ಬೆಂಗಳೂರು : ಭಾರತ ಮಹಿಳೆಯರ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ಕ್ರಿಕೆಟರ್ ಹಾಗೂ ಪರ್ಫಾಮೆನ್ಸ್ ಕೋಚ್ ಅರ್ಜುನ್ ಹೊಯ್ಸಳ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ ೧೮ರಂದು ಅವರಿಬ್ಬರ ಎಂಗಜ್ಮೇಂಟ್ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ನಡೆದಿದೆ. ಎಂಗೇಜ್ಮೆಂಟ್ ಫೋಟೋಶೂಟ್ ಫೋಟೊಗಳನ್ನು ವೇದಾ ಅವರ ಭಾವಿ ಪತಿ ಅರ್ಜುಲ್ ಹೊಯ್ಸಳ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಈ ಜೋಡಿ ಗಿರಿಧಾಮವೊಂದರಲ್ಲಿ ಪರಸ್ಪರ ಉಂಗುರ ವಿನಿಮಯ ಮಾಡಿಕೊಂಡಿದ್ದರು. ಈ ಚಿತ್ರಗಳನ್ನೂ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ತಮ್ಮ ಪುತ್ರಿ ವಿವಾಹವಾಗುವ ವಿಷಯವನ್ನು ವೇದಾ ಅವರ ತಂದೆ ಕೃಷ್ಣಮೂರ್ತಿ ಅವರೂ ಖಚಿತಪಡಿಸಿದ್ದರು. ಇದೀಗ ಅರ್ಜುನ್ ಹೊಯ್ಸಳ ಅವರು ಎಂಗೇಜ್ಮೆಂಟ್ ಚಿತ್ರವನ್ನೂ ಪ್ರಕಟಿಸಿದ್ದಾರೆ.
ಇದನ್ನೂ ಓದಿ | ಮಾಜಿ ಕ್ರಿಕೆಟಿಗನನ್ನು ವರಿಸಲಿದ್ದಾರೆ ಕ್ರಿಕೆಟ್ ತಾರೆ ವೇದಾ ಕೃಷ್ಣಮೂರ್ತಿ; ಸೆಪ್ಟೆಂಬರ್ 18ರಂದು ನಿಶ್ಚಿತಾರ್ಥ