ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್(Rishabh Pant) ಈ ಬಾರಿಯ ಐಪಿಎಲ್ನಿಂದ ಹೊರಗುಳಿಯಲಿದ್ದಾರೆ. ಇದೀಗ ಅವರ ಬದಲು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ(Delhi Capitals) ನೂತನ ಆಟಗಾರನನ್ನು ಫ್ರಾಂಚೈಸಿ ಆಯ್ಕೆ ಮಾಡಿದೆ. 20 ವರ್ಷದ ಬಂಗಾಳದ ಯುವ ಕ್ರಿಕೆಟಿಗ ಅಭಿಷೇಕ್ ಪೊರೆಲ್(Abishek Porel) ಅವರು ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಕಳೆದ ವರ್ಷ ಬಂಗಾಳ ತಂಡಕ್ಕೆ ಪದಾರ್ಪಣೆ ಮಾಡಿದ ಅಭಿಷೇಕ್ ಪೊರೆಲ್ ಇದೀಗ ಚೊಚ್ಚಲ ಐಪಿಎಲ್ ಆಡಲು ಸಜ್ಜಾಗಿದ್ದಾರೆ. ಡೆಲ್ಲಿ ತಂಡದಲ್ಲಿ ಸರ್ಫರಾಜ್ ಖಾನ್ ವಿಕೆಟ್ ಕೀಪರ್ ಆಗಿದ್ದರೂ, ಅವರಿಗೆ ಫಿಟ್‌ನೆಸ್ ಸಮಸ್ಯೆಯಿದೆ. ಹೀಗಾಗಿ ಪಂತ್‌ಗೆ ಬದಲಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ನ ಹುಡುಕಾಟದಲ್ಲಿತ್ತು. ಇದೀಗ ಅಭಿಷೇಕ್ ಪೊರೆಲ್ ಅವರು ಆಯ್ಕೆಯಾಗಿದ್ದಾರೆ. ಇವರು ಕೂಡ ಪಂತ್ ಅವರಂತೆ ಎಡಗೈ ಬ್ಯಾಟರ್ ಆಗಿದ್ದಾರೆ.
ಇದನ್ನೂ ಓದಿ IPL 2023: ಐಪಿಎಲ್ನಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್ ಕೊಹ್ಲಿ
ಅಭಿಷೇಕ್ ಪೊರೆಲ್ ಕ್ರಿಕೆಟ್ ಸಾಧನೆ
20 ವರ್ಷದ ಬಂಗಾಳ ಆಟಗಾರ ಅಭಿಷೇಕ್ ಪೊರೆಲ್ ಕಳೆದ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದುವರೆಗೂ 16 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು, 26 ಇನಿಂಗ್ಸ್ಗಳಲ್ಲಿ 30.21 ಸರಾಸರಿಯಲ್ಲಿ 695 ರನ್ ಗಳಿಸಿದ್ದಾರೆ. ಇದುವರೆಗೂ 6 ಶತಕಗಳನ್ನು ಗಳಿಸಿ ಮಿಂಚಿದ್ದಾರೆ. ಮೂರು ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಈವರೆಗೆ ಮೂರು ಟಿ20 ಪಂದ್ಯಗಳನ್ನಾಡಿ 22 ರನ್ ಗಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ರಿಪ್ಪಲ್ ಪಟೇಲ್, ರೋವ್ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್ (ಉಪನಾಯಕ), ಅನ್ರಿಚ್ ನೋರ್ಜೆ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ವಿಕ್ಕಿ ಒಸ್ತ್ವಾಲ್, ಇಶಾಂತ್ ಶರ್ಮಾ, ಫಿಲ್ ಸಾಲ್ಟ್, ಮುಖೇಶ್ ಕುಮಾರ್, ಮನೀಷ್ ಪಾಂಡೆ, ರಿಲೀ ರೊಸೊ, ಅಭಿಷೇಕ್ ಪೊರೆಲ್.