ಗುವಾಹಟಿ: ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುವಾಹಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಒಂದೆಡೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಮಿಚೆಲ್ ಮಾರ್ಷ್ ಡೆಲ್ಲಿ ಕ್ಯಾಂಪ್ ತೊರೆದು ತಮ್ಮ ತವರಿಗೆ ಮರಳಿದ್ದಾರೆ. ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ಪ್ರಮುಖ ಆಟಗಾರ ಜಾಸ್ ಬಟ್ಲರ್ ಅವರ ಅಲಭ್ಯದಿಂದ ಚಿಂತೆಯಲ್ಲಿದ್ದೆ. ಒಟ್ಟಾರೆ ಉಭಯ ತಂಡಗಳು ಸಮಸ್ಯೆಗಳ ಮಧ್ಯೆಯೇ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಡೆಲ್ಲಿ ತಂಡದಲ್ಲಿ ನಾಯಕ ವಾರ್ನರ್ ಅವರನ್ನು ಹೊರತುಪಡಿಸಿ ಉಳಿದ ಯಾವ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಪೃಥ್ವಿ ಶಾ, ಸರ್ಫರಾಜ್ ಖಾನ್, ರಿಲೀ ರೂಸೊ ರನ್ ಬರಗಾಲ ಎದುರಿಸುತ್ತಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವ ಕಪ್ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನಸೆಳೆದಿದ್ದ ರಿಲೀ ರೂಸೊ ಐಪಿಎಲ್ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿಯೂ ಕಳಪೆ ಮಟ್ಟದ ಬ್ಯಾಟಿಂಗ್ ನಡೆಸಿದ್ದಾರೆ. ಹೀಗಾಗಿ ಅವರು ಈ ಪಂದ್ಯದಲ್ಲಿ ಸಿಡಿಯಲೇ ಬೇಕಾದ ಅಗತ್ಯವಿದೆ. ಮಿಚೆಲ್ ಮಾರ್ಷ್ ಬದಲು ರೋಮನ್ ಪೊವೆಲ್ ಆಡಬಹುದು.
ಇದನ್ನೂ ಓದಿ IPL Records: ಅತಿ ಹೆಚ್ಚು ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ಗಳ ಅಂತರದಲ್ಲಿ ಸೋತ ತಂಡಗಳು ಇವು
ರಾಜಸ್ಥಾನ್ ರಾಯಲ್ಸ್ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ. ಪಡಿಕ್ಕಲ್ ಹೊರತುಪಡಿಸಿ ಉಳಿದ ಆಟಗಾರರಾದ ಜೈಸ್ವಾಲ್, ಸ್ಯಾಮ್ಸನ್, ಪರಾಗ್, ಹೆಟ್‌ಮೈರ್, ಹೋಲ್ಡರ್, ಜುರೆಲ್ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ.
ಸಂಭಾವ್ಯ ತಂಡ
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್/ ಜೋ ರೂಟ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ತ ಪಡಿಕ್ಕಲ್, ಶಿಮ್ರೊನ್ ಹಟ್ಮೇರ್, ರಿಯಾನ್ ಪರಾಗ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆಸಿಫ್, ಯಜುವೇಂದ್ರ ಚಹಲ್
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್(ನಾಯಕ), ಪೃಥ್ವಿ ಶಾ, ರಫಮನ್ ಪೋವೆಲ್, ರಿಲೇ ರೂಸೊ, ಸರ್ಫರಾಜ್ ಖಾನ್, ಅಕ್ಷರ್ ಪಟೇಲ್, ಅಭಿಷೇಕ್ ಪೋರೆಲ್, ಕುಲ್ದೀಪ್, ಅನ್ರಿಚ್ ನೋರ್ಜೆ, ಖಲೀಲ್ ಅಹ್ಮದ್, ಮುಕೇಶ್ ಕುಮಾರ್