಂತ ಹೆಚ್ಚು ರನ್ ಮಾಡಿದರೆ ಗೆಲುವು ಪಡೆಯು ಸಾಧ್ಯತೆಗಳು ಇವೆ. ಕ್ರಿಕೆಟ್ ಪಂಡಿತರ ವಿಶ್ಲೇಷಣೆ ಪ್ರಕಾರ ಪಿಚ್ ಸ್ವಲ್ಪ ನಿಧಾನಗತಿಯಲ್ಲಿದೆ. ನಿರೀಕ್ಷಿತ ಮಟ್ಟದಲ್ಲಿ ಬೌಂಡರಿ ಸಿಕ್ಸರ್ಗಳನ್ನು ಹೊಡೆಯಲು ಸಾಧ್ಯವಿಲ್ಲ. ಹಾಗಾದರೆ 250ಕ್ಕಿಂತ ಹೆಚ್ಚಿನ ರನ್ ದಾಟುವುದು ಆಸೀಸ್ ಪಾಲಿಗೆ ಸವಾಲಾಗಬಹುದು. ಆದರೆ ಭಾರತ ತಂಡ ಅಷ್ಟೊಂದು ದೊಡ್ಡ ಮೊತ್ತ ಪೇರಿಸುವುದೇ ಎಂಬುದು ಅಭಿಮಾನಿಗಳ ಪಾಲಿಗೆ ಕೌತುಕದ ವಿಷಯ.