IPL 2023: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ - Vistara News

ಕ್ರಿಕೆಟ್

IPL 2023: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​

16ನೇ ಆವೃತ್ತಿಯ ಐಪಿಎಲ್​ನಲ್ಲಿ ಎರಡೂ ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಗುವಾಹಟಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಎದುರಿಸಲು ಸಜ್ಜಾಗಿದೆ.

VISTARANEWS.COM


on

IPL 2023: Delhi Capitals eyeing first win
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗುವಾಹಟಿ: ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಗುವಾಹಟಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಎದುರಿಸಲು ಸಜ್ಜಾಗಿದೆ. ಒಂದೆಡೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಮಿಚೆಲ್​ ಮಾರ್ಷ್​ ಡೆಲ್ಲಿ ಕ್ಯಾಂಪ್​ ತೊರೆದು ತಮ್ಮ ತವರಿಗೆ ಮರಳಿದ್ದಾರೆ. ಇನ್ನೊಂದೆಡೆ ರಾಜಸ್ಥಾನ್​ ರಾಯಲ್ಸ್​ ಪ್ರಮುಖ ಆಟಗಾರ ಜಾಸ್​ ಬಟ್ಲರ್​ ಅವರ ಅಲಭ್ಯದಿಂದ ಚಿಂತೆಯಲ್ಲಿದ್ದೆ. ಒಟ್ಟಾರೆ ಉಭಯ ತಂಡಗಳು ಸಮಸ್ಯೆಗಳ ಮಧ್ಯೆಯೇ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಡೆಲ್ಲಿ ತಂಡದಲ್ಲಿ ನಾಯಕ ವಾರ್ನರ್​ ಅವರನ್ನು ಹೊರತುಪಡಿಸಿ ಉಳಿದ ಯಾವ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಪೃಥ್ವಿ ಶಾ, ಸರ್ಫರಾಜ್​ ಖಾನ್‌, ರಿಲೀ ರೂಸೊ ರನ್‌ ಬರಗಾಲ ಎದುರಿಸುತ್ತಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವ ಕಪ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ ನಡೆಸಿ ಗಮನಸೆಳೆದಿದ್ದ ರಿಲೀ ರೂಸೊ ಐಪಿಎಲ್​ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿಯೂ ಕಳಪೆ ಮಟ್ಟದ ಬ್ಯಾಟಿಂಗ್​ ನಡೆಸಿದ್ದಾರೆ. ಹೀಗಾಗಿ ಅವರು ಈ ಪಂದ್ಯದಲ್ಲಿ ಸಿಡಿಯಲೇ ಬೇಕಾದ ಅಗತ್ಯವಿದೆ. ಮಿಚೆಲ್‌ ಮಾರ್ಷ್‌ ಬದಲು ರೋಮನ್​ ಪೊವೆಲ್‌ ಆಡಬಹುದು.

ಇದನ್ನೂ ಓದಿ IPL Records: ಅತಿ ಹೆಚ್ಚು ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್​ಗಳ ಅಂತರದಲ್ಲಿ ಸೋತ ತಂಡಗಳು ಇವು

ರಾಜಸ್ಥಾನ್‌ ರಾಯಲ್ಸ್‌ ಅತ್ಯಂತ ಬಲಿಷ್ಠವಾಗಿ ಗೋಚರಿಸಿದೆ. ಪಡಿಕ್ಕಲ್‌ ಹೊರತುಪಡಿಸಿ ಉಳಿದ ಆಟಗಾರರಾದ ಜೈಸ್ವಾಲ್‌, ಸ್ಯಾಮ್ಸನ್‌, ಪರಾಗ್‌, ಹೆಟ್‌ಮೈರ್‌, ಹೋಲ್ಡರ್‌, ಜುರೆಲ್ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ.

ಸಂಭಾವ್ಯ ತಂಡ

ರಾಜ​ಸ್ಥಾ​ನ ರಾಯಲ್ಸ್‌: ಯಶಸ್ವಿ ಜೈಸ್ವಾಲ್‌, ಜಾಸ್​ ಬಟ್ಲರ್‌/ ಜೋ ರೂಟ್‌, ಸಂಜು ಸ್ಯಾಮ್ಸನ್‌ ​(​ನಾ​ಯ​ಕ), ದೇವ​ದತ್ತ ಪಡಿಕ್ಕಲ್, ಶಿಮ್ರೊನ್ ಹಟ್​ಮೇರ್​, ರಿಯಾನ್‌ ಪರಾಗ್, ಜೇಸನ್ ಹೋಲ್ಡರ್‌, ರವಿಚಂದ್ರನ್‌ ಅಶ್ವಿನ್‌, ಟ್ರೆಂಟ್‌ ಬೌಲ್ಟ್‌, ಆಸಿ​ಫ್‌, ಯಜುವೇಂದ್ರ ಚಹ​ಲ್‌

