Site icon Vistara News

Davis Cup : 60 ವರ್ಷಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ಇಳಿದ ಭಾರತ ತಂಡ

Tennis Team

ನವದೆಹಲಿ: ಡೇವಿಸ್ ಕಪ್ (Davis Cup) ಟೂರ್ನಿಗಾಗಿ ಭಾರತ ಟೆನಿಸ್ ತಂಡ 60 ವರ್ಷಗಳ ನಂತರ ಭಾನುವಾರ ಪಾಕಿಸ್ತಾನಕ್ಕೆ ತೆರಳಿದೆ. ಬಿಗಿ ಭದ್ರತೆಯ ನಡುವೆ ಆಟಗಾರರು ಸೋಮವಾರ ಇಸ್ಲಾಮಾಬಾದ್ ನಲ್ಲಿ ತರಬೇತಿ ಆರಂಭಿಸಿದ್ದಾರೆ. 1964ರ ಬಳಿಕ ಇದೇ ಮೊದಲ ಬಾರಿಗೆ ಡೇವಿಸ್ ಕಪ್ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದೆ. ಹಿಂದಿನ ಪಂದ್ಯದಲ್ಲಿ ಭಾರತ 4-0 ಅಂತರದಿಂದ ಗೆದ್ದಿತ್ತು. ಭಾರತ ತಂಡದ ಸುರಕ್ಷತೆ ಖಚಿತಪಡಿಸಿಕೊಳ್ಳಲು, ಪಾಕಿಸ್ತಾನ ಟೆನಿಸ್ ಫೆಡರೇಶನ್ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ಅನುಮೋದಿಸಿದ ಕಟ್ಟುನಿಟ್ಟಾದ ಭದ್ರತೆಗೆ ಒಳಪಟ್ಟಿದೆ. ವರದಿಗಳ ಪ್ರಕಾರ,ಭೇಟಿ ನೀಡುವ ತಂಡದೊಂದಿಗೆ ದೇಶದ ರಾಜ್ಯ ಭದ್ರತಾ ಮುಖ್ಯಸ್ಥರು ಇರಲಿದ್ದಾರೆ. ಭಾರತೀಯ ತಂಡಕ್ಕೆ ಜನವರಿ 27 ರಂದು ವೀಸಾ ಕೊಡಲಾಗಿತ್ತು.

ಐವರು ಆಟಗಾರರು, ಇಬ್ಬರು ಫಿಸಿಯೋಗಳು ಮತ್ತು ಇಬ್ಬರು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಅಧಿಕಾರಿಗಳನ್ನು ಒಳಗೊಂಡ ಭಾರತ ತಂಡ ಭಾನುವಾರ ರಾತ್ರಿ ಇಸ್ಲಾಮಾಬಾದ್ ಗೆ ಬಂದಿಳಿದಿದೆ. ಭಾರತೀಯ ಆಟಗಾರರ ಚಲನವಲನಗಳು ಸ್ಥಳ ಮತ್ತು ಹೋಟೆಲ್​​ಗೆ ಸೀಮಿತವಾಗಿರುವ ನಿರೀಕ್ಷೆಯಿದೆ. ಫೆಬ್ರವರಿ 3 ಮತ್ತು 4 ರಂದು ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.

ಹೆಚ್ಚುವರಿ ಮುನ್ನೆಚ್ಚರಿಕೆ : ಪಾಕಿಸ್ತಾನ
“60 ವರ್ಷಗಳ ನಂತರ ಭಾರತ ತಂಡ ಪಾಕಿಸ್ತಾನಕ್ಕೆ ಬಂದಿರುವುದರಿಂದ ನಾವು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಭಾರತೀಯ ತಂಡದ ಸುತ್ತಲೂ ನಾಲ್ಕರಿಂದ ಐದು ಪದರಗಳ ಭದ್ರತೆ ಇದೆ. ಈವೆಂಟ್ ಸೆಕ್ಯುರಿಟಿ ಮ್ಯಾನೇಜರ್ ಆಗಿ ನಾನು ಪ್ರಯಾಣದ ಸಮಯದಲ್ಲಿ ಅವರೊಂದಿಗೆ ಇದ್ದೇನೆ ಎಂದು ಪಿಟಿಎಫ್ ಪ್ರಧಾನ ಕಾರ್ಯದರ್ಶಿ ಕರ್ನಲ್ ಗುಲ್ ರೆಹಮಾನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ : Yashasvi Jaiswal : ವೈರಲ್ ಆದ ವಿದೇಶಿ ಹುಡುಗಿ ಯಶಸ್ವಿ ಜೈಸ್ವಾಲ್​ ಗೆಳತಿಯಾ? ಇಲ್ಲಿದೆ ವಿಡಿಯೊ ಸಾಕ್ಷಿ

ಪ್ರಯಾಣದ ಸಮಯದಲ್ಲಿ ಬೆಂಗಾವಲು ವ್ಯಾನ್ ಗಳು ತಂಡದೊಂದಿಗೆ ಇರುತ್ತವೆ. ರಾಷ್ಟ್ರದ ಮುಖ್ಯಸ್ಥರಿಗೆ ಮೀಸಲಾಗಿರುವ ವಿವಿಐಪಿ ಪ್ರವೇಶದಿಂದ ಅವರು ಹೋಟೆಲ್ ಪ್ರವೇಶಿಸುತ್ತಾರೆ. ಬಾಂಬ್ ನಿಷ್ಕ್ರಿಯ ದಳಗಳು ಬೆಳಿಗ್ಗೆ ಸ್ಥಳವನ್ನು ಪರೀಕ್ಷೆ ಮಾಡಿವೆ. ಯಾರಿಗೂ ಒಳಗೆ ಪ್ರವೇಶ ನೀಡಿಲ್ಲ. ಪಂದ್ಯದುದ್ದಕ್ಕೂ ಇದೇ ನಿಯಮ ಮುಂದುವರಿಯಲಿದೆ , “ಎಂದು ಅವರು ಹೇಳಿದರು.

Exit mobile version