Site icon Vistara News

IPL 2022: ಬೆಂಗಳೂರು ಭವಿಷ್ಯ ನಿರ್ಧಾರ ಇಂದು: ನೀಲಿ ಬಣ್ಣಕ್ಕೆ ತಿರುಗಿದ RCB

Rcb

ಬೆಂಗಳೂರು: ಇಂಡಿಯನ್‌ ಪ್ರಿಮಿಯರ್‌ ಲೀಗ್‌ 15ನೇ ಸೀಸನ್‌ ಅಂತಿಮ ಲೀಗ್‌ ಪಂದ್ಯ ಶನಿವಾರ ನಡೆಯುತ್ತಿದೆ. ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಮುಂಬೈ ವಾಂಕೆಡೆ ಮೈದಾನದಲ್ಲಿ ಅಕಾಡಕ್ಕೆ ಇಳಿಯುತ್ತಿದೆ. ಇಲ್ಲಿ ವಿಶೇಷತೆ ಏನು ಎಂದರೆ ಪಂದ್ಯದ ಫಲಿತಾಂಶವು ಡೆಲ್ಲಿ ಕ್ಯಾಪಿಟಲ್ಸ್‌ ಅಷ್ಟೇ ಮುಖ್ಯವಾದದದಲ್ಲ. ಮುಂಬೈ ಗೆದ್ದರೆ ಆರ್‌ಸಿಬಿಗೂ ಅಷ್ಟೇ ಮುಖ್ಯ. ಹೌದು ಒಂದು ವೇಳೆ ಮುಂಬೈ ಇಂಡಿಯನ್ಸ್‌ ಗೆದ್ದರೆ ಆರ್‌ಸಿಬಿ ಪ್ಲೇ ಆಪ್‌ ಹಂತಕ್ಕೇರಲಿದೆ. ಹೀಗಾಗಿ ಮುಂಬೈ ಗೆಲ್ಲಬೇಕೆಂದು ಪ್ರಾರ್ಥಿಸುತ್ತಿರುವ ಆರ್‌ಸಿಬಿ, ತನ್ನ ತಂಡದ ಕೆಂಪು ಬಣ್ಣವನ್ನೇ ಬದಲಿಸಿ ನೀಲಿಗೆ ತಿರುಗಿದೆ.

ಇದನ್ನೂ ಓದಿ | IPL 2022 | ಮುಂಬೈ ಗೆಲುವಿಗೆ ಪ್ರಾರ್ಥಿಸಬೇಕು ಆರ್‌ಸಿಬಿ!

ಇದೀಗ ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಮುಂಬೈ ತಂಡಕ್ಕೆ ಶುಭ ಕೋರುತ್ತಿದೆ. #RedTurnsBlue ಹ್ಯಾಷ್‌ ಟ್ಯಾಗ್‌ ಬಳಸಿ ಟ್ರೆಂಡ್‌ ಮಾಡುತ್ತಿದೆ. ಇದಕ್ಕೆ ಆರ್‌ಸಿಬಿ ತನ್ನ ಲೋಗೊವನ್ನು ಕೆಂಪು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುಗಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸಪೋರ್ಟ್‌ ಮಾಡುತ್ತಿದೆ.

ಆರ್‌ಸಿಬಿ ಫ್ಯಾನ್ಸ್‌ ಹೇಗಾದರೂ ಮುಂಬೈ ಇಂಡಿಯನ್ಸ್‌ ವಿನ್‌ ಆಗ್ಲಿ ಎಂದು ದೇವರ ಮೊರೆ ಹೋಗಿದ್ದಾರೆ. ಮುಂಬೈ ಇಂಡಿಯನ್ಸ್‌ ಗೆದ್ದು ಬನ್ನಿ ಎಂದು ಆರ್‌ಸಿಬಿ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.

ಈಗಾಗಲೆ ಮುಂಬೈ ಇಂಡಿಯನ್ಸ್‌ ತಂಡ ಐಪಿಎಲ್‌ ಪ್ಲೇ ಆಫ್‌ ಸ್ಪರ್ಧೆಯಿಂದ ಹೊರಗೆ ನಡೆದಿದೆ. ತಾವಂತೂ ಹೊರಗೆ ಹೋಗುತ್ತಿರುವ ತಂಡವು ಆರ್‌ಸಿಬಿಗೆ ಒಂದು ಸಹಾಯ ಮಾಡಲಿ ಎಂದು ಆರ್‌ಸಿಬಿ ಫ್ಯಾನ್ಸ್‌ ಕೋರುತ್ತಿದ್ದಾರೆ. 14 ಪಂದ್ಯಗಳನ್ನು ಆಡಿರುವ ಆರ್‌ಸಿಬಿ 8 ಪಂದ್ಯಗಳ ಗೆಲುವು ಮತ್ತು 6 ಪಂದ್ಯಗಳ ಸೋಲಿನೊಂದಿಗೆ 16 ಪಾಯಿಂಟ್ಸ್‌ ಬಂದಿದೆ. ಆದರೆ ನೆಟ್‌ ರೇಟ್‌ನಲ್ಲಿ ಹಿಂದಿರುವ ಫಾಫ್‌ ಪಡೆ -0.253 ಪಾಯಿಂಟ್ಸ್‌ ಹೊಂದಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ 14 ಪಾಯಿಂಟ್ಸ್‌ ಜೊತೆಗೆ ನೆಟ್‌ ರನ್‌ರೇಟ್‌ +0.255 ಇರುವುದರಿಂದ ಮುಂಬೈ ಗೆದ್ದರೆ ಆರ್‌ಸಿಬಿ ಪ್ಲೇ ಆಪ್‌ನಿಂದ ಹೊರಬೀಳಲಿದೆ.

ಇದನ್ನೂ ಓದಿ | IPL 2022 | ಇಂದು CSK V/S MI: ಪ್ಲೇ ಆಫ್ ತಲುಪಲು ಚೆನ್ನೈಗೆ ಕೊನೆಯ ಅವಕಾಶ

Exit mobile version