ಲಖನೌ: ಐಪಿಎಲ್ 16ನೇ ಆವೃತ್ತಿಯ 45ನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಮೊದಲ ಇನಿಂಗ್ಸ್ ಪೂರ್ತಿಗೊಳ್ಳಲು ನಾಲ್ಕು ಎಸೆಗಳು ಬಾಕಿ ಇರುವಾಗ ಸುರಿಯಲು ಆರಂಭಿಸಿದ ಮಳೆ ಸುದೀರ್ಘವಾಗಿ ಸುರಿಯಿತು. ತೇವಗೊಂಡಿರುವ ಮೈದಾನದಲ್ಲಿ ಆಟ ಸಾಧ್ಯವಿಲ್ಲ ಎಂದು ನಿರ್ಧರಿಸಿದ ಮ್ಯಾಚ್ ರೆಫಿರಿ ಪಂದ್ಯವನ್ನು ಸ್ಥಗಿತಗೊಳಿಸಿದರು. ಅಲ್ಲದೆ ಇತ್ತಂಡಗಳಿಗೂ ತಲಾ ಒಂದು ಅಂಕ ಹಂಚಿದರು.
ಮಳೆಯಿಂದ ಪಂದ್ಯ ಸ್ಥಗಿತಗೊಳ್ಳುವ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.2 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತ್ತು. ಆಯುಷ್ ಬದೋನಿ ಅಜೇಯ 59 ರನ್ ಬಾರಿಸಿ ತಂಡಕ್ಕೆ ಆಧಾರವಾಗಿದ್ದರು. ಆದರೂ ಲಕ್ನೊ ತಂಡ ಮತ್ತೊಂದ ಬಾರಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಿಕೋಲಸ್ ಪೂರನ್ 20 ರನ್ ಬಾರಿಸುವ ಮೂಲಕ ತಂಡಕ್ಕೆ ಅಲ್ಪ ಪ್ರಮಾಣದಲ್ಲಿ ನೆರವಾದರು.
ಇಲ್ಲಿನ ಭಾರತರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಬ್ಯಾಟಿಂಗ್ ಮಾಡಿದ ಲಕ್ನೊ ತಂಡ ಮೊದಲು ಬ್ಯಾಟಿಂಗ್ ಮಾಡಿತು.
ರಾಹುಲ್ ಅನುಪಸ್ಥಿತಿಯಲ್ಲಿ ಕೃಣಾಲ್ ಪಾಂಡ್ಯ ಲಕ್ನೊ ತಂಡದ ನೇತೃತ್ವ ವಹಿಸಿದ್ದಾರೆ. ಅಲ್ಲದೆ, ಮನನ್ ವೋರಾ ತಂಡಕ್ಕೆ ಎಂಟ್ರಿಪಡೆದುಕೊಂಡಿದ್ದರು. ಆದರೆ, ಆರಂಭಿಕರಾಗಿ ಬ್ಯಾಟ್ ಮಾಡಲು ಬಂದ ಅವರು 10 ರನ್ಗಳಿಗೆ ಔಟಾದರು. ಸ್ಫೋಟಕ ಬ್ಯಾಟರ್ ಕೈಲ್ ಮೇಯರ್ಸ್ 14 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಲಕ್ನೊ ತಂಡದ ಪತನ ಶುರುವಾಯಿತು. ನಂತದ ಬಂದ ಕರಣ್ ಶರ್ಮಾ 9 ರನ್ಗೆ ವಿಕೆಟ್ ಒಪ್ಪಿಸಿದರೆ, ನಾಯಕ ಕೃಣಾಲ್ ಪಾಂಡ್ಯ ಶೂನ್ಯಕ್ಕೆ ಔಟಾಗಿ ನಿರಾಸೆ ಎದುರಿಸಿದರು.
ಇದನ್ನೂ ಓದಿ : IPL 2023 : ಕೆ ಎಲ್ ರಾಹುಲ್ ಐಪಿಎಲ್ ಟೂರ್ನಿಯಿಂದ ಔಟ್, ಸ್ಕ್ಯಾನ್ಗಾಗಿ ಮುಂಬೈಗೆ ತೆರಳಿದ್ದಾರೆ ಕನ್ನಡಿಗ
ಸ್ಫೋಟಕ ಆಲ್ರೌಂಡರ್ 6 ರನ್ಗೆ ವಿಕೆಟ್ ಒಪ್ಪಿಸುವುದರೊಂದಿಗೆ ಗುಜರಾತ್ ತಂಡ 44 ರನ್ಗಳಿಗೆ 5 ವಿಕೆಟ್ ನಷ್ಟ ಮಾಡಿಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ತಂಡ 100 ರನ್ಗಳ ಗಡಿ ದಾಟುವುದೇ ಅನುಮಾನ ಎನಿಸಿತ್ತು. ಈ ವೇಳೆ ಜತೆಯಾದ ನಿಕೋಲಸ್ ಪೂರನ್ (20) ಹಾಗೂ ಆಯುಷ್ ಬದೋನಿ ಇನಿಂಗ್ಸ್ ಕಟ್ಟಿದರು. ಅವರಿಬ್ಬರು ಆರನೇ ವಿಕೆಟ್ಗೆ 59 ರನ್ ಬಾರಿಸಿದರು. ಹೀಗಾಗಿ ತಂಡಕ್ಕೆ ಸಮಾಧಾನಕರ ಮೊತ್ತ ಪೇರಿಸಲು ಸಾಧ್ಯವಾಯಿತು.
ಮಳೆಯ ಅಡಚಣೆ
ಲಖನೌನಲ್ಲಿ ಆಗಾಗ ಮಳೆ ಸುರಿದ ಕಾರಣ ಚೆನ್ನೈ ಹಾಗೂ ಲಕ್ನೊ ತಂಡಗಳ ನಡುವಿನ ಪಂದ್ಯಕ್ಕೆ ಅಡಚಣೆ ಉಂಟಾಯಿತು. ಪಂದ್ಯ ಆರಂಭಕ್ಕೆ ಮೊದಲೇ ಮಳೆ ಸುರಿದ ಕಾರಣ ಅರ್ಧ ಗಂಟೆ ತಡವಾಗಿ ಟಾಸ್ ಮಾಡಲಾಯಿತು. ಮೊದಲ ಇನಿಂಗ್ಸ್ ಮುಗಿಯವ ವೇಳೆಯೂ ಮತ್ತೆ ಮಳೆ ಸುರಿದ ಕಾರಣ ಪಂದ್ಯಕ್ಕೆ ಅಡಚಣೆಯಾಯಿತು.