ನವದೆಹಲಿ: ಪ್ಲೇ ಆಫ್ ದೃಷ್ಟಿಯಿಂದ ಗೆಲ್ಲಲೇ ಬೇಕಾದ ಇರಾದೆಯಲ್ಲಿ ಆಡಲಿಳಿದ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್(79) ಮತ್ತು ಡೆವೋನ್ ಕಾನ್ವೆ(87) ಅವರ ಸೊಗಸಾದ ಅರ್ಧಶತಕದ ನೆರವಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಬೃಹತ್ ಮೊತ್ತ ದಾಖಲಿಸಿದೆ.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಬೌಲರ್ಗಳ ಮೇಲೆ ಸವಾರಿ ಮಾಡಿ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 223 ರನ್ ಗಳಿಸಿದೆ. ಡೆಲ್ಲಿ ತಂಡ ಗೆಲುವಿಗೆ 224 ರನ್ ಬಾರಿಸಬೇಕಿದೆ.
ಗಾಯಕ್ವಾಡ್-ಕಾನ್ವೆ ಶತಕದ ಜತೆಯಾಟ
ಇನಿಂಗ್ಸ್ ಆರಂಭಿಸಿದ ಡೆವೋನ್ ಕಾನ್ವೆ ಮತ್ತು ಋತುರಾಜ್ ಗಾಯಕ್ವಾಡ್ ಸೇರಿಕೊಂಡು ಉತ್ತಮ ಆರಂಭ ಒದಗಿಸಿದರು. 12 ಓವರ್ ಆಗುವಷ್ಟರಲ್ಲಿ ಅಜೇಯ ಶತಕದ ಜತೆಯಾಟವನ್ನು ತೋರ್ಪಡಿಸಿದರು. ಈ ಮೂಲಕ ನಾಯಕನ ಬ್ಯಾಟಿಂಗ್ ಆಯ್ಕೆಯನ್ನು ಸಮರ್ಥಿಸಿಕೊಂಡರು. ಅದರಲ್ಲೂ ಗಾಯಕ್ವಾಡ್ ಅವರು ಸೈಲೆಂಟ್ ಕಿಲ್ಲರ್ ರೀತಿ ಸಿಕ್ಸರ್ ಬಾರಿಸುತ್ತಲೇ ಸಾಗುತ್ತಿದ್ದರೂ. ಕುಲ್ದೀಪ್ ಯಾದವ್ ಅವರ ಮೂರನೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು.
ಗಾಯಕ್ವಾಡ್ ಅವರು ಅರ್ಧಶತಕ ಪೂರೈಸಿದ ವೇಳೆ ಚೆನ್ನೈ ತಂಡದ ಪರ ನೂತನ ದಾಖಲೆಯೊಂದನ್ನು ಬರೆದರು. ಚೆನ್ನೈ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದು ಅತಿ ಹೆಚ್ಚು ಬಾರಿ 50 ಪ್ಲಸ್ ಮೊತ್ತ ದಾಖಲಿಸಿದ ದ್ವಿತೀಯ ಆಟಗಾರ ಎನಿಸಿಕೊಂಡರು. ಡು ಪ್ಲೆಸಿಸ್ 16 ಬಾರಿ ಈ ಸಾಧನೆ ಮಾಡಿ ಅಗ್ರ ಸ್ಥಾನದಲ್ಲಿದ್ದಾರೆ. ಗಾಯಕ್ವಾಡ್ 14 ಬಾರಿ ಚೆನ್ನೈ ಪರ 50 ಪ್ಲಸ್ ಮೊತ್ತ ಪೇರಿಸಿದರು.
ಇದನ್ನೂ ಓದಿ IPL 2023: ಶೀಘ್ರದಲ್ಲೇ ರಿಂಕು ಸಿಂಗ್ ಟೀಮ್ ಇಂಡಿಯಾ ಸೇರಲಿದ್ದಾರೆ; ಹರ್ಭಜನ್ ವಿಶ್ವಾಸ
ಮತ್ತೊಂದು ತುದಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಕಾನ್ವೆ ಕೂಡ ಗಾಯಕ್ವಾಡ್ ಬೆನ್ನಿಗೆ ಅರ್ಧಶತಕ ಬಾರಿಸಿದರು. ಖಲೀಲ್ ಅಹ್ಮದ್ ಅವರ ಓವರ್ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರ್ತಿಗೊಳಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಚೇತನ್ ಸಕಾರಿಯಾ ಅವರು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಗಾಯಕ್ವಾಡ್ ಅವರ ವಿಕೆಟ್ ಕಿತ್ತು ಡೆಲ್ಲಿಗೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಗಾಯಕ್ವಾಡ್ 79 ರನ್ ಗಳಿಸಿದರು. ಈ ಇನಿಂಗ್ಸ್ನಲ್ಲಿ 7 ಸಿಕ್ಸರ್ ಮತ್ತು 3 ಬೌಂಡರಿ ಸಿಡಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 141 ರನ್ ರಾಶಿ ಹಾಕಿತು.
ಗಾಯಕ್ವಾಡ್ ವಿಕೆಟ್ ಪತನದ ಬಳಿಕ ಆಡಲಿಳಿದ ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಬೃಹತ್ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದರು. ಕೇವಲ 9 ಎಸೆತಗಳಲ್ಲಿ ಮೂರು ಸಿಕ್ಸರ್ ನೆರವಿನಿಂದ 22 ರನ್ ಬಾರಿಸಿದರು. ಈ ವಿಕೆಟ್ ಪತನದ ಬೆನ್ನಲೇ ಡೆವೋನ್ ಕಾನ್ವೆ ಕೂಡ ವಿಕೆಟ್ ಕೈಚೆಲ್ಲಿದರು. ಕಾನ್ವೆ 18 ಓವರ್ ತನ ಕ ಬ್ಯಾಟಿಂಗ್ ನಡೆಸಿ 87 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಯಿತು. ಅಂತಿಮ ಹಂತದಲ್ಲಿ ಜಡೇಜಾ ಅವರು ಅಜೇಯ 20 ರನ್ಗಳ ಕೊಡುಗೆ ನೀಡಿದರು.