ICC World Cup 2023 : ವಿಶ್ವ ಕಪ್ ಫೈನಲ್​ ಇತಿಹಾಸದಲ್ಲಿ ಕನಿಷ್ಠ ಮೊತ್ತ ರಕ್ಷಿಸಿ ಗೆದ್ದಿತ್ತು ಭಾರತ - Vistara News

ಕ್ರಿಕೆಟ್

ICC World Cup 2023 : ವಿಶ್ವ ಕಪ್ ಫೈನಲ್​ ಇತಿಹಾಸದಲ್ಲಿ ಕನಿಷ್ಠ ಮೊತ್ತ ರಕ್ಷಿಸಿ ಗೆದ್ದಿತ್ತು ಭಾರತ

1983ರ ವಿಶ್ವ ಕಪ್​ ಫೈನಲ್​ನಲ್ಲಿ ಭಾರತ ತಂಡ ತಾನು ಪೇರಿಸಿದ್ದ 183 ರನ್​ಗಳನ್ನು ರಕ್ಷಿಸಿಕೊಂಡು ಟ್ರೋಫಿ ಗೆದ್ದಿತ್ತು.

VISTARANEWS.COM


on

Australia cricket team
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಹಮದಾಬಾದ್​: ಆಸ್ಟ್ರೇಲಿಯಾ ತಂಡ ಭಾನುವಾರ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಭಾರತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್​ಔಟ್ ಆಗಿದೆ. ದೊಡ್ಡ ಮೊತ್ತ ಕೂಡಿಕೆಯಾಗುವ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಇದು ಕನಿಷ್ಠ ಮೊತ್ತವೆಂದು ಹೇಳಲಾಗುತ್ತಿದೆ. ಇದು ಭಾರತ ತಂಡದ ಗೆಲುವಿಗೆ ಸಾಕೇ ಎಂಬುದು ಪ್ರಶ್ನೆಯಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಫೈನಲ್​​ನಲ್ಲಿ ಏಳು ಬಾರಿ ಗೆದ್ದಿದೆ. ಮೊದಲು ಬೌಲಿಂಗ್ ಮಾಡಿದ ಐದು ತಂಡಗಳು ಜಯ ಸಾಧಿಸಿದೆ. ಹೀಗಾಗಿ ಭಾರತ ತಂಡ ತಾನು ಪೇರಿಸಿದ 240 ರನ್​ಗಳನ್ನು ಕಾಪಾಡಿಕೊಳ್ಳುವುದೇ ಎಂದು ಕಾದು ನೋಡಬೇಕಾಗಿದೆ. ಆದರೆ, ಭಾರತ ತಂಡವೇ ಅತ್ಯಂತ ಕನಿಷ್ಠ ಮೊತ್ತವನ್ನು ರಕ್ಷಿಸಿಕೊಂಡು ಪ್ರಶಸ್ತಿ ಗೆದ್ದಿರುವ ಇತಿಹಾಸವಿದೆ.

ಏಕದಿನ ವಿಶ್ವಕಪ್ ಫೈನಲ್ ನಲ್ಲಿ ರಕ್ಷಿಸಲಾದ ಅತ್ಯಂತ ಕಡಿಮೆ ಸ್ಕೋರ್ ಯಾವುದು?

1983ರ ಫೈನಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 183 ರನ್ ಗಳಿಸಿತ್ತು. ಏಕದಿನ ವಿಶ್ವಕಪ್ ಫೈನಲ್ನಲ್ಲಿ ತಂಡವೊಂದು ಯಶಸ್ವಿಯಾಗಿ ರಕ್ಷಿಸಿದ ಅತ್ಯಂತ ಕಡಿಮೆ ಸ್ಕೋರ್ ಅದಾಗಿದೆ. ಮೊಹಿಂದರ್ ಅಮರ್​ನಾಥ್ ಮತ್ತು ಮದನ್ ಲಾಲ್ ತಲಾ 3 ವಿಕೆಟ್ ಪಡೆದಿದ್ದರು. ಈ ಮೂಲಕ ಭಾರತದ ಬೌಲರ್​ಗಳು ಬಲಿಷ್ಠ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೈನ್ಅಪ್ ಅನ್ನು 140 ರನ್​ಗಳಿಗೆ ಸೀಮಿತಗೊಳಿಸಿ ಟ್ರೋಫಿ ಗೆದ್ದಿತ್ತು. ಇದು ವಿಶ್ವ ಕಪ್ ಇತಿಹಾಸದಲ್ಲಿ ತಂಡವೊಂದು ಕನಿಷ್ಠ ಮೊತ್ತವನ್ನು ರಕ್ಷಿಸಿ ಗೆದ್ದ ಸಂದರ್ಭವಾಗಿದೆ. 1992ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 249 ರನ್ ಬಾರಿಸಿದ್ದು ವಿಶ್ವಕಪ್ ತಂಡವೊಂದು ಯಶಸ್ವಿಯಾಗಿ ರಕ್ಷಿಸಿದ ಎರಡನೇ ಕನಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ : Virat Kohli: ಕೊಹ್ಲಿಗೆ ಸ್ಮರಣೀಯ ಉಡುಗೊರೆ ನೀಡಿದ ಸಚಿನ್​ ತೆಂಡೂಲ್ಕರ್​

ಏಕದಿನ ವಿಶ್ವಕಪ್ ಫೈನಲ್ ಚೇಸಿಂಗ್​ನಲ್ಲಿ ಆಸ್ಟ್ರೇಲಿಯಾದ ದಾಖಲೆ ಏನು?

ಏಕದಿನ ವಿಶ್ವಕಪ್ ಫೈನಲ್​​ನಲ್ಲಿ ಆಸ್ಟ್ರೇಲಿಯಾ ಒಟ್ಟು ಮೂರು ಬಾರಿ ಚೇಸ್ ಮಾಡಿ. ಎರಡು ಬಾರಿ ಗೆದ್ದಿದೆ ಮತ್ತು ಒಂದು ಬಾರಿ ಸೋತಿದೆ. 1975ರ ವಿಶ್ವಕಪ್ ಫೈನಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 17 ರನ್​ಗಳ ಸೋಲಿಗೆ ಒಳಗಾಗಿತ್ತು.

