IPL 2022 Final match : 70 ಪಂದ್ಯಗಳ ಸುದೀರ್ಘ ಸರಣಿ ಇಂದು ಮಂಗಳ ಹಾಡಲು ಸಿದ್ಧವಾಗಿದೆ. ಐಪಿಎಲ್‌ನ 15ನೇ ಆವೃತ್ತಿಯ ಅಂತಿಮ ಪಂದ್ಯ. ಯಾರು ಚಾಂಪಿಯನ್ ಆಗಲಿದ್ದಾರೆ ಎಂದು ನಿರ್ಣಯವಾಗುವ ದಿನ. ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಐಪಿಎಲ್ 2022ರ ಫೈನಲ್ ಮ್ಯಾಚ್.
ಈ ಬಾರಿ ಯಾರು ಕಪ್ ಗೆಲ್ಲುತ್ತಾರೆ ಎಂಬ ಕುತೂಹಲದಲ್ಲಿ ಇಡೀ ದೇಶದ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಲಕ್ಷಾಂತರ ಜನರು ಇಂದಿನ ಮ್ಯಾಚ್ ನೋಡಲು ಕ್ರೀಡಾಂಗಣಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಇಂದಿನ ಪಂದ್ಯವನ್ನು ಆಕರ್ಷಮಯವಾಗಿಸಲು ಹಾಗೂ ಸ್ಮರಣೀಯ ಪಂದ್ಯವನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎ.ಆರ್. ರೆಹಮಾನ್ ಅವರಿಂದ ಸಂಗೀತ ಕಾರ್ಯಕ್ರಮ ಎಲ್ಲರ ಗಮನಸೆಳೆದಿದೆ.
ಈ ಮ್ಯಾಚ್‌ನಲ್ಲಿ ರಾಜಸ್ಥಾನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ.
ಪಿಚ್ ರಿಪೋರ್ಟ್ ಹೇಗಿದೆ:?
ರಾಜಸ್ಥಾನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನಿರ್ಧಾರ ಎಷ್ಟು ಸರಿ? ಪಿಚ್ ರಿಪೋರ್ಟ್ ಏನು ಹೇಳುತ್ತದೆ?
ಇಂದಿನ ಐಪಿಎಲ್ ಫೈನಲ್ ಪಂದ್ಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇಂದು ಆಕಾಶ ಕ್ಲಿಯರ್ ಇರಲಿದೆ ಹಾಗೂ ತಾಪಮಾನ 30 ರಿಂದ 35 ಡಿಗ್ರಿ ಇರಲಿದೆ ಎಂದು ವರದಿಯಾಗಿದೆ. ಇಂದಿನ ಪಂದ್ಯಕ್ಕೆ ಮಳಹನಿಯಾಗಲಿ, ಇಬ್ಬನಿಯಾಗಲಿ ಅಡಚಣೆ ಉಂಟುಮಾಡವುದಿಲ್ಲ.
ಈ ಪಿಚ್ ಬ್ಯಾಟಿಂಗ್ ಮಾಡಲು ಸ್ವಲ್ಪ ಕಷ್ಟವಾಗಲಿದೆ. ಬಾಲ್‌ಗಳು ಬೌನ್ಸ್ ಆಗುವ ಸಾಧ್ಯತೆ ಹೆಚ್ಚಿದೆ. ಸ್ಪಿನ್ ಬೌಲರ್ಸ್‌ಗೆ ಕೂಡ ಈ ಪಿಚ್ ಪೂರಕವಾಗಲಿದೆ. ಈ ಕ್ರೀಡಾಂಗಣದಲ್ಲಿ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದವರು ಸರಾಸರಿ 174 ಸ್ಕೋರ್ ಮಾಡಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದವರು ಸರಾಸರಿ 166 ರನ್ ಮಾಡಿದ್ದಾರೆ. ಈ ಅಂಕಿಅಂಶಗಳನ್ನು ಗಮನಿಸಿದಾಗ ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದು ಸೂಕ್ತ ಎಂದು ಹೇಳಲಾಗಿದೆ.
ಇಂದಿನ ತಂಡದ ಪಟ್ಟಿ:
ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ(ಕ್ಯಾಪ್ಟನ್), ವೃದ್ಧಿಮಾನ್ ಸಾಹ(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಮ್ಯಾಥಿವ್ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತಿವೆಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಲೋಕಿ ಫೆರ್ಗುಸನ್, ಮೊಹಮ್ಮದ್ ಶಮ್ಮಿ, ಯಶ್ ದಯಾಲ್
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್(ಕ್ಯಾಪ್ಟನ್&ವಿಕೆಟ್ ಕೀಪರ್), ಜಾಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವ್‌ದತ್ತ್ ಪಡಿಕ್ಕಲ, ಶಿಮ್ರನ್ ಹೆಟ್‌ಮೇಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಒಬೆಡ್ ಮೆಕ್ಕೊಯ್, ಟ್ರೆಂಟ್ ಬೌಲ್ಟ್, ಯುಝುವೇಂದ್ರ ಚಾಹಲ್, ಪ್ರಸಿಧ್ ಕೃಷ್ಣ.
ಇದನ್ನೂ ಓದಿ: IPL 2022 | RR vs GT ಯಾರ ಮುಡಿಗೆ ಈ ಬಾರಿಯ ಚಾಂಪಿಯನ್ ಕಿರೀಟ?