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್‌(ನಾಯಕ), ಪೃಥ್ವಿ ಶಾ, ರಫಮನ್​ ಪೋವೆಲ್​, ರಿಲೇ ರೂಸೊ, ಸರ್ಫರಾಜ್‌ ಖಾನ್, ಅಕ್ಷರ್‌ ಪಟೇಲ್, ಅಭಿ​ಷೇಕ್‌ ಪೋರೆಲ್​, ಕುಲ್ದೀಪ್‌, ಅನ್ರಿಚ್​ ನೋರ್ಜೆ, ಖಲೀಲ್‌ ಅಹ್ಮದ್​, ಮುಕೇ​ಶ್‌ ಕುಮಾರ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಇಂದು ಐಪಿಎಲ್​ನಲ್ಲಿ ಡಬಲ್​ ಹೆಡರ್​ ಪಂದ್ಯ; ಮೊದಲ ಪಂದ್ಯ ಯಾವುದು?

IPL 2024: ಪಂಜಾಬ್​-ಚೆನ್ನೈ(PBKS vs CSK) ಮೊದಲ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೆಣಸಾಟಕ್ಕೆ ಇಳಿಯಲಿವೆ. ಇದು ಈ ಆವೃತ್ತಿಯಲ್ಲಿ ಇಲ್ಲಿ ನಡೆಯುವ ಮೊದಲ ಐಪಿಎಲ್(IPL 2024)​ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲೇ 7 ವಿಕೆಟ್​ ಸೋಲಿಗೆ ಪಂಜಾಬ್​ಗೆ ಅವರ ತವರಿನ ಅಂಗಳದಲ್ಲಿ ಸೇಡು ತೀರಿಸಿಕೊಳ್ಳುವುದು ಹಾಲಿ ಚಾಂಪಿಯನ್‌ ಗುರಿಯಾಗಿದೆ.

VISTARANEWS.COM


on

IPL 2024
Koo

ಬೆಂಗಳೂರು: ಭಾನುವಾರದ ಐಪಿಎಲ್​ನಲ್ಲಿ(IPL 2024) ಡಬಲ್​ ಹೆಡರ್​ ಪಂದ್ಯಗಳು ನಡೆಯಲಿವೆ. ಪಂಜಾಬ್​ ಕಿಂಗ್ಸ್(Punjab Kings)​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಹಗಲು ಪಂದ್ಯದಲ್ಲಿ ಮುಖಾಮುಖಿಯಾದರೆ, ರಾತ್ರಿಯ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ಮತ್ತು ಕೆಕೆಆರ್(Kolkata Knight Riders)​ ಸೆಣಸಾಟ ನಡೆಸಲಿವೆ. ಎಲ್ಲ ನಾಲ್ಕು ತಂಡಗಳಿಗೂ ಪ್ಲೇ ಆಫ್​ ಪ್ರವೇಶದ ನಿಟ್ಟಿನಲ್ಲಿ ಇದು ಮಹತ್ವದ ಪಂದ್ಯವಾಗಿದೆ. ಹೀಗಾಗಿ ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಅಧಿಕವಾಗಿದೆ.

ಬ್ಯಾಟಲ್​ ಆಫ್​ ದಿ ಕಿಂಗ್ಸ್​ಗೆ ಚೆನ್ನೈ-ಪಂಜಾಬ್​ ರೆಡಿ


ಪಂಜಾಬ್​-ಚೆನ್ನೈ(PBKS vs CSK) ಮೊದಲ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸೆಣಸಾಟಕ್ಕೆ ಇಳಿಯಲಿವೆ. ಇದು ಈ ಆವೃತ್ತಿಯಲ್ಲಿ ಇಲ್ಲಿ ನಡೆಯುವ ಮೊದಲ ಐಪಿಎಲ್(IPL 2024)​ ಪಂದ್ಯವಾಗಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲೇ 7 ವಿಕೆಟ್​ ಸೋಲಿಗೆ ಪಂಜಾಬ್​ಗೆ ಅವರ ತವರಿನ ಅಂಗಳದಲ್ಲಿ ಸೇಡು ತೀರಿಸಿಕೊಳ್ಳುವುದು ಹಾಲಿ ಚಾಂಪಿಯನ್‌ ಗುರಿಯಾಗಿದೆ.