ಭಾರತ ತಂಡ ವಿಶ್ವ ಕಪ್ ಫೈನಲ್​ನಲ್ಲಿ 240 ರನ್ ಬಾರಿಸಿರುವ ಕಾರಣ ಭಾರತ ತಂಡ ಗೆಲ್ಲುವುದೇ ಎಂಬ ಸಂಶಯ ಭಾರತ ತಂಡದ ಅಭಿಮಾನಿಗಳದ್ದು. ಆದರೆ, ವಿಶ್ವ ಕಪ್​ನಲ್ಲಿ ಫೈನಲ್​ನಲ್ಲಿ ಕನಿಷ್ಠ ಮೊತ್ತವನ್ನು ಹಲವು ತಂಡಗಳು ರಕ್ಷಿಸಿ ಗೆದ್ದಿವೆ. ಹೀಗಾಗಿ ಭಾರತ ತಂಡಕ್ಕೆ ಮತ್ತೊಂದು ಅವಕಾಶ ಸೃಷ್ಟಿಯಾಗಲಿದೆ.

ಭಾರತದ ಬ್ಯಾಟಿಂಗ್ ವೈಫಲ್ಯ

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಫೈನಲ್​ನಲ್ಲಿ ಭಾರತ ತಂಡದ ಬ್ಯಾಟರ್​ಗಳು ಪರದಾಟ ನಡೆಸಿದ್ದಾರೆ. ಟಾಸ್​ ಸೋತು ಮೊದಲು ಬ್ಯಾಟ್​ ಮಾಡಲು ಆಹ್ವಾನ ಪಡೆದ ಭಾರತ ತಂಡದ ಆರಂಭದಲ್ಲಿ ವೇಗದ ರನ್​ ಗಳಿಕೆಗೆ ಯತ್ನಿಸಿದರೂ ಬಳಿಕ ಸತತವಾಗಿ ವಿಕೆಟ್​ ಕಳೆದುಕೊಂಡಿತು. ಹೀಗಾಗಿ ದೊಡ್ಡ ಮೊತ್ತದ ಗುರಿಯೊಂದಿಗೆ ಆಡಿದ ಭಾರತ ತಂಡಕ್ಕೆ ಹಿನ್ನಡೆ ಉಂಟಾಯಿತು. ಭಾರತ ತಂಡದ ಬ್ಯಾಟರ್​ಗಳು ಕೇವಲ 13 ಫೋರ್​ ಹಾಗೂ 3 ಸಿಕ್ಸರ್​ಗಳನ್ನು ಮಾತ್ರ ಬಾರಿಸಿದ್ದಾರೆ. ಇದರಲ್ಲಿ 4 ಫೊರ್ ಹಾಗೂ 3 ಸಿಕ್ಸರ್​ ರೋಹಿತ್ ಶರ್ಮಾ ಬಾರಿಸಿದ್ದಾರೆ.

ಭಾರತ ತಂಡ ಮೊದಲ 39 ಎಸೆತಗಳಿಗೆ 50 ರನ್ ಬಾರಿಸಿತ್ತು. ಹೀಗಾಗಿ ದೊಡ್ಡ ಮೊತ್ತ ಗ್ಯಾರಂಟಿ ಎಂದು ನಂಬಲಾಗಿತ್ತು. ಆದರೆ ಅದಕ್ಕಿಂತ ಮೊದಲೇ ಶುಭ್​ಮನ್​ ಗಿಲ್​ 4 ರನ್ ಬಾರಿಸಿ ಔಟಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿಯೂ ರನ್​ ಗತಿ ಇಳಿಕೆಯಾಗದಂತೆ ನೋಡಿಕೊಂಡಿತು. ಆದರೆ, ನಂತರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲು ಮುಂದಾದ ರೋಹಿತ್​ ಶರ್ಮಾ 47 ರನ್​ಗಳಿಗೆ ಔಟಾದರು. ಅವರು 31 ಎಸೆತಗಳಿಗೆ 47 ರನ್ ಬಾರಿಸಿದ್ದರು. ಆದರೆ, ಆ ಬಳಿಕ ಬ್ಯಾಟ್ ಮಾಡಲು ಬಂದ ಶ್ರೇಯಸ್​ ಅಯ್ಯರ್​​ 4 ರನ್​ ಗೆ ಔಟಾದರು. ಅವರು ಅದಕ್ಕಿಂತ ಮೊದಲು ಅವರು ಒಂದು ಫೋರ್ ಬಾರಿಸಿದ್ದರು.

ರಾಹುಲ್​- ಕೊಹ್ಲಿ ಮೇಲೆ ಒತ್ತಡ

ಮೊದಲ ಮೂರು ವಿಕೆಟ್​​ಗಳು 81 ರನ್​ಗೆ ಪತನಗೊಂಡ ಕಾರಣ ಭಾರತ ತಂಡದ ಮೇಲೆ ಒತ್ತಡ ಬಿತ್ತು. ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಗೂ ವಿಕೆಟ್​ ಕೀಪರ್​ ಕೆ. ಎಲ್ ರಾಹುಲ್ ಮೇಲೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಬಿತ್ತು. ಬಲಿಕ ಅವರಿಬ್ಬರು 67 ರನ್​ಗಳ ಜತೆಯಾಟವಾಡಿದರು. ಈ ವೇಳೆ ಭಾರತ ತಂಡದ ರನ್ ಗಳಿಕೆ ಕುಸಿತಗೊಂಡಿತ್ತು. 11 ಓವರ್​ಗಳ ಒಳಗೆ ಮೂರು ವಿಕೆಟ್​ ನಷ್ಟ ಮಾಡಿಕೊಂಡಿದ್ದರಿಂದ ವಿಕೆಟ್​ ಕಾಪಾಡುವುದು ಈ ಬ್ಯಾಟರ್​​ಗಳ ಪಾಲಿಗೆ ದೊಡ್ಡ ಸವಾಲಾಯಿತು. ಇವರಿಬ್ಬರ ಜತೆಯಾಟದ ವೇಳೆ ಸಿಂಗಲ್ ರನ್​ಗಳೇ ಹೆಚ್ಚು ಗಳಿಕೆಯಾಯಿತು.

