ಮುಂಬಯಿ: ಬಹುನಿರೀಕ್ಷಿತ ಐಪಿಎಲ್(IPL 2023) ಆರಂಭಕ್ಕೆ ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಟೂರ್ನಿಯ ಸಂಘಟಕರು ಕೋವಿಡ್ ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್-19(COVID-19) ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ, ವಿಭಿನ್ನ ತಳಿಯ ರೂಪಾಂತರ ವೈರಸ್ಗಳ ಕೇಸ್ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಈ ಮಾರ್ಗಸೂಚಿಯ ಪ್ರಕಾರ ಐಪಿಎಲ್ ಆಡುವ ವೇಳೆ ಯಾವುದೇ ಆಟಗಾರನಿಗೆ ಅಥವಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದರೆ ಕೂಡಲೇ ಅವರು ತಂಡವನ್ನು ತೊರೆಯಬೇಕು. ಜತೆಗೆ ಒಂದು ವಾರಗಳ ಕಾಲ ಕ್ವಾರಂಟೈನ್ವಾಸದಲ್ಲಿರಬೇಕು. ಎಂದು ಐಪಿಎಲ್ ಆಡಳಿತ ಮಂಡಳಿ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. ಜತೆಗೆ ಈ ನಿಯಮಗಳನ್ನು ಎಲ್ಲ ಫ್ರಾಂಚೈಸಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ.
ಇದನ್ನೂ ಓದಿ IND VS AUS: ಸ್ಟಾರ್ಕ್ ಸ್ಟನ್ನಿಂಗ್ ಪ್ರದರ್ಶನ; 117 ರನ್ಗೆ ಕುಸಿದ ಭಾರತ
ಕೋವಿಡ್ ಪಾಸಿಟಿವ್ ಆದ ಆಟಗಾರನ ಟೆಸ್ಟ್ ರಿಪೋರ್ಟ್ ಐದನೇ ದಿನ ನೆಗೆಟಿವ್ ಬಂದರೆ, ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 24 ಗಂಟೆಯೊಳಗೆ ನಡೆಯಲಿರುವ ಎರಡನೇ ಟೆಸ್ಟ್ನ ವರದಿಯು ನೆಗೆಟಿವ್ ಬಂದರೆ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕಳೆದ ವರ್ಷದ ಸೀಸನ್ ವಿವಿಧ ನಗರಗಳಲ್ಲಿ ಆಯೋಜಿಸಲಾಗಿತ್ತು. ಈ ವರ್ಷ ತಂಡಗಳ ಹೋಮ್ ಗ್ರೌಂಡ್ನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಿದೆ. ಹೀಗಾಗಿ ಕ್ರಿಕೆಟ್ ಪ್ರೇಮಿಗಳು ಕೂಡ ತಮ್ಮ ತಂಡಗಳಿಗೆ ತವರಿನಲ್ಲಿ ಬೆಂಬಲ ವ್ಯಕ್ತಪಡಿಸಲು ಈಗಾಗಲೇ ಹಗಲು ರಾತ್ರಿ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುತ್ತಿದ್ದಾರೆ.