ಚೆನ್ನೈ(Chennai Super Kings) ತಂಡ ಆರಂಭಿಕ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನದ ಮೂಲಕ ಸತತ ಗೆಲುವು ಸಾಧಿಸಿತ್ತು. ಆದರೆ ಈಗ ಹಿಂದಿನ ಲಯ ಕಳೆದುಕೊಂಡಿದ್ದು ತವರಿನಲ್ಲೇ ಸೋಲಿನ ಅವಮಾನಕ್ಕೆ ಸಿಲುಕಿದೆ. ಬಾಂಗ್ಲಾ ಎಡಗೈ ವೇಗಿ ಮುಸ್ತಫಿಜುರ್​ ರೆಹಮಾನ್​ ಕೂಡ ಟಿ20 ವಿಶ್ವಕಪ್​ಗೆ ಸಿದ್ಧತೆ ನಡೆಸುವ ಸಲುವಾಗಿ ತಂಡ ತೊರೆದಿದ್ದಾರೆ. ಶಾರ್ದೂಲ್​ ಠಾಕೂರ್​ ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ದೀಪಕ್ ಚಹಾರ್, ರಿಚರ್ಡ್ ಗ್ಲೀಸನ್ ಕೂಡ ದುಬಾರಿಯಾಗುತ್ತಿದ್ದಾರೆ. ಜಡೇಜಾ ಕೂಡ ಸ್ಪಿನ್​ ಮಾಡುತಿಲ್ಲ. ಸದ್ಯಕ್ಕೆ ಪತಿರಾಣ ಮಾತ್ರ ಘಾತಕ ಬೌಲಿಂಗ್​ ನಡೆಸುತ್ತಿದ್ದಾರೆ.

ಇದನ್ನೂ ಓದಿ IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

ಪಂಜಾಬ್​(Punjab Kings) ತಂಡದಲ್ಲಿ ಅನುಭವಿಗಳಾದ ಕಗಿಸೊ ರಬಾಡ, ಅರ್ಶ್​ದೀಪ್​ ಸಿಂಗ್​, ಹರ್ಷಲ್​ ಪಟೇಲ್ ಅವರಂತಹ ಘಾತಕ ಬೌಲರ್​​ ಇದ್ದರೂ ಕೂಡ ಇವರಿಂದ ಇದುವರೆಗೆ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಕಂಡುಬಂದಿಲ್ಲ.​ ಪಂಜಾಬ್​ ಗೆದ್ದಿರುವುದು ಬ್ಯಾಟಿಂಗ್​ ಬಲದಿಂದ. ಹೀಗಾಗಿ ಈ ಪಂದ್ಯದಲ್ಲಿಯೂ ಪಂಜಾಬ್​ ಬ್ಯಾಟಿಂಗ್​ ಬಲವನ್ನೇ ನಂಬಿದೆ. ಕಳೆದೊಂದು ವರ್ಷದಿಂದ ತೀವ್ರ ಬ್ಯಾಟಿಂಗ್​ ಬರ ಎದುರಿಸಿದ್ದ ಜಾನಿ ಬೇರ್​ಸ್ಟೋ ಪ್ರಚಂಡ ಫಾರ್ಮ್​ಗೆ ಮರಳಿದ್ದಾರೆ. ಇದು ಪಂಜಾಬ್​ಗೆ ಆನೆ ಬಲ ಬಂದಂತಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಶಶಾಂಕ್​ ಸಿಂಗ್​ ಮತ್ತು ಅಶುತೋಷ್ ಶರ್ಮಾ ಸಿಡಿಲಬ್ಬರ ಬ್ಯಾಟಿಂಗ್​ ಮೂಲಕ ತಂಡಕ್ಕೆ ನೆರವಾಗಬಲ್ಲರು. ಒಟ್ಟಾರೆಯಾಗಿ ಪಂಜಾಬ್​ಗೆ ಬ್ಯಾಟಿಂಗ್​ಗೇ ಮುಖ್ಯ ಬಲವಾಗಿದೆ.

ಲಕ್ನೋ ಸವಾಲು ಗೆದ್ದೀತೇ ಕೆಕೆಆರ್​


ದಿನದ ಮತ್ತೊಂದು ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಕೆಕೆಆರ್​ ಮುಖಾಮುಖಿಯಾಗಲಿವೆ. ರಾಹುಲ್​ ಪಡೆಗೆ ಇದು ತವರಿನ ಪಂದ್ಯವಾಗಿದೆ. ಸದ್ಯ ಅಂಕಪಟ್ಟಿಯಲ್ಲಿ ಕೆಕೆಆರ್​ 2ನೇ ಸ್ಥಾನಿಯಾಗಿದ್ದರೆ, ಲಕ್ನೋ 3ನೇ ಸ್ಥಾನದಲ್ಲಿದೆ. ಶರವೇಗದ ಎಸೆತಗಾರ ಮಾಯಾಂಕ್​ ಯಾದವ್​ ಟೂರ್ನಿಯಿಂದ ಹೊರಬಿದ್ದಿರುವುದರಿಂದ ಲಕ್ನೋ ಬೌಲಿಂಗ್​ ವಿಭಾಗಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕೆಕೆಆರ್​ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ.