ಏತನ್ಮಧ್ಯೆ ವಿರಾಟ್​ ಕೊಹ್ಲಿಯ ವಿಕೆಟ್ ದುರದೃಷ್ಟಕರವಾಗಿ ನಷ್ಟವಾಯಿತು. ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್ ಅವರ ಎಸೆತವನ್ನು ರಕ್ಷಿಸಲು ಮುಂದಾದ ಅವರು ಇನ್​ಸೈಡ್ ಎಜ್​ ಆಗಿ ಬೌಲ್ಡ್ ಆದರು. ಈ ವೇಳೆ ತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. ಯಾಕೆಂದರೆ ಮುಂದೆ ಆಡಲು ಬಂದ ರವೀಂದ್ರ ಜಡೇಜಾ 9 ರನ್​ಗಳಿಗೆ ಔಟ್ ಆದರು. ಅದಾದ ಬಳಿಕ ಆಡಲು ಬಂದ ಸೂರ್ಯಕುಮಾರ್​ ಯಾದವ್​ಗೆ ದೊಡ್ಡ ಮೊತ್ತ ಪೇರಿಸಲು ಸಾಧ್ಯವೇ ಆಗಲಿಲ್ಲ. ಅವರು 28 ಎಸೆತಗಳಿಗೆ ಕೇವಲ 18 ರನ್ ಬಾರಿಸಿದರು. ಏತನ್ಮಧ್ಯೆ, ಕೆ. ಎಲ್​ ರಾಹುಲ್ ಸ್ಟಾರ್ಕ್ ಎಸೆತಕ್ಕೆ ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿ ಔಟಾದರು.

ರಾಹುಲ್ ಇರುವ ತನಕ ಭಾರತ ತಂಡ 270 ಪ್ಲಸ್​ ರನ್​ಗಳ ಸ್ಪರ್ಧಾತ್ಮ ಮೊತ್ತ ಗಳಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರ ವಿಕೆಟ್​ ಬಳಿಕ ಭಾರತೀಯ ಬ್ಯಾಟರ್​ಗಳಿಗೆ ಹೆಚ್ಚು ರನ್​ ಗಳಿಸಲು ಸಾಧ್ಯವಾಗಲಿಲ್ಲ.

ಈ ರನ್ ಸಾಕೇ?

ಎರಡನೇ ಇನಿಂಗ್ಸ್ ವೇಳೆ ಇಬ್ಬನಿ ಪರಿಣಾಮ ಇರುತ್ತದೆ. ಬೌಲಿಂಗ್ ಮಾಡಲು ಕಷ್ಟ ಎಂಬ ಕಾರಣಕ್ಕೆ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮೊದಲು ಫೀಲ್ಡಿಂಗ್ ಮಾಡಿದ್ದರು. ಹೀಗಾಗಿ 250 ರನ್​ಗಳಿಗಿಂತ ಕಡಿಮೆ ಮೊತ್ತ ಗೆಲುವಿಗೆ ಸಾಕಾಗಉತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಭಾರತ ತಂಡ 270ಕ್ಕಿಂತ ಹೆಚ್ಚು ರನ್ ಮಾಡಿದರೆ ಗೆಲುವು ಪಡೆಯು ಸಾಧ್ಯತೆಗಳು ಇವೆ. ಕ್ರಿಕೆಟ್​ ಪಂಡಿತರ ವಿಶ್ಲೇಷಣೆ ಪ್ರಕಾರ ಪಿಚ್​ ಸ್ವಲ್ಪ ನಿಧಾನಗತಿಯಲ್ಲಿದೆ. ನಿರೀಕ್ಷಿತ ಮಟ್ಟದಲ್ಲಿ ಬೌಂಡರಿ ಸಿಕ್ಸರ್​ಗಳನ್ನು ಹೊಡೆಯಲು ಸಾಧ್ಯವಿಲ್ಲ. ಹಾಗಾದರೆ 250ಕ್ಕಿಂತ ಹೆಚ್ಚಿನ ರನ್​ ದಾಟುವುದು ಆಸೀಸ್​ ಪಾಲಿಗೆ ಸವಾಲಾಗಬಹುದು. ಆದರೆ ಭಾರತ ತಂಡ ಅಷ್ಟೊಂದು ದೊಡ್ಡ ಮೊತ್ತ ಪೇರಿಸುವುದೇ ಎಂಬುದು ಅಭಿಮಾನಿಗಳ ಪಾಲಿಗೆ ಕೌತುಕದ ವಿಷಯ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Shah rukh Khan : ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಶಾರುಖ್​ ಖಾನ್​

Shah rukh Khan : ಮಹಿಳೆಯರ ಪ್ರೀಮಿಯರ್ ಲೀಗ್​ನ ಉದ್ಘಾಟನಾ ಪಂದ್ಯ ಡೆಲ್ಲಿ ಕ್ಯಾಪಿಲಟ್ಸ್​ ಹಾಗೂ ಮುಂಬಯಿ ಇಂಡಿಯನ್ಸ್ ನಡುವೆ ನಡೆಯಿತು.

