Site icon Vistara News

Ind vs West Indies | ವೈಟ್​ ಬಾಲ್ ಸರಣಿಗೆ ಟ್ರಿನಿಡಾಡ್ ತಲುಪಿದ ಭಾರತದ ತಂಡ

ಪೋರ್ಟ್ ಆಫ್ ಸ್ಪೇನ್: ಜುಲೈ 22ರಿಂದ (ಶುಕ್ರವಾರ) ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿ (Ind vs West Indies) ಆರಂಭವಾಗಲಿದ್ದು, ಬುಧವಾರ ಭಾರತ ತಂಡವು ಟ್ರಿನಿಡಾಡ್ ತಲುಪಿದೆ.

ವೆಸ್ಟ್ ಇಂಡೀಸ್ ಹಾಗೂ ಭಾರತದ ನಡುವೆ 3 ಏಕದಿನ ಪಂದ್ಯಗಳು ಹಾಗೂ 5 ಟಿ20 ಪಂದ್ಯಗಳು ನಡೆಯಲಿವೆ. ಈ ಎರಡೂ ಸರಣಿಗಳಿಗೆ ಈಗಾಗಲೇ ಭಾರತದ ತಂಡ ಪ್ರಕಟವಾಗಿದ್ದು, ಘಟಾನುಘಟಿಗಳಾದ ವಿರಾಟ್ ಕೊಹ್ಲಿ, ಜಸ್​ಪ್ರಿ​ತ್ ಬುಮ್ರಾ ಅಲಭ್ಯರಾಗಿದ್ದಾರೆ. ಏಕದಿನ ಸರಣಿಗೆ ರೋಹಿತ್ ಶರ್ಮ ಲಭ್ಯವಿಲ್ಲದ ಕಾರಣ ಶಿಖರ್ ಧವನ್​ಗೆ ನಾಯಕತ್ವ ವಹಿಸಲಾಗಿದೆ.

ಏಕದಿನ ಸರಣಿಗೆ ಭಾರತದ ತಂಡ

ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪ ನಾಯಕ), ಶಾರ್ದುಲ್ ಠಾಕೂರ್, ಯಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್​ ಕೃಷ್ಣ. ಮೊಹಮ್ಮದ್ ಸಿರಾಜ್, ಅರ್ಶ್​ದೀಪ್ ಸಿಂಗ್

ಟಿ20 ಸರಣಿಗೆ ಭಾರತದ ತಂಡ:

ರೋಹಿತ್ ಶರ್ಮ(ನಾಯಕ), ಕೆ.ಎಲ್ ರಾಹುಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್. ಅಶ್ವಿನ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಅರ್ಶ್​ದೀಪ್ ಸಿಂಗ್, ಭುವನೇಶ್ವರ್ ಕುಮಾರ್

ಇನ್ನೊಂದೆಡೆ ವೆಸ್ಟ್ ಇಂಡೀಸ್ ಏಕದಿನ ಸರಣಿಗೆ ಮಾತ್ರ ತಂಡ ಪ್ರಕಟವಾಗಿದೆ. ವೆಸ್ಟ್ ಇಂಡೀಸ್​ನ ಆಲ್​ ರೌಂಡರ್ ಆಟಗಾರ ಜೇಸನ್ ಹೋಲ್ಡರ್ ಈ ಸರಣಿಯಲ್ಲಿ ತಂಡಕ್ಕೆ ಮರಳಿದ್ದಾರೆ.

ಭಾರತದ ವೆಸ್ಟ್ ಇಂಡೀಸ್ ತಂಡ

ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಕೆಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕೇಲ್​ಹೊಸೈನ್, ಶಮ್ರಾ ಬ್ರೂಕ್ಸ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್​, ಗುಡಕೇಶ್ ಮೋತಿ, ಕೀಮೋ ಪಾಲ್, ರೋವ್ಮನ್​ ಪೊವೆಲ್ ಮತ್ತು ಜೇಡನ್ ಸೀಲ್ಸ್.

ಮೀಸಲು ಆಟಗಾರರು: ರೊಮಾರಿಯೊ ಶೆಫರ್ಡ್, ಹೇಡನ್ ವಾಲ್ಷ್ ಜೂನಿಯರ್.

ಇದನ್ನೂ ಓದಿ | Windies Tour | ಭಾರತ ವಿರುದ್ಧದ ಏಕದಿನ ಸರಣಿಗೆ ವಿಂಡೀಸ್​ ತಂಡದಲ್ಲಿ ಯಾರೆಲ್ಲ ಇದ್ದಾರೆ?

Exit mobile version