Continue Reading

ಕ್ರೀಡೆ

Virat Kohli: ಟಿ20ಯಲ್ಲಿ ದಾಖಲೆ ಬರೆದ ಕೊಹ್ಲಿ; ಈ ಸಾಧನೆ ಮಾಡಿದ ಮೊದಲ ಭಾರತೀಯ

Virat Kohli: ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 27 ಎಸೆತಗಳಿಂದ 4 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 42 ರನ್​ ಬಾರಿಸಿದರು. ಇದೇ ವೇಳೆ ಮತ್ತೆ ಆರೆಂಜ್​ ಕ್ಯಾಪ್​ ತನ್ನದಾಗಿಸಿಕೊಂಡರು. ಸದ್ಯ ಕೊಹ್ಲಿ 542 ರನ್​ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಇಂದು ನಡೆಯುವ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕ ಋತುರಾಜ್​ ಗಾಯಕ್ವಾಡ್(509)​ 34 ರನ್​ ಬಾರಿಸಿದರೆ ಈ ಕ್ಯಾಪ್ ಗಾಯಕ್ವಾಡ್ ಪಾಲಾಗಲಿದೆ.

VISTARANEWS.COM


on

Virat Kohli
Koo

ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ(Royal Challengers Bengaluru) ಸ್ಟಾರ್​ ಆಟಗಾರ, ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ(Virat Kohli) ದಾಖಲೆಯೊಂದನ್ನು ಬರೆದಿದ್ದಾರೆ. 6 ರನ್​ ಗಳಿಸುತ್ತಿದ್ದಂತೆ ಟಿ20 ಕ್ರಿಕೆಟ್​ನಲ್ಲಿ 12500 ರನ್​ ಪೂರೈಸಿದ ಮೊದಲ ಭಾರತೀಯ ಎನಿಸಿಕೊಂಡರು. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಮೋಹಿತ್​ ಶರ್ಮ ಎಸೆದ ಇನಿಂಗ್ಸ್​ನ ಮೊದಲ ಓವರ್​ನ ದ್ವಿತೀಯ ಎಸೆತವನ್ನು ಸಿಕ್ಸರ್​ಗೆ ಬಡಿದಟ್ಟುವ ಮೂಲಕ ​ ವಿರಾಟ್​ ಕೊಹ್ಲಿ ರನ್​ ಖಾತೆ ತೆರೆದರು. ಜತೆಗೆ ಈ ರನ್​ ಮೂಲಕ ಟಿ20 ಕ್ರಿಕೆಟ್​ನಲ್ಲಿ 12500 ರನ್​ ಪೂರೈಸಿದರು. ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ವಿಂಡೀಸ್​ನ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 14562 ರನ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ಪಾಕಿಸ್ತಾನದ ಶೊಯೆಬ್ ಮಲಿಕ್ (13360) ದ್ವಿತೀಯ, ವೆಸ್ಟ್ ಇಂಡೀಸ್​ನ ಕೀರನ್ ಪೊಲಾರ್ಡ್(12900) ತೃತೀಯ ಸ್ಥಾನದಲ್ಲಿದ್ದಾರೆ. ಕೊಹ್ಲಿ 12536* ರನ್​ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ 370 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 134.00 ಸ್ಟ್ರೈಕ್​ ರೇಟ್​ನಲ್ಲಿ 12536* ರನ್ ಕಲೆಹಾಕಿದ್ದಾರೆ. ಈ ವೇಳೆ 9 ಶತಕ ಹಾಗೂ 95 ಅರ್ಧಶತಕಗಳನ್ನು ಸಿಡಿಸಿದ್ದಾರೆ. 1122 ಬೌಂಡರಿ ಮತ್ತು 395 ಸಿಕ್ಸರ್​ಗಳು ಇವರ ಬ್ಯಾಟ್​ನಿಂದ ಹೊರಹೊಮ್ಮಿದೆ.

ಇದನ್ನೂ ಓದಿ IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 27 ಎಸೆತಗಳಿಂದ 4 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 42 ರನ್​ ಬಾರಿಸಿದರು. ಇದೇ ವೇಳೆ ಮತ್ತೆ ಆರೆಂಜ್​ ಕ್ಯಾಪ್​ ತನ್ನದಾಗಿಸಿಕೊಂಡರು. ಸದ್ಯ ಕೊಹ್ಲಿ 542 ರನ್​ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಇಂದು ನಡೆಯುವ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕ ಋತುರಾಜ್​ ಗಾಯಕ್ವಾಡ್(509)​ 34 ರನ್​ ಬಾರಿಸಿದರೆ ಈ ಕ್ಯಾಪ್ ಗಾಯಕ್ವಾಡ್ ಪಾಲಾಗಲಿದೆ.

​ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ 19.3 ಓವರ್​ಗಳಲ್ಲಿ 147 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು.

Continue Reading

ಕ್ರೀಡೆ

IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

IPL 2024: ಆರ್​ಸಿಬಿ ಮುಂದಿನ ಪಂದ್ಯವನ್ನು ಮೇ 9ರಂದು ಪಂಜಾಬ್​ ಕಿಂಗ್ಸ್​ ವಿರುದ್ಧ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಸೋತರೆ ಆರ್​ಸಿಬಿ ಪ್ಲೇ ಆಫ್​ನಿಂದ ಅಧಿಕೃತವಾಗಿ ಹೊರಬೀಳಲಿದೆ. ಜತೆಗೆ ಆ ಬಳಿಕದ 2 ಪಂದ್ಯಗಳು ಕೇವಲ ಔಪಚಾರಿಕ ಪಂದ್ಯವಾಗಲಿದೆ.

VISTARANEWS.COM


on

IPL 2024
Koo

ಬೆಂಗಳೂರು: ಯುದ್ದ ಮುಗಿದ ಬಳಿಕ ಕೋಟೆಯ ಬಾಗಿಲು ಮುಚ್ಚಿದಂತಾಗಿದೆ ಆರ್​ಸಿಬಿಯ(Royal Challengers Bengaluru) ಸದ್ಯದ ಸ್ಥಿತಿ. ಹೌದು, ಆರಂಭಿಕ ಹಂತದಲ್ಲಿ ಸತತವಾಗಿ ಸೋಲು ಕಂಡು ಪ್ಲೇ ಆಫ್​ನ ಕ್ಷೀಣ ಅವಕಾಶ ಇರುವಾಗ ಇದೀಗ ಸತತವಾಗಿ ಗೆಲುವು ಸಾಧಿಸುತ್ತಿದೆ. ಇದುವರೆಗೂ ಕೊನೆಯ(IPL 2024) ಸ್ಥಾನಿಯಾಗಿದ್ದ ಆರ್​ಸಿಬಿ ಹ್ಯಾಟ್ರಿಕ್​ ಗೆಲುವಿನೊಂದಿಗೆ ಇದೀಗ 7ನೇ ಸ್ಥಾನಕ್ಕೇರಿದೆ. ಸದ್ಯಕ್ಕೆ ಆರ್​ಸಿಬಿಯ ಪ್ಲೇ ಆಫ್​ ಬಾಗಿಲು ಇನ್ನೂ ಮುಚ್ಚಿಲ್ಲ. ಇನ್ನೂ ಕೂಡ ಆರ್​ಸಿಬಿಗೆ ಅವಕಾಶವಿದೆ. ತಂಡದ ಪ್ಲೇ ಆಫ್​ ಲೆಕ್ಕಾಚಾರ(RCB Playoffs calculation) ಹೇಗಿದೆ ಎಂಬ ಮಾಹಿತಿ ಇಂತಿದೆ.

ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ಮತ್ತು ಪವಾಡವೊಂದು ನಡೆದರೆ ಆರ್​ಸಿಬಿಗೆ ಪ್ಲೇ ಆಫ್​ ಟಿಕೆಟ್ ಖಚಿತವಾಗಿ​ ಸಿಗಲಿದೆ. ಈಗಾಗಲೇ 11 ಪಂದ್ಯ ಆಡಿದ್ದು, 4 ಪಂದ್ಯ ಗೆದ್ದು, 7 ಪಂದ್ಯದಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 8 ಅಂಕ ಸಂಪಾದಿಸಿ 7ನೇ ಸ್ಥಾನದಲ್ಲಿದೆ. ಆರ್​ಸಿಬಿಗೆ ಇನ್ನು ಮೂರು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಉಳಿದಿರುವ ಈ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ 14 ಅಂಕ ಲಭಿಸಲಿದೆ. ಆದರೂ ಕೂಡ ಪ್ಲೇ ಆಫ್ ಟಿಕೆಟ್​ ಖಚಿತಗೊಳ್ಳುವುದಿಲ್ಲ. ಇದು ಖಚಿತಗೊಳ್ಳಬೇಕಿದ್ದರೆ, ಆರ್​ಸಿಬಿಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಕನಿಷ್ಠ 4ನೇ ಸ್ಥಾನಿಯಾಗಿ ಪ್ಲೇ ಆಫ್ ಗೇರುವ ಸಣ್ಣ ಅವಕಾಶವೊಂದಿದೆ. ಉಳಿದ 3 ಪಂದ್ಯಗಳ ಪೈಕಿ 1 ಪಂದ್ಯವನ್ನು ಆರ್​ಸಿಬಿ ತವರಿನಲ್ಲಿ ಆಡಲಿದೆ. ಇದು ಹಾಲಿ ಚಾಂಪಿಯನ್​ ಚೆನ್ನೈ ವಿರುದ್ಧ.