VISTARANEWS.COM


on

Shah Rukh Kahan
Koo

ಬೆಂಗಳೂರು : ಮಹಿಳೆಯರ ಪ್ರೀಮಿಯರ್ ಲೀಗ್​ನ ಉದ್ಘಾಟನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ಶುಕ್ರವಾರ (ಫೆಬ್ರುವರಿ 23) ನಡೆಯಿತು. ಈ ಕಾರ್ಯಕ್ರಮದ ಪ್ರಧಾನ ಆಕರ್ಷಣೆ ಬಾಲಿವುಡ್​ ಸೂಪರ್​​ಸ್ಟಾರ್​ ಶಾರುಖ್​ ಖಾನ್​ (Shah rukh Khan). ಅದಕ್ಕಿಂತಲೂ ಹೆಚ್ಚಾಗಿ ಉದ್ಘಾಟನಾ ಕಾರ್ಯಕ್ರಮದ ವೇಳೆ ಅವರು ಕನ್ನಡದಲ್ಲೇ ಮಾತನಾಡುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ಶಾರುಖ್​ ಖಾನ್​ ವೇದಿಕಗೆ ಆಗಮಿಸುತ್ತಲೇ ನಮಸ್ಕಾರ, ಸ್ವಾಗತ ಬೆಂಗಳೂರು ಎಂದು ಹೇಳಿದರು. ಈ ಮೂಲಕ ಅವರು ಕ್ರಿಕೆಟ್​ ಅಭಿಮಾನಿಗಳು ಹಾಗೂ ಸ್ಥಳದಲ್ಲಿದ್ದ ಕನ್ನಡಿಗರ ಮೆಚ್ಚುಗೆ ಗಳಿಸಿದರು. ಶಾರುಖ್​ ಖಾನ್​ ವೇದಿಕೆಗೆ ಆಗಮಿಸುತ್ತಿದ್ದಂತೆ ಕನ್ನಡದಲ್ಲಿಯೇ ಮಾತನಾಡಿ ಅಚ್ಚರಿ ಮೂಡಿಸಿದರು.

ಶಾರುಖ್​ ಖಾನ್ ತಮ್ಮ ವಿಭಿನ್ನ ಶೈಲಿ ಹಾಗೂ ಡಾನ್ಸ್​ ಮೂಲಕ ನೆರೆದ ಜನರನ್ನು ರಂಜಿಸಿದರೆ, ನಂತರ 5 ತಂಡಗಳ ನಾಯಕಿಯರನ್ನು ಸ್ವಾಗತಿಸಿ, ಮಹಿಳಾ ಪ್ರೀಮಿಯರ್​ ಲೀಗ್​ 2024ರ 2ನೇ ಸೀಸನ್​ಗೆ ಅದ್ಧೂರಿಯಾಗಿ ಚಾಲನೆ ಕೊಟ್ಟರು.

ಇದನ್ನೂ ಓದಿ : WPL 2024 : ಲಾಸ್ಟ್​ ಬಾಲ್​​ ಸಿಕ್ಸರ್​; ಚಾಂಪಿಯನ್ ಮುಂಬೈ ತಂಡಕ್ಕೆ ರೋಚಕ ಜಯ

ಪಂದ್ಯಕ್ಕೂ ಮುನ್ನ ಹಲವಾರು ಬಾಲಿವುಡ್​ ಸ್ಟಾರ್​ ಗಳು ಭರ್ಜರಿಯಾಗಿ ಕಾರ್ಯಕ್ರಮ ನೀಡಿದರು. ಈ ಪಂದ್ಯಾವಳಿಯ ಎರಡನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ನಟರಾದ ಶಾಹಿದ್ ಕಪೂರ್, ಟೈಗರ್ ಶ್ರಾಫ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಉಪಸ್ಥಿತರಿದ್ದರು. ಅಲ್ಲದೇ ವಿಶೆಷ ಅತಿಥಿಯಾಗಿ ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಖಾನ್​ ಸಹ ಉಪಸ್ಥಿತರಿದ್ದರು. ಮಹಿಳಾ ಪ್ರೀಮಿಯರ್ ಲೀಗ್ (WPL 2024) ಫೆಬ್ರವರಿ 23ರಿಂದ ಅಂದರೆ ಇಂದಿನಿಂದ ಅದ್ಧೂರಿಯಾಗಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬಯಿ ರೋಚಕ ಗೆಲುವು ಸಾಧಿಸಿದೆ.

Continue Reading

ಪ್ರಮುಖ ಸುದ್ದಿ

Sachin Tenulkar : ಒಡಿಐನಲ್ಲಿ ಸಚಿನ್​ ಮೊದಲ ದ್ವಿಶತಕ ಬಾರಿಸಿ ಇತಿಹಾಸ ಸೃಷ್ಟಿಸಿದ ದಿನವಿದು

Sachin Tendulkar: ಸಚಿನ್​ ತೆಂಡೂಲ್ಕರ್​ ಅವರು 2010 ನೇ ವರ್ಷದಲ್ಲಿ ದ್ವಿಶತಕ ಬಾರಿಸಿದ್ದರು. ಅಲ್ಲಿಂದ

