Site icon Vistara News

IPL 2023 : ಗುಜರಾತ್ ಟೈಟನ್ಸ್​ ತಂಡಕ್ಕೆ180 ರನ್​ಗಳ ಗೆಲುವಿನ ಗುರಿ ನೀಡಿದ ಕೆಕೆಆರ್​​

#image_title

ಕೋಲ್ಕೊತಾ: ರಹಮನುಲ್ಲಾ ಗುರ್ಬಜ್​ (81 ರನ್​, 39 ಎಸೆತ, 5 ಫೊರ್​, 7 ಸಿಕ್ಸರ್​) ಅವರ ಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 16ನೇ ಆವೃತ್ತಿಯ (IPL 2023) 39ನೇ ಪಂದ್ಯದಲ್ಲಿ ಎದುರಾಳಿ ಗುಜರಾತ್​ ಟೈಟನ್ಸ್​ ತಂಡಕ್ಕೆ 180 ರನ್​ಗಳ ಗೆಲುವಿನ ಗುರಿಯನ್ನು ಒಡ್ಡಿದೆ. ಕೊನೆಯಲ್ಲಿ ರಸೆಲ್​ 19 ಎಸೆತಗಳಲ್ಲಿ 34 ರನ್​ ಬಾರಿಸಿದ್ದು ಬಿಟ್ಟರೆ ಉಳಿದವರು ಹೆಚ್ಚು ರನ್​ ಬಾರಿಸದ ಕಾರಣ 200 ಗಡಿ ದಾಟಲು ಕೆಕೆಆರ್​ ತಂಡಕ್ಕೆ ಸಾಧ್ಯವಾಗಲಿಲ್ಲ.

ಇಲ್ಲಿನ ಈಡನ್​ ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದು ಗುಜರಾತ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಮೊದಲು ಫೀಲ್ಡಿಂಗ್ ಅಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆದ ಆತಿಥೇಯ ಕೆಕೆಆರ್​ ತಂಡ ತನ್ನ ಪಾಲಿನ 20 ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ ನಷ್ಟಕ್ಕೆ 179 ರನ್​ ಬಾರಿಸಿತು.

ಬ್ಯಾಟಿಂಗ್ ಆರಂಭಿಸಿದ ಕೆಕೆಆರ್​ ತಂಡ ದೊಡ್ಡ ಮೊತ್ತ ಪೇರಿಸುವ ಸುಳಿವು ನೀಡಿತು. ಜಗದೀಶನ್ 15 ಎಸೆತಗಳಿಗೆ 19 ರನ್ ಬಾರಿಸಿ ಔಟಾದರು. ಈ ವೇಳೆ ತಂಡದ ಮೊತ್ತ 21. ಮುಂಬಡ್ತಿ ಪಡೆದು ಬ್ಯಾಟ್​ ಹಿಡಿದು ಬಂದ ಶಾರ್ದೂಲ್​ ಠಾಕೂರ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. 47 ರನ್​​ಗಳಿಗೆ 2 ವಿಕೆಟ್​ ನಷ್ಟಮಾಡಿಕೊಂಡ ಕಾರಣ ರನ್​ ವೇಗ ಕುಂಠಿತವಾಯಿತು. ಸ್ಫೋಟಕ ಬ್ಯಾಟರ್​ ವೆಂಕಟೇಶ್ ಅಯ್ಯರ್​ 11 ರನ್​ಗೆ ಔಟಾದರು. ಅವರು ಗುಜರಾತ್ ಬೌಲರ್​ಗಳನ್ನು ಎದುರಿಸಲು ತಿಣುಕಾಡಿದರು. 14 ಎಸೆತದಲ್ಲಿ 11 ರನ್ ಬಾರಿಸಿ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ನಾಯಕ ನಿತೀಶ್​ ರಾಣಾ ನಾಲ್ಕು ರನ್​ಗೆ ಔಟಾಗಿ ಬೇಸರ ಮೂಡಿಸಿದರು.

ಇದನ್ನೂ ಓದಿ : IPL 2023: ಪಂಜಾಬ್‌ ವಿರುದ್ಧ ಲಕ್ನೋ ಗೆದ್ದ ಬಳಿಕ ಐಪಿಎಲ್​ ಅಂಕಪಟ್ಟಿ ಹೀಗಿದೆ

ಅಬ್ಬರಿಸಿದ ಗುರ್ಜಬ್​​

ಒಂದು ಕಡೆ ಸತತವಾಗಿ ವಿಕೆಟ್​ ಪತನಗೊಳ್ಳುತ್ತಿದ್ದ ಹೊರತಾಗಿಯೂ ಆಫ್ಘನ್ ಬ್ಯಾಟರ್​ ರಹಮನುಲ್ಲಾ ಗುರ್ಬಜ್​ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಫೋರ್​ ಸಿಕ್ಸರ್​ಗಳ ಮಳೆ ಸುರಿಸಿ 27 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ನಂತರವೂ ಬ್ಯಾಟ್​ ಬೀಸಿ 30 ಎಸೆಗಗಳಿಗೆ 81 ರನ್ ಕೊಡುಗೆ ಕೊಟ್ಟರು. ಯುವ ಬ್ಯಾಟರ್ ರಿಂಕು ಸಿಂಗ್ 19 ರನ್​ಗಳಿಗೆ ಸೀಮಿತಗೊಂಡರು. ಅವರೂ ದೊಡ್ಡ ಹೊಡೆತಗಳಿಂದ ರನ್​ ಗಳಿಸಲು ವಿಫಲರಾದರು. ಅಂತಿಮ ಹಂತದಲ್ಲಿ ರಸೆಲ್​ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ 34 ರನ್​ಗಳ ಕೊಡುಗೆ ಕೊಟ್ಟರು. ಡೇವಿಡ್ ವೈಡ್​ 8 ರನ್ ಗಳಿಸಿದರು.

ಗುಜರಾತ್​ ಪರ ಬೌಲಿಂಗ್​ನಲ್ಲಿ ಮೊಹಮ್ಮದ್ ಶಮಿ 33 ರನ್​ ನೀಡಿ 3 ವಿಕೆಟ್​ ಕಿತ್ತರೆ, ಜೋಶ್ ಲಿಟಲ್​ ಹಾಗೂ ನೂರ್​ ಅಹಮದ್​ ತಲಾ 2 ವಿಕೆಟ್​ ಕಬಳಿಸಿದರು.

Exit mobile version