16 ಅಂಕ ಗಳಿಸಿರುವ ರಾಜಸ್ಥಾನ್​ ತಂಡಕ್ಕೆ ಪ್ಲೇ ಆಫ್​ ಸ್ಥಾನ ಬಹುತೇಕ ಖಚಿತಗೊಂಡಂತಿದೆ. ಅದಲ್ಲದೆ ರಾಜಸ್ಥಾನ್​ಗೆ ಇನ್ನೂ ಕೂಡ 4 ಪಂದ್ಯಗಳು ಬಾಕಿ ಇದೆ. ಇದರಲ್ಲಿ 1 ಪಂದ್ಯ ಗೆದ್ದರೂ ಸಾಕು. ಉಳಿದಿರುವ ಮೂರು ಸ್ಥಾನಗಳಿಗೆ 5 ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ಕೆಕೆಆರ್​ 14 ಅಂಕ ಪಡೆದು 2ನೇ ಸ್ಥಾನಿಯಾಗಿದೆ. ಕೆಕೆಆರ್​ಗೂ ಇನ್ನು 4 ಪಂದ್ಯ ಬಾಕಿ ಉಳಿದಿವೆ. ಲಕ್ನೋ 12 ಅಂಕದೊಂದಿಗೆ ಮೂರನೇ ಸ್ಥಾನಿಯಾಗಿದೆ. ಇಂದು ನಡೆಯುವ ಪಂದ್ಯದಲ್ಲಿ ಕೆಕೆಆರ್​ ಮತ್ತು ಲಕ್ನೋ ಮುಖಾಮುಖಿಯಾಗಲಿವೆ. ಇಲ್ಲಿ ಒಂದು ತಂಡಕ್ಕೆ ಸೋಲು ಖಚಿತ. ಲಕ್ನೋ ಗೆದ್ದರೆ ಆರ್​ಸಿಬಿಗೆ ನಷ್ಟವಾಗಲಿದೆ. ಇನ್ನೊಂದು ಪಂದ್ಯದಲ್ಲಿ ಚೆನ್ನೈ ಮತ್ತು ಪಂಜಾಬ್​ ಆಡಲಿವೆ. ಇಲ್ಲಿ ಚೆನ್ನೈ ಗೆದ್ದರೆ 12 ಅಂಕ ಆಗಲಿವೆ. ಹೈದರಾಬಾದ್​ 12 ಅಂಕದೊಂದಿಗೆ ಸದ್ಯ ಮೂರನೇ ಸ್ಥಾನಿಯಾಗಿದೆ. ಹೀಗಾಗಿ ಈ ಎಲ್ಲ 5 ತಂಡಗಳ ಪೈಕಿ ಕನಿಷ್ಠ ಮೂರು ತಂಡಗಳು ಉಳಿದ ಲೀಗ್​ ಪಂದ್ಯಗಳಲ್ಲಿ ಸೋಲು ಕಂಡರೆ, 14 ಅಂಕದ ಗಡಿ ದಾಟಲು ವಿಫಲರಾದರೆ ಆಗ ಆರ್​ಸಿಬಿಗೆ ಪ್ಲೇ ಆಫ್​ ಅವಕಾಶ ಸಿಗಲಿದೆ. ಒಟ್ಟಾರೆ ಆರ್​ಸಿಬಿಗೆ ಗೆಲುವಿನ ಜತೆಗೆ ಅದೃಷ್ಟ ಕೂಡ ಕೈ ಹಿಡಿಯಬೇಕಿದೆ.

ಇದನ್ನೂ ಓದಿ IPL 2024 Points Table: 7ನೇ ಸ್ಥಾನಕ್ಕೇರಿದ ಆರ್​ಸಿಬಿ; ಮುಂಬೈಗೆ ಕೊನೆಯ ಸ್ಥಾನ

ಆರ್​ಸಿಬಿ ಮುಂದಿನ ಪಂದ್ಯವನ್ನು ಮೇ 9ರಂದು ಪಂಜಾಬ್​ ಕಿಂಗ್ಸ್​ ವಿರುದ್ಧ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಸೋತರೆ ಆರ್​ಸಿಬಿ ಪ್ಲೇ ಆಫ್​ನಿಂದ ಅಧಿಕೃತವಾಗಿ ಹೊರಬೀಳಲಿದೆ. ಜತೆಗೆ ಆ ಬಳಿಕದ 2 ಪಂದ್ಯಗಳು ಕೇವಲ ಔಪಚಾರಿಕ ಪಂದ್ಯವಾಗಲಿದೆ.

Continue Reading

ಕ್ರಿಕೆಟ್

IPL 2024 Points Table: 7ನೇ ಸ್ಥಾನಕ್ಕೇರಿದ ಆರ್​ಸಿಬಿ; ಮುಂಬೈಗೆ ಕೊನೆಯ ಸ್ಥಾನ

IPL 2024 Points Table: ಇಂದು ನಡೆಯುವ ಡಬಲ್​ ಹೆಡರ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಹಗಲು ಪಂದ್ಯದಲ್ಲಿ ಮುಖಾಮುಖಿಯಾದರೆ, ರಾತ್ರಿಯ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಕೆಕೆಆರ್​ ಸೆಣಸಾಟ ನಡೆಸಲಿವೆ. ಎಲ್ಲ ನಾಲ್ಕು ತಂಡಗಳಿಗೂ ಪ್ಲೇ ಆಫ್​ ಪ್ರವೇಶದ ನಿಟ್ಟಿನಲ್ಲಿ ಇದು ಮಹತ್ವದ ಪಂದ್ಯವಾಗಿದೆ.

VISTARANEWS.COM


on

IPL 2024 Points Table
Koo

ಬೆಂಗಳೂರು: ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 52ನೇ ಪಂದ್ಯದಲ್ಲಿ ತವರು ತಂಡವಾದ ಆರ್​ಸಿಬಿ(Royal Challengers Bengaluru) 4 ವಿಕೆಟ್​ಗಳಿಂದ ಗುಜರಾತ್ ಟೈಟಾನ್ಸ್​ಗೆ(Gujarat Titans) ಸೋಲಿನ ರುಚಿ ತೋರಿಸಿತು. ಜತೆಗೆ ಅಂಕಪಟ್ಟಿಯಲ್ಲಿಯೂ(IPL 2024 Points Table) ಭಾರೀ ಪ್ರಗತಿ ಸಾಧಿಸಿ ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೇರಿದೆ. 5 ಬಾರಿಯ ಚಾಂಪಿಯನ್​ ಮುಂಬೈ ಕೊನೆಯ ಸ್ಥಾನಕ್ಕೆ ಕುಸಿದಿದೆ.

​ಇಂದು ನಡೆಯುವ ಡಬಲ್​ ಹೆಡರ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಹಗಲು ಪಂದ್ಯದಲ್ಲಿ ಮುಖಾಮುಖಿಯಾದರೆ, ರಾತ್ರಿಯ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಕೆಕೆಆರ್​ ಸೆಣಸಾಟ ನಡೆಸಲಿವೆ. ಎಲ್ಲ ನಾಲ್ಕು ತಂಡಗಳಿಗೂ ಪ್ಲೇ ಆಫ್​ ಪ್ರವೇಶದ ನಿಟ್ಟಿನಲ್ಲಿ ಇದು ಮಹತ್ವದ ಪಂದ್ಯವಾಗಿದೆ. ಹೀಗಾಗಿ ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿರುವ ಸಾಧ್ಯತೆ ಅಧಿಕವಾಗಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​107314 (+1.098)
ಲಕ್ನೋ​​106412 (+0.094)
ಹೈದರಾಬಾದ್​106512 (+0.072)
ಚೆನ್ನೈ​105510 (+0.627)
ಡೆಲ್ಲಿ115610 (-0.442)
ಆರ್​ಸಿಬಿ11478 (-0.049)
ಪಂಜಾಬ್​10468 (-0.062)
ಗುಜರಾತ್​11478 (-1.320)
ಮುಂಬೈ11386 (-0.356)

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ 19.3 ಓವರ್​ಗಳಲ್ಲಿ 147 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು.

ಇದನ್ನೂ ಓದಿ IPL 2024 : ಟೀಕೆಗಳಿಗೆ ಪ್ರತಿಕ್ರಿಯಿಸುವುದು ಯಾಕೆ? ಕೊಹ್ಲಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗವಾಸ್ಕರ್​

ಸಾಧಾರಣ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಆರ್​ಸಿಬಿ ಉತ್ತಮ ಆರಂಭವನ್ನೇ ಪಡೆಯಿತು. ಫಾಫ್​ ಡು ಪ್ಲೆಸಿಸ್​ 23 ಎಸೆತಕ್ಕೆ 63 ರನ್ ಬಾರಿಸಿದರು. ಕೇವಲ 3.1 ಓವರ್​ಗಳಲ್ಲಿ 50 ರನ್ ಗಡಿ ದಾಟಿಸಿದ ಕೊಹ್ಲಿ ಮತ್ತು ಫಾಪ್​ ಗೆಲುವು ಸುಲಭ ಎಂದು ಅಂದುಕೊಳ್ಳುವಂತೆ ಮಾಡಿದರು. ಈ ಜೋಡಿ ಮೊದಲ ವಿಕೆಟ್​ಗೆ 5.5 ಓವರ್​ಗಳಲ್ಲಿ 92 ರನ್ ಬಾರಿಸಿತು. ಆದರೆ ಈ ವೇಳೆ ನಾಟಕೀಯ ಕುಸಿತ ಕಂಡು 17 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡ ಆರ್​ಸಿಬಿ ಅಭಿಮಾನಿಗಳಿಗೆ ಆತಂಕ ಉಂಟು ಮಾಡಿಯು. ಆದರೆ, ಕೊನೆಯಲ್ಲಿ ಪಿನಿಶರ್ ದಿನೇಶ್ ಕಾರ್ತಿಕ್​ 21 ರನ್ ಹಾಗೂ ಸ್ವಪ್ನಿಲ್​ ಸಿಂಗ್ 15 ರನ್ ಬಾರಿಸಿ ಗೆಲುವು ತಂದುಕೊಟ್ಟರು.

Continue Reading
Advertisement
IPL 2024
ಕ್ರೀಡೆ11 mins ago

IPL 2024: ಇಂದು ಐಪಿಎಲ್​ನಲ್ಲಿ ಡಬಲ್​ ಹೆಡರ್​ ಪಂದ್ಯ; ಮೊದಲ ಪಂದ್ಯ ಯಾವುದು?

Kangana Ranaut
ರಾಜಕೀಯ36 mins ago

Kangana Ranaut: ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡ್ತಾನೆ ಎಂದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್! ವಿಡಿಯೊ ನೋಡಿ

Virat Kohli
ಕ್ರೀಡೆ40 mins ago

Virat Kohli: ಟಿ20ಯಲ್ಲಿ ದಾಖಲೆ ಬರೆದ ಕೊಹ್ಲಿ; ಈ ಸಾಧನೆ ಮಾಡಿದ ಮೊದಲ ಭಾರತೀಯ

HD Revanna
ಕರ್ನಾಟಕ46 mins ago

HD Revanna: ಅಶ್ಲೀಲ ವಿಡಿಯೊ ಪ್ರಕರಣ: ದೂರು ನೀಡಲು ಮುಂದೆ ಬಂದ ಮೂವರು ಸಂತ್ರಸ್ತೆಯರು; ರೇವಣ್ಣ, ಪ್ರಜ್ವಲ್‌ಗೆ ಮತ್ತಷ್ಟು ಸಂಕಷ್ಟ?

Annamalai Biopic Will Be Made In Kollywood Annamalai Biopic Will Be Made In Kollywood Annamalai Biopic Will Be Made In Kollywood
ಕಾಲಿವುಡ್1 hour ago

Annamalai Biopic: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಯೋಪಿಕ್‌ಗೆ ತಮಿಳು ಖ್ಯಾತ ನಟ ನಟನೆ!

IPL 2024
ಕ್ರೀಡೆ1 hour ago

IPL 2024: ಹ್ಯಾಟ್ರಿಕ್​ ಗೆಲುವು ಸಾಧಿಸಿದ ಆರ್​ಸಿಬಿಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?

HD Revanna
ಕರ್ನಾಟಕ1 hour ago

HD Revanna: ಎಚ್‌.ಡಿ.ರೇವಣ್ಣ ಮುಂದಿನ ಕಾನೂನು ಹೋರಾಟ ಯಾವ ರೀತಿ ಇರಲಿದೆ? ಇಲ್ಲಿದೆ ಮಾಹಿತಿ

Shreyas Talpade hints his heart attack side effect of Covid vaccine
ಬಾಲಿವುಡ್2 hours ago

Shreyas Talpade: ಶ್ರೇಯಸ್‌ ತಲ್ಪಾಡೆ ಹೃದಯಾಘಾತಕ್ಕೆ ಕೋವಿಡ್ ವ್ಯಾಕ್ಸಿನ್‌ ಕಾರಣವಂತೆ! ನಟ ಹೇಳಿದ್ದೇನು?

IPL 2024 Points Table
ಕ್ರಿಕೆಟ್2 hours ago

IPL 2024 Points Table: 7ನೇ ಸ್ಥಾನಕ್ಕೇರಿದ ಆರ್​ಸಿಬಿ; ಮುಂಬೈಗೆ ಕೊನೆಯ ಸ್ಥಾನ

Blood Pressure
ಆರೋಗ್ಯ2 hours ago

Blood Pressure: ರಕ್ತದೊತ್ತಡ ನಿಯಂತ್ರಿಸಲು ಈ ಆಹಾರಗಳು ಸೂಕ್ತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