VISTARANEWS.COM


on

Sachin Tendulkar
Koo

ಬೆಂಗಳೂರು: ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ (Sachin Tenulkar) ಕ್ರಿಕೆಟ್​​ ಇತಿಹಾಸದಲ್ಲಿ ಸೃಷ್ಟಿಸದ ದಾಖಲೆಗಳೇ ಇಲ್ಲ. ಆಧುನಿಕ ಕ್ರಿಕೆಟ್​ನ ಅಬ್ಬರದಲ್ಲಿ ಕೆಲವೊಂದು ದಾಖಲೆಗಳ ಬೇರೆ ಆಟಗಾರರ ಹೆಸರಿಗೆ ಹೋಗಿದ್ದರು ಇಂಥ ಅಮೋಘ ಸಾಧನೆ ಮಾಡಿದ ಪ್ರಮುಖ ಕ್ರಿಕೆಟರ್​ ಎಂಬ ಹೆಗ್ಗಳಿಕೆ ಸಚಿನ್ ಅವರಿಗೆ ಸಲ್ಲುತ್ತದೆ. ಈ ರೀತಿಯಾಗಿ ಅವರು ಏಕದಿನ ಕ್ರಿಕೆಟ್​ ಮಾದರಿಯಲ್ಲಿ ದ್ವಿಶತಕ ಬಾರಿಸಿದ (Double Century) ಮೊದಲ ಪುರುಷ ಕ್ರಿಕೆಟಿಗ ಎಂಬ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಸಚಿನ್​ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗರಲ್ಲ. ಆದರೆ ಮೊದಲ ಪುರುಷರ ಕ್ರಿಕೆಟಿಗ. ಆದಾಗ್ಯೂ ಅವರು ಸಾಧನೆ ಅಸಾಮಾನ್ಯ. ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್​ ಬೆಲಿಂಡಾ ಕ್ಲಾರ್ಕ್ ಬಳಿಕ ಸಚಿನ್​ ಈ ಸಾಧನೆ ಮಾಡಿದವರು. ಮುಂಬೈನ ಬಾಂದ್ರಾದ ಮಿಡಲ್ ಇನ್ಕಮ್ ಗ್ರೂಪ್ ಮೈದಾನದಲ್ಲಿ ನಡೆದ 1997 ರ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ ಕ್ಲಾರ್ಕ್ ಈ ಮೈಲಿಗಲ್ಲು ಸಾಧಿಸಿದ್ದರು. ಆದಾಗ್ಯೂ ಸಚಿನ್​ ದ್ವಿಶತಕ ಬಾರಿಸಿದ ಬಳಿಕ ಈ ಸಾಧನೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ.

ಬೆಲಿಂಡಾ ಸಾಧನೆ ಮಾಡಿದ 13 ವರ್ಷಗಳ ನಂತರ, ಗ್ವಾಲಿಯರ್​ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ ಜಾಕ್ ಕಾಲಿಸ್ ನೇತೃತ್ವದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸಚಿನ್ ಪುರುಷರ ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದರು. ಭಾರತ ತಂಡ 400ರ ಗಡಿ ದಾಟುತ್ತಿದ್ದಂತೆಯೇ ಸಚಿನ್ ತೆಂಡೂಲ್ಕರ್ ಅವರು ಚಾರ್ಲ್ ಲ್ಯಾಂಗೆಡ್ವೆಲ್ಟ್ ಅವರ ಯಾರ್ಕರ್ ಎಸೆತದಲ್ಲಿ ಒಂದು ರನ್​​ ಗಳಿಸಿ ಸಂತೋಷದಿಂದ ಕೈ ಎತ್ತಿದರು. ಈ ವೇಳೆ ದಾಖಲೆ ಸೃಷ್ಟಿಯಾಯಿತು.

ಇದನ್ನೂ ಓದಿ : Sachin Tendulkar : ವಿಶೇಷಚೇತನ ಕ್ರಿಕೆಟರ್​ ಅಮೀರ್​ ಭೇಟಿಯಾದ ಕ್ರಿಕೆಟ್ ದೇವರು; ಇಲ್ಲಿದೆ ವಿಡಿಯೊ

“ವೀಕ್ಷಕವಿವರಣೆ ಬಾಕ್ಸ್​ನಲ್ಲಿದ್ದ ರವಿ ಶಾಸ್ತ್ರಿ ಈ ಕ್ಷಣದಲ್ಲಿ ಜೋರಾಗಿ ಅಬ್ಬರಿಸಿದ್ದರು “ಈ ಭೂಮಂಡಲದಲ್ಲಿ 200 ರನ್ ತಲುಪಿದ ಮೊದಲ ವ್ಯಕ್ತಿ ಸಚಿನ್​. ಅವರೇ ಭಾರತದ ಸೂಪರ್ ಮ್ಯಾನ್, ಸಚಿನ್ ತೆಂಡೂಲ್ಕರ್. ಎಲ್ಲರೂ ಎದ್ದು ಗೌರವಿಸಿ ಎಂದು ಬರೆದುಕೊಂಡಿದ್ದರು. ಐತಿಹಾಸಿಕ ಕ್ಷಣ ಕಳೆದು 14 ವರ್ಷಗಳಾಗಿವೆ. ಇಂದಿಗೂ ಅದು ಅಭಿಮಾನಿಗಳ ಮನದಲ್ಲಿ ಹಾಗೆಯೇ ಉಳಿದಿದೆ.

ಸಚಿನ್ ತೆಂಡೂಲ್ಕರ್ ಇತಿಹಾಸ ನಿರ್ಮಿಸಿದ್ದು ಹೇಗೆ?

ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಭಾರತ ತಂಡವು ವೀರೇಂದ್ರ ಸೆಹ್ವಾಗ್ ಅವರ ವಿಕೆಟ್ ಪತನದ ಬಳಿಕ ಸಂಕಷ್ಟಕ್ಕೆ ಸಿಲುಕಿಸಿತು. ಆದರೆ, ಸಚಿನ್ ತೆಂಡೂಲ್ಕರ್ ಮತ್ತು ದಿನೇಶ್ ಕಾರ್ತಿಕ್ ಎರಡನೇ ವಿಕೆಟ್ ಗೆ 194 ರನ್ ಗಳ ಜೊತೆಯಾಟವಾಡುವ ಮೂಲಕ ವಿಶ್ವಾಸ ಮೂಡಿಸಿದರು.

ಸಚಿನ್ ತೆಂಡೂಲ್ಕರ್ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ನಂತರ 90 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಅಲ್ಲಿಂದ ಅವರು ಅಬ್ಬರಿಸಿದರು.

ಅವರು 147 ಎಸೆತಗಳಲ್ಲಿ ದ್ವಿಶತಕ ಗಳಿಸಿದರು. ಅಂತಿಮವಾಗಿ ಭಾರತ 50 ಓವರ್​ಗೆ 3 ವಿಕೆಟ್ ಕಳೆದುಕೊಂಡು 401 ರನ್ ಕಲೆಹಾಕಿತು. ಮೆನ್ ಇನ್ ಬ್ಲೂ ಪಂದ್ಯವನ್ನು 153 ರನ್ ಗಳಿಂದ ಗೆದ್ದ ನಂತರ ತೆಂಡೂಲ್ಕರ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ರೋಹಿತ್ ಶರ್ಮಾ, ಮಾರ್ಟಿನ್ ಗಪ್ಟಿಲ್, ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಫಖರ್ ಜಮಾನ್, ಪಥುಮ್ ನಿಸ್ಸಾಂಕಾ, ಇಶಾನ್ ಕಿಶನ್, ಶುಭ್ಮನ್ ಗಿಲ್ ಮತ್ತು ಅಮೆಲಿಯಾ ಕೆರ್ ಏಕದಿನ ದ್ವಿಶತಕ ಬಾರಿಸಿದ ಇತರ ಆಟಗಾರರು.

Continue Reading

ಕ್ರೀಡೆ

Sachin Tendulkar : ವಿಶೇಷಚೇತನ ಕ್ರಿಕೆಟರ್​ ಅಮೀರ್​ ಭೇಟಿಯಾದ ಕ್ರಿಕೆಟ್ ದೇವರು; ಇಲ್ಲಿದೆ ವಿಡಿಯೊ

ಸಚಿನ್ ತೆಂಡೂಲ್ಕರ್ (Sachin Tendulkar) ಅವರು ತಮ್ಮ ಅಭಿಮಾನಿ ಅಮೀರ್ ಅವರನ್ನು ಭೇಟಿಯಾಗಿ ಅವರೊಂದಿಗೆ ಸಮಯ ಕಳೆದರು.

VISTARANEWS.COM


on

Sachin Tendulkar
Koo

ನವ ದೆಹಲಿ: ಕಳೆದ ತಿಂಗಳು, ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಜಮ್ಮು ಮತ್ತು ಕಾಶ್ಮೀರದ ವಿಕಲಚೇತನ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್ ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. 200 ಟೆಸ್ಟ್, 463 ಏಕದಿನ ಮತ್ತು 1 ಟಿ 20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸಚಿನ್, ಕ್ರಿಕೆಟಿಗನನ್ನು ಭೇಟಿಯಾಗಿ ಅವರ ಹೆಸರಿನ ಜರ್ಸಿಯನ್ನು ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದರು. ಅಂತೆಯೇ ಅವರು ಇದೀಗ ಜೆರ್ಸಿಯನ್ನು ಪಡೆದುಕೊಂಡಿದ್ದಾರೆ.

ತಮ್ಮ ಮಾತುಗಳಿಗೆ ಬದ್ಧರಾಗಿರುವ ತೆಂಡೂಲ್ಕರ್, ಕಾಶ್ಮೀರ ಪ್ರವಾಸದಲ್ಲಿ ಅಮೀರ್ ಅವರನ್ನು ಭೇಟಿಯಾದರು. ಕ್ರಿಕೆಟ್ ಐಕಾನ್ ಅಮೀರ್ ಅವರೊಂದಿಗಿನ ಸಂವಾದದ ವೀಡಿಯೊವನ್ನು ಇನ್ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ, “ಅಮೀರ್, ನಿಜವಾದ ಹೀರೋ. ಸ್ಫೂರ್ತಿದಾಯಕವಾಗಿರಿ! ನಿಮ್ಮನ್ನು ಭೇಟಿಯಾಗಿದ್ದರಿಂದ ಸಂತೋಷವಾಯಿತು.” ಎಂದು ಬರೆದುಕೊಂಡಿದ್ದಾರೆ.

ವಿಡಿಯೊಕ್ಲಿಪ್​ನಲ್ಲಿ ಸಚಿನ್ ತೆಂಡೂಲ್ಕರ್, ಅಮೀರ್ ಹುಸೇನ್ ಲೋನ್ ಜತೆ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದು. ಕಾಶ್ಮೀರದ ವಾಘಮಾ ಗ್ರಾಮದವರಾದ ಅಮೀರ್ ಹುಸೇನ್ ಲೋನ್ ತನ್ನ ತಂದೆಯ ಗಿರಣಿಯಲ್ಲಿ ಕೆಲಸ ಮಾಡುವಾಗ ಎಂಟನೇ ವಯಸ್ಸಿನಲ್ಲಿ ಕೈಗಳನ್ನು ಕಳೆದುಕೊಂಡಿದ್ದರು. ಆದರೆ ಅದು ಕ್ರಿಕೆಟ್ ಮೇಲಿನ ಅವರ ಪ್ರೀತಿಯನ್ನು ಕುಗ್ಗಿಸಲಿಲ್ಲ . ಅಂತಿಮವಾಗಿ, ಶಿಕ್ಷಕರೊಬ್ಬರು ಅವರ ಪ್ರತಿಭೆಯನ್ನು ಕಂಡುಹಿಡಿದರು. ಅವರನ್ನು ವೃತ್ತಿಪರ ಕ್ರೀಡೆಗೆ ಪರಿಚಯಿಸಿದ್ದರು,

ಕಳೆದ ತಿಂಗಳು ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡುವ ವೇಳೆ ಅಮೀರ್ ತಮ್ಮ ಜೀವನದ ಕಷ್ಟದ ಕಥನವನ್ನು ತೆರೆದಿಟ್ಟದ್ದರು.

“ಅಪಘಾತದ ನಂತರ, ನಾನು ಭರವಸೆಯನ್ನು ಕಳೆದುಕೊಳ್ಳಲಿಲ್ಲ ಮತ್ತು ಕಷ್ಟಪಟ್ಟು ಕೆಲಸ ಮಾಡಿದೆ. ನಾನು ಎಲ್ಲವನ್ನೂ ನಾನೇ ಮಾಡಬಲ್ಲೆ ಮತ್ತು ನಾನು ಯಾರ ಮೇಲೂ ಅವಲಂಬಿತವಾಗಿಲ್ಲ. ನನ್ನ ಅಪಘಾತದ ನಂತರ ಯಾರೂ ನನಗೆ ಸಹಾಯ ಮಾಡಲಿಲ್ಲ. ಸರ್ಕಾರ ಕೂಡ ನನ್ನನ್ನು ಬೆಂಬಲಿಸಲಿಲ್ಲ ಆದರೆ ನನ್ನ ಕುಟುಂಬವು ಯಾವಾಗಲೂ ನನ್ನೊಂದಿಗೆ ಇತ್ತು” ಎಂದು ಅಮೀರ್ ಹೇಳಿಕೊಂಡಿದ್ದರು.

ಇದನ್ನೂ ಓದಿ : Rohit Sharma : 2 ರನ್​ಗೆ ಔಟಾದ ರೋಹಿತ್​ ಶರ್ಮಾ ಗೇಲಿ ಮಾಡಿದ ಇಂಗ್ಲೆಂಡ್ ಅಭಿಮಾನಿಗಳು

“ನಾನು 2013 ರಲ್ಲಿ ದೆಹಲಿಯಲ್ಲಿ ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ. 2018 ರಲ್ಲಿ ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದೇನೆ. ನಂತರ ನೇಪಾಳ, ಶಾರ್ಜಾ ಮತ್ತು ದುಬೈನಲ್ಲಿ ಕ್ರಿಕೆಟ್ ಆಡಿದೆ. ನಾನು ನನ್ನ ಕಾಲುಗಳೊಂದಿಗೆ (ಬೌಲಿಂಗ್) ಮಾಡುವುದನ್ನು ಮತ್ತು ನನ್ನ ಭುಜ ಮತ್ತು ಕುತ್ತಿಗೆಯಿಂದ ಬ್ಯಾಟಿಂಗ್ ಮಾಡುವುದನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದರು. ಕ್ರಿಕೆಟ್ ಆಡಲು ನನಗೆ ಶಕ್ತಿ ನೀಡಿದ ದೇವರಿಗೆ ಧನ್ಯವಾದಗಳು, “ಎಂದು ಅವರು ಹೇಳಿಕೊಂಡಿದ್ದರು.

Continue Reading

ಪ್ರಮುಖ ಸುದ್ದಿ

Rohit Sharma : 2 ರನ್​ಗೆ ಔಟಾದ ರೋಹಿತ್​ ಶರ್ಮಾ ಗೇಲಿ ಮಾಡಿದ ಇಂಗ್ಲೆಂಡ್ ಅಭಿಮಾನಿಗಳು

Rohit Sharma: ರೋಹಿತ್​ ಶರ್ಮಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆರು ಬಾರಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ.

VISTARANEWS.COM


on

Rohit Sharma
Koo

ರಾಂಚಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ (Rohit Sharma) ಆರನೇ ಬಾರಿಗೆ ವಿಫಲರಾಗಿದ್ದಾರೆ. ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಅವರು 9 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ್ದಾರೆ. ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ವೈಫಲ್ಯವನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ಅಭಿಮಾನಿಗಳ ಟೀಕೆಗೆ ಒಳಗಾಗಿದ್ದಾರೆ.

ರೋಹಿತ್ ಅವರನ್ನು ಜೇಮ್ಸ್ ಆಂಡರ್ಸನ್ ಔಟ್ ಮಾಡಿದರು, ಅವರು ವಿಕೆಟ್​ನಿಂದ ಹೊರಕ್ಕೆ ಹಾರುತ್ತಿದ್ದ ಚೆಂಡನ್ನು ಕೆಣಕಲು ಹೋಗಿ ಔಟಾದರು. ಚೆಂಡು ಬ್ಯಾಟ್​ ಸವರಿ ನೇರವಾಗಿ ವಿಕೆಟ್​ ಕೀಪರ್​ ಬೆನ್​​ ಫೋಕ್ಸ್​ ಕೈ ಸೇರಿತ್ತು. ರೋಹಿತ್ ಔಟಾದ ತಕ್ಷಣ ಇಂಗ್ಲೆಂಡ್ ಅಭಿಮಾನಿಗಳು ಗೇಲಿ ಮಾಡಲು ಆರಂಭಿಸಿದ್ದರು. ‘ಬೈ ಬೈ ರೋಹಿತ್’ ಹಾಡಿದರು.

ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಇಂಗ್ಲೆಂಡ್​

ಮೊದಲ ಇನಿಂಗ್ಸ್​ನಲ್ಲಿ ಜೋ ರೂಟ್ ಅಜೇಯ 122 ರನ್ ಗಳಿಸಿದ್ದು, ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಇಂಗ್ಲೆಂಡ್​ 353 ರನ್ ಗಳಿಸಿದೆ. ಭೋಜನ ವಿರಾಮದ ವೇಳೆಗೆ ಬ್ಯಾಟಿಂಗ್​ ಆರಂಭಿಸಿದ ಭಾರತ ಪರ ಯಶಸ್ವಿ ಜೈಸ್ವಾಲ್ (ಅಜೇಯ 27) ಮತ್ತು ಶುಭ್ಮನ್ ಗಿಲ್ (4) ಕ್ರೀಸ್​ನಲ್ಲಿ ಉಳಿದಿದ್ದಾರೆ. ಭಾರತ 10 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದೆ. ತವರು ತಂಡವು 319 ರನ್ ಗಳ ಹಿನ್ನಡೆ ಹೊಂದಿದೆ.

ಭಾರತದ ಪರ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ 67ಕ್ಕೆ 4 ವಿಕೆಟ್ ಕಬಳಿಸಿದ್ದಾರೆ. ಆರಂಭಿಕ ವೇಗಿ ಆಕಾಶ್ ದೀಪ್ 19 ಓವರ್​ಗಳಲ್ಲಿ 83 ರನ್​ಗೆ 3 ವಿಕೆಟ್ ಪಡೆದಿದ್ದಾರೆ. ಶನಿವಾರ 7 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿದ್ದ ಇಂಗ್ಲೆಂಡ್ ಮೊದಲ ಇನಿಂಗ್ಸ್​​ಗೆ ಇನ್ನೂ 51 ರನ್ ಸೇರಿಸಿತು ಇಂಗ್ಲೆಂಡ್​ನ ಮಾಜಿ ನಾಯಕ ಕೊನೆಯವರೆಗೂ ಅಜೇಯರಾಗಿ ಉಳಿದರು 10 ಬೌಂಡರಿಗಳು ಬಾರಿಸಿದರು.

ಇದನ್ನೂ ಓದಿ : Akash Deep : ಮಗನ ಕ್ರಿಕೆಟ್ ಪಯಣದ ತಾಪತ್ರಯಗಳನ್ನು ವಿವರಿಸಿದ ಆಕಾಶ್​ ದೀಪ್​ ತಾಯಿ

ಸರಣಿಯ ಮೊದಲ ಪಂದ್ಯವನ್ನು ಆಡುತ್ತಿರುವ ಒಲಿ ರಾಬಿನ್ಸನ್ 81 ಎಸೆತಗಳಲ್ಲಿ ಚೊಚ್ಚಲ ಟೆಸ್ಟ್ ಅರ್ಧಶತಕವನ್ನು ಗಳಿಸಿದರು. ಅವರು ರೂಟ್ ಅವರೊಂದಿಗೆ ಎಂಟನೇ ವಿಕೆಟ್​ಗೆ 102 ರನ್​ ಸೇರಿಸಿದರು. ಈ ಜೊತೆಯಾಟ ಪ್ರವಾಸಿ ತಂಡಕ್ಕೆ ಗೌರವಯುತ ಮೊತ್ತ ಪೇರಿಸಲು ನೆರವಾಯಿತು.

ರಾಜ್​​ಕೋಟ್​ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 434 ರನ್​ಗಳಿಂದ ಜಯ ಸಾಧಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್ 28 ರನ್​ಗಳಿಂದ ಸೋತ ನಂತರ ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ ಭಾರತ 106 ರನ್ಗಳಿಂದ ಗೆದ್ದಿತು.

Continue Reading
Advertisement
Drunk husband assaults wife
ಬೆಂಗಳೂರು12 mins ago

Assault Case :‌ ಹೊಡಿತಾನೆ ಬಡಿತಾನೆ ನನ್ನ ಗಂಡ; ಅನುಮಾನ ಪಿಶಾಚಿ ಕಾಟಕ್ಕೆ ಬೇಸತ್ತಳು ಹೆಂಡತಿ

indian penal code
ದೇಶ15 mins ago

New Laws: ಐಪಿಸಿ ಮೂಲೆಗೆ; ಜುಲೈ 1ರಿಂದಲೇ ಹೊಸ ಕಾನೂನು ಜಾರಿ, ಏನೆಲ್ಲ ಬದಲು?

bankok
ವೈರಲ್ ನ್ಯೂಸ್24 mins ago

Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

Amazon Sweets
ವಾಣಿಜ್ಯ32 mins ago

Empower HER Exhibition : ಎಫ್‌ಕೆಸಿಸಿಐ ಆವರಣದಲ್ಲಿ ಮಹಿಳಾ ಉದ್ದಿಮೆದಾರರಿಂದ ಯಶಸ್ವಿ ವಸ್ತು ಪ್ರದರ್ಶನ ಮತ್ತು ಮಾರಾಟ

Actor Manoj Rajput Arrested On Allegations Of Raping
ಸಿನಿಮಾ33 mins ago

Actor Manoj Rajput: ಅತ್ಯಾಚಾರ ಎಸಗಿದ ಆರೋಪದ ಮೇಲೆ ನಟ ಮನೋಜ್ ರಜಪೂತ್ ಬಂಧನ

40 percent commission Court summons CM No defamation if advertised says Siddaramaiah
ರಾಜಕೀಯ47 mins ago

40 percent commission: ಸಿಎಂಗೆ ಕೋರ್ಟ್‌ ಸಮನ್ಸ್;‌ ಜಾಹೀರಾತು ಕೊಟ್ಟರೆ ಮಾನನಷ್ಟ ಆಗಲ್ಲ: ವಕೀಲರು ಉತ್ತರಿಸುತ್ತಾರೆಂದ ಸಿದ್ದರಾಮಯ್ಯ

Shah Rukh Kahan
ಪ್ರಮುಖ ಸುದ್ದಿ55 mins ago

Shah rukh Khan : ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದ ಶಾರುಖ್​ ಖಾನ್​

PM Narendra Modi is determined to make India a developing country by 2047 says Pralhad Joshi
ರಾಜಕೀಯ1 hour ago

PM Narendra Modi: ಮೋದಿ ಚಿಂತೆ ಮಾಡುವವರಲ್ಲ, ಚಿಂತನೆ ಮಾಡುವ ಪ್ರಧಾನಿ: ಪ್ರಲ್ಹಾದ್‌ ಜೋಶಿ

Idli
ವೈರಲ್ ನ್ಯೂಸ್2 hours ago

Biodiversity: ದಿನಾ ಇಡ್ಲಿ ತಿಂತೀರಾ? ಹಾಗಾದ್ರೆ ಜೀವವೈವಿಧ್ಯ ಹಾನಿಗೆ ನಿಮ್ಮದೇ ಹೆಚ್ಚಿನ ಕೊಡುಗೆ!

Anil John Sequeira youngest judge in Karnataka
ದಕ್ಷಿಣ ಕನ್ನಡ2 hours ago

Anil John Sequeira : ಬಂಟ್ವಾಳ ಯುವಕನ ಅಪರೂಪದ ಸಾಧನೆ; 25ನೇ ವಯಸ್ಸಿಗೆ ನ್ಯಾಯಾಧೀಶರಾಗಿ ಆಯ್ಕೆ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Varthur Santhosh
ಮಂಡ್ಯ3 hours ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ11 hours ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ23 hours ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು1 day ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ1 day ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು2 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ2 days ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ4 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

ಟ್ರೆಂಡಿಂಗ್‌