ಐಪಿಲ್2022: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ Kolkata Knight Riders ನಡುವಿನ ರೋಚಕ ಪಂದ್ಯದಲ್ಲಿ ಕೆಕೆಆರ್ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈವರೆಗೆ 4 ಪಂದ್ಯಗಳನ್ನು ಆಡಿದ ಕೆಕೆಆರ್ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನ ಖಾತ್ರಿಪಡಿಸಿಕೊಂಡಿದೆ. ಆದರೆ Mumbai Indians ತಂಡ ಈವರೆಗೆ ಆಡಿದ 3 ಪಂದ್ಯಗಳಲ್ಲೂ ಸೊಲು ಕಂಡು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಐಪಿಲ್ 2022ನೇ ಆವೃತ್ತಿಯ 14ನೇ ಪಂದ್ಯದಲ್ಲಿ KKR ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ 12 ಬಾಲ್ ಎದುರಿಸಿ ಕೇವಲ 3 ರನ್‌ಗೆ ಔಟಾದರು. ನಂತರ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ 14 ರನ್ ಗಳಿಸಿದರೆ, ಡೆವಾಲ್ಡ್ ಬ್ರೆವಿಸ್ 29 ರನ್ ಗಳಿಸಿ ಪೆವಿಲಿಯನ್‌ಗೆ ತೆರಳಿದರು. ಕೊಲ್ಕತ ತಂಡದ ಬಿರುಸಿನ ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡುತ್ತಿದ್ದ ಮುಂಬೈ ತಂಡ 9 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಕೇವಲ 49 ರನ್ ಗಳಿಸಿತು.
ನಂತರ ಬ್ಯಾಟ್ ಹಿಡಿದು ಪಿಚ್‌ಗಿಳಿದ ಸೂರ್ಯಕುಮಾರ್ ಯಾದವ್ 36 ಬಾಲ್‌ಗೆ 52 ರನ್ ಗಳಿಸಿ ಮಿಂಚಿದರು ಹಾಗೂ ಅವರಿಗೆ ಸಾಥ್ ನೀಡಿದ ತಿಲಕ್ ವರ್ಮಾ ಅಜೇಯ 38 ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಸೂರ್ಯಕುಮಾರ್ ಹಾಗೂ ತಿಲಕ್ ವರ್ಮಾ 50ರನ್‌ಗಳ ಅದ್ಭುತ ಜೊತೆಯಾಟ ನಡೆಸಿ 19 ಓವರ್‌ಗಳಲ್ಲಿ ತಂಡದ ಸ್ಕೋರ್ 138ಕ್ಕೆ ಪೇರಿಸಿದರು. ಕೋಲ್ಕತ್ತಾ ತಂಡದ ವೇಗಿ ಬೌಲರ್ ಪ್ಯಾಟ್ ಕುಮಿನ್ಸ್ ಬೌಲ್‌ಗೆ ಸೂರ್ಯಕುಮಾರ್ ಯಾದವ್ ಬ್ಯಾಟ್ ಎಡ್ಜ್ ಆಗಿ ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಕೈ ಸೇರಿತು. ಇನ್ನಿಂಗ್ಸ್‌ನ ಕೊನೇ ಒಂದು ಓವರ್ ಬಾಕಿ ಇರುವಾಗ ಬ್ಯಾಟಿಂಗ್ ಮಾಡಲು ಪಿಚ್‌ಗೆ ಬಂದ ಕೀರನ್ ಪೊಲ್ಲಾರ್ಡ್ 5 ಬಾಲ್‌ಗಳಲ್ಲಿ ಅಜೇಯ 22 ರನ್ ಗಳಿಸಿ ಸ್ಫೊಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಉತ್ತಮ ಟಾರ್ಗೆಟ್ ನೀಡಿದರು.
162 ರನ್ ಚೇಸಿಂಗ್ ಶುರು ಮಾಡಿದ ಕೆಕೆಆರ್ ತಂಡ ಮೊದಲ 6 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಕೇವಲ 35 ರನ್ ಗಳಿಸಿತು. ಅಜಿಂಕ್ಯಾ ರಹಾನೆ ಕೇವಲ 7 ರನ್ ಗಳಿಸಿದರೆ, ಕೆಕೆಆರ್ ತಂಡದ ನಾಯಕ ಶ್ರೇಯಸ್ ಐಯ್ಯರ್ 10 ರನ್‌ಗಳಿಸಿ ಔಟಾದರು. ಕೆಕೆಆರ್ ತಂಡದ ಬ್ಯಾಟರ್‌ಗಳು 9 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 57 ರನ್‌ಗಳಿಸಿ ಮುಂಬೈ ತಂಡಕ್ಕಿಂತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ನಂತರದಲ್ಲಿ ಮುಂಬೈ ಬೌಲರ್ಸ್ ರಭಸಕ್ಕೆ ಕೆಕೆಆರ್ ತಂಡದ ಬಾಟ್ಸ್‌ಮನ್‌ಗಳ ವಿಕೆಟ್ ಪತನಗೊಂಡಿತು. 13 ಓವರ್‌ಗಳಲ್ಲಿ 131 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆಕೆಆರ್ ತಂಡಕ್ಕೆ ಪ್ಯಾಟ್ ಕುಮಿನ್ಸ್ ಹೊಸ ತಿರುವು ನೀಡಿದರು. ಪಿಚ್‌ನಲ್ಲಿ ಅಬ್ಬರಿಸಿದ ಪ್ಯಾಟ್ ಕುಮಿನ್ಸ್ ಕೇವಲ 15 ಬಾಲ್‌ಗೆ ಅಜೇಯ 56 ರನ್‌ಗಳಿಸಿ ಮುಂಬೈ ಬೌಲರ್ಸ್‌ಗೆ ಬೆವರಿಳಿಸಿದರು. ಸ್ಪೋಟಕ ಬ್ಯಾಟಿಂಗ್ ಮಾಡಿದ ಪ್ಯಾಟ್ ಕುಮಿನ್ಸ್‌ಗೆ ಜೊತೆಯಾದ ವೆಂಕಟೇಶ್ ಐಯ್ಯರ್ ಅಜೇಯ 50 ರನ್ ಗಳಿಸಿದರು.
ಒಂದು ಹಂತದಲ್ಲಿ ಕೆಕೆಆರ್ ತಂಡಕ್ಕೆ ಮ್ಯಾಚ್ ಗೆಲ್ಲುವುದು ಕಷ್ಟವಾಗಿ ಕಂಡಿತ್ತು. ಆದರೆ, ಪ್ಯಾಟ್ ಕುಮಿನ್ಸ್ ನೀಡಿದ ಹೊಸ ತಿರುವು 16 ಓವರ್‌ಗಳಲ್ಲಿ 162 ರನ್ ಬಾರಿಸಿ ಜಯ ಸಾಧಿಸುವಲ್ಲಿ ನೆರವಾಯಿತು.
ಹೆಚ್ಚಿನ ಓದು: ಉಮೇಶ್-ರಸೆಲ್ ಆರ್ಭಟಕ್ಕೆ ಕೆಕೆಆರ್‌ಗೆ ರೋಚಕ ಗೆಲುವು
ಕೇವಲ 14 ಬಾಲ್‌ಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಪ್ಯಾಟ್ ಕುಮಿನ್ಸ್ ಹೊಸ ದಾಖಲೆ ಬರೆದು ಅತೀ ಕಡಿಮೆ ಬಾಲ್‌ಗಳಲ್ಲಿ ಅರ್ಧಶತಕ ಬಾರಿಸಿದ ಗುಂಪಿಗೆ ಸೇರಿದರು. ಈ ಹಿಂದೆ ಕೆ.ಎಲ್.ರಾಹುಲ್ 14 ಬಾಲ್‌ಗಳಲ್ಲಿ ಅರ್ಧಶತಕ ಬಾರಿಸಿದ್ದರು.
ಮುಂಬೈ ವಿರುದ್ಧ 2 ವಿಕೆಟ್ ಕಬಳಿಸಿದ ಹಾಗೂ ರೋಚಕ ಬ್ಯಾಟಿಂಗ್ ಪ್ರದರ್ಶಿಸಿದ ಪ್ಯಾಟ್ ಕುಮಿನ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.