IPL 2022: ಗುಜರಾತ್ ತಂಡಕ್ಕೆ ಅದು ಅವಿಸ್ಮರಣಿಯ ಘಳಿಗೆ! ಒಂದು ಹೊಸ ತಂಡ, ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ತಂಡ ಟ್ರೋಫಿ ಹಿಡಿದ ದಿನ. ಆ ಕ್ಷಣ ಗುಜರಾತ್ ತಂಡದವರಿಗೆ ಆನಂದ ಹಾಗೂ ಸಮಾಧಾನದ ಹೊರತು ಬೇರೇನೂ ನೀಡಿಲ್ಲ. ಸುಮಾರು 70 ಪಂದ್ಯಗಳ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಈ ಟ್ರೋಫಿ ಹಾಗೂ ಚಾಂಪಿಯನ್ ಪಟ್ಟ.
ಹಾರ್ದಿಕ್ ಪಾಂಡ್ಯ ಅವರಿಗೆ ಇದು ಮಹತ್ವವಾದ ಸರಣಿ. ಹಾರ್ದಿಕ್ ಕ್ಯಾಪ್ಟನ್ ಆದ ಮೊದಲ ಸರಣಿಯಲ್ಲೇ ಚಾಂಪಿಯನ್ ಆಗಿರುವುದು ಅವರಿಗೆ ನಿಜಕ್ಕೂ ಸಂಭ್ರಮದ ವಿಚಾರ. ಗುಜರಾತ್ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಈ ಬಾರಿ ಒತ್ತಡದಲ್ಲಿ ಆಟವನ್ನಾಡಿದ್ದರು. ತಂಡದ ನೇತೃತ್ವ ವಹಿಸಿ, ಆಲ್ ರೌಂಟರ್ ಆಗಿ ತಂಡದ ಉತ್ತಮ ಆಟಗಾರರಾಗಿ ಅತ್ಯಂತ ಜವಾಬ್ದಾರಿಯುತವಾಗಿ ತಮ್ಮ ಸ್ಕಿಲ್ ಪ್ರದರ್ಶನ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರ ಈ ಸಂಭ್ರಮದ ಸಮಯದಲ್ಲಿ ಪತ್ನಿ ನತಾಶ ಕೂಡ ಭಾಗಿಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಚಾಂಪಿಯನ್ ಆಗಿರುವುದನ್ನು ಕಂಡು ನತಾಶ ಭಾವುಕರಾಗಿದ್ದಾರೆ. ನತಾಶ ತಮ್ಮ ಭಾವವನ್ನು ಕಣ್ಣೀರಿನ ಮೂಲಕ ಹೊರ ಹಾಕುತ್ತ ಹಾರ್ದಿಕ್ ಪಾಂಡ್ಯ ಅವರನ್ನು ಆಲಿಂಗಿಸಿದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಈ ಭಾವನಾತ್ಮಕ ದೃಶ್ಯ ಇಲ್ಲಿದೆ:
ಇದನ್ನೂ ಓದಿ: IPL 2022| ಹಾರ್ದಿಕ್ ಕಮಾಲ್, ನಾಯಕನಾದ ಮೊದಲ ಟೂರ್ನಿಯಲ್ಲೆ ಟ್ರೋಫಿ ಗೆದ್ದ ಪಾಂಡ್